Srirasthu Shubhamasthu ; ದೀಪಿಕಾ ಕೈ ತಪ್ಪಿದ ಸುಮತಿ ಎಸ್ಟೇಟ್ : ಅಪ್ಪ ಕಾಣದೇ ಕಂಗಾಲಾದ ಸಿರಿ..!
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ದೀಪಿಕಾ ಒಂದಾದ ಮೇಲೆ ಒಂದರಂತೆ ಪ್ಲಾನ್ ಗಳನ್ನು ಮಾಡಿ, ಪೂರ್ಣಿಮಾ ಹಾಗೂ ತುಳಸಿಗೆ ಸಮಸ್ಯೆ ಮಾಡುತ್ತಲೇ ಇದ್ದಾಳೆ. ಆದರೆ, ದೀಪಿಕಾ ಆಟ ತುಳಸಿಗೆ ಅರ್ಥವಾಗುತಿಲ್ಲ. ಪೂರ್ಣಿಮಾಳಿಗೆ ಅರ್ಥವಾದರೂ ಕೂಡ ಮನೆಯನ್ನು ಒಡೆಯಬಾರದು ಎಂಬ ಕಾರಣಕ್ಕೆ ಯಾರ ಬಳಿಯೂ ಹೇಳದೇ ಸುಮ್ಮನಿದ್ದಾಳೆ. ದೀಪಿಕಾ ಮತ್ತು ಶಾರ್ವರಿ ಏನೇ ಪ್ಲಾನ್ ಮಾಡಿದರೂ ಕೂಡ ಪ್ಲಾನ್ ಸಕ್ಸಸ್ ಆದರೂ ಎಲ್ಲವೂ ತುಳಸಿ ಪರವೇ ಕೆಲಸ ಮಾಡುತ್ತಿದೆ ಎಂದರಿಂದ ದೀಪಿಕಾಳಿಗೂ ಬೇಸರವಾಗಿದೆ.
ಅಭಿ ಹುಟ್ಟುಹಬ್ಬಕ್ಕೆ ಉಡುಗೊರೆ ಕೊಟ್ಟ ತುಳಸಿ
ಅಭಿ ಹುಟ್ಟುಹಬ್ಬಕ್ಕೆ ಮನೆಯಿಂದ ಹೊರಗೆ ಹೋಗಿ ಇಬ್ಬರೇ ಸಮಯ ಕಳೆಯಬೇಕು ಎಂದು ದೀಪಿಕಾ ಆಸೆಪಟ್ಟಿದ್ದಾಳೆ. ಆಸೆಯನ್ನು ನೆರವೇರಿಸಿಕೊಳ್ಳಲು ತಂದೆಯ ಮೊರೆ ಹೋಗಿದ್ದಾಳೆ. ದೀಪಿಕಾ ತಂದೆಯೂ ಹನಿಮೂನ್ ಎಂದು ನೆಪ ಹೇಳಿ ಅಭಿ ಹುಟ್ಟುಹಬ್ಬಕ್ಕೆ ಫಾರಿನ್ ಟ್ರಿಪ್ ಬುಕ್ ಮಾಡಿದ್ದಾನೆ. ಆದರೆ ಅಭಿ ಮನೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕು ಎಂದು ಹಠ ಮಾಡಿದ್ದು, ಟಿಕೆಟ್ ಕ್ಯಾನ್ಸಲ್ ಮಾಡಿಸಿದ್ದಾನೆ. ಇದರಿಂದ ದೀಪಿಕಾಳಿಗೆ ಬೇಸರವಾಗಿದ್ದು, ಯಾರ ಬಳಿಯೂ ಹೇಳಿಕೊಳ್ಳಲಾಗದೇ ಒಬ್ಬಳೇ ಸಂಕಟ ಅನುಭವಿಸಿದ್ದಾಳೆ. ಇನ್ನು ಅಭಿ ಹುಟ್ಟುಹಬ್ಬಕ್ಕೆಂದು ತುಳಸಿ ಶರ್ಟ್ ಉಡುಗೊರೆಯನ್ನಾಗಿ ಕೊಡುತ್ತಾಳೆ. ಪ್ರೀತಿಯಿಂದ ಶರ್ಟ್ ಕೊಟ್ಟು ಇದನ್ನು ಧರಿಸಿಕೋ ಎಂದು ಹೇಳುತ್ತಾಳೆ. ಆದರೆ ಅಭಿ ಕೋಪ ಮಾಡಿಕೊಂಡು ಹೋಗುತ್ತಾನೆ. ಇದೆಲ್ಲಾ ನನಗೆ ಬೇಡ ಎಂದು ತುಳಸಿಗೆ ನೋವು ಮಾಡುತ್ತಾನೆ.

ಸುಮತಿ ಎಸ್ಟೇಟ್ ಮೇಲೆ ದೀಪಿಕಾ ಕಣ್ಣು
ಇದೇ ಸಮಯವನ್ನು ಬಳಸಿಕೊಂಡ ದೀಪಿಕಾ, ಸಮರ್ಥ್ ಮತ್ತು ಸಂಧ್ಯಾ ಈ ಮನೆಯ ಆಸ್ತಿಯಲ್ಲಿ ಪಾಲು ಕೇಳಬಹುದು. ಸುಮತಿ ಅಮ್ಮನ ಆಸ್ತಿಯನ್ನೇ ಸಮರ್ಥ್ ಹಾಗೂ ಸಂಧ್ಯಾ ಪಡೆದರೆ ಕಷ್ಟವಾಗುತ್ತದೆ. ಅದನ್ನ ಉಡುಗೊರೆಯಾಗಿ ನೀವೇ ಕೇಳಿ ಪಡೆಯಿರಿ. ಆಗ ನಿಮ್ಮ ಆಸ್ತಿಯ ಪಾಲು ನಿಮ್ಮ ಮನೆಯವರಲ್ಲೇ ಉಳಿಯುತ್ತದೆ ಎಂದು ಕಿವಿ ಊದುತ್ತಾಳೆ. ಅಭಿ ದೀಪಿಕಾಳ ಆಟವನ್ನು ಅರ್ಥ ಮಾಡಿಕೊಳ್ಳದೇ, ಅವಿ ಬಳಿ ಆಸ್ತಿ ಪಾಲು ಕೇಳಲು ನಿರ್ಧರಿಸುತ್ತಾನೆ.
ಆಸ್ತಿ ಪಾಲಾಗಲು ಬಿಡದ ತುಳಸಿ
ಈ ವಿಚಾರವನ್ನು ಕದ್ದು ಕೇಳಿಸಿಕೊಂಡ ಪೂರ್ಣಿಮಾ, ತುಳಸಿ ಬಳಿ ಹೇಳಿ, ಹೇಗಾದರೂ ಮಾಡಿ ಅಭಿ ಆಸ್ತಿ ಕೇಳದಂತೆ ಮಾಡಿ. ಅಭಿ ಆಸ್ತಿಯಲ್ಲಿ ಪಾಲು ಕೇಳಿದರೆ, ಮನೆಯನ್ನು ಎರಡು ಭಾಗ ಮಾಡಿದಂತಾಗುತ್ತದೆ ಎಂದು ಕೇಳಿಕೊಳ್ಳುತ್ತಾಳೆ. ತುಳಸಿ ಲಾಯರ್ ನ ಕರೆಸುತ್ತಾಳೆ. ಅಭಿ ಬಳಿ ಹೋಗಿ ಆಸ್ತಿಯಲ್ಲಿ ಪಾಲು ಕೇಳಬೇಡ. ಇದರಿಂದ ಮನೆ ಒಡೆದಂತೆ ಆಗುತ್ತದೆ ಎಂದು ಬುದ್ಧಿ ಹೇಳುತ್ತಾಳೆ. ಆದರೆ, ಅಭಿ ಕೇಳುವುದಿಲ್ಲ. ಲಾಯರ್ ಬಂದು ಸುಮತಿ ಎಸ್ಟೇಟ್ ಬಂದು ನಿಮ್ಮ ತಾಯಿಯ ಹೆಸರಿನಲ್ಲಿದೆ. ಅದು ಯಾವುದೇ ಕಾರಣಕ್ಕೂ ಸಮರ್ಥ್ ಹಾಗೂ ಸಂಧ್ಯಾಳಿಗೆ ಕೊಡಲು ಬರುವುದಿಲ್ಲ. ಇದು ಅಭಿ ಹಾಗೂ ಅವಿಗೂ ಸೇರುವುದಿಲ್ಲ. ಈ ಮನೆಯಲ್ಲಿ ಜನಿಸುವ ಮೊದಲ ಮಗುವಿಗೆ ಸುಮತಿ ಎಸ್ಟೇಸ್ಟ್ ಸೇರುತ್ತದೆ ಎಂದು ಹೇಳುತ್ತಾರೆ. ಆಗ ಅಭಿ ಸಮಾಧಾನ ಮಾಡಿಕೊಳ್ಳುತ್ತಾನೆ. ಇದು ದೀಪಿಕಾಳಿಗೆ ಬೇಸರವನ್ನುಂಟು ಮಾಡುತ್ತದೆ.

ಕಾಣೆಯಾಗಿರುವ ಸಿರಿ ತಂದೆ
ಇತ್ತ ಸಿರಿ ತಂದೆ ಇದ್ದಕ್ಕಿದ್ದ ಹಾಗೆ ಕಾಣೆಯಾಗಿರುತ್ತಾರೆ. ಅವರಿಗೆ ಮರೆಯುವ ಖಾಯಿಲೆ ಇರುವ ಬಗ್ಗೆ ಸಮರ್ಥ್ ಸಿರಿಗೆ ಹೇಳುತ್ತಾನೆ. ಇಬ್ಬರೂ ಎಲ್ಲಾ ಕಡೆಗಳಲ್ಲಿಯೂ ಹುಡುಕಾಡಿದರೂ ಸಿಗುವುದಿಲ್ಲ. ಮನೆಗೆ ಹೋದ ಬಳಿಕ ಅವರ ತಂದೆಗೆ ಈ ಖಾಯಿಲೆ ಇರುವ ವಿಚಾರ ದತ್ತ ತಾತ, ಸಮರ್ಥ್ ಹಾಗೂ ತುಳಸಿಗೆ ಗೊತ್ತಿರುವ ಬಗ್ಗೆ ಕೇಳಿ ಸಿರಿ ಬೇಸರ ಮಾಡಿಕೊಳ್ಳುತ್ತಾಳೆ.


Click it and Unblock the Notifications











