Srirasthu Shubhamasthu ; ಎಚ್ಚರಿಕೆ ಗಂಟೆ ಬಾರಿಸಿದ ಅಪರಿಚಿತ ವ್ಯಕ್ತಿ : ಶಾರ್ವರಿ ಮೂಲವನ್ನು ಹುಡುಕುತ್ತಾಳಾ ತುಳಸಿ..?

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ದತ್ತ ತಾತ ತೀರ್ಥಯಾತ್ರೆಗೆ ತೆರಳಿ ಬಹಳ ಕಾಲವಾಗಿದೆ. ಇಡೀ ಮನೆಯನ್ನು ಸಮರ್ಥ್ ಮತ್ತು ಸಂಧ್ಯಾ ನಿಭಾಯಿಸುತ್ತಿದ್ದಾರೆ.ಆದರೆ, ಯಾರಿಗೆ ಸಾಲುತ್ತೆ ಸಂಬಳ ಎಂಬಂತಹ ಪರಿಸ್ಥಿತಿ ಇದ್ದು, ಸಿರಿ ತಾನೂ ಕೂಡ ಈ ಮನೆಗಾಗಿ ದುಡಿಯಲು ಪ್ರಾರಂಬಿಸಬೇಕು ಎಂದು ಯೋಚಿಸುತ್ತಿದ್ದಾಳೆ. ಸಮರ್ಥ್ ಕೆಲಸಕ್ಕೆ ಮೀರಿದ ಸಂಬಳವನ್ನು ಅವಿ ಕೊಡುತ್ತಿದ್ದರೂ, ಮನೆಯ ಮೇಲಿರುವ ಸಾಲವೇ ಎಲ್ಲಾ ಹಣವನ್ನು ನುಂಗುತ್ತಿದೆ. ಇದರ ನಡುವೆ ಜುಗ್ಗ ಮತ್ತೊಂದು ಆಪತ್ತನ್ನು ತಂದಿದ್ದಾನೆ.

ಲಕ್ಷ ಹಣ ಕಳೆದುಕೊಂಡ ಜುಗ್ಗನಿಗೆ ನಾಮ

ಜುಗ್ಗ ಜಗನ್ನಾಥ ಸೊಸೆಗೆ ಐದು ಲಕ್ಷ ನಾಮ ಹಾಕಿ ಮಜಾ ಮಾಡುತ್ತಿದ್ದಾನೆ. ಹಣವನ್ನು ಡಬಲ್ ಮಾಡಿಕೊಳ್ಳುವ ದುರಾಸೆಗೆ ಬಿದ್ದಿದ್ದಾನೆ. ಹೀಗಾಗಿ ಗುರುತು ಪರಿಚಯವಿಲ್ಲದ ವ್ಯಕ್ತಿಗೆ ಲಕ್ಷ ಹಣವನ್ನು ನೀಡಿದ್ದು, ತನ್ನ ಹಣ ಡಬಲ್ ಆಗುತ್ತೆ ಎಂದು ಕನಸು ಕಾಣುತ್ತಿದ್ದಾನೆ. ಜುಗ್ಗನ ಆಲೋಚನೆ ಕಂಪ್ಲೀಟ್ ಆಗಿ ಫೇಲ್ ಆಗಿದ್ದು, ಈಗ ಎಲ್ಲರಿಗೂ ನಾಮ ಹಾಕುತ್ತಿದ್ದ ವ್ಯಕ್ತಿ ಸ್ವತಃ ತಾನೇ ನಾಮ ಹಾಕಿಸಿಕೊಂಡಿದ್ದಾನೆ. ಒಂದು ಲಕ್ಷ ಹಣವನ್ನು ಪಡೆದುಕೊಂಡ ವ್ಯಕ್ತಿ ಒಂದೆರಡು ದಿನ ಸುಮ್ಮನಿದ್ದು, ಇದ್ದಕ್ಕಿದ್ದ ಹಾಗೆಯೇ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಒಂದು ಎರಡಾಗುತ್ತೆ, ಎರಡು ಕೋಟಿ ಆಗುತ್ತೆ ಎಂದು ಕನಸು ಕಾಣುತ್ತಿದ್ದ ಜುಗ್ಗ ಟೆಂಷನ್ ಮಾಡಿಕೊಳ್ಳುವಂತಾಗಿದೆ.

srirasthu shubhamasthu serial 26 November episode written update

ಜಗ್ಗನಿಗೇ ಚೊಂಬು ಕೊಟ್ಟ ವ್ಯಕ್ತಿಯೇ ಗ್ರೇಟ್

ಜುಗ್ಗನ ಕೈಗೇ ಚೊಂಬು ಕೊಟ್ಟು ಪುಣ್ಯಾತ್ಮ ತಲೆ ಮೇಲೆ ಚಪಡಿ ಕಲ್ಲು ಎಳೆದಿದ್ದಾಗಿದೆ. ಮನೆಯವರಿಗೆಲ್ಲಾ ಸತ್ಯ ಗೊತ್ತಾಗಿದ್ದು, ಸಂಧ್ಯಾ, ಸಿರಿ, ಸಮರ್ಥ್ ಉಗಿದು ಉಪ್ಪಾಕಿದ್ದಾರೆ. ಜುಗ್ಗ ತನ್ನ ಹಣ ಹೆಚ್ಚಾಗಲಿ ಎಂಬ ಕಾರಣಕ್ಕೆ ಬೀದಿ ಬೀದಿ ಅಲೆದಿದ್ದು, ಕಂಡ ಕಂಡವರಿಗೆ ಹಣ ಇನ್ವೆಸ್ಟ್ ಮಾಡುವಂತೆ ಎಲ್ಲರ ಬಳಿ ಹಣ ಪೀಕಿದ್ದಾನೆ. ಇದೆಲ್ಲಾ ಹಣವನ್ನೂ ತೆಗೆದುಕೊಂಡಿರುವ ವ್ಯಕ್ತಿ ಪರಾರಿಯಾಗಿರುವ ಕಾರಣ ಜುಗ್ಗ ಜಗನ್ನಾಥ ಕಂಗಾಲಾಗಿದ್ದಾನೆ. ಹಣ ಪೀಕಿದ್ದವರಿಗೆ ಈಗ ಜುಗ್ಗ ತನ್ನ ಜೇಬಿನಿಂದ ಕಾಸು ನೀಡಿದ್ದು, ಯಾರದ್ದೋ ದುಡ್ಡ ಯಲ್ಲಮ್ಮನ ಜಾತ್ರೆ ಎಂಬಂತೆ ಆರಾಮಾಗಿದ್ದಾನೆ.


ಶಾರ್ವರಿ ಅಕ್ಕನ ಬಗ್ಗೆ ತುಳಸಿಗೆ ಕುತೂಹಲ

ಇನ್ನು ಶಾರ್ವರಿ ಬದುಕಿನ ಹಿಂದೆ ಬಹಳ ದೊಡ್ಡ ಕಥೆ ಇದೆ ಎಂಬುದು ಮನೆಯ ಯಾರೊಬ್ಬರಿಗೂ ಗೊತ್ತಿಲ್ಲ. ಆದರೆ, ಅಮವಾಸ್ಯೆ ದಿನ ಶಾರ್ವರಿ ಸ್ಮಶಾನಕ್ಕೆ ಹೋಗುವುದನ್ನು ಗಮನಿಸಿರುವ ತುಳಸಿಗೆ ಅನುಮಾನ ಕಾಡಲು ಶುರುವಾಗಿದೆ. ಇದರ ಜೊತೆಗೆ ಈಗ ಶಾರ್ವರಿ ಮತ್ತು ಅವರ ಅಕ್ಕ ಜೊತೆಗಿರುವ ಫೋಟೋ ಒಂದು ತುಳಸಿ ಕೈ ಸೇರಿದೆ. ಅನಾಥೆ ಎಂದು ಹೇಳಿಕೊಂಡು ಮಹೇಶ್ ಕೈ ಹಿಡಿದು ಸಂಸಾರ ನಡೆಸುತ್ತಿರುವ ಶಾರ್ವರಿ ಹಿನ್ನೆಲೆ ಬೇರೆ ಏನೋ ಇದೆ ಎಂದು ತುಳಸಿ ಗೆಸ್ ಮಾಡಲು ಶುರು ಮಾಡಿದ್ದಾಳೆ.

ಎಚ್ಚರಿಕೆ ಕೊಟ್ಟ ಅಪರಿಚಿತನ ಮಾತುಗಳು

ಇದೇ ಸಂದರ್ಭದಲ್ಲಿ ಸರಿಯಾಗಿ ಅಪರಿಚಿತ ವ್ಯಕ್ತಿ ತುಳಸಿ ಎದುರಿಗೆ ಬಂದಿದ್ದು, ನಿಮಗೂ, ನಿಮ್ಮ ಕುಟುಂಬಕ್ಕೂ ಅಪಾಯವಿದೆ. ನಿಮ್ಮ ಮನೆಯಲ್ಲಿ ವಿಷದ ಹಾವನ್ನು ಸಾಕುತ್ತಿದ್ದೀರಾ. ಹಾವಿಗೆ ಎಷ್ಟೇ ಹಾಲೆರೆದರೂ ಕೂಡ ಕಚ್ಚಿಸಿಕೊಳ್ಳುವುದು ತಪ್ಪಲ್ಲ. ನಿಮ್ಮ ಕುಟುಂಬದ ಮೇಲೆ ವಿಷಕಾರುತ್ತಿರುವ ವ್ಯಕ್ತಿಯನ್ನು ಮನೆಯಿಂದ ದೂರವಿಡಿ ಎಂದು ಎಚ್ಚರಿಕೆ ಕೊಟ್ಟಿದ್ದಾನೆ. ಈ ಮಾತುಗಳು ತುಳಸಿಯಲ್ಲಿ ಇನ್ನಷ್ಟು ಕುತೂಹಲ ಮೂಡಿಸಿದೆ. ಹಳೆಯ ವಿಚಾರವನ್ನು ಕೆದಕುವ ಸಲುವಾಗಿ ತುಳಸಿ ಪದೇ ಪದೇ ಶಾರ್ವರಿ ಬಳಿ ನಾನು ನಿಮ್ಮ ಅಕ್ಕ ಎಂದು ಮಾತನಾಡಿಸುತ್ತಿದ್ದು, ಶಾರ್ವರಿ ಮುಖದಲ್ಲಿನ ಬದಲಾವಣೆಗಳನ್ನು ಗಮನಿಸುತ್ತಿದ್ದಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X