Srirastu Shubhamastu; ಕೊನೆಗೂ ಮನೆಗೆ ವಾಪಸ್ ಬಂದ ಪೂರ್ಣಿಮಾ..!

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಪೂರ್ಣಿಮಾ ತನಗೆ ಮಕ್ಕಳಾಗುವುದಿಲ್ಲ ಎಂಬ ಸತ್ಯ ತಿಳಿದು ಬೇಸರದಿಂದ ಮನೆಯನ್ನು ತೊರೆದು ಹೋಗಿದ್ದಾಳೆ. ಮನೆಯವರಿಗೆಲ್ಲಾ ಗಾಬಾರಿಯಾಗಿದ್ದು, ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. ಮನೆಯವರನ್ನು ಹೊರತು ಪಡಿಸಿ ಪೂರ್ಣಿಮಾಳಿಗೆ ಬೇರೆ ಯಾರೂ ಗೊತ್ತಿಲ್ಲ.ಎಲ್ಲೂ ಪೂರ್ಣಿಮಾ ಸಿಕ್ಕಿಲ್ಲ. ಹೀಗಾಗಿ ಮಾಧವ್ ಮತ್ತು ತುಳಸಿ ಹೊರಗಡೆ ಎಲ್ಲಾದರೂ ಹೋಗಿರಬಹುದು ಎಂದು ಹುಡುಕಲು ಮುಂದಾಗಿದ್ದಾರೆ.


ಪೂರ್ಣಿಗಾಗಿ ಮುಗಿಯದ ಹುಡುಕಾಟ

ದೇವಸ್ಥಾನ ಸೇರಿದಂತೆ ಹಲವು ಕಡೆ ಪೂರ್ಣಿಮಾಳನ್ನು ಹುಡುಕಾಡಿದ್ದಾರೆ. ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಪೂರ್ಣಿ ಎಂತಹ ಕೆಲಸ ಮಾಡಿಕೊಂಡಳು ಎಂದು ಬೇಸರ ಮಾಡಿಕೊಂಡಿದ್ದಾರೆ. ಅಲ್ಲದೇ, ಪೂರ್ಣಿಮಾಳನ್ನು ಹುಡುಕಿಕೊಂಡು ಆಶ್ರಮಕ್ಕೆ ಹೋಗುತ್ತಾರೆ. ಅಲ್ಲೂ ಪೂರ್ಣಿ ಕಾಣಿಸುವುದಿಲ್ಲ. ಆದರೂ ಎಲ್ಲಾದರು ಇರಬಹುದು ಎಂದು ಮಾಧವ್ ಮತ್ತು ತುಳಸಿ ಆಶ್ರಮದಲ್ಲೇ ಹುಡುಕಾಡುತ್ತಿರುತ್ತಾರೆ. ಅನ್ನಪೂರ್ಣ ಬಳಿ ಪೂರ್ಣಿಮಾ ಬಗ್ಗೆ ತುಳಸಿ ವಿಚಾರಿಸುತ್ತಾಳೆ. ಅವರ ತಂದೆ ತಾಯಿ ಬಗ್ಗೆ ಮಾಹಿತಿ ಗೊತ್ತಿದ್ದರೆ ಹೇಳಿ, ನಾವು ಹೋಗಿ ಹುಡುಕುತ್ತೇವೆ ಎಂದು ಹೇಳಿದಾಗ ಅನ್ನಪೂರ್ಣ ತಮಗೆ ಏನೂ ಗೊತ್ತಿಲ್ಲ ಎಂದು ಹೇಳುತ್ತಾರೆ.

srirasthu-shubhamasthu-serial-27-april-episode-written-update


ಜುಗ್ಗನಿಗೆ ಕೆಲಸ ಕೊಟ್ಟ ದತ್ತ ತಾತ

ಮನೆಯಲ್ಲಿ ಊಟ ಮಾಡುವುದಕ್ಕೂ ದತ್ತ ತಾತ ಲೆಕ್ಕಾಚಾರ ಹಾಕಿದ್ದಾರೆ. ಜುಗ್ಗ ಹಾಗೂ ಅವರ ಮನೆಯವರಿಗೆಲ್ಲಾ ಹಣ ಕೊಟ್ಟೇ ಊಟ ಮಾಡಬೇಕು ಎಂದು ಹೇಳಿದ್ದಾರೆ. ಇದರಿಂದ ನೊಂದುಕೊಂಡಿರುವ ಜುಗ್ಗ ದತ್ತ ತಾತನ ಬಳಿ ಡೀಲ್ ಮಾಡಿಕೊಳ್ಳಲು ಬಂದಿದ್ದಾನೆ. ಹಣದ ಬದಲು ಬೇರೆ ಏನಾದರೂ ಕೆಲಸವನ್ನು ಹೇಳಿ ಎಂದಿದ್ದಾನೆ. ದತ್ತ ತಾತ ಅದಕ್ಕೆ ಸಿರಿ ತಂದೆ ರವೀಂದ್ರ ಅವರ ಬಟ್ಟೆ ಐರನ್ ಮಾಡುವುದು ಸೇರಿದಂತೆ ಹಲವು ಕೆಲಸವನ್ನು ಕೊಟ್ಟಿದ್ದಾನೆ.


ಪೂರ್ಣಿಯನ್ನು ಮನೆಗೆ ಕರೆ ತಂದರು

ಆದರೆ, ತುಳಸಿಗೆ ಮರೆಯಾಗಿ ಯಾರಿಗೋ ಫೋನ್ ಮಾಡುವ ಅನ್ನಪೂರ್ಣ ಅವರು, ಪೂರ್ಣಿ ಬಗ್ಗೆ ಮಾತನಾಡುತ್ತಾರೆ. ಇದನ್ನು ತುಳಸಿ ಗಮನಿಸುತ್ತಾಳೆ. ಅನ್ನಪೂರ್ಣ ಅವರಿಗೆ ಪೂರ್ಣಿಮಾ ಅಪ್ಪ-ಅಮ್ಮನ ಬಗ್ಗೆ ಗೊತ್ತಿರಬಹುದು ಎಂದು ಊಹಿಸುತ್ತಾಳೆ. ಪೂರ್ಣಿಮಾ ಸಿಗದ ಕಾರಣ ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ಮಾಡಬೇಕು ಎಂದು ಅಂದುಕೊಳ್ಳುತ್ತಾರೆ. ಅಷ್ಟರಲ್ಲಿ ಪೂರ್ಣಿಮಾ ಮಕ್ಕಳ ಜೊತೆಗೆ ಇರುವುದನ್ನು ನೋಡಿ ಖುಷಿ ಪಡುತ್ತಾರೆ. ಪೂರ್ಣಿಮಾ ಕೂಡ ತುಳಸಿಯನ್ನು ಅಪ್ಪಿಕೊಂಡು ಮುದ್ದು ಮಾಡುತ್ತಾರೆ. ಬಿಟ್ಟು ಬಂದಿದ್ದು ತಪ್ಪು ಎಂದು ಹೇಳುತ್ತಾರೆ. ಪೂರ್ಣಿಮಾ ಆ ಮನೆಯಲ್ಲಿ ತನಗೆ ಇರಲು ಯೋಗ್ಯತೆ ಇಲ್ಲ. ನನಗೆ ಮಕ್ಕಳೇ ಆಗುವುದಿಲ್ಲ ಎಂದು ಹೇಳುತ್ತಾಳೆ. ಮಾಧವ್ ಸೊಸೆಗೆ ಬುದ್ಧಿ ಹೇಳಿ ಮನೆಗೆ ಹೋಗೋಣ ಎಂದು ಕರೆದುಕೊಂಡು ಬರುತ್ತಾರೆ.

srirasthu-shubhamasthu-serial-27-april-episode-written-update


ಪೂರ್ಣಿಗೆ ಬುದ್ಧಿ ಹೇಳಿದ ಮನೆಯವರು

ಪೂರ್ಣಿಮಾ ಮನೆಗೆ ಬಂದ ಮೇಲೆ ಅವಿ ಬಹಳ ಖುಷಿ ಪಡುತ್ತಾನೆ. ಅವಿ ನೀನು ನನ್ನನ್ನು ಬಿಟ್ಟು ಹೋಗಿದ್ದು ಎಷ್ಟು ಸರಿ. ನಿನ್ನ ಬಿಟ್ಟು ನಾನು ಅರಾಮಾಗಿ ಇರುತ್ತೀನಿ ಎಂದು ಹೇಗೆ ಅಂದುಕೊಂಡೆ ಎಂದು ಪ್ರಶ್ನಿಸುತ್ತಾನೆ. ಅಲ್ಲದೇ, ಅಭಿ ಹಾಗೂ ಮಹೇಶ ನಿನಗೆ ಈ ಮನೆಯಲ್ಲಿ ಯಾರಾದರೂ ತೊಂದರೆ ಕೊಟ್ಟಿದ್ದಾರಾ..? ಮಕ್ಕಳಾಗುವುದಿಲ್ಲ ಎಂದು ನಿಂದಿಸಿದ್ದಾರಾ ಎಂದು ಕೇಳುತ್ತಾರೆ. ಆಗ ಪೂರ್ಣಿಮಾ ದೀಪಿಕಾ ಮೇಲೆ ಯಾವುದೇ ಆರೋಪವನ್ನು ಮಾಡುವುದಿಲ್ಲ. ನನ್ನನ್ನು ಎಲ್ಲರೂ ಪ್ರೀತಿಯಿಂದಲೇ ಮಾತನಾಡಿಸುತ್ತಾರೆ. ಎಲ್ಲರೂ ನನ್ನ ಮೇಲೆ ಪ್ರೀತಿ ಇಟ್ಟುಕೊಂಡಿದ್ದಾರೆ ಎಂದು ಹೇಳುತ್ತಾಳೆ. ದೀಪಿಕಾ ಕೂಡ ಹೆದರಿ, ಪೂರ್ಣಿಯನ್ನು ಈ ಮನೆಯಲ್ಲಿ ಎಲ್ಲರೂ ಇಷ್ಟಪಡುತ್ತಾರೆ ಎಂದು ಹೇಳುತ್ತಾಳೆ. ಒಟ್ನಲ್ಲಿ ಪೂರ್ಣಿಮಾ ವಾಪಸ್ ಮನೆಗೆ ಬಂದಿದ್ದಾಳೆ.

English summary
Madhav and tulasi brings back poornima to house
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X