Srirasthu Shubhamasthu ; ದತ್ತ ತಾತನ ಆರೋಗ್ಯದಲ್ಲಿ ಏರುಪೇರು : ಗಾಬರಿಯಾದ ಸಿರಿ,ಸಂಧ್ಯಾ..!

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಂಧ್ಯಾಳಿಗೆ ಸಾಲಗಾರರ ಕಾಟ ದಿನ ದಿನಕ್ಕೂ ಹೆಚ್ಚಾಗುತ್ತಿದೆ. ಏನು ಮಾಡಬೇಕು ಎಂಬುದೇ ಅರ್ಥವಾಗದೇ ಮಾವನನ್ನು ಹೆದರಿಸಲು ಮುಂದಾಗಿದ್ದಾಳೆ.ಐದು ಲಕ್ಷ ಬೇಕೇಬೇಕು ಎಂದು ಕೇಳಿದ್ದಾಳೆ. ಕಳ್ಳರು ಕದ್ದಿರುವುದನ್ನು ನಾನು ಹೇಗೆ ತಂದುಕೊಡಲಿ ಎಂದು ಅವರ ಮಾವ ಹೇಳಿದ್ದಕ್ಕೆ ಸಂಧ್ಯಾ ಪೊಲೀಸ್ ಕಂಪ್ಲೈಂಟ್ ಕೊಡುವುದಾಗಿ ಹೇಳಿದ್ದಾಳೆ.ಸಂಧ್ಯಾಳ ದಡ್ಡತನವನ್ನು ತಿಳಿದಿರುವ ಅವರ ಮಾವ ನೀನು ಪೊಲೀಸರಿಗೆ ದೂರು ಕೊಟ್ಟರೆ, ವಿಚಾರಣೆ ನಡೆಸಲು ಮನೆಗೆ ಬರುತ್ತಾರೆ. ಆಗ ಎಲ್ಲರಿಗೂ ದೀಪಿಕಾಳಿಂದ ನೀನು ಸಾಲ ಪಡೆದದ್ದು ಗೊತ್ತಾಗುತ್ತದೆ ಎಂದು ಬೆದರಿಸುತ್ತಾನೆ.

ಕೊನೆಗೂ ಒಂದಾದ ಅಣ್ಣ-ತಮ್ಮ

ಇತ್ತ ಅವಿ ಮತ್ತು ಅಭಿ ಇಬ್ಬರ ಕೈಯ್ಯಲ್ಲು ಒಬ್ಬರನ್ನೊಬ್ಬರು ಬಿಟ್ಟಿರಲು ಸಾಧ್ಯವಿಲ್ಲ. ಇಬ್ಬರಿಗೂ ಜ್ವರ ಬರುತ್ತದೆ. ಸಂಧ್ಯಾ ಅವಿಗೆ ರಾಖಿ ಕಟ್ಟಿದಾಗ ಸುಮ್ಮನಿರಲಾಗದೇ ಅವಿ ಅತ್ತು ಬಿಡುತ್ತಾನೆ. ನನಗೆ ನನ್ನ ತಂಮ ಬೇಕೇಬೇಕು ಎಂದು ಅಳುತ್ತಾನೆ. ಕ್ಷಮೆ ಕೇಲಿ ನಾನೇ ಮನೆಗೆ ಹೋಗಿ ಬರುತ್ತೇನೆ ಎಂದು ಹೊರಡುತ್ತಾನೆ. ಇತ್ತ ಅಭಿ ಕೂಡ ನನ್ನ ಕೈಯ್ಯಲ್ಲಿ ಅಣ್ಣನನ್ನು ಬಿಟ್ಟಿರಲು ಸಾಧ್ಯವಿಲ್ಲ. ಇನ್ನು ಯಾವತ್ತು ನಾನು ಜಗಳ ಮಾಡೊಲ್ಲ ಎಂದು ಹೇಲಿ ಅವನೂ ಕೂಡ ಅಣ್ಣನನ್ನು ನೋಡಲೆಂದು ದತ್ತ ತಾತನ ಮನೆಗೆ ಬರುತ್ತಾನೆ. ಇವರಿಬ್ಬರು ಒಬ್ಬರನ್ನೊಬ್ಬರು ನೋಡುವ ಬರದಲ್ಲಿ ಆ ಮನೆಯಿಂದ ಈ ಮನೆಗೆ ಈ ಮನೆಯಿಂದ ಆ ಮನೆಗೆ ಓಡಾಡುತ್ತಾರೆ.

srirasthu shubhamasthu serial 27 August episode written update


ತುಳಸಿ-ಮಾಧವ್ ಪ್ಲಾನ್ ಸಕ್ಸಸ್

ಕೊನೆಗೆ ದತ್ತ ತಾತ ಎಲ್ಲರನ್ನೂ ಒಟ್ಟುಗೂಡಿಸುತ್ತಾರೆ. ಅಭಿ ಹಾಗೂ ಅವಿ ಇಬ್ಬರೂ ಖುಷಿಯಾಗುತ್ತಾರೆ. ಒಬ್ಬರನ್ನೊಬ್ಬರು ಕ್ಷಮೆ ಕೇಳುತ್ತಾರೆ. ಮಕ್ಕಳು ಒಂದಾಗಿದ್ದಕ್ಕೆ ಮನೆಯವರು ಕೂಡ ಖುಷಿ ಪಡುತ್ತಾರೆ. ತುಳಸಿ-ಮಾಧವ್ ಪ್ಲಾನ್ ಸಕ್ಸಸ್ ಆಗಿದ್ದು, ಇನ್ಯಾವತ್ತೂ ಬೇರೆಯಾಗುವ ಸಂದರ್ಭ ಬಾರದಿರಲಿ ಎಂದು ಹೇಳುತ್ತಾರೆ. ತುಳಸಿ ಮತ್ತು ಮಾಧವ್ ಮಾಡಿದ ಐಡಿಯಾವನ್ನು ನೋಡಿ ದತ್ತ ತಾತ ಕೂಡ ಖುಷಿ ಪಟ್ಟಿದ್ದಾರೆ. ಇನ್ನು ಪೂರ್ಣಿಮಾ ದೀಪಿಕಾ ಬಳಿ ನಾವು ಇನ್ಮುಂದೆ ಮನೆಯಲ್ಲಿ ಅನುಸರಿಸಿಕೊಂಡು ಹೋಗೋಣ ಎಂದು ಕ್ಷಮೆ ಕೇಳುತ್ತಾಳೆ. ದೀಪಿಕಾಳಿಗೆ ಇದು ಇಷ್ಟವಾಗುವುದಿಲ್ಲ. ಆದರೂ ಕಾಟಾಚಾರಕ್ಕೆ ನಗುತ್ತಾಳೆ. ಈ ಕುಟುಂಬವನ್ನು ಹೇಗಾದರೂ ಒಡರಯಲೇಬೇಕು ಎಂದು ಗೋಳಾಡುತ್ತಾಳೆ.

ದತ್ತ ತಾತನ ಆರೋಗ್ಯದಲ್ಲಿ ಏರುಪೇರು

ತುಳಸಿ ಮಾಧವ್ ಜೊತೆಗೆ ಬಹಳ ದಿನಗಳ ನಂತರ ಸ್ಕೂಟರ್ ನಲ್ಲಿ ಓಡಾಡಬೇಕು ಎಂದು ಬಯಸಿದ್ದಾಳೆ. ಮನೆಗೋಸ್ಕರ ಬಹಳ ಕಷ್ಟಪಡುವ ಹೆಂತಿಗಾಗಿ ಏನು ಬೇಕಿದ್ದರೂ ಸಿದ್ಧ ಎಂದು ಮಾಧವ್ ಒಪ್ಪಿದ್ದಾನೆ. ಇತ್ತ ದತ್ತ ತಾತನಿಗೆ ಇದ್ದಕ್ಕಿದ್ದ ಹಾಗೆಯೇ ಆರೋಗ್ಯದಲ್ಲಿ ಸಮಸ್ಯೆ ಆಗಿದೆ. ರಾತ್ರಿ ಊಟವನ್ನು ಕೂಡ ಮಾಡದೇ ಮಲಗಲು ಮುಂದಾಗಿದ್ದಾರೆ. ದತ್ತ ತಾತನ ಮೈ ಸುಡುತ್ತಿದೆ ಎಂದು ಸಂಧ್ಯಾ ಮಾತ್ರೆ ಕೊಡುತ್ತಾಳೆ. ಸಿರಿ ಆಸ್ಪತ್ರೆಗೆ ಕರೆದುಕೊಂಡು ಹೋಗೋಣ ಎಂದರೆ ದತ್ತ ತಾತ ಅದಕ್ಕೆ ಒಪ್ಪುವುದಿಲ್ಲ.

srirasthu shubhamasthu serial 27 August episode written update

ತಲೆ ತಿರುಗಿ ಬಿದ್ದ ದತ್ತ ತಾತ

ಇನ್ನು ಬೆಳಗ್ಗೆ ಎಷ್ಟೊತ್ತಾದರೂ ದತ್ತ ತಾತ ರೂಮಿನಿಂದ ಆಚೆ ಬರುವುದೇ ಇಲ್ಲ. ನಿತ್ಯ ಬೆಳಗ್ಗೆ ಎದ್ದು ವಾಕಿಂಗ್ ಹೋಗಿ ಬಂದು ಎಲ್ಲರನ್ನೂ ರೇಗಿಸುತ್ತಾ ಕಾಫಿ ಕುಡಿಯುತ್ತಿದ್ದ ದತ್ತ ತಾತ ಇನ್ನು ಎದ್ದಿಲ್ಲ ಎಂದು ಸಂಧ್ಯಾ ಎಬ್ಬಿಸಲು ಹೋಗುತ್ತಾಳೆ. ಅಷ್ಟರಲ್ಲಿ ರೂಮಿನಿಂದ ಹೊರಗೆ ಬರುವ ದತ್ತ ತಾತ ಇದ್ದಕ್ಕಿದ್ದ ಹಾಗೆಯೇ ತಲೆ ತಿರುಗಿ ಬೀಳುತ್ತಾರೆ. ದತ್ತ ತಾತ ಪ್ರಜ್ಞೆ ತಪ್ಪಿದ್ದು, ಸಿರಿ ಮತ್ತು ಸಂಧ್ಯಾ ಗಾಬರಿಯಾಗಿದ್ದಾರೆ. ಈ ಸೀನ್ ನೋಡಿ ಅಭಿಮಾನಿಗಳು ದತ್ತ ತಾತನ ಪಾತ್ರವನ್ನು ಅಂತ್ಯಗೊಳಿಸುತ್ತಾರಾ ಎಂದು ಬೇಸರ ಮಾಡಿಕೊಂಡಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X