Srirasthu Shubhamasthu ; ಮೈದುನ ಅಭಿ ಪರ ಮಾತನಾಡಿದ ಪೂರ್ಣಿಮಾ :ದೀಪಿಕಾ ಮಾತಿಂದ ನೊಂದ ಸಂಧ್ಯಾ..!
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ದೀಪಿಕಾಳನ್ನು ಕಾಡಿಸಲೆಂದೇ ವ್ಯಕ್ತಿಯೊಬ್ಬ ಲವ್ ಲೆಟರ್, ಗಿಫ್ಟ್ ಗಳನ್ನು ಕಳಿಸುತ್ತಿದ್ದಾನೆ. ಅದು ಯಾರು ಎಂದು ತಿಳಿದುಕೊಳ್ಳಲು ಅಭಿ ಪಾರ್ಕ್ ಗೆ ತೆರಳಿದ್ದಾನೆ. ಅಲ್ಲಿಗೆ ಬಂದ ಅಪರಿಚಿತ ಅಭಿಯನ್ನೇ ದೀಪಿಕಾ ಎಂದು ಭಾವಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ.ನನ್ನ ಜೊತೆಗೆ ಒಂದು ದಿನ ಕಳೆಯಬೇಕು, ನಾನು ಕೇಳಿದಷ್ಟು ಹಣ ಕೊಡಬೇಕು ಎಂದು ಕೇಳಿಕೊಳ್ಳುತ್ತಾನೆ. ಇದರಿಂದ ಅಭಿಗೆ ಕೋಪ ಬರುತ್ತದೆ.
ಸುಳ್ಳು ಹೇಳಿದ ಪೂರ್ಣಿಮಾ
ಅಭಿ ಮತ್ತು ತುಳಸಿ ಇಬ್ಬರೂ ಸೇರಿಕೊಂಡು ಆತನಿಗೆ ಗ್ರಹಚಾರ ಬಿಡಿಸುತ್ತಾರೆ. ತುಳಸಿ ಆಡಿದ ಮಾತುಗಳು ಅಭಿಗೆ ಮನದಲ್ಲಿ ತಳಮಳವಾಗುತ್ತದೆ. ತುಳಸಿಯನ್ನು ಅಮ್ಮ ಎಂದು ಒಪ್ಪಿಕೊಳ್ಳುತ್ತಾನೆ. ಇದರಿಂದ ತುಳಸಿಗೆ ಖುಷಿಯಾಗುತ್ತದೆ. ಇನ್ನು ಮನೆಗೆ ಬಂದ ಅಭಿ ಬಳಿ ದೀಪಿಕಾ ಜಗಳ ಮಾಡುತ್ತಾಳೆ. ಬೇರೆ ಹುಡುಗಿಯೊಂದಿಗೆ ಇದ್ದಾನೆ ಎಂದು ಅಪಾರ್ಥ ಮಾಡಿಕೊಂಡು ಜಗಳ ಮಾಡುತ್ತಾಳೆ. ಸತ್ಯ ಹೇಳಲಾಗದೇ ಒದ್ದಾಡುತ್ತಿದ್ದ ಅಭಿ ಪರ ಪೂರ್ಣಿಮಾ ಬರುತ್ತಾಳೆ. ನನಗೆ ಒಂದು ಹುಡುಗ ಲೆಟರ್ ಮತ್ತು ಉಡುಗೊರೆಗಳನ್ನು ಕಳಿಸುತ್ತಾ ಹಿಂಸೆ ಕೊಡುತ್ತಿದ್ದ. ಅಭಿ ನನಗೆ ಸಹಾಯ ಮಾಡಿದ್ದು, ಈಗ ಆ ಹುಡುಗನ ಕಾಟ ತಪ್ಪಿದೆ ಎಂದು ಸುಳ್ಳು ಹೇಳುತ್ತಾಳೆ. ಈ ಮಾತನ್ನು ನಂಬುವ ದೀಪಿಕಾ ಸುಮ್ಮನಾಗುತ್ತಾಳೆ. ಅಭಿಗೆ ಪೂರ್ಣಿಮಾ ಮೇಲಿದ್ದ ಅಭಿಮಾನ ಹೆಚ್ಚಾಗುತ್ತದೆ.

ಅಭಿಗೆ ಸಮರ್ಥ್ ನಿಂದ ಶರ್ಟ್ ಉಡುಗೊರೆ
ಅಭಿ ಸಮರ್ಥ್ ಗೆ ಶರ್ಟ್ ಕೊಟ್ಟಿರುತ್ತಾನೆ. ಹೀಗಾಗಿ ಸಮರ್ಥ್ ಅಭಿಗಾಗಿ ಹೊಸ ಶರ್ಟ್ ಅನ್ನು ತಂದು ಕೊಡುತ್ತಾನೆ. ಮೊದಲು ಅಭಿ ತನ್ನ ಶರ್ಟ್ ಅನ್ನೇ ವಾಪಸ್ ಕೊಡುತ್ತಿದ್ದಾನೆ ಎಂದು ಭಾವಿಸುತ್ತಾನೆ. ನಂತರ ಸಮರ್ಥ್, ನೀವು ಕೊಟ್ಟ ಶರ್ಟ್ ನನ್ನ ಬಳಿಯೇ ಇದೆ. ಇದು ನಿಮಗಾಗಿ ಹೊಸದನ್ನು ತಂದಿದ್ದೀನಿ ಎನ್ನುತ್ತಾನೆ. ಅಭಿ ಆ ಶರ್ಟ್ ಅನ್ನು ತೆಗೆದುಕೊಂಡಿದ್ದು, ನಿಧಿಯ ಮದುವೆಯ ಚಪ್ಪರ ಶಾಸ್ತ್ರಕ್ಕೆ ಅದೇ ಶರ್ಟ್ ಅನ್ನು ಧರಿಸಿರುತ್ತಾನೆ. ಇದನ್ನು ನೋಡಿ ಎಲ್ಲರೂ ಸಮರ್ಥ್ ಮತ್ತು ಅಭಿ ಕೂಡ ಒಂದಾಗುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಂಡು ಖುಷಿ ಪಡುತ್ತಾರೆ.
ಮನೆಯಲ್ಲಿ ನಿಧಿ ಮದುವೆ ಸಂಭ್ರಮ
ಮಾಧವ್ ಮನೆಯಲ್ಲಿ ಮದುವೆಯ ಕಳೆಗಟ್ಟಿದೆ. ತುಳಸಿಗೆ ಅಭಿ ತನ್ನನ್ನು ಅಮ್ಮ ಎಂದು ಕರೆದ ಖುಷಿಯಲ್ಲಿದ್ದಾಳೆ. ಇದೇ ಸಮಯಕ್ಕೆ ಸರಿಯಾಗಿ ಶಾರ್ವರಿ ಬಂದು ನನ್ನ ಬಗ್ಗೆ ಮನೆಗೆ ಹೇಳುವುದಿಲ್ಲವಾ ಎಂದು ಕೆಣಕುತ್ತಾಳೆ. ಅದಕ್ಕೆ ತುಳಸಿ ಶಾರ್ವರಿಯನ್ನು ನಿನ್ನ ಪಾಪದ ಕೊಡ ತುಂಬಿದೆ. ಹೆಚ್ಚು ಕಾಲ ನಿನ್ನ ಆಟಗಳು ನಡೆಯುವುದಿಲ್ಲ ಎಂದು ಹೇಳುತ್ತಾಳೆ. ಇದೇ ಸಮಯಕ್ಕೆ ಸರಿಯಾಗಿ ಮಾಧವ್ ಬಂದಿದ್ದಕ್ಕೆ ಮಾತು ಬದಲಾಯಿಸುತ್ತಾರೆ. ಇತ್ತ ಮನೆಯವರೆಲ್ಲಾ ರೆಡಿಯಾಗಿದ್ದು, ನಿಧಿಯನ್ನು ಚಪ್ಪರ ಶಾಸ್ತ್ರಕ್ಕೆ ತಯಾರಿ ಮಾಡುತ್ತಾರೆ.
ಸಂಧ್ಯಾಳನ್ನು ಗೇಲಿ ಮಾಡಿದ ದೀಪಿಕಾ
ಮದುವೆ ಮನೆ ಎಂದು ಸಂಧ್ಯಾ, ಸಿರಿ ಹಾಗೂ ಸಮರ್ಥ್ ಕೂಡ ಮನೆಗೆ ಬರುತ್ತಾರೆ. ಮನೆಯಲ್ಲಿ ಎಲ್ಲರೂ ಮದುವೆ ಸಂಭ್ರಮದಲ್ಲಿರುತ್ತಾರೆ. ಸಂಧ್ಯಾ ನಿಧಿ ರೂಮಿಗೆ ಬಂದಾಗ ದೀಪಿಕಾ ನಿಧಿಗೆ ಮೇಕಪ್ ಮಾಡುತ್ತಿರುತ್ತಾಳೆ. ಬೇಕಂತಲೇ ದೀಪಿಕಾ ನಿಧಿಗೆ ಒಡವೆಗಳನ್ನು ಹುಷಾರಾಗಿ ಎತ್ತಿಟ್ಟುಕೊ. ಇಲ್ಲದೇ ಹೋದರೆ ಮನೆ ಕಳ್ಳರನ್ನು ಕಂಡು ಹಿಡಿಯುವುದು ಕಷ್ಟ ಎಂದು ವ್ಯಂಗ್ಯವಾಗಿ ಮಾತನಾಡುತ್ತಾಳೆ. ಇದರಿಂದ ಸಂಧ್ಯಾ ಮನಸ್ಸಿಗೆ ಬೇಸರವಾಗುತ್ತದೆ. ಆದರೆ, ದೀಪಿಕಾ ಮಾತಿಗೆ ಏನೂ ಹೇಲಲಾಗದೇ, ಮನದೊಳಗೆ ದುಃಖಿಸುತ್ತಾಳೆ. ತಾನು ಈ ಹಿಂದೆ ಮಾಡಿದ ತಪ್ಪಿಗೆ ಈಗ ಮಾತುಗಳು ಕೇಳಿ ಬರುತ್ತಿವೆ ಎಂಬುದನ್ನು ಅರ್ಥ ಮಾಡಿಕೊಂಡು ಸುಮ್ಮನಿದ್ದಾಳೆ.


Click it and Unblock the Notifications











