Srirastu Shubhamastu ; ವಂಶವೃಕ್ಷ ತಂದ ತಲೆನೋವು ; ಮನೆಯವರ ಮಾತಿಗೆ ಅಭಿ ಒಪ್ಪುತ್ತಾನಾ..?
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ದತ್ತ ತಾತನಿಗೆ ಹೊಸ ಅಜ್ಜಿಯೊಬ್ಬರು ಪರಿಚಯವಾಗಿದ್ದಾರೆ. ಸದಾ ಸಿಡುಕು ಮೂತಿಯಲ್ಲೇ ಇದ್ದರೂ ಅಜ್ಜಿಯ ರೀತಿ-ನೀತಿಗಳು ದತ್ತ ತಾತನಿಗೆ ಇಷ್ಟವಾಗಿದೆ. ಆದರೆ, ಅಜ್ಜಿ ಅನಾಥೆಯಾಗಿದ್ದು, ಅವರ ಮಕ್ಕಳೆಲ್ಲರೂ ಬಿಟ್ಟು ಹೋಗಿದ್ದಾರೆ.
ಹೀಗಾಗಿ ಅಜ್ಜಿಗೆ ಏಕಾಂಗಿಯಾಗಿ ಜೀವನ ನಡೆಸುವುದು ಕಷ್ಟವಾಗಿದೆ. ನ್ಯಾಯಾಲಯದಲ್ಲಿ ಅಜ್ಜಿ ದಯಾಮರಣವನ್ನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಮಾಧ್ಯಮದಲ್ಲಿ ಅಜ್ಜಿ ತನಗೆ ದಯಾಮರಣ ಯಾಕಾಗಿ ಬೇಕಾಗಿದೆ ಎಂಬುದನ್ನು ವಿವರಿಸಿದ್ದಾರೆ.

ಅಜ್ಜಿಗೆ ಬುದ್ಧಿ ಹೇಳಿದ ದತ್ತ ತಾತ
ದತ್ತ ತಾತನಿಗೆ ಅಜ್ಜಿ ಹೇಳಿದ ಮಾತುಗಳನ್ನು ಕೇಳಿ ನೋವಾಗುತ್ತದೆ. ಮುಂದೊಂದು ದಿನ ತನ್ನ ಪರಿಸ್ಥಿತಿಯೂ ಹೀಗೆ ಆಗಬಹುದು. ದಯಾಮರಣ ಕೋರಿ ಕೋರ್ಟ್ ಮೆಟ್ಟಿಲೇರಬಹುದು ಎಂದು ಭಾವಿಸುತ್ತಾರೆ. ಆಗ ಸಿರಿ ತಾತನಿಗೆ ನಿಮಗೆ ನಾವಿದ್ದೀವಿ ಹಾಗೆಲ್ಲಾ ಯೋಚಿಸಬೇಡಿ ಎಂದು ಸಮಾಧಾನ ಮಾಡುತ್ತಾಳೆ.
ಬಳಿಕ ದತ್ತ ತಾತ ಪಾರ್ಕ್ ಗೆ ವಾಕಿಂಗ್ ಗೆಂದು ಹೋದಾಗ ಅಲ್ಲಿ ಯಾರೋ ಒಬ್ಬ ಹುಡುಗ ವೃದ್ಧಾಶ್ರಮಕ್ಕೆ ಹೋಗಿ ನಿಮಗೆ ಊಟ-ತಿಂಡಿ ಕೊಟ್ಟು ನೋಡಿಕೊಳ್ಳುತ್ತಾರೆ ಎಂದು ಅಜ್ಜಿಗೆ ಹೇಳುತ್ತಿರುತ್ತಾನೆ. ಅಜ್ಜಿ ಕೋಪದಿಂದ ಆ ಹುಡುಗನನ್ನು ಬೈದು ಕಳಿಸುತ್ತಾರೆ.
ಬಳಿಕ ಯಾರ ಅನುಕಂಪವೂ ಬೇಡ ಎನ್ನುವ ನೀವು ದಯಾಮರಣ ಕೋರಿದ್ದು ತಪ್ಪು. ಅದರಲ್ಲೇ ದಯಾ ಎನ್ನುವುದಿದೆ. ಮನುಷ್ಯ ಜನ್ಮ ಶ್ರೇಷ್ಠವಾದದ್ದು. ಸಾವು ಬಂದಾಗ ಸ್ವೀಕರಿಸಬೇಕೆ ಹೊರತು, ಇರುವ ಜೀವವನ್ನು ಕಳೆದುಕೊಳ್ಳಬಾರದು ಎಂದು ಬುದ್ಧಿವಾದ ಹೇಳುತ್ತಾರೆ.

ದೊಡ್ಡ ತಲೆ ನೋವು ತಂದ ವಂಶವೃಕ್ಷ
ಇತ್ತ ಮಾಧವ ಮನೆಯಲ್ಲಿ ಈಗ ದೊಡ್ಡ ತಲೆನೋವಾಗಿ ವಂಶವೃಕ್ಷ ಪರಿಣಮಿಸಿದೆ. ಮನೆಯಲ್ಲಿ ವಂಶವೃಕ್ಷ ಬರೆಸಲು ಸಮರ್ಥ್ ಮತ್ತು ಸಂಧ್ಯಾ ಹೆಸರು ಸಮಸ್ಯೆ ತಂದಿದೆ. ಮಾಧವ ಗೆ ತುಳಸಿ ತನ್ನ ಹೆಂಡತಿ ಎಂದಾದ ಮೇಲೆ ಆಕೆಗೆ ನನ್ನ ಮಕ್ಕಳು ತನ್ನ ಮಕ್ಕಳೇ ಎಂಬ ಭಾವನೆ ಇದೆ.
ಹಾಗೆಂದ ಮೇಲೆ ತುಳಸಿ ಮಕ್ಕಳಾದ ಸಮರ್ಥ್ ಮತ್ತು ಸಂಧ್ಯಾ ಕೂಡ ಈ ವಂಶವೃಕ್ಷದಲ್ಲಿ ಸೇರಿಕೊಳ್ಳುವುದು ನ್ಯಾಯ ಎಂದು ಮಾಧವ ಆಲೋಚಿಸುತ್ತಿದ್ದಾನೆ. ಇದೇ ವಿಚಾರವಾಗಿ ಮಾಧವ ಮಹೇಶನ ಜೊತೆಗೆ ಕುಳಿತು ಮಾತನಾಡಿದ್ದಾನೆ. ನಮ್ಮ ಮನೆಯವರಿಗೋಸ್ಕರ, ಕಷ್ಟಪಟ್ಟು, ಅವಮಾನಗಳ್ನು ಅನುಭವಿಸಿದ ತುಳಸಿಗೆ ನಾನು ಹೇಗೆ ಅನ್ಯಾಯ ಮಾಡಲಿ ಎಂದು ಮಹೇಶನೊಂದಿಗೆ ಚರ್ಚಿಸಿದ್ದಾನೆ.
ಅಣ್ಣ-ತಮ್ಮನಿಗಿಲ್ಲ ಬೇರೆ ದಾರಿ
ಆದರೆ, ಶಾರ್ವರಿಗೆ ಇದು ಕೊಂಚವೂ ಇಷ್ಟವಿಲ್ಲ. ಹೀಗಾಗಿ ಸಾಕಷ್ಟು ಸರ್ಕಸ್ ಮಾಡಿದ್ದಾಳೆ. ದೀಪಿಕಾ ಕೂಡ ಅಭಿ ತಲೆಗೆ ಏನೇನೋ ತುಂಬಿದ್ದಾಳೆ. ಸಮರ್ಥ್ ಮತ್ತು ಸಂಧ್ಯಾ ಇಬ್ಬರೂ ವಂಶವೃಕ್ಷಕ್ಕೆ ಸೇರ್ಪಡೆಯಾದರೆ, ಆಸ್ತಿಯಲ್ಲಿ ಅವರಿಗೂ ಪಾಲು ನೀಡಬೇಕು ಎಂದು ತಲೆ ಕೆಡಿಸಿಕೊಂಡಿದ್ದಾರೆ.

ಹಾಗಾಗಿ ಯಾವುದೇ ಕಾರಣಕ್ಕೂ ಅವರ ಹೆಸರು ಸೇರ್ಪಡೆ ಆಗುವುದು ಬೇಡ ಎಂದು ಅಭಿ ಹಾಗೂ ಅವಿ ಗಲಾಟೆ ಮಾಡಿದ್ದಾರೆ. ಈಗ ಮಹೇಶ ಅಭಿ ಹಾಗೂ ಅವಿಗೆ ಬುದ್ಧಿ ಹೇಳಿದ್ದಾರೆ. ಅವರಿಬ್ಬರ ಹೆಸರು ಸೇರ್ಪಡೆ ಅಗಲೇಬೇಕು ಎಂದು ಹೇಳಿದ್ದಾರೆ. ಆದರೆ, ಅಭಿ ಆಸ್ತಿ ಪಾಲಾದರೆ, ಅವಿ ಅಣ್ಣ ಬೀದಿ ಪಾಲಾಗಬಹುದು. ನನಗೆ ದೀಪಿಕಾ ಅಪ್ಪ ಇದ್ದಾರೆ ಎಂದು ಹೇಳುತ್ತಾರೆ. ಆದರೆ, ಮಹೇಶ ನಿಮ್ಮಿಬ್ಬರಿಗೆ ಬೇರೆ ದಾರಿ ಇಲ್ಲ ಎಂದು ಹೇಳಿ ಹೊರಟು ಬಿಡುತ್ತಾರೆ.
ಸಮರ್ಥ್ ಮನದೊಳಗೆ ಹೆಚ್ಚಿದ ಬೇಸರ
ಇನ್ನು ತುಳಸಿ, ಸಮರ್ಥ್ ಜೊತೆಗೆ ಮನೆಗೆ ಬಂದು ವಂಶವೃಕ್ಷದ ವಿಚಾರವನ್ನು ಹೇಳುತ್ತಾಳೆ. ಸಂಧ್ಯಾ ಮತ್ತು ಸಮರ್ಥ್ ಹೆಸರು ಸೇರಿಸಲು ನನಗೆ ಇಷ್ಟವಿಲ್ಲ ಎಂದು ಹೇಳುತ್ತಾಳೆ. ಆಗ ಸಂಧ್ಯಾ ಕೊಂಕು ತೆಗೆದು ಇದು ಮೋಸ ಎಂದು ಹೇಳುತ್ತಾಳೆ. ಆದರೆ, ದತ್ತ ತಾತ ತುಳಸಿ ನಿರ್ಧಾರವನ್ನು ಒಪ್ಪಿಕೊಳ್ಳುತ್ತಾರೆ.
ಸಮರ್ಥ್ ಯಾವುದೇ ಕಾರಣಕ್ಕೂ ನಾನು ಮತ್ತು ಸಂಧ್ಯಾ ಇಬ್ಬರ ಹೆಸರು ನಿಮ್ಮ ಮನೆಯ ವಂಶವೃಕ್ಷದಲ್ಲಿ ಸೇರಲು ಬಿಡುವುದಿಲ್ಲ. ನಮಗದು ಬೇಕಾಗು ಇಲ್ಲ ಎಂದು ಹೇಳುತ್ತಾನೆ. ಇನ್ನು ಅಮ್ಮ ತುಳಸಿಯ ಹೆಸರು ಮಾಧವ ವಂಶವೃಕ್ಷಕ್ಕೆ ಸೇರಿಕೊಳ್ಳುತ್ತದೆ ಎಂಬುದನ್ನು ಕೇಳಿ ಮನದೊಳಗೆ ಬಹಳ ಬೇಸರ ಮಾಡಿಕೊಳ್ಳುತ್ತಾನೆ.


Click it and Unblock the Notifications











