Srirasthu Shubhamasthu ; ಮೊದಲ ಬಾರಿಗೆ ಅತ್ತೆ ಎದುರು ನಿಷ್ಠೂರವಾಗಿ ಮಾತನಾಡಿದ ಸಿರಿ !
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ದತ್ತ ತಾತ ಆಸ್ಪತ್ರೆಯಿಂದ ಮನೆಗೆ ಬಂದಿದ್ದಾರೆ. ಮನೆಗೆ ಬರುತ್ತಿದ್ದಂತೆಯೇ ರವೀಂದ್ರ ಅವರ ಫೋಟೋಗೆ ಹಾರ ಹಾಕಿದ್ದನ್ನು ಕಂಡು ಶಾಕ್ ಆಗಿದ್ದಾರೆ. ಬೀಗರಿಗೆ ಇದೇನಾಯ್ತು. ಅರಾಮಾಗಿ ಮನೆಯಲ್ಲಿದ್ದಾರೆ ಎಂದು ಹೇಳಿದ್ದು ಸುಳ್ಳಾ ಎಂದು ವಿಚಾರಿಸಿದ್ದಾರೆ. ಸಂಧ್ಯಾ ಮತ್ತು ಸಿರಿ ನಡೆದ ಘಟನೆಯನ್ನು ವಿವರಿಸಿದ್ದಾರೆ. ವಿಚಾರ ಕೇಳಿದ ದತ್ತ ತಾತನಿಗೆ ಶಾಕ್ ಆಗುತ್ತದೆ. ನನ್ನಿಂದಲೇ ಬೀಗರು ಪ್ರಾಣ ಬಿಡಬೇಕಾಯ್ತು ಎಂದು ಬಹಳ ನೊಂದುಕೊಳ್ಳುತ್ತಾರೆ. ಪಶ್ಚಾತಾಪದಿಂದ ನೊಂದುಕೊಳ್ಳುತ್ತಾರೆ.
ಮೊಮ್ಮಗನ ಮೇಲೆ ದತ್ತ ತಾತನಿಗೆ ನಂಬಿಕೆ
ರವೀಂದ್ರ ಅವರನ್ನು ಹೋದಲೆಲ್ಲಾ ಕರೆದುಕೊಂಡು ಹೋಗುತ್ತಿದ್ದೆ. ಈಗ ನನ್ನಿಂದಲೇ ಹೀಗೆ ನಡೆಯಿತು ಎಂದು ಬೇಸರ ಮಾಡಿಕೊಳ್ಳುತ್ತಾರೆ. ಸಂಧ್ಯಾ ತಾತನಿಗೆ ಸಮಾಧಾನ ಮಾಡುತ್ತಾಳೆ. ಬಳಿಕ ಸಮರ್ಥ್ ಜೈಲು ಪಾಲಾಗಿರುವ ವಿಚಾರವನ್ನು ದತ್ತ ತಾತನಿಗೆ ಸಂಧ್ಯಾ ಹೇಳುತ್ತಾಳೆ. ಅದೂ ಕೂಡ ತಮಗೆ ಮಾಡಿದ್ದು, ಹೀಗಾಗಿ ಕೇಸ್ ಪೊಲೀಸ್ ಠಾಣೆಯಲ್ಲಿದೆ. ಸಮರ್ಥ್ ಜೈಲಿನಲ್ಲಿದ್ದಾನೆ ಎಂಬ ವಿಚಾರವನ್ನು ಸಂಧ್ಯಾ ಹೇಳುತ್ತಾಳೆ. ಈ ಮಾತನ್ನು ಕೇಳಿದ ದತ್ತ ತಾತನಿಗೆ ಬೇಸರವಾಗುತ್ತದೆ. ಅಲ್ಲದೇ, ತನ್ನ ಮೊಮ್ಮಗ ಈ ಆಕ್ಸಿಡೆಂಟ್ ಮಾಡಲು ಸಾಧ್ಯವೇ ಇಲ್ಲ. ಆ ಕಾರಿನಲ್ಲಿ ಸಮರ್ಥ್ ಇರಲಿಲ್ಲ ಎಂದು ಹೇಳುತ್ತಾರೆ. ಇದರಲ್ಲಿ ಏನೋ ಮೋಸವಿದೆ. ನನ್ನ ಮೊಮ್ಮಗ ಆಕ್ಸಿಡೆಂಟ್ ಮಾಡುವುದಿಲ್ಲ ಎಂದು ಹೇಳುತ್ತಾರೆ.

ಅತ್ತೆ ಬಳಿ ನಿಷ್ಠೂರವಾಗಿ ಮಾತನಾಡಿದ ಸಿರಿ
ಇನ್ನು ತುಳಸಿ ಮಗನನ್ನು ಮಾತನಾಡಿಸಿಕೊಂಡು ಹೋಗಲು ಪೊಲೀಸ್ ಠಾಣೆಗೆ ಬಂದಿರುತ್ತಾಳೆ. ಅದೇ ವೇಳೆಗೆ ಸಿರಿ ಕೂಡ ಬರುತ್ತಾಳೆ. ಸಿರಿ ವ್ಯಂಗ್ಯವಾಗಿ ನಿಮ್ಮ ಮಗನನ್ನು ನೋಡಲು ಬಂದಿದ್ದಾ. ಚೆನ್ನಾಗಿದ್ದಾನಾ..? ಕಂಬಿ ಹಿಂದೆ ಹೇಗೆ ಕಾಣಿಸುತ್ತಿದ್ದಾನೆ ಎಂದು ಚುಚ್ಚಿ ಮಾತನಾಡುತ್ತಾಳೆ. ತುಳಸಿ ಆಗ ನಿನ್ನ ಜಾಗದಲ್ಲಿ ನಾನು ಇದ್ದಿದ್ದರೂ ಹೀಗೆ ಮಾತನಾಡುತ್ತಿದೆ. ನಿನ್ನ ನೋವು, ಸಂಕಟ ನನಗೆ ಅರ್ಥವಾಗುತ್ತೆ. ಸ್ವಲ್ಪ ದಿನ ಎಲ್ಲಾ ಸರಿ ಹೋಗುತ್ತೆ ಎಂದು ತುಳಸಿ ಸಿರಿಯನ್ನು ಸಮಾಧಾನದಿಂದಲೇ ಮಾತನಾಡಿಸುತ್ತಾಳೆ. ಆದರೆ, ಸಿರಿ ನಿಷ್ಠೂರವಾಗಿ ನನ್ನ ಗಂಡನನ್ನು ಬಿಡಿಸಿಕೊಳ್ಳುತ್ತೇನೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗುವಂತೆ ಮಾಡುತ್ತೇನೆ ಎಂದು ಹೇಳಿ ಹೊರಡುತ್ತಾಳೆ.
ಇನ್ನೂ ಪಶ್ಚಾತಾಪದಲ್ಲಿರುವ ನಿಧಿ
ನಿಧಿಗೆ ತನ್ನ ಮದುವೆ ನಿಂತು ಹೋಯಿತು. ಸಂಬಂಧವೂ ಮುರಿದು ಬಿತ್ತು ಎನ್ನುವ ನೋವು ಕೊಂಚವೂ ಇಲ್ಲ. ಬದಲಿಗೆ ತನ್ನಿಂದ ಸಮರ್ಥ್ ಜೈಲು ಸೇರಬೇಕಾಯ್ತು. ಒಬ್ಬರ ಜೀವವೂ ಹೋಯ್ತು ಎಂಬ ದುಃಖದಲ್ಲಿದ್ದಾಳೆ. ಆದರೆ, ಮನೆಯವರೆಲ್ಲಾ ಮದುವೆ ನಿಂತಿದ್ದಕ್ಕೆ ನಿಧಿ ಬೇಸರದಲ್ಲಿದ್ದಾಳೆ ಎಂದು ಭಾವಿಸಿದ್ದಾರೆ. ಹೀಗಾಗಿ ಪೂರ್ಣಿಮಾ, ಅಭಿ, ಅವಿ ಎಲ್ಲರೂ ನಿಧಿಯನ್ನು ಖುಷಿಯಾಗಿರುವುದು ಹೇಗೆ ಎಂದು ಯೋಚಿಸುತ್ತಿದ್ದಾರೆ. ನಿಧಿ ಚಿಂತೆ ಮಾಡದಂತೆ ನೋಡಿಕೊಳ್ಳಬೇಕು ಎಂದು ಪ್ರಯತ್ನ ಪಡುತ್ತಿದ್ದಾರೆ.
ಹೊಸ ಲೆಕ್ಕಾಚಾರ ಮಾಡಿದ ದೀಪಿಕಾ
ಇದೇ ಸಂದರ್ಭದಲ್ಲಿ ತನ್ನಿಂದ ಅಭಿ ದೂರಾಗಿದ್ದಾನೆ ಎಂಬ ಕೊರಗು ದೀಪಿಕಾಳನ್ನು ಕಾಡುತ್ತಿದೆ. ಈಗ ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು ಅಭಿಗೆ ಹತ್ತಿರವಾಗಬೇಕು. ಅಭಿ ತನ್ನ ಜೊತೆಗೆ ಪ್ರೀತಿಯಿಂದ ಇರಬೇಕು ಎಂದರೆ, ಈ ಮನೆಯವರ ಬಗ್ಗೆ ತಾನು ಕಾಳಜಿ ತೋರುವಂತೆ ನಟಿಸಬೇಕು ಎಂದು ಉಪಾಯ ಮಾಡಿದ್ದಾಳೆ. ಈಗ ನಾವು ನಿಧಿ ಜೊತೆಗೆ ಸಮಯ ಕಳೆಯುವುದು ಬಹಳ ಮುಖ್ಯ. ಅವಳಿಗೆ ಸಿನಿಮಾ ನೋಡಲು ಇಷ್ಟ. ನಾನು ಅವಳ ಜೊತೆಗೆ ಕೂತು ಸಿನಿಮಾ ನೋಡುತ್ತಾ ಅವಳ ಮನಸ್ಸು ಹಗುರವಾಗುವಂತೆ ಮಾಡುತ್ತೇನೆ ಎಂದು ಲೆಕ್ಕಾಚಾರ ಮಾಡಿ ಅಭಿ ಬಳಿ ಮಾತನಾಡಿದ್ದಾಳೆ.


Click it and Unblock the Notifications











