Srirasthu Shubhamasthu ; ಪೂರ್ಣಿಮಾಳಿಗೆ ಸರದ ಬಗ್ಗೆ ಸತ್ಯ ಹೇಳಿದ ಮಾಧವ್-ತುಳಸಿ..!

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಅವಿನಾಶ್ ಗೆ ತುಳಸಿ ನಿಮ್ಮಿಬ್ಬರು ಮಕ್ಕಳ ನಡವಳಿಕೆಯಿಂದ ಮಾಧವ್ ಅವರು ಇಷ್ಟು ವರ್ಷ ಎಷ್ಟು ಕಷ್ಟಪಟ್ಟಿದ್ದಾರೆ. ಆಕ್ಸಿಡೆಂಟ್ ನಲ್ಲಿ ಹೆಂಡತಿ ಸುಮತಿಯನ್ನು ಶಾಶ್ವತವಾಗಿ ಕಳೆದುಕೊಂಡರು.ಜೊತೆಗೆ ತಮ್ಮ ಮಹೇಶ ಹಾಸಿಗೆ ಹಿಡಿದ ದುಃಖದಿಂದ ಕುಗ್ಗಿ ಹೋಗಿದ್ದರು.ಇದೆಲ್ಲದರ ನಡುವೆ ಮಕ್ಕಳಿಗೂ ಕೂಡ ಅವರ ಬೇಡ ಎನಿಸಿದಾಗ ಮಾಧವ್ ಅವರ ಪರಿಸ್ಥಿತಿ ಎಷ್ಟು ಕಷ್ಟವಾಗಿರುತ್ತದೆ. ಮಾಧವ್ ಅವರು ಎಲ್ಲರೂ ಇದ್ದೂ ಕೂಡ ಅನಾಥರಂತೆ ಬದುಕಿದರು. ಮಕ್ಕಳ ಭವಿಷ್ಯಕ್ಕೋಸ್ಕರ ದುಡಿದರು ಎಂದು ತುಳಸಿ ಅವಿಗೆ ಬಿಡಿಸಿ ಹೇಳುತ್ತಾಳೆ.

ಅವಿಗೆ ಅರ್ಥ ಮಾಡಿಸಿದ ತುಳಸಿ

ಅವಿಗೆ ತುಳಸಿಯ ಮಾತುಗಳನ್ನು ಕೇಳಿ ನಿಜ ಎನಿಸುವುದರ ಜೊತೆ ತಾನು ಮಾಡಿದ್ದು ಎಷ್ಟು ದೊಡ್ಡ ತಪ್ಪು ಎಂದು ಅನಿಸುತ್ತದೆ. ತುಳಸಿ ಮಾತಿಗೆ ಒಂದು ಮಾತನಾಡದೇ ಮೌನವಾಗುತ್ತಾನೆ. ಪೂರ್ಣಿಮಾ ಕೂಡ ಮಾಧವ್ ಎಷ್ಟು ಕಷ್ಟಪಟ್ಟಿದ್ದಾರೆ ಎಂಬುದನ್ನು ಹೇಳುತ್ತಾಳೆ. ಅವಿಗೆ ಹೌದು ಎನಿಸಿದ್ದು, ಈಗ ತನ್ನ ತಂದೆಯ ಬಗ್ಗೆ ಅನುಕಂಪವೂ ಮೂಡಿದೆ. ಮೊದಲೆಲ್ಲಾ ಅಪ್ಪ ಎಂದರೆ ಸಿಡುಕುತ್ತಿದ್ದ ಅವಿನಾಶ್, ಇತ್ತೀಚೆಗೆ ಅವರ ಬಗ್ಗೆ ಕೊಂಚ ಸಾಫ್ಟ್ ಕಾರ್ನರ್ ಹೊಂದಿದ್ದ. ಆದರೆ, ಅಪ್ಪ ಎಂದು ಸಲುಗೆಯಿಂದ ಇರದೆ, ದೂರವೇ ಇಟ್ಟಿದ್ದ. ಇನ್ಮುಂದೆ ಅವಿ ತನ್ನ ತಂದೆಯನ್ನು ಒಪ್ಪಿಕೊಳ್ಳುವುದು ಪಕ್ಕಾ ಆಗಿದೆ.

srirasthu shubhamasthu serial 27 June episode written update

ಪೂರ್ಣಿಮಾಳಿಗೆ ಸರ ತೆಗೆಯಲು ಹೇಳಿದ ಮಾಧವ್

ಇನ್ನು ಪೂರ್ಣಿಮಾ ಅಕಸ್ಮಾತ್ ಆಗಿ ತುಳಸಿ ರೂಮಿನಲ್ಲಿ ಸರ ನೋಡಿ ಯಾವುದಿದು ಎಂದು ಕೇಳಿದ್ದಕ್ಕೆ, ತುಳಸಿ ಪೂರ್ಣಿಮಾಳಿಗೆ ಕೊಟ್ಟಿರುತ್ತಾಳೆ. ಆದರೆ, ಮಾಧವ್ ಆ ಸರವನ್ನು ತುಳಸಿ ಕುತ್ತಿಗೆಯಲ್ಲಿ ನೋಡಿ ಕೋಪ ಮಾಡಿಕೊಳ್ಳುತ್ತಾನೆ. ಕೋಪದಲ್ಲೇ ಆ ಸರವನ್ನು ತೆಗೆದು ಕೊಡು. ನಿನಗೆ ಬೇರೆ ಏನು ಬೇಕೋ ಕೇಳು, ನಾನು ಕೊಡಿಸುತ್ತೇನೆ ಎಂದು ಹೇಳುತ್ತಾಣೆ. ಮಾಧವ್ ಧ್ವನಿ ಕೇಳಿ ಪೂರ್ಣಿಮಾ ಬೇಸರ ಮಾಡಿಕೊಳ್ಳುತ್ತಾಳೆ. ಆ ಸರವನ್ನು ತೆಗೆದಿಡಲು ಮಾಧವ್ ರೂಮಿಗೆ ಬರುತ್ತಾಳೆ. ಇಷ್ಟವಿಲ್ಲದಿದ್ದರೂ ಬಲವಂತವಾಗಿ ಸರವನ್ನು ತೆಗೆಯುತ್ತಾಳೆ.

ಪೂರ್ಣಿಮಾಳಿಗಾಗಿ ಮನೆಗೆ ಬಂದ ವನಜಾ

ಇದೇ ಸಂದರ್ಭಕ್ಕೆ ಸರಿಯಾಗಿ ವನಜಾ ಬರುತ್ತಾಳೆ. ತುಳಸಿ ಹಾಗೂ ಮಾಧವ್ ಬಳಿ ಪೂರ್ಣಿ ವಿಚಾರದಲ್ಲಿ ತಮ್ಮಿಂದ ಆದ ಸಮಸ್ಯೆಗೆ ಕ್ಷಮೆ ಕೇಳುತ್ತಾಳೆ. ದೀಪಿಕಾಳನ್ನು ಮಾತನಾಡಿಸುತ್ತಾಳೆ. ಮಾಧವ್ ಮತ್ತು ತುಳಸಿ ಇಬ್ಬರೂ ಅದನ್ನೆಲ್ಲಾ ಮರೆತು ಬಿಡಿ. ಆಗಾಗ ಮನೆಗೆ ಬರುತ್ತಿರಿ ಎಂದು ಕೇಳುತ್ತಾರೆ. ಆಗ ವನಜಾ ಪೂರ್ಣಿಮಾಳನ್ನು ನೋಡಬೇಕು ಎಂದಿದ್ದಕ್ಕೆ ತಮ್ಮ ರೂಮಿನಲ್ಲಿರುವ ವಿಚಾರವನ್ನು ತುಳಸಿ ಹೇಳುತ್ತಾಳೆ. ವನಜಾ ಹೋಗಿ ಪೂರ್ಣಿಮಾಳನ್ನು ಮಾತನಾಡಿಸುತ್ತಾಳೆ. ಪೂರ್ಣಿಮಾಳಿಗೆ ಈಗಲೂ ವನಜಾ ಎಂದರೆ ಅದೇನೋ ಪ್ರೀತಿ. ತನ್ನನ್ನು ನೋಡಲು ಆಗಾಗ ಮನೆಗೆ ಬರುತ್ತಿರಿ ಎಂದು ಕೇಳುತ್ತಾಳೆ. ವನಜಾ ಕೂಡ ಪೂರ್ಣಿಮಾಳನ್ನು ಮಿಸ್ ಮಾಡಿಕೊಂಡ ಬಗ್ಗೆ ಹೇಳಿ ಅಲ್ಲಿಂದ ಹೊರಡುತ್ತಾಳೆ.

srirasthu shubhamasthu serial 27 June episode written update

ಸರದ ಹಿಂದಿನ ಕಥೆ ಹೇಳಿದ ಮಾಧವ್

ಪೂರ್ಣಿಮಾ ಸುಮ್ಮನಿರದೇ ಮಾಧವ್ ಬಳಿ ಬಂದು ಸರದ ಬಗ್ಗೆ ಕೇಳುತ್ತಾಳೆ. ನನಗೆ ಯಾವುದರ ಮೇಲೂ ಆಸೆ ಇಲ್ಲ. ಆದರೆ, ಆ ಸರ ಯಾಕೋ ನನ್ನ ಮನಸ್ಸಿನಿಂದ ದೂರ ಆಗುತ್ತಿಲ್ಲ. ನನಗೆ ಅದರ ಬಗ್ಗೆ ಅದೇನೋ ಸೆಳೆತವಿದೆ. ನೀವ್ಯಾಕೆ ಹಾಗೆ ಅಂದಿದ್ದು ಎಂದು ಕೇಳಿದ್ದಕ್ಕೆ, ಮಾಧವ್ ಈ ವಿಚಾರವನ್ನು ಇನ್ನೂ ಮುಚ್ಚಿಡಬಾರದು ಎಂದು ಸತ್ಯ ಹೇಳುತ್ತಾನೆ. ನಿನ್ನನ್ನು ಬಿಟ್ಟು ಹೋಗುವಾಗ ನಿನ್ನ ಜೊತೆಗೆ ಈ ಸರವಿತ್ತು ಎಂದು ಹೇಳುತ್ತಾನೆ. ಆಗ ಪೂರ್ಣಿಮಾ ಆ ಸರವನ್ನು ನನಗೆ ಕೊಟ್ಟು ಬಿಡಿ ಇನ್ಯಾವತ್ತೂ ಅಪ್ಪ ಅಮ್ಮನ ಬಗ್ಗೆ ಕೇಳಲ್ಲ ಎನ್ನುತ್ತಾಳೆ. ತುಳಸಿ ಮತ್ತು ADಮೌ ಸರಿ ಎಂದು ಕೊಟ್ಟು ಬಿಡುತ್ತಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X