Srirastu Subhamastu: ಆತ್ಮಹತ್ಯೆಗೆ ಪ್ರಯತ್ನಿಸಿದ ಅಭಿ, ತುಳಸಿ ಮಾಡಿದ್ದೇನು..?

By ಪ್ರಿಯಾ ದೊರೆ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿ ತಿಂಡಿ ಮಾಡಿರುವುದಕ್ಕೆ ಅವಿಗೆ ಕೋಪ ಬರುತ್ತದೆ. ನಿನ್ನೆನೇ ಅಭಿ ಯಾವುದೇ ಕಾರಣಕ್ಕೂ ಅವರು ನಮ್ಮನೆಯವರಲ್ಲಿ ಒಬ್ಬರಲ್ಲ ಎಂದಿದ್ದಾನೆ. ಹಾಗಿದ್ದರೂ ಕೂಡ ನೀವ್ಯಾಕೆ ಪಾಪಮ್ಮ ಹೀಗೆಲ್ಲಾ ಮಾಡುತ್ತಿದ್ದೀರಾ. ಏನೇ ಆದರೂ ಅವರನ್ನು ನಮ್ಮ ಜೊತೆಗೆ ಸೇರಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಇದನ್ನು ಅರ್ಥ ಮಾಡಿಕೊಂಡರೆ ಸಾಕು ಎಂದಿದ್ದಾನೆ.

ಮಹೇಶ್ ಬಳಿ ದುಃಖ ತೋಡಿಕೊಂಡ ತುಳಸಿ

ಅವಿ ಮಾತಿಗೆ ನೊಂದಿರುವ ತುಳಸಿಯನ್ನು ಪೂರ್ಣಿಮಾ ಸಮಾಧಾನ ಮಾಡಲು ಯತ್ನಿಸುತ್ತಾಳೆ. ಆದರೆ, ತುಳಸಿ ಬಹಳ ಬೇಸರ ಮಾಡಿಕೊಂಡು ಅಲ್ಲಿಂದ ಹೋಗುತ್ತಾಳೆ. ಆಕಸ್ಮಾತ್ ಆಗಿ ಮಹೇಶ್ ಇರುವ ರೂಮಿಗೆ ಹೋಗುವ ತುಳಸಿ ಮಹೇಶ್ ಬಳಿ ತನ್ನ ಮನದಾಳದ ಮಾತುಗಳನ್ನು ಹೇಳಿಕೊಳ್ಳುತ್ತಾಳೆ. ಈ ಮದುವೆ ನಾನು ಬಯಸಿ ಆಗಲಿಲ್ಲ. ಮಾವ ಹೇಳಿದರು ಅಂತ ಈ ಮದುವೆಯಾದೆ. ಆದರೆ ಏನು ಮಾಡಲಿ ನಾನು ಈ ಮದುವೆ ಆದರೆ, ಮನೆಯಲ್ಲಿ ಇಷ್ಟೆಲ್ಲಾ ಸಮಸ್ಯೆ ಆಗುತ್ತದೆ ಎಂಬ ಊಹೆಯೂ ನನಗಿರಲಿಲ್ಲ. ನನ್ನನ್ನು ಕ್ಷಮಿಸಿ ಬಿಡಿ ಎಂದು ತನ್ನ ಮನದಾಳದ ನೋವನ್ನು ಹೇಳಿಕೊಳ್ಳುತ್ತಾಳೆ.

srirasthu-shubhamasthu-serial

ಬಳಿಕ ಇದೆಲ್ಲಾ ನಿಮ್ಮ ಬಳಿ ಹೇಳಿಕೊಂಡಿದ್ದಕ್ಕೆ ಮನಸ್ಸಿಗೆ ಸ್ವಲ್ಪ ಸಮಾಧಾನ ಆಯ್ತು. ನಿಮ್ಮಿಂದ ಯಾವುದೇ ಪ್ರತಿಯುತ್ತರವಾಗಲೀ ಸಮಾಧಾನದ ಮಾತುಗಳಾಗಲೀ ಸಿಗುವುದಿಲ್ಲ ಅನ್ನೋದು ಗೊತ್ತಿದ್ದರೂ ನಿಮ್ಮ ಬಳಿ ಇದೆಲ್ಲಾ ಹೇಳಿಕೊಂಡ ಮೇಲೆ ನನ್ನ ಮನಸ್ಸು ಹಗುರವಾಯ್ತು ಎಂದು ಹೇಳುತ್ತಾಳೆ.

ಜನಾರ್ಧನ್ ಹಾಗೂ ಶಾರ್ವರಿ ಮಾತು

ಇತ್ತ ಜನಾರ್ಧನ್ ಮತ್ತು ಶಾರ್ವರಿ ದೇವಸ್ಥಾನದಲ್ಲಿ ಮಾತನಾಡುತ್ತಿದ್ದಾರೆ. ಶಾರ್ವರಿ ತುಳಸಿ ಮಾಧವ್ ನನ್ನು ಮದುವೆಯಾಗಿ ಬಂದಿದ್ದಕ್ಕೆ ತನಗೆ ಅನ್ಯಾಯವಾಗಿದೆ ಎಂದು ಹೇಳಿದರೆ, ಜನಾರ್ಧನ್ ನಿಮಗಲ್ಲ. ಅನ್ಯಾಯವಾಗಿರುವುದು ನನಗೆ ಎಂದಿದ್ದಾರೆ. ಜೊತೆಗೆ ನಿನ್ನ ವಿಚಾರ ಎಲ್ಲಾ ನನಗೆ ಗೊತ್ತಿದೆ ಎಂದು ಮಾತನಾಡುತ್ತಾನೆ.

srirasthu-shubhamasthu-serial

ಶಾರ್ವರಿ ಆ ಮನೆಯಲ್ಲಿ ಮಾಧವ್ ಕುಟುಂಬಕ್ಕೆ ಏನೆಲ್ಲಾ ಅನ್ಯಾಯ ಮಾಡುತ್ತಿದ್ದಾಳೆ ಎಂಬುದು ಜನಾರ್ಧನ್ ಗೆ ಗೊತ್ತಿದೆ. ಆದರೆ, ಶಾರ್ವರಿ ಜನಾರ್ಧನ್‌ಗೂ ಬ್ಲ್ಯಾಕ್ ಮೇಲ್ ಮಾಡುವಂತೆ ಮಾತನಾಡುತ್ತಾಳೆ. ನಿನ್ನ ಬಗ್ಗೆ ನನಗೂ ಗೊತ್ತಿದೆ. ಸುಮ್ಮನೆ ನನ್ನ ತಂಟೆಗೆ ಬರಬೇಡ ಎಂದು ವಾರ್ನಿಂಗ್ ಕೊಡುತ್ತಾಳೆ.

ರೂಮ್ ಬಾಗಿಲು ತೆರೆಯುತ್ತಿಲ್ಲ ಅಭಿ!

ಇನ್ನು ಅಭಿ ರೂಮ್ ಅನ್ನು ತೆಗೆಯುವುದೇ ಇಲ್ಲ. ತನ್ನ ಮದುವೆ ನಿಂತು ಹೋಗಿರುವ ಕಾರಣಕ್ಕೆ ತುಂಬಾ ಬೇಸರ ಮಾಡಿಕೊಂಡಿದ್ದಾನೆ. ಅಲ್ಲದೇ, ದೀಪಿಕಾ ಫೋನ್ ತೆಗೆಯುತ್ತಿಲ್ಲ ಎಂದು ಇನ್ನಷ್ಟು ಬೇಸರದಲ್ಲಿರುತ್ತಾನೆ. ಅಭಿ ರೂಮ್ ನ ಬಾಗಿಲನ್ನೂ ತೆಗೆಯದೇ, ಇದ್ದಾಗ ಅನುಮಾನಗೊಂಡ ಮಾಧವ್ ಬಾಗಿಲು ಹೊಡೆಯಲು ಯತ್ನಿಸುತ್ತಾನೆ. ಇದಕ್ಕೆ ಅವಿಯ ಸಹಾಯವನ್ನೂ ಪಡೆದು ಬಾಗಿಲನ್ನು ತೆರೆಯುತ್ತಾನೆ. ಅಲ್ಲಿ ಅಭಿ ನೋಡಿದರೆ ಹಾಸಿಗೆ ಮೇಲೆ ಬಿದ್ದಿದ್ದಾನೆ.

srirasthu-shubhamasthu-serial

ಆತ್ಮಹತ್ಯೆಗೆ ಯತ್ನಿಸಿದ ಅಭಿ

ಅಭಿ ಕೈ ಕಟ್ ಮಾಡಿಕೊಂಡು ಪ್ರಜ್ಞೆ ತಪ್ಪಿ ಬಿದ್ದಿರುತ್ತಾನೆ. ಇದನ್ನು ನೋಡಿ ಅವಿ ಹಾಗೂ ಮಾಧವ್ ಶಾಕ್ ಆಗುತ್ತಾರೆ. ಕೂಡಲೇ ಅಲ್ಲಿಗೆ ಬಂದ ತುಳಸಿ ತನ್ನ ಸೀರೆಯ ಸೆರಗನ್ನು ಕಟ್ ಮಾಡಿ ಅಭಿ ಕೈಗೆ ಕಟ್ಟುತ್ತಾಳೆ. ಬಳಿಕ ನೀರು ಚುಮಿಕಿಸಿ ಎಬ್ಬಿಸುತ್ತಾಳೆ. ಆಗ ಅವಿ ಯಾಕೆ ಅಭಿ ಹೀಗೆಲ್ಲಾ ಮಾಡಿಕೊಂಡೆ ಎಂದು ಕೇಳುತ್ತಾನೆ. ಆಗ ಅಭಿ, ನನಗೆ ದೀಪಿಕಾ ಬೇಕು. ಅವಳ ಜೊತೆಗೆ ಮದುವೆ ಮಾಡಿಸುತ್ತೇನೆ ಎಂದು ಹೇಳಿ ಯಾಕೆ ಹೀಗೆ ಮಾಡಿದೆ ಎಂದು ಪ್ರಶ್ನಿಸುತ್ತಾನೆ. ಆಗ ಅವಿಗೆ ಕ್ಷಮೆ ಕೇಳುವುದು ಬಿಟ್ಟು ಬೇರೇನು ದಾರಿ ಇರುವುದಿಲ್ಲ.

More from Filmibeat

English summary
Srirastu Subhamastu: 28 August episode written update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X