Srirasthu Shubhamasthu ; ಮಾಧವ್ ಮೇಲೆ ಅವಿಗೆ ಹೆಚ್ಚಿದ ಕಾಳಜಿ ; ಸಮರ್ಥ್ ಕಷ್ಟ ಮುಗೀತಾ..?
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಶಾರ್ವರಿ ಮತ್ತು ದೀಪಿಕಾ ಇಬ್ಬರೂ ಪಿತೂರಿ ಮಾಡುವುದನ್ನು ನಿಲ್ಲಿಸಿ ಬಿಟ್ಟಿದ್ದಾರೆ. ಏನೇನಾಗುತ್ತೋ ನೋಡೋಣ. ಮುಂದೆ ನೋಡಿಕೊಳ್ಳೋಣ ಎಂದು ಸುಮ್ಮನಾಗಿದ್ದಾರೆ. ಮಾಧವ್ ಮತ್ತು ಮಕ್ಕಳನ್ನು ತಮ್ಮ ಪಾಡಿಗೆ ಇರಲು ಬಿಟ್ಟಿದ್ದಾರೆ. ಇದು ಒಂದು ರೀತಿಯಲ್ಲಿ ಮಾಧವ್ ಕುಟುಂಬಕ್ಕೆ ಒಳ್ಳೆಯದೇ ಆಗಿದೆ. ಅವರೆಲ್ಲಾ ತಮಗೇ ತಿಳಿಯದಂತೆ ಭಾವನಾತ್ಮಕವಾಗಿ ಒಂದಾಗುತ್ತಿದ್ದಾರೆ. ಇನ್ನು ವನಜಾ ಬಂದು ಪೂರ್ಣಿಮಾಳನ್ನು ಭೇಟಿ ಮಾಡಿದ್ದಕ್ಕೆ ದೀಪಿಕಾಳಿಗೆ ಭೇಸರವಾಗಿದೆ. ಅಮ್ಮ ತನಗೋಸ್ಕರ ಬಂದಿಲ್ಲ. ಪೂರ್ಣಿಮಾಳಿಗಾಗಿ ಬಂದಿದ್ದಾರೆ ಎಂದು ಮನದೊಳಗೆ ಕುಪಿತಗೊಂಡಿದ್ದಾಳೆ.
ಮಾಧವ್ ಮೇಲೆ ಅವಿಗೆ ಕಾಳಜಿ
ಪೂರ್ಣಿಮಾಳಿಗೆ ಮಾಧವ್ ಸರವನ್ನು ನೀಡಿದ್ದಕ್ಕೆ ಪೂರ್ಣಿಮಾ ಖುಷಿಯಾಗಿದ್ದಾಳೆ. ತುಳಸಿ ಕೈನಲ್ಲೇ ಸರವನ್ನು ಹಾಕಿಸಿಕೊಂಡಿದ್ದಾಳೆ. ಮಾಧವ್ ಮಾವ ಹೇಳಿದ್ದು ಸರಿಯೇ, ಇರೋದನ್ನ ಬಿಟ್ಟು ಇಲ್ಲದೇ ಇರೋದಕ್ಕೆ ಹಾತೊರೆಯೋದು ತಪ್ಪು. ನನಗೆ ತುಳಸಿ ಅಮ್ಮ ಹಾಗೂ ಮಾಧವ್ ಮಾವನೇ ಸಾಕು. ಅವರೇ ಅಪ್ಪ-ಅಮ್ಮನಿಗಿಂತಲೂ ಹೆಚ್ಚಾಗಿ ಪ್ರೀತಿಯನ್ನು ತೋರಿಸುತ್ತಿದ್ದಾರೆ. ಇನ್ನು ನನ್ನ ಹೆತ್ತವರ ಬಗ್ಗೆ ಇನ್ಯಾವತ್ತೂ ಯೋಚಿಸೊಲ್ಲ. ಅವರಿಗೋಸ್ಕರ ಕಣ್ಣೀರು ಹಾಕಲ್ಲ ಎಂದು ಅವಿ ಬಳಿ ಹೇಳಿಕೊಳ್ಳುತ್ತಿರುತ್ತಾಳೆ. ಇನ್ನು ಕಂಪನಿಯಲ್ಲಿ ಸಮಸ್ಯೆ ಒಂದು ಕಾಣಿಸಿಕೊಂಡಿದೆ. ಇದಕ್ಕಾಗಿ ಮಾಧವ ರಾತ್ರಿ ಎಲ್ಲಾ ಕೆಲಸ ಮಾಡಿದ್ದಾನೆ. ಸುಸ್ತಾಗಿ ಸೋಫಾ ಮೇಲೆ ಮಲಗಿರುವ ಅಪ್ಪ ನನ್ನು ಕಂಡ ಅವಿ ಕಾಳಜಿಯಿಂದ ಹೊದಿಕೆ ಹೊದಿಸಿ ಪ್ರೀತಿ ತೋರಿಸಿದ್ದಾನೆ.

ಮನೆಗೆ ಬಂದು ಹಣ ವಾಪಸ್ ಮಾಡಿದ ಸೇಟು
ಮಾಧವ್ ಇನ್ಸ್ ಪೆಕ್ಟರ್ ಗೆ ಫೋನ್ ಮಾಡಿಸಿ ಸೇಟುಗೆ ಅವಾಜ್ ಹಾಕಿಸಿದ್ದಕ್ಕೆ ಈಗ ಸೇಟು ಹೆದರಿದ್ದಾನೆ. ಸಮರ್ಥ ಸಾಲ ಹೇಗೆ ತೀರಿಸುವುದು ಎಂದು ಯೋಚನೆ ಮಾಡುತ್ತಾ ಮನೆಯಲ್ಲಿ ಕುಳಿತಿರುತ್ತಾನೆ. ಇದೇ ವೇಳೆಗೆ ಸೇಟು ಮನೆಗೆ ಬಂದಿದ್ದಾನೆ. ಎಲ್ಲಿ ಸಾಲದ ಹಣ ನೀಡದಿದ್ದರೆ, ಮನೆಯಲ್ಲಿರುವ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಾನೋ ಎಂದು ಸಮರ್ಥ್ ಮುಖ ಮುಖ ನೋಡುತ್ತಿರುತ್ತಾನೆ. ಅಷ್ಟರಲ್ಲಿ ದತ್ತ ತಾತ ಬಂದು ಯಾರೋ ನೀನು ನಮ್ಮ ಮನೆಗೆ ಯಾಕೆ ನುಗ್ಗಿದ್ದೀಯಾ ಎಂದಿದ್ದಕ್ಕೆ, ಸಮರ್ಥ್ ಈ ಹಿಂದೆ ಕೊಟ್ಟಿದ್ದ ಬಡ್ಡಿ ಹಣವನ್ನು ವಾಪಸ್ ಕೊಟ್ಟು, ನಾನು ಲಕ್ಕಿ ಡ್ರಾ ಮಾಡಿದಾಗ ನಿನ್ನ ಹೆಸರು ಬಂತು. ಹಾಗಾಗಿ ನಿನ್ನ ಸಾಲ ಮತ್ತು ಬಡ್ಡಿ ಎಲ್ಲವೂ ಮನ್ನ ಆಗಿದೆ. ಇನ್ಯಾವತ್ತು ನಿನ್ನ ಬಳಿ ಹಣ ಕೇಳುವುದಿಲ್ಲ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ಸಮರ್ಥ್ ಗೆ ಸಮಾಧಾನವಾಗುತ್ತದೆ.
ತುಳಸಿ ಮೇಲೆ ಪ್ರೀತಿ ತೋರಿದ ಮಾಧವ್
ಕಂಪನಿಯಲ್ಲಿ ಬಂದ ಸಮಸ್ಯೆನ ಹೇಗೆ ನಿಭಾಯಿಸಬೇಕು ಎಂದು ಯೋಚಿಸಿದ್ದು, ಇದರ ಬಗ್ಗೆ ಮಾಧವ್ ಮನೆಯವರ ಬಳಿ ಹೇಳಿದ್ದಾನೆ. ಇದೇ ವೇಳೆಗೆ ತುಳಸಿ ಕೈಗೆ ಸೂಜಿ ತಾಗಿದ್ದು, ಮಾಧವ್ ಗಾಬರಿಯಾಗಿದ್ದಾನೆ. ಅರಿಶಿಣ ಹಚ್ಚಿ, ಬ್ಯಾಂಡೆಡ್ ಹಾಕಿ, ನೀರು ಕುಡಿಸಿದ್ದಾನೆ. ಏನೂ ಆಗಿಲ್ಲ ಎಂದು ತುಳಸಿ ಮತ್ತು ಮಹೇಶ್ ಹೇಳಿದರೂ ಮಾಧವ್ ಒಪ್ಪುವುದಿಲ್ಲ. ಆಗ ಮಹೇಶ್ ಅಣ್ಣ, ಮಕ್ಕಳಿಗೂ ನೋವಾದರೆ ಅಳುತ್ತಿದ್ದ. ಈಗಲೂ ಹಾಗೆ ಇದ್ದಾನೆ ಎನ್ನುತ್ತಾನೆ. ಆಗ ಅವಿಗೆ ಮುಜುಗರವಾಗುತ್ತದೆ.

ಅವಿಗೆ ತಂದೆಯ ಬೆಲೆ ಅರ್ಥ ಮಾಡಿಸಿದ ಪೂರ್ಣಿ
ಪೂರ್ಣಿಮಾ ಅವಿ ಬಳಿ ಮಾತನಾಡುತ್ತಾಳೆ. ತುಲಸಿ ಅಮ್ಮ ಹೇಳಿದ ವಿಚಾರವನ್ನು ಏನು ಮಾಡಿದಿರಿ ಎಂದು ಕೇಳುತ್ತಾಳೆ. ನಿಮಗೇನಾದರೂ ಮಗುವಾದರೆ, ಆ ಮಗು ಮೇಲೆ ನೀವು ತುಂಬಾ ಪ್ರೀತಿ ತೋರಿಸುತ್ತೀರಾ. ಆದರೆ, ನಿಮ್ಮ ಮಗು ನಿಮ್ಮನ್ನು ಅಪ್ಪ ಎಂದು ಕರೆಯದೇ ಹೋದರೆ, ನಿಮಗೆ ಎಷ್ಟು ಬೇಸರವಾಗುತ್ತದೆ ಅಲ್ವಾ..? ಹಾಗೆಯೇ ಮಾಧವ್ ಮಾವನೂ ಕೂಡ ಎಂದಾಗ ಅವಿಗೆ ನಿಜ ಎನಿಸುತ್ತದೆ.


Click it and Unblock the Notifications











