Srirasthu Shubhamasthu ;ಗಂಡನ ಮೇಲೆ ಕೋಪ ಮಾಡಿಕೊಂಡ ದೀಪಿಕಾ : ಅಭಿಗೆ ಐಡಿಯಾ ಕೊಟ್ಟ ಅತ್ತಿಗೆ ಪೂರ್ಣಿಮಾ ..!
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ದತ್ತ ತಾತ ತೀರ್ಥಯಾತ್ರೆಗೆ ತೆರಳಿದ್ದಾಗಿದೆ. ಸಿರಿಗೆ ಸಮರ್ಥ್ ತುಳಸಿ ಅಮ್ಮನ ಜೊತೆಗೆ ಖುಷಿಯಾಗಿರುವುದನ್ನು ಕಂಡು ಸಂತಸ ಪಟ್ಟಿದ್ದಾಳೆ. ಅಭಿ ಮತ್ತು ಸಮರ್ಥ್ ಕೂಡ ತುಳಸಿ ಅಮ್ಮನಿಗೋಸ್ಕರ ಕಾಂಪ್ರಮೈಸ್ ಆದಂತಿದ್ದಾರೆ. ತುಳಸಿ ಕೊಟ್ಟ ಊಟವನ್ನು ಹಂಚಿಕೊಂಡಿದ್ದಲ್ಲದೇ, ಅಭಿ ತುಳಸಿ ಅಮ್ಮನ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾನೆ. ಸಮರ್ಥ್ ಅಭಿ ತುಳಸಿ ಬಗ್ಗೆ ಕಾಳಜಿ ತೋರಿದರೂ ಕೂಡ ಕೋಪ ಮಾಡಿಕೊಳ್ಳದೇ ಸಮಾಧಾನದಿಂದಿದ್ದಾನೆ. ಇದನ್ನು ನೋಡಿ ತುಳಸಿಗೂ ಸಮಾಧಾನ ತಂದಿದೆ.
ಕುಟ್ಟು ಹುಣಸೆ ಹಣ್ಣಿಗೆ ಕಿತ್ತಾಟ
ತುಳಸಿ ಗರ್ಭಿಣಿ ಆಗಿರುವ ಕಾರಣ ಅವಳಿಗೆ ಹುಳಿ ತಿನ್ನುವ ಆಸೆಯಾಗಿದೆ. ಹೀಗಾಗಿ ಹುಣಸೆ ಹಣ್ನೀಗೆ ಜೀರಿಗೆ ಉಪ್ಪು ಬೆಲ್ಲಾ ಹಾಕಿಕೊಂಡು ಕುಟ್ಟುತ್ತಿರುತ್ತಾಳೆ. ಕುಟ್ಟಾಣಿ ಶಬ್ಧ ಕೇಳಿ ಪೂರ್ಣಿ ಬರುತ್ತಾಳೆ. ತಕ್ಷಣ ತುಳಸಿ ಎಲ್ಲವನ್ನು ಮುಚ್ಚಿಡಲು ಯತ್ನಿಸುತ್ತಾಳೆ. ಆದರೆ, ಪೂರ್ಣಿ ನೋಡಿ ಇದೆಲ್ಲಾ ಯಾಕೆ ಮಾಡುತ್ತಿದ್ದೀರಾ ಎಂದು ಕೇಳಿದಾಗ ತುಳಸಿ ಗಾಬರಿಯಾಗುತ್ತಾಳೆ. ಅಭಿ ಮತ್ತು ಅವಿಗೆ ಇದೆಲ್ಲಾ ಇಷ್ಟ ಎಂದು ಮಾಡುತ್ತಿದ್ದೀರಾ ಎಂದು ಪೂರ್ಣಿಯೇ ಹೇಳಿದಾಗ ತುಳಸಿ ಹೌದು ಎಂದು ಹೇಳಿ ಮನೆಯವರಿಗೆಲ್ಲಾ ಕುಟ್ಟು ಹುಣಸೆ ಹಣ್ಣು ಮಾಡುತ್ತಾಳೆ. ಅಭಿ, ಅವಿ ಹಾಗೂ ಸಮರ್ಥ್ ಮನೆಗೆ ಬಂದ ಬಳಿಕ ಎಲ್ಲರೂ ಇಷ್ಟಪಟ್ಟು ಕಿತ್ತಾಡಿಕೊಂಡು ತಿನ್ನುತ್ತಾರೆ.

ಸಂಧ್ಯಾಳಿಗೆ ಸಮಾಧಾನ ಮಾಡಿದ ಸಿರಿ
ಇನ್ನು ಸಂಧ್ಯಾ ನಿತ್ಯ ಕೆಲಸ ಹುಡುಕಿಕೊಂಡು ಬೀದಿ ಬೀದಿ ಅಲೆದಾಡುತ್ತಿದ್ದಾಳೆ. ಆದರೆ ಸಂಧ್ಯಾಳಿಗೆ ಕೆಲಸ ಸಿಗುತ್ತಿಲ್ಲ. ಕೆಲಸ ಸಿಗದೇ ಹೋದರೆ ಮನೆಯ ಸಾಲವನ್ನು ತೀರಿಸಲು ಸಾಧ್ಯವಾಗುವುದಿಲ್ಲ ಎಂದು ಸಂಧ್ಯಾ ಗಾಬರಿಯಾಗಿದ್ದಾಳೆ. ಸಂಧ್ಯಾಳನ್ನು ಸಮರ್ಥ್ ಸಮಾಧಾನ ಮಾಡುತ್ತಾನೆ. ಬಳಿಕ ಸಿರಿ ಕೂಡ ಇಷ್ಟು ಯೋಚಿಸಬೇಡ ಎಲ್ಲವೂ ಸರಿ ಹೋಗುತ್ತದೆ ಎನ್ನುತ್ತಾಳೆ. ಇನ್ನು ಸಂಧ್ಯಾ ಮಾವ ಮತ್ತೆ ಮಾಯವಾಗಿದ್ದು, ಐದು ಲಕ್ಷ ಹಣ ಕೇಳಿದ್ದಕ್ಕೆ ಕಣ್ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ ಎಂದು ಸಂಧ್ಯಾ ಅರ್ಥ ಮಾಡಿಕೊಂಡಿದ್ದಾಳೆ. ಅದೇನೇ ಆಗಲೀ ಈ ಬಾರಿ ಮಾವನಿಂದ ಐದು ಲಕ್ಷ ಹಣ ತೆಗೆದುಕೊಂಡು ದೀಪಿಕಾ ಸಾಲವನ್ನು ತೀರಿಸಲೇಬೇಕು ಎಂದು ಸಂಧ್ಯಾ ಗಟ್ಟಿ ಮನಸ್ಸು ಮಾಡಿದ್ದಾಳೆ.
ಅಭಿ ಮೇಲೆ ಕೋಪಿಸಿಕೊಂಡ ದೀಪಿಕಾ
ದೀಪಿಕಾಳಿಗೆ ಅಭಿ ಬಳಿ ಹೇಗೆ ನಡೆದುಕೊಳ್ಳಬೇಕು ಎಂಬುದೇ ಅರ್ಥವಾಗುತ್ತಿಲ್ಲ. ಅಭಿ ತನ್ನ ಬಾಲದಂತಿರಬೇಕು ಎಂದು ದೀಪಿಕಾ ಬಯಸಿದ್ದಾಳೆ. ಆದರೆ, ಅಭಿ ಹೆಚ್ಚು ಕಾಲ ಮನೆಯವರೊಂದಿಗೆ ಕಳೆಯುತ್ತಿದ್ದಾನೆ. ಹೀಗಾಗಿ ದೀಪಿಕಾ ಅಭಿ ಮೇಲೆ ಕೋಪ ಮಾಡಿಕೊಳ್ಳುತ್ತಾಳೆ. ನನ್ನ ಮೇಲೆ ನಿನಗೆ ಕಾಳಜಿ ಇಲ್ಲ. ಪ್ರೀತಿ ಮಾಡುವಾಗ ಇದ್ದ ಹಾಗೆ ಈಗಿಲ್ಲ. ಈಗ ನಿನಗೆ ಮನೆಯವರೇ ಹೆಚ್ಚು ಎಂದು ಹೇಳಿ ಕಿತ್ತಾಡಿದ್ದಾಳೆ. ಈ ಬೇಸರವನ್ನು ಅಭಿ ಪೂರ್ಣಿ ಬಳಿ ಹೇಳಿಕೊಂಡಿದ್ದು, ಪೂರ್ಣಿಮಾ ಕ್ಯಾಂಡಲ್ ಲೈಟ್ ಡಿನ್ನರ್ ಮನೆಯಲ್ಲೇ ಅರೇಂಜ್ ಮಾಡು ದೀಪಿಕಾ ಖುಷಿ ಪಡುತ್ತಾಳೆ ಎಂದು ಐಡಿಯಾ ಕೊಡುತ್ತಾಳೆ. ಅಭಿ ದೀಪಿಕಾಳಿಗೆ ಎಲ್ಲರೂ ಮಲಗಿದ ಬಳಿಕ ಸರ್ಪ್ರೈಸ್ ಕೊಡುತ್ತಾನೆ. ಇತ್ತ ಅವಿಯೂ ಕೂಡ ಪೂರ್ಣಿಗೆ ಸರ್ಪ್ರೈಸ್ ಡಿನ್ನರ್ ಸಿದ್ಧ ಮಾಡಿರುತ್ತಾನೆ.
ಮಗುವಿಗಾಗಿ ಮಿಡಿದ ತುಳಸಿ
ಇನ್ನು ಮಾಧವ್ ತುಳಸಿ ಬಗ್ಗೆ ಹೆಚ್ಚು ಕಾಳಜಿ ಮಾಡುತ್ತಿದ್ದು, ಮಗುವನ್ನು ತೆಗೆಸಬೇಕು ಎಂದು
ಆಲೋಚಿಸಿದ್ದಾನೆ. ಆದರೆ, ತುಳಸಿ ಮಗುವನ್ನು ಕೊಲ್ಲಲು ಇಷ್ಟವಿಲ್ಲ. ನನ್ನ ಆರೋಗ್ಯದ ಬಗ್ಗೆ ಯೋಚಿಸಬೇಡಿ. ಮಗು ಇರಲಿ ಎಂದು ಕೇಳಿದ್ದಾಳೆ. ಆದರೆ, ಮಾಧವ್ ನನಗೆ ತುಳಸಿಗಿಂತಲೂ ಬೇರೆ ಏನೂ ಬೇಕಿಲ್ಲ. ನನ್ನ ಬಾಳ ಸಂಗಾತಿಯಾಗಿ ನೀವು ಬೇಕು ಎಂದು ಮದುವೆಯಾಗಿದ್ದೇನೆ. ಈ ಮಗುವಿನಿಂದ ನಿಮಗೆ ಸಮಸ್ಯೆ ಆಗುತ್ತದೆ ಎಂದ ಮೇಲೆ ನನಗೆ ಬೇಕಿಲ್ಲ ಎಂದು ಹೇಳಿದ್ದಾನೆ. ಆದರೆ, ತುಳಸಿ ಮನಸ್ಸು ಮಗುವಿಗಾಗಿ ಮಿಡಿಯುತ್ತಿದೆ.


Click it and Unblock the Notifications











