Srirasthu Shubhamasthu: ತುಳಸಿ ವಿರುದ್ಧ ಕತ್ತಿ ಮಸೆದ ನಂದಿನಿ: ಬೀದಿಯಲ್ಲಿ ನಿಂತು ಜಗಳ
'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಸಂಧ್ಯಾ, ನಾದಿನಿಯನ್ನು ನೋಡಲು ಬಂದ ಗಂಡಿನ ಕಡೆಯವರು ಜಗಳ ಮಾಡಿಕೊಂಡು ಹೋಗುವಂತಾಗಿದೆ.
ಸಂಧ್ಯಾ ಅವರ ಜುಗ್ಗ ಮಾವ ಮನೆಗೆ ಹುಡುಗಿಯನ್ನು ನೋಡಲು ಬಂದವರಿಗೆ ಉಪ್ಪಿಟ್ಟು ತಿನ್ನಲು ಬಿಡದೇ ಕಂಜೂಸ್‌ತನವನ್ನು ತೋರಿಸಿ ಸಂಬಂಧ ಕೆಡಿಸಿದ್ದಾನೆ. ಇದರಿಂದ ಮನೆಯವರೆಲ್ಲರೂ ಬೇಸರ ಮಾಡಿಕೊಂಡಿದ್ದಾರೆ.
ಮಾವನ ಕಂಜೂಸ್ ಬುದ್ಧಿ ತಿಳಿದಿರುವ ಸಂಧ್ಯಾ, ತನ್ನ ಖರ್ಚಿಗೆ ಹಣವನ್ನು ತಾಯಿ ತುಳಸಿಯಿಂದ ಆಗಾಗ ಪಡೆಯುತ್ತಿರುತ್ತಾಳೆ. ಈಗಂತೂ ದೊಡ್ಡ ಮೊತ್ತಕ್ಕೆ ಕೈ ಹಾಕಿದ್ದು, ತುಳಸಿ ಏನು ಮಾಡುತ್ತಾಳೋ ಗೊತ್ತಿಲ್ಲ.

ಹಳೆ ವೈರಿ ಭೇಟಿ ಮಾಡಿದ ಅವಿ
ಇನ್ನು ಅಭಿ, ದೀಪಿಕಾಳನ್ನು ಪ್ರೀತಿ ಮಾಡುತ್ತಿದ್ದಾನೆ. ಮದುವೆ ಆಗುವ ಹಂತವನ್ನೂ ತಲುಪಿದ್ದಾನೆ. ದೀಪಿಕಾ ಅಕಸ್ಮಾತ್ ಆಗಿ ಮನೆಗೆ ಹೋಗಿದ್ದರಿಂದ ಅಭಿ ಈಗ ಸಿಕ್ಕಿ ಹಾಕಿಕೊಂಡಿದ್ದಾನೆ. ಶಾರ್ವರಿ, ಅವಿನಾಶ್‌ನನ್ನು ಒಪ್ಪಿಸಿ ಹುಡುಗಿ ಮನೆಗೆ ಕರೆದುಕೊಂಡು ಹೋಗಿದ್ದಾಳೆ. ಆದರೆ ಅವರ ಮನೆಯಲ್ಲಿ ಅಭಿ ಫ್ಯಾಮಿಲಿಯ ದೊಡ್ಡ ವೈರಿಯಾಗಿರುವ ಜನಾರ್ಧನ್ ಇರುತ್ತಾರೆ. ಜನಾರ್ಧನ್ ಮಗಳೇ ದೀಪಿಕಾ ಎಂಬುದು ತಿಳಿಯುತ್ತಿದ್ದಂತೆ ಅಭಿ ಕೋಪ ಮಾಡಿಕೊಳ್ಳುತ್ತಾನೆ. ಜನಾರ್ಧನ್ ಎಷ್ಟೇ ಸಮಾಧಾನವಾಗಿ ಮಾತನಾಡಿದರೂ ಅಭಿ ಸಂಬಂಧವನ್ನು ಮುಂದುವರೆಸಲು ಇಷ್ಟ ಪಡುವುದಿಲ್ಲ. ಈ ಸಂಬಂಧವೇ ಬೇಡ ಎಂದು ಅಲ್ಲಿಂದ ಹೊರಟು ಬರುತ್ತಾನೆ.

ಕೊನೆಗೆ ಅವಮಾನಕ್ಕೊಳಗಾದ ನಂದಿನಿ
ಇತ್ತ ನಂದಿನಿ ಬೇಕಂತ ತುಳಸಿ ಮನೆಯವರು ಹೊರಗಿನಿಂದ ಬರುತ್ತಿದ್ದಂತೆ ಬೀದಿಯಲ್ಲಿ ಜಗಳ ಶುರು ಮಾಡುತ್ತಾಳೆ. ಮೊದಲಿನಿಂದಲೂ ತುಳಸಿ ಬಗ್ಗೆ ಬೇಸರವಿರುತ್ತದೆ. ಎಲ್ಲರೂ ತುಳಸಿಯನ್ನು ಹೊಗಳುತ್ತಾರೆ. ತುಳಸಿ ಮಾಡುವ ಕೆಲಸವನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ ಎಂದು ಹೊಟ್ಟೆ ಉರಿ ಇತ್ತು. ಇದೀಗ ನಂದಿನಿ ನೇರವಾಗಿ ಬಂದು ಜಗಳ ಮಾಡುತ್ತಾಳೆ. ನಮ್ಮ ಮನೆಯವರನ್ನೆಲ್ಲಾ ದತ್ತು ತೆಗೆದುಕೊಂಡಿದ್ದೀಯಾ. ನಿನಗೆ ಜಂಭ ಜಾಸ್ತಿ. ನಮ್ಮ ಮನೆಯ ವಿಚಾರಕ್ಕೆ ಬರಬೇಡಿ ಎಂದು ಜಗಳ ಮಾಡುತ್ತಾಳೆ. ಬೀದಿಯಲ್ಲಿ ನಿಂತು ಜಗಳ ಮಾಡುವಾಗ ಜನರೆಲ್ಲಾ ಬಂದು ನೋಡುತ್ತಿರುತ್ತಾರೆ. ಈ ಸಂದರ್ಭದಲ್ಲಿ ನಂದಿನಿಗೆ ಅವಮಾನವಾಗುತ್ತದೆ.

ಮಾಧವ್‌ಗೂ ಸಿಕ್ಕ ಬ್ಯುಸಿನೆಸ್ ವೈರಿ
ಇನ್ನು ದತ್ತ ತಾತ, ಶೇಷು ಅವರನ್ನು ಮನೆಯ ಒಳಗೆ ಕರೆದು ಮಾತನಾಡುತ್ತಾರೆ. ನಡೆದಿದ್ದನ್ನೆಲ್ಲಾ ಮರೆತು ಬಿಡಿ ಎಂದು ಹೇಳುತ್ತಾರೆ. ಶೇಷು ಅವರು ತನ್ನ ಸೊಸೆ ನಡೆದುಕೊಂಡ ರೀತಿಗೆ ಬೇಸರವನ್ನು ವ್ಯಕ್ತಪಡಿಸುತ್ತಾರೆ. ಆದರೆ, ದತ್ತ ತಾತ ಆಗಲಿ, ತುಳಸಿ ಆಗಲಿ ಈ ವಿಚಾರದಲ್ಲಿ ಬೇಸರ ಮಾಡಿಕೊಳ್ಳದೇ, ನಡೆದಿದ್ದನ್ನು ಅಲ್ಲೇ ಬಿಟ್ಟು, ಮಾಮೂಲಿಯಂತೆ ಮಾತನಾಡುತ್ತಾರೆ. ಸಮರ್ಥ್ ಹಾಗೂ ಸಿರಿ ಕೂಡ ಈ ವಿಚಾರದಲ್ಲಿ ಹೆಚ್ಚು ಏನನ್ನೂ ಮಾತನಾಡುವುದಿಲ್ಲ. ಇನ್ನು ಮಾಧವ್ ಇರುವಲ್ಲಿಗೆ ಬರುವ ಜನಾರ್ಧನ್ ಮಾತನಾಡಿಸಲು ಪ್ರಯತ್ನಿಸುತ್ತಾನೆ. ಆದರೆ, ಮಾಧವ್ ಜನಾರ್ಧನ್ ಅನ್ನು ಕೆಟ್ಟ ಹುಳದಂತೆ ನೋಡುತ್ತಾನೆ.

ವಿಚಾರ ತಿಳಿಯದೆ ಬೇಸರದಲ್ಲಿರುವ ಮಾಧವ್
ಪೂರ್ಣಿಮಾಗೆ ದೀಪಿಕಾ ಮನೆಯಲ್ಲಿ ನಡೆದ ವಿಚಾರ ತಿಳಿಯುತ್ತದೆ. ಮಾವನಿಗೆ ಈ ವಿಚಾರವನ್ನು ಹೇಳಲೇ ಇಲ್ಲ. ಪಾಪ ಅವರು, ಅವರಿಗೆ ಎಲ್ಲಾ ಸತ್ಯ ಹೇಳಬೇಕು ಎಂದು ಪ್ರಯತ್ನಿಸುತ್ತಾಳೆ. ಆದರೆ, ಶಾರ್ವರಿ ಬಂದು ತಡೆಯುತ್ತಾಳೆ. ಮನೆಯಲ್ಲಿ ಊಟಕ್ಕೆ ಕುಳಿತಾಗ ಅವಿ ಮದುವೆ ಕ್ಯಾನ್ಸಲ್ ಮಾಡಿದ್ದಕ್ಕೆ, ಅಭಿ ಬೇಸರ ಮಾಡಿಕೊಂಡು ಹೋಗುತ್ತಾನೆ. ಇದರಿಂದ ಮಾಧವ್ ಏನಾಗುತ್ತೆ ಎಂಬುದೇ ತಿಳಿಯದೆ ಬೇಸರ ಮಾಡಿಕೊಳ್ಳುತ್ತಾನೆ. ಮುಂದೆ ಇದೇ ವಿಚಾರದಿಂದ ಮನೆಯಲ್ಲಿ ದೊಡ್ಡ ಜಗಳವಾಗುತ್ತದೆಯಾ ಕಾದು ನೋಡಬೇಕಿದೆ.


Click it and Unblock the Notifications











