Srirastu Shubhamastu; ಪೂರ್ಣಿಮಾ ಬಾಳಲ್ಲಿ ಹೊಸ ಭರವಸೆ : ಶಾರ್ವರಿ ಈಗ ಮನೆಯ ಕೆಲಸದಾಕೆ

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ದತ್ತ ತಾತ ಜುಗ್ಗನಿಗೆ ರವೀಂದ್ರನನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ನೀಡಿದ್ದಾರೆ. ಆದರೆ, ಜುಗ್ಗ ಇದನ್ನು ತನ್ನ ಅನುಕೂಲಕ್ಕೆ ಬಳಸಿಕೊಂಡಿದ್ದಾನೆ. ರವೀಂದ್ರನಿಗೆ ಯಾವುದೂ ನೆನಪಿರದ ಕಾರಣ ಜುಗ್ಗ ತಾನೇ ಎಲ್ಲಾ ಹಣ್ಣುಗಳನ್ನು ತಿಂದು ನೀವೇ ತಿಂದಿದ್ದು ಎಂದು ಸುಳ್ಳು ಹೇಳಿದ್ದಾನೆ. ದತ್ತ ತಾತನಿಗೆ ಈ ಸತ್ಯ ಗೊತ್ತಾಗಿದ್ದು ಬೈಯುತ್ತಾರೆ.ರವೀಂದ್ರನ ಕಾಲು ಒತ್ತುವಂತೆ ತಾಕೀತು ಮಾಡಿದ್ದಾರೆ. ಇಲ್ಲದೇ ಹೋದಲ್ಲಿ ಮನೆಯಿಂದ ಹೊರಗೆ ಹೋಗಬೇಕಾಗುತ್ತದೆ ಎಂದು ಜುಗ್ಗನನ್ನು ಹೆದರಿಸಿದ್ದಾರೆ.


ಪೂರ್ಣಿ ದೀಪಿಕಾ ಸ್ವಂತ ಅಕ್ಕ

ಪೂರ್ಣಿಮಾಳಿಗೆ ತನ್ನವರು ಎನ್ನುವರು ಯಾರೂ ಇಲ್ಲ ಎಂಬ ನೋವು ಅತಿಯಾಗಿ ಕಾಡಿದೆ. ಇದರಿಂದ ತುಳಸಿಗೆ ಬೇಸರವಾಗಿದ್ದು, ಪೂರ್ಣಿಮಾಳ ತಂದೆ-ತಾಯಿ ಯಾರೆಂದು ಹುಡುಕಬೇಕು ಎಂದುಕೊಂಡಿದ್ದಾಳೆ. ಈ ಬಗ್ಗೆ ಮಾಧವ್ ಬಳಿಯೂ ಮಾತನಾಡಿದ್ದಾಳೆ. ಇನ್ನು ಪೂರ್ಣಿಮಾಳಿಗೆ ಮಲಗಿದಾಗ ತನ್ನ ತಾಯಿ ಕರೆದಂತೆ ಭಾಸವಾಗಿದೆ. ದೀಪಿಕಾ ತಾಯಿ ಕೂಡ ನಿದ್ರೆಯಿಂದ ಎದ್ದು, ನನ್ನ ಮಗು ಎಲ್ಲಿದೆಯೋ..? ಹೇಗಿದೆಯೋ ಎಂದು ನೆನಪಿಸಿಕೊಂಡು ಕೊರಗಿದ್ದಾಳೆ. ಅವಳ ಕೊರಗನ್ನು ನೋಡಿದ ವೀಕ್ಷಕರು ದೀಪಿಕಾಳ ಅಕ್ಕನೇ ಪೂರ್ಣಿಮಾ ಎಂದು ಭಾವಿಸಿದ್ದಾರೆ.

srirasthu-shubhamasthu-serial-29-april-episode-written-update


ಮಗುವಾಗುವ ಭರವಸೆ ಕೊಟ್ಟ ವೈದ್ಯರು

ಬೆಳಗೆದ್ದು ಪೂರ್ಣಿಮಾಳನ್ನು ಮಾಧವ್ ವಾಕಿಂಗ್ ಗೆಂದು ಕರೆದುಕೊಂಡು ಹೊರಟಿದ್ದಾರೆ, ಪೂರ್ಣಿಮಾ ತುಳಸಿಯನ್ನು ಜೊತೆಗೆ ಕರೆದಿದ್ದು, ಮೂವರು ಹೋಗುವಾಗ ದಾರಿಯಲ್ಲಿ ವೈದ್ಯರು ಸಿಕ್ಕಿದ್ದಾರೆ. ವೈದ್ಯರ ಬಳಿ ಈಗಾಗಲೇ ಮಾಧವ್ ಪೂರ್ಣಿಮಾ ಗರ್ಭಕೋಶದ ಸಮಸ್ಯೆ ಬಗ್ಗೆ ಹೇಳಿದ್ದು, ವೈದ್ಯರು ಈ ಸಮಸ್ಯೆಗೆ ಪರಿಹಾರವಿದೆ. ಆರೋಗ್ಯಕರವಾದ ಲೈಫ್ ಸ್ಟೈಲ್ ಇಟ್ಟುಕೊಂಡು ಚಿಕಿತ್ಸೆ ಪಡೆಯಿರಿ ಎಂದು ಧೈರ್ಯ ತುಂಬಿದ್ದಾರೆ. ಪೂರ್ಣಿಮಾಳಿಗೆ ವೈದ್ಯರ ಮಾತು ಹೊಸ ಭರವಸೆಯನ್ನು ತಂದುಕೊಟ್ಟಿದೆ. ಇದರಿಂದ ಉಲ್ಲಾಸಿತಳಾಗಿ ವಾಕಿಂಗ್ ಮುಗಿಸಿದ್ದಾಳೆ.


ಶಾರ್ವರಿ ಕೈಯಲ್ಲಿ ಮನೆ ಕೆಲಸ

ಶಾರ್ವರಿ ಅಭಿ ಜೊತೆಗೆ ಕಂಪನಿಯ ಲಾಸ್ ಬಗ್ಗೆ ಮಾತನಾಡುತಿರುವಾಗ ಬಂದ ಮಹೇಶ ಅಡುಗೆ ಕೆಲಸ ಕೊಟ್ಟಿದ್ದಾನೆ. ಶಾರ್ವರಿ ಏನೂ ಮಾತನಾಡದೇ ಅಡುಗೆ ಕೆಲಸವನ್ನು ಮಾಡಲು ಒಪ್ಪಿಕೊಂಡಿದ್ದಾಳೆ. ಖುಷಿಯಲ್ಲಿ ವಾಕಿಂಗ್ ಹೋದ ಮಾಧವ್ ಮತ್ತು ತುಳಸಿ ಹೆಚ್ಚಿಗೆ ನಡೆದಿದ್ದು, ಈಗ ಕಾಲು ನೋವು ತಂದುಕೊಂಡಿದ್ದಾಳೆ. ಅಣ್ಣ-ಅತ್ತಿಗೆ ಕಷ್ಟವನ್ನು ನೋಡಿದ ಮಹೇಶ ಶಾರ್ವರಿಗೆ ಬಿಸಿ ನೀರನ್ನು ತರಲು ಹೇಳಿದ್ದಾನೆ. ಶಾರ್ವರಿ ಯಾಕೆ ಈ ಕೆಲಸ ಮಾಡಬೇಕು ಎಂದಿದ್ದಕ್ಕೆ ಮಹೇಶ ಇಲ್ಲ ಅವಳಿಗೆ ಇದೆಲ್ಲಾ ಕೆಲಸ ಮಾಡುವುದೆಂದರೆ ಬಹಳ ಇಷ್ಟ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ, ಶಾರ್ವರಿ ನೀರು ತಂದು ಕೊಟ್ಟು ನಂತರ ತುಳಸಿ ಕಾಲನ್ನು ಒತ್ತಿದ್ದಾಳೆ. ಮಹೇಶ ಬೇಕಂತಲೇ ಶಾರ್ವರಿ ಕೈಯಿಂದ ಮನೆ ಕೆಲಸವನ್ನು ಮಾಡಿಸಿದ್ದಾನೆ.

srirasthu-shubhamasthu-serial-29-april-episode-written-update


ಕಂಪನಿ ಲಾಸ್ ಮಾಡಿಕೊಂಡ ಅಭಿ

ಅಭಿ ಕೂಡ ಕಂಪನಿ ನಡೆಸಲಿ ಎಂದು ಅವಿ ಪ್ರಾಜೆಕ್ಟ್ ಕೊಟ್ಟಿದ್ದ. ಅಭಿಗೆ ಕಂಪನಿ ನಡೆಸುವಷ್ಟು ಪ್ರಭುದ್ಧತೆ ಇನ್ನು ಬಂದಿಲ್ಲ. ಇದರಿಂದಾಗಿ ಈಗ ಕಂಪನಿ 12% ಲಾಸ್ ನಲ್ಲಿದೆ. ಈ ಬಗ್ಗೆ ಅವಿ, ಅಭಿಗೆ ಬೈಯುತ್ತಾನೆ. ಇದೇ ಸಂದರ್ಭದಲ್ಲಿ ತುಳಸಿಯೂ ಕೂಡ ಅಭಿಗೆ ಬುದ್ಧಿ ಮಾತುಗಳನ್ನು ಹೇಳುತ್ತಾಳೆ. ಆದರೆ, ಅಭಿಗೆ ಅವಮಾನದ ಜೊತೆಗೆ ಮುಜುಗರವೂ ಉಂಟಾಗಿ, ಬೇಕಂತಲೇ ತುಳಸಿ ಮೇಲೆ ಹಾಗೂ ಮಾಧವ್ ಮೇಲೆ ಕೋಪ ತೋರಿಸುತ್ತಾನೆ. ಅಭಿ ನಡವಳಿಕೆಗೆ ಕೋಪಗೊಂಡ ಅವಿ ಕೈ ಎತ್ತುತ್ತಾನೆ. ಇದರಿಂದ ಸಹೋದರರ ನಡುವೆ ಬಿರುಕು ಮೂಡಿದೆ. ಇನ್ನು ಕಂಪನಿಯ ಲಾಸ್ ಅನ್ನು ಅಭಿ ಹೇಗೆ ತೂಗಿಸುತ್ತಾನೋ ಕಾದು ನೋಡಬೇಕಿದೆ.

More from Filmibeat

English summary
Abhi company is in loss. This makes fight at house
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X