Srirasthu Shubhamasthu ; ತಾಂಬೂಲ ಪಡೆದ ಸಮರ್ಥ್ : ಕೋಪ ಮಾಡಿಕೊಳ್ಳದ ಸಂಧ್ಯಾ..!
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ದೀಪಿಕಾ ಕಳೆದ ವಾರದಿಂದ ಕಾಣೆಯಾಗಿದ್ದು, ಅವಳು ಇಲ್ಲದ ಸಮಯದಲ್ಲಿ ಮನೆಯಲ್ಲಿ ಮದುವೆ ಸಂಭ್ರಮ ಶುರುವಾಗಿದೆ. ತುಳಸಿ ಮತ್ತು ಮಾಧವ್ ಮದುವೆ ವಾರ್ಷಿಕೋತ್ಸವದ ದಿನ ಮತ್ತೆ ಮದುವೆ ಮಾಡಲು ಮಕ್ಕಳು ಮುಂದಾಗಿದ್ದಾರೆ. ಇದಕ್ಕೆ ಎರಡೂ ಕುಟುಂಬವೂ ಒಪ್ಪಿಕೊಂಡಿದೆ. ಮತ್ತೆ ಮದುವೆ ಮಾಡುವ ನಿರ್ಧಾರ ಕೈಗೊಂಡಾಗಿನಿಂದಲೂ ಮಾಧವ್ ಹದಿಹರೆಯದ ಹುಡುಗನಂತಾಗಿದ್ದಾರೆ. ತುಳಸಿಯನ್ನು ಮೊದಲ ಬಾರಿಗೆ ನೋಡಿದ ಭಾವ ಹೊಂದಿದ್ದು, ಕೀಟಲೆ ಮಾಡುತ್ತಿದ್ದಾರೆ.
ಈ ಕ್ಷಣದ ಸಂಭ್ರಮದಲ್ಲಿ ತುಳಸಿ-ಮಾಧವ್ ಕುಟುಂಬ
ಹುಡುಗಿ ನೋಡುವ ಶಾಸ್ತ್ರದಲ್ಲಿ ಮಾಧವ್ ಮತ್ತು ತುಳಸಿ ಟೆರೆಸ್ ಮೇಲೆ ಸಪರೇಟ್ ಆಗಿ ಮಾತನಾಡಿದ್ದು, ಇದನ್ನು ಪೂರ್ಣಿಮಾ, ಅವಿ ಹಾಗೂ ಮಹೇಶ ಕದ್ದು ಕೇಳಿಸಿಕೊಂಡಿದ್ದಾರೆ. ಹುಡುಗ ಹುಡುಗಿ ಮದುವೆಗೆ ಒಪ್ಪಿದ್ದಾರೆ ಎಂದು ಈಗ ತಾಂಬೂಲವನ್ನು ಬದಲಾಯಿಸಿಕೊಳ್ಳಲು ಮುಂದಾಗಿದ್ದಾರೆ. ಧಾರೆ ಎರೆದುಕೊಡಲು ಮಾಧವ್ ಕಡೆಯಿಂದ ಪೂರ್ಣಿಮಾ ಮತ್ತು ಅವಿ ತಯಾರಾಗಿದ್ದರೆ, ಇತ್ತ ತುಳಸಿ ಕಡೆಗೆ ಸಮರ್ಥ್ ಮತ್ತು ಸಿರಿ ತಾಂಬೂಲವನ್ನು ತೆಗೆದುಕೊಂಡಿದ್ದಾರೆ. ಸಮರ್ಥ್ ಗೆ ಒಪ್ಪಿಗೆ ಇಲ್ಲದಿದ್ದರೂ ಈಗ ದತ್ತ ತಾತನ ಮಾತಿಗೆ ಇಲ್ಲ ಎನ್ನಲಾಗದೇ ಸುಮ್ಮನಾಗಿದ್ದಾನೆ. ಎರಡೂ ಕುಟುಂಬ ಈ ಕ್ಷಣದ ಖುಷಿಯನ್ನು ಒಟ್ಟಿಗೆ ಸಂಭ್ರಮಿಸುತ್ತಿದ್ದಾರೆ.

ಮದುವೆ ಕೆಲಸದಲ್ಲಿ ಎಲ್ಲರೂ ಬ್ಯುಸಿ
ಅಮ್ಮ ತನ್ನ ಮನೆಯಲ್ಲಿ ತನ್ನ ಜೊತೆಗೆ ಇರಬೇಕು ಎಂಬುದು ಸಮರ್ಥ್ ಆಸೆ. ಆದರೆ, ಈಗಾಗಲೇ ಮದುವೆಯಾಗಿ ಮಾಧವ್ ಪತ್ನಿಯಾಗಿರುವುದರಿಂದ ಸಮರ್ಥ್ ಗೆ ಬೇರೆ ದಾರಿ ಇಲ್ಲ. ಕಳೆದ ವರ್ಷ ಅಮ್ಮನ ಮದುವೆಯನ್ನು ನೋಡಲು ಕೂಡ ಸಾಧ್ಯವಾಗಿರಲಿಲ್ಲ. ಈಗ ಈ ಅವಕಾಶ ಸಿಕ್ಕಿದೆ ಎಂದು ಸಮಾಧಾನ ಪಟ್ಟುಕೊಂಡಿದ್ದಾನೆ. ಇನ್ನು ದತ್ತ ತಾತ ಮನೆಯಲ್ಲಿರುವವರಿಗೆಲ್ಲಾ ಒಂದೊಂದು ಕೆಲಸವನ್ನು ವಹಿಸಿದ್ದಾರೆ. ಪೂರ್ಣಿಮಾ ಮತ್ತು ಅವಿ ಇಬ್ಬರೂ ಬಟ್ಟೆ ತರಲು ಹೊರಟಿದ್ದು, ಇವರ ಜೊತೆಗೆ ಸಮರ್ಥ್ ತಾಳಿ ತರಲು ಹೊರಟಿದ್ದಾನೆ. ಇನ್ನು ದತ್ತ ತಾತ ಸಂಧ್ಯಾಳಿಗೆ ಮಾತ್ರ ಯಾವ ಕೆಲಸವನ್ನೂ ನೀಡಿಲ್ಲ.
ಮಗಳ ಬಗ್ಗೆ ತುಳಸಿ ಚಿಂತೆ
ಯಾಕೆ ಎಂದು ಕೇಳಿದ್ದಕ್ಕೆ ದತ್ತ ತಾತ ಸಂಧ್ಯಾ ಬೇರೆಯವರ ಕೆಲಸದಲ್ಲಿ ಸಹಾಯ ಮಾಡಿದರೆ ಸಾಕು. ಯಾವುದೇ ಎಡವಟ್ಟು ಮಾಡದೇ, ಏನೂ ಮಸಲತ್ತು ಮಾಡದಿದ್ದರೆ ಆಯ್ತು ಎಂದು ಹೇಳುತ್ತಾರೆ. ಈ ಮಾತುಗಳನ್ನು ಕೇಳಿದರೂ ಕೂಡ ಸಂಧ್ಯಾ ಸ್ವಲ್ಪವೂ ಬೇಸರ ಮಾಡಿಕೊಳ್ಳುವುದಿಲ್ಲ. ತುಳಸಿಯನ್ನು ಮಾಧವ್ ಕದ್ದು ಮುಚ್ಚಿ ಮಾತನಾಡಿಸುತ್ತಿರುತ್ತಾನೆ. ತುಳಸಿ ಚಿಕ್ಕವಳಂತೆ ನಾಚಿಕೊಂಡಿದ್ದು, ಮಾಧವ್ ನಿಜವಾಗಿಯೂ ಹುಡುಗನಾಗಿದ್ದೇನೆ ಎಂದು ತಮಾಷೆ ಮಾಡುತ್ತಿರುತ್ತಾರೆ. ಇನ್ನು ತುಳಸಿ ದತ್ತ ತಾತನ ಬಳಿ ಬಂದು ಸಂಧ್ಯಾಗೂ ಕೆಲಸ ಕೊಡಬೇಕಿತ್ತು ಎಂದಿದ್ದಕ್ಕೆ, ಯಾರಿಗೆ ಯಾವಾಗ ಹೇಗೆ ಬುದ್ಧಿ ಕಲಿಸಬೇಕು ಎಂಬುದು ನನಗೆ ಗೊತ್ತಿದೆ. ನಿನ್ನದು ತಾಯಿ ಮನಸ್ಸು, ಈ ರೀತಿ ಯೋಚಿಸುವುದರಲ್ಲಿ ತಪ್ಪಿಲ್ಲ ಬಿಡು ಎಂದು ಹೇಳುತ್ತಾರೆ.

ಸಂಧ್ಯಾ ಮತ್ತು ಸಮರ್ಥ್ ಬದಲಾಗುತ್ತಾರಾ..?
ಸಿರಿ ಹೇಳಿದ ಕೆಲಸಗಳನ್ನು ಸಂಧ್ಯಾ ಖುಷಿ ಖುಷಿಯಿಂದ ಮಾಡುತ್ತಿರುತ್ತಾಳೆ. ಮೊದಲ ಬಾರಿಗೆ ತನ್ನ ಮನೆ ಎಂದು ಸಂಭ್ರಮಿಸಿದ್ದಾಳೆ. ದೇವರ ಮನೆಯನ್ನು ಅಲಂಕರಿಸಿದ್ದು, ಸಂಧ್ಯಾ ಕೆಲಸ ಮಾಡುತ್ತಿರುವ ರೀತಿಯನ್ನು ಕಂಡು ತುಳಸಿ ಖುಷಿ ಪಟ್ಟಿದ್ದಾಳೆ. ಇನ್ನು ಸಮರ್ಥ್ ಮತ್ತು ಸಂಧ್ಯಾ ಇಬ್ಬರೂ ಈ ಮದುವೆ ಸಮಾರಂಭ ಮುಗಿಯುವ ವೇಳೆಗೆ ಅಮ್ಮನ ಮನಸ್ಸನ್ನು ಅರ್ಥ ಮಾಡಿಕೊಳ್ಳುತ್ತಾರಾ..? ತಮ್ಮನ್ನು ತಾವು ಬದಲಾಯಿಸಿಕೊಳ್ಳುತ್ತಾರಾ ಎಂಬ ಕುತೂಹಲ ಮೂಡಿದ್ದು, ಏನಾಗುತ್ತದೆ ಎಂದು ಕಾದು ನೋಡಬೇಕಿದೆ.


Click it and Unblock the Notifications











