Srirastu Shubhamastu ; ಸೌದೆ ಕದಿಯದಂತೆ ನೋಡಿಕೊಳ್ಳಲು ಕಾವಲಾಗಿ ನಿಂತ ದತ್ತ ತಾತ..!
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಅಭಿ ಹುಟ್ಟುಹಬ್ಬ ಹಿನ್ನೆಲೆ ತುಳಸಿ ಹೊಸ ಶರ್ಟ್ ತಂದಿರುತ್ತಾಳೆ. ಆದರೆ, ಅದನ್ನು ಅಭಿ ಬಿಸಾಡಿ ನೋವು ಮಾಡುತ್ತಾನೆ. ಆದರೆ, ತುಳಸಿ ಬೇಸರ ಮಾಡಿಕೊಳ್ಳುವುದಿಲ್ಲ. ಅಭಿ ತನ್ನ ಮನಸ್ಸಿನಲ್ಲಿ ಇರುವುದನ್ನು ಹೇಳಲಿ ನನಗೇನು ಬೇಸರವಿಲ್ಲ ಎಂದು ತುಳಸಿ ನಗು ನಗುತ್ತಲೇ ಹೇಳುತ್ತಾಳೆ. ಆದರೆ, ಅಭಿ ಹುಟ್ಟುಹಬ್ಬವನ್ನು ಹಾಳು ಮಾಡಬೇಕು ಎಂದು ದೀಪಿಕಾ ಹೊಸ ಐಡಿಯಾ ಮಾಡಿದ್ದಾಳೆ. ಇದಕ್ಕೋಸ್ಕರ ಅಭಿ ಸ್ನೇಹಿತರನ್ನು ಕೂಡ ಬರ್ತ್ ಡೇ ಪಾರ್ಟಿಗೆ ಕರೆದಿರುತ್ತಾರೆ.
ದೀಪಿಕಾ ಚಾಡಿ ಮಾತುಗಳು
ಸ್ನೇಹಿತರೆಲ್ಲರೂ ಅಭಿ ನ ನಿನ್ನ ಹೊಸ ತಾಯಿಯನ್ನು ಪರಿಚಯ ಮಾಡಿಸು ಎಂದಾಗ ಅಭಿ ಬಯ್ಯುತ್ತಾನೆ. ಇರಿಟೇಟ್ ಮಾಡಿಕೊಳ್ಳುತ್ತಾನೆ. ಇದೇ ವಿಚಾರವನ್ನೇ ಗಾಳವಾಗಿ ಬಳಸಿಕೊಳ್ಳುವ ದೀಪಿಕಾ, ಅಭಿ ಸ್ನೇಹಿತರ ಬಳಿ ಹೋಗಿ ಅಭಿ ಮತ್ತು ಅವರ ತಾಯಿ ಮಿಸ್ ಅಂಡರ್ಸ್ಟ್ಯಾಂಡ್ ಮಾಡಿಕೊಂಡಿದ್ದಾರೆ. ಅಭಿಗೆ ಅವರ ತಾಯಿ ಎಂದರೆ ಬಹಳ ಇಷ್ಟ. ಆದರೆ, ಬರ್ತ ಡೇ ದಿನ ಇಬ್ಬರೂ ಮುನಿಸಿಕೊಂಡಿದ್ದಾರೆ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿದ ಗೆಳೆಯರು, ನಾವು ಇದನ್ನೆಲ್ಲಾ ಸರಿ ಮಾಡುತ್ತೇವೆ ಬಿಡಿ ಎಂದು ಹೇಳುತ್ತಾರೆ. ಆದರೆ, ದೀಪಿಕಾಳ ಮಾತಿನ ಹಿಂದಿನ ಅರ್ಥ ತಿಳಿಯುವುದಿಲ್ಲ.

ತುಳಸಿಗೆ ನೋವು ಮಾಡಿದ ಅಭಿ
ಅಭಿ ಕೇಕ್ ಕಟ್ ಮಾಡುವ ಸಂದರ್ಭದಲ್ಲಿ ಶಾರ್ವರಿ ಇಷ್ಟಪಟ್ಟು ಚಿಕ್ಕಿಯನ್ನು ಪಕ್ಕದಲ್ಲಿ ನಿಲ್ಲಿಸಿಕೊಳ್ಳುತ್ತಾನೆ. ಆದರೆ, ಗೆಳೆಯರು ಬೇಕಂತಲೇ ಕೇಕ್ ಕಟ್ ಮಾಡುವಾಗ ಅಪ್ಪ-ಅಮ್ಮ ಜೊತೆಗೆ ಇರಬೇಕು ಎಂದು ಅವರಿಬ್ಬರನ್ನು ಪಕ್ಕದಲ್ಲಿ ನಿಲ್ಲಿಸುತ್ತಾರೆ. ಅಭಿ ಗೆ ಕಸಿವಿಸಿ ಆದರೂ ಸುಮ್ಮನಾಗುತ್ತಾನೆ. ಕೇಕ್ ಕಟ್ ಮಾಡಿದ ಕೂಡಲೇ ಫಸ್ಟ್ ಅಮ್ಮನ ಕೈಯಲ್ಲಿ ಕೇಕ್ ತಿನ್ನು ಎಂದು ಹೇಳುತ್ತಾರೆ. ಆಗ ಅಭಿ ಇವರು ನನ್ನ ಅಮ್ಮನಿಗೆ ಸಮವೇ ಅಲ್ಲ. ನನ್ನ ಅಮ್ಮನಿಗೆ ಡ್ಯಾನ್ಸ್ ಬರುತ್ತಿತ್ತು. ಇಂಗ್ಲೀಷ್ ಮಾತನಾಡುತ್ತಿದ್ದರು. ಕಾರು ಓಡಿಸುತ್ತಿದ್ದರು ಎಂದೆಲ್ಲಾ ಹೇಳಿ ತುಳಸಿಗೆ ನೋವಾಗುವಂತೆ ಮಾತನಾಡಿ ಪಾರ್ಟಿಯ ಮೂಡ್ ಹಾಳು ಮಾಡುತ್ತಾನೆ.
ಕೊನೆಗೆ ಸಮರ್ಥ್ ಕೈಗೆ ಸಿರಿ ತಂದೆ ಸಿಕ್ಕಾಯ್ತು
ಇನ್ನು ಸಿರಿ ತಂದೆಗೆ ಆಲ್ಝೈಮರ್ಸ್ ಇರುವುದರಿಂದ ಕಾಣೆಯಾಗಿರುತ್ತಾರೆ. ಸಿರಿ ಇದೇ ಚಿಂತೆಯಲ್ಲಿ ಊಟ-ತಿಂಡಿ ಬಿಟ್ಟಿರುತ್ತಾಳೆ. ಆದರೆ, ಸಮರ್ಥ್ ಗೆ ಕಾಣಿಸಿಕೊಳ್ಳುತ್ತಾರೆ. ಕೂಡಲೇ ಸಮರ್ಥ್ ಅವರ ಗುರುಗಳನ್ನು ಮನೆಗೆ ಕರೆದುಕೊಂಡು ಹೋಗುತ್ತಾರೆ. ಸಿರಿ ತನ್ನ ತಂದೆಯನ್ನು ಕಂಡು ಖುಷಿ ಪಡುತ್ತಾಳೆ. ಇನ್ನು ಮುಂದೆ ಎಲ್ಲೂ ಹೋಗಬೇಡಿ. ನಮ್ಮ ಮನೆಯಲ್ಲೇ ಇರಿ ಎಂದು ಹೇಳುತ್ತಾರೆ. ದತ್ತ ತಾತ ಬೀಗರನ್ನು ಇಲ್ಲೇ ಇರಬೇಕು ಎಂದು ಹೇಳುತ್ತಾರೆ.

ಇನ್ನು ಅಭಿ ಹೋಳಿ ಹಬ್ಬವನ್ನು ಆಡಬೇಕು. ಈ ಬಾರಿ ಯಾರ ಬಳಿಯೂ ಬಣ್ಣ ಹಚ್ಚಿಸಿಕೊಳ್ಳಬಾರದು ಎಂದು ಹೇಳಿ ತಾನೇ ಹೋಗಿ ಹೋಳಿ ಬಣ್ಣವನ್ನು ತರುತ್ತಾನೆ. ಮಹೇಶ ತಾವು ಚಿಕ್ಕವರಿದ್ದಾಗ ಕಾಮಣ್ಣನನ್ನು ಸುಡಲು ಬೇರೆಯವರ ಮನೆಯಿಂದ ಸೌದೆಯನ್ನು ಕದ್ದು ತರುತ್ತಿದ್ದೆವು ಎಂದು ಹೇಳುತ್ತಾರೆ. ಈಗ ಅಭಿ ಹಾಗೂ ಅವಿ ಇಬ್ಬರೂ ದತ್ತ ತಾತನ ಮನೆಯಿಂದ ಸೌದೆಯನ್ನು ಕದ್ದು ತರಲು ಹೊರಟಿದ್ದಾರೆ. ದತ್ತ ತಾತ ಸೌದೆಗೆ ಕಾವಾಲಾಗಿ ಕುಳಿತಿದ್ದು, ಈ ಹೋಳಿ ಹಬ್ಬ ತುಳಸಿ ಬದುಕಿಗೆ ಹೊಸ ಬಣ್ಣ ಹಚ್ಚುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











