ಅಣ್ಣ ತಮ್ಮನ ನಡುವೆ ವೈಮನಸ್ಸು : ಪರಿಸ್ಥಿತಿಯ ಲಾಭ ಪಡೆದ ದೀಪಿಕಾ

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಶಾರ್ವರಿ ಸದ್ಯ ಮಹೇಶನ ಕೈ ಗೊಂಬೆಯಾಗಿದ್ದಾಳೆ. ಹಾಗಿದ್ದರೂ ಕೂಡ ತನಗೆ ಅವಕಾಶ ಸಿಕ್ಕಾಗಲೆಲ್ಲಾ ಮನೆ ಒಡೆಯುವ ಕೆಲಸವನ್ನು ಮುಂದುವರೆಸಿದ್ದಾಳೆ. ಅಭಿಗೆ ಕಂಪನಿ ನಡೆಸಲು ಬರುವುದಿಲ್ಲ ಎಂಬ ಸತ್ಯ ಗೊತ್ತಿದ್ದರೂ, ಅವನೇ ಸ್ವಂತ ಕಂಪನಿ ನಡೆಸುವಂತೆ ಈ ಹಿಂದೆ ಹಚ್ಚಿಕೊಟ್ಟಿದ್ದಳು. ಇದರಿಂದ ಮನೆಯಲ್ಲಿ ಜಗಳವಾಗಿತ್ತು. ಹಾಗಾಗಿಯೇ ಅಭಿ ಮನೆಯಲ್ಲಿ ಅವಿ ಜೊತೆಗೆ ಜಗಳ ಮಾಡಿ, ತನ್ನ ಹೆಸರಿಗೆ ಕಂಪನಿಯನ್ನು ಬರೆಸಿಕೊಂಡಿದ್ದ. ಆದರೆ ಈಗ ಅದು 12% ಲಾಸ್ ನಲ್ಲಿದೆ.


ಕೂಲ್ ಕೂಲ್ ಮೂಡ್ ನಲ್ಲಿ ಸಮರ್ಥ್

ಇತ್ತ ಸಮರ್ಥ್ ಬಹಳ ದಿನಗಳ ಬಳಿಕ ತುಂಬಾ ಕೂಲ್ ಆಗಿದ್ದಾನೆ. ಹೆಂಡತಿ ಜೊತೆಗೆ ರೊಮ್ಯಾನ್ಸ್ ಮಾಡುವ ಮೂಡ್ ನಲ್ಲಿದ್ದಾನೆ. ಕೆಲಸ ಮುಗಿಸಿ ಮನೆಗೆ ಬಂದವನೇ ಸಿರಿ ಜೊತೆಗೆ ರೊಮ್ಯಾಂಟಿಕ್ ಆಗಿ ಬಿಹೇವ್ ಮಾಡಿದ್ದಾನೆ. ಇದು ಸಿರಿಗೆ ಖುಷಿ ಕೊಟ್ಟರೂ ಮನೆ ತುಂಬಾ ಜನರಿದ್ದಾರೆ ಎಂಬ ಮುಜುಗರವಿದೆ. ಇವರಿಬ್ಬರ ಸರಸ ಸಲ್ಲಾಪಕ್ಕೆ ಮನೆಯ ಸದಸ್ಯರು ಅಡ್ಡಿಯಾಗಿದ್ದಾರೆ, ಜುಗ್ಗ, ಪ್ರಸಾದ್, ರಾಜೇಶ್ವರಿ ಎಲ್ಲರ ಎದುರೂ ಇಬ್ಬರೂ ಸಿಕ್ಕಿ ಬಿದ್ದಿದ್ದಾರೆ.

srirasthu-shubhamasthu-serial-30-april-episode-written-update


ಅಣ್ಣ-ತಮ್ಮನನ್ನು ದೂರ ಮಾಡಿದ ಶಾರ್ವರಿ

ಕಂಪನಿಯನ್ನು ಲಾಸ್ ಆಗುವಂತೆ ಮಾಡಿದ್ದಲ್ಲದೇ, ಅಭಿ ಮಾಧವ್ ಮೇಲೆ ಕೂಗಾಡುತ್ತಾನೆ. ನಿಮಗೆ ಜವಾಬ್ದಾರಿ ಇಲ್ಲ. ನಿಮಗೆ ಸರಿ ತಪ್ಪುಗಳ ಅರಿವಿಲ್ಲ. ಅದಕ್ಕೆ ಈ ಹೆಂಗಸನ್ನು ಮದುವೆ ಮಾಡಿಕೊಂಡು ಬಂದಿದ್ದೀರಾ. ನೀವೆಲ್ಲಾ ನನಗೆ ಬುದ್ಧಿ ಹೇಳುವುದು ಬೇಡ ಎಂದು ಕೂಗಾಡುತ್ತಾನೆ. ತುಳಸಿ ಬಗ್ಗೆಯೂ ಕೆಟ್ಟದಾಗಿ ಮಾತನಾಡುತ್ತಾನೆ. ಇದನ್ನೆಲ್ಲಾ ಕೇಳಿಸಿಕೊಂಡು ಸುಮ್ಮನಿರಲಾರದೇ ಅವಿ ಅಭಿಗೆ ಬೈಯುತ್ತಾನೆ. ಕೋಪದಲ್ಲಿ ಕೈ ಎತ್ತುತ್ತಾನೆ. ತಮ್ಮನ ಮೇಲೆ ಕೈ ಎತ್ತಿದೆ ಎಂದು ಬೇಸರ ಮಾಡಿಕೊಂಡಿರುತ್ತಾನೆ. ಪೂರ್ಣಿಮಾ ಕೂಡ ತಮ್ಮನ ಬಳಿ ಕ್ಷಮೆ ಕೇಳಿ ಎಂದು ಹೇಳುತ್ತಿರುತ್ತಾಳೆ. ಇದೇ ಸಮಯಕ್ಕೆ ಸರಿಯಾಗಿ ಬರುವ ಶಾರ್ವರಿ ಅಭಿ ಇತ್ತೀಚೆಗೆ ಹೆಚ್ಚಿಕೊಂಡಿದ್ದಾನೆ. ಅವನಿಗೆ ಸಮಾಧಾನ ಮಾಡಬೇಡ. ಅದರಿಂದ ಅವನ ತಪ್ಪಿನ ಬಗ್ಗೆ ಅವನಿಗೆ ಅರಿವಾಗುವುದಿಲ್ಲ ಎಂದು ಹೇಳಿಕೊಡುತ್ತಾಳೆ.


ಅಭಿ ಆಸೆಗೆ ಪೆಟ್ಟು ತಂದ ಅಣ್ಣನ ವರ್ತನೆ

ಅವಿಗೂ ಶಾರ್ವರಿ ಮಾತುಗಳು ಸರಿ ಎನಿಸುತದೆ. ಒಂದು ಇಡೀ ದಿನ ಅಭಿ ಜೊತೆಗೆ ಮಾತನಾಡಬಾರದು. ಆವಾಗ ಅವನಿಗೆ ತನ್ನ ತಪ್ಪಿನ ಬಗ್ಗೆ ಅರಿವಾಗಬಹುದು ಎಂದು ಸುಮ್ಮನಾಗುತ್ತಾನೆ. ಇತ್ತ ಅಭಿ ಅಣ್ಣ ಬಂದು ಕ್ಷಮೆ ಕೇಳುತ್ತಾನೆ ಊಟಕ್ಕೆ ಕರೆದುಕೊಂಡು ಹೋಗುತ್ತಾನೆ ಎಂದು ಕಾಯುತ್ತಿರುತ್ತಾನೆ. ಆದರೆ, ಅವಿ ತನ್ನ ಪಾಡಿಗೆ ತಾನು ಊಟ ಮಾಡಿಕೊಂಡು ಬಂದಿದ್ದನ್ನು ನೋಡಿ ಬೇಸರವಾಗುತ್ತದೆ. ಅಣ್ಣನ ವರ್ತನೆಯನ್ನು ಅಭಿ ಕೈಯಲ್ಲಿ ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.


ಅಭಿಲಾಶ್ ದಾರಿ ತಪ್ಪಿಸಿದ ದೀಪಿಕಾ

ಅಭಿ ಪರೀಸ್ಥಿತಿಯನ್ನು ಲಾಭವನ್ನಾಗಿ ಪರಿವರ್ತಿಸಿಕೊಂಡ ದೀಪಿಕಾ, ನಿಮ್ಮ ಅಣ್ಣ ಬದಲಾಗಿದ್ದಾರೆ. ಇದಕ್ಕೆಲ್ಲಾ ಕಾರಣ ತುಳಸಿ. ಅವರಿಗೆ ನೀನೊಬ್ಬನೇ ಅಲ್ಲ, ಪ್ರೀತಿ ಮಾಡಲು ಬಹಳಷ್ಟು ಜನರಿದ್ದಾರೆ. ನಿನ್ನನ್ನು ಕೇರ್ ಮಾಡುವುದಿಲ್ಲ ಎಂದೆಲ್ಲಾ ಚುಚ್ಚಿಕೊಡುತ್ತಾಳೆ. ಇದರಿಂದ ಅಭಿ ದಾರಿ ತಪ್ಪಿದ್ದಾನೆ. ಇನ್ಯಾವತ್ತು ತನ್ನ ಅಣ್ಣನನ್ನು ನಂಬದಿರಲು ತೀರ್ಮಾನಿಸಿದ್ದಾನೆ. ಇದೇ ಸಂದರ್ಭವನ್ನು ಬಳಸಿಕೊಂಡ ದೀಪಿಕಾ ನಿನ್ನ ಕಂಪನಿಯ ಒಡೆತನವನ್ನು ನನ್ನ ಅಪ್ಪ ಜನಾರ್ಧನ್ ಗೆ ಕೊಡು. ಆಗ ಎಲ್ಲಾ ಲಾಸ್ ಅನ್ನು ಸರಿ ಮಾಡುತ್ತಾರೆ. ನಿನ್ನ ಕಂಪನಿ ಎತ್ತರಕ್ಕೆ ಬೆಳೆಯುವಂತೆ ಮಾಡುತ್ತಾರೆ ಎಂದು ತಲೆಗೆ ತುಂಬಿದ್ದಾಳೆ. ಅಭಿ ದೀಪಿಕಾ ಮಾತನ್ನು ನಂಬಿ ಅವಳು ಹೇಳಿದಂತೆ ಕೇಳುತ್ತಿದ್ದಾನೆ.

More from Filmibeat

English summary
Sharvari and deepika uses strategy for Abhi company is in loss. ನಷ್ಟದಲ್ಲಿ ಅಭಿ ಕಂಪನಿ ಇೃುವುದನ್ನೇ ಲಾಭ ಮಾಡಿಕೊಂಡು ಶಾರ್ವರಿ, ದೀಪಿಕಾ ಅಣ್ಣ ತಮ್ಮನ ನಡುವೆ ಜಗಳ ತಂದಿಟ್ಟಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X