Srirastu Shubhamastu ;ಪಬ್ ಪ್ಲಾನ್ ಕೈ ಬಿಟ್ಟ ಅಭಿ : ಸತ್ಯ ಹೇಳದಂತೆ ಹೆದರಿಸಿದ ಶಾರ್ವರಿ..!

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಿರಿ ಮನೆಯಲ್ಲಿ ದಿನ ದಿನಕ್ಕೂ ಜೀವನ ನಡೆಸುವುದು ಕಷ್ಟವಾಗುತ್ತಿದೆ. ರೇಷನ್ ತರಲು ದತ್ತ ತಾತ ಪೆನ್ಷನ್ ಹಣವನ್ನು ಕೊಟ್ಟಿದ್ದರೆ, ಅದನ್ನು ಸಾಲಗಾರರು ಬಂದು ಕಿತ್ತುಕೊಂಡು ಹೋಗಿದ್ದಾರೆ. ಮನೆ ನಡೆಸಲು ಕಷ್ಟವಾಗುತ್ತಿರುವ ಕಾರಣ ಸಮರ್ಥ್ ಸಂಬಳವನ್ನು ಬೇಗ ಕೇಳಿ ಪಡೆಯುತ್ತಾನೆ. ಅವಿ ಹೆಚ್ಚಿನ ಸಂಬಳಕೊಟ್ಟಿದ್ದಕ್ಕೆ, ಅದನ್ನು ಸಮರ್ಥ್ ವಾಪಸ್ ಮಾಡಿ ಸ್ವಾಭಿಮಾನವನ್ನು ತೋರಿಸುತ್ತಾನೆ.ಇನ್ನೂ ರೇಷನ್ ತರಲೆಂದು ಸಮರ್ಥ್ ಅಂಗಡಿಗೆ ಹೋದಾಗ, ಅಲ್ಲಿಯೂ ಸಾಲಗಾರರು ಬಂದು ಸಮರ್ಥ್ ನ ಪೂರ್ತಿ ಸಂಬಳವನ್ನು ತೆಗೆದುಕೊಂಡು ಹೋಗುತ್ತಾರೆ.

ಅಭಿ ಕೆಲಸ ತಿಳಿದು ಬೇಸರಗೊಂಡ ಮನೆಯವರು

ಇನ್ನು ಅಭಿ ಮತ್ತು ಜನಾರ್ಧನ್ ಸೇರಿ, ಕಂಪ ನಿಗೆ ಸೇರಿದ ಜಾಗದಲ್ಲಿ ರೆಸಾರ್ಟ್ ಮತ್ತು ಪಬ್ ಮಾಡಲು ಪ್ಲಾನ್ ಮಾಡಿರುತ್ತಾರೆ. ಜನಾರ್ಧನ್ ಮಾಧವ್ ಕುಟುಂಬಕ್ಕೆ ಸಮಸ್ಯೆ ಎದುರಾಗಲಿ ಎಂದೇ ಈ ಪ್ಲಾನ್ ಮಾಡಿದ್ದು. ಅಭಿಯನ್ನು ಮರಳು ಮಾಡಿದ್ದಾನೆ. ಈ ವಿಷಯ ತಿಳಿದ ವನಜಾ, ತುಳಸಿಗೆ ಕರೆ ಮಾಡಿ ಸತ್ಯ ಹೇಳುತ್ತಾಳೆ. ತುಳಸಿ ಮನೆಯವರ ಬಳಿ ಈ ವಿಚಾರವನ್ನು ಮಾತನಾಡಿ ಬೇಡ, ಆ ಕೆಲಸವನ್ನು ಈಗಲೇ ನಿಲ್ಲಿಸು ಎಂದು ಅಭೀ ಬಳಿ ಕೇಳಿಕೊಳ್ಳುತ್ತಾರೆ. ಆದರೆ, ಅಭಿ ಯಾರ ಮಾತನ್ನೂ ಕೇಳುವುದಿಲ್ಲ. ನಾನು ಮಾವ ಸೇರಿಕೊಂಡು ಈ ಬಿಸಿನೆಸ್ ಮಾಡಿ ಲಾಭ ಮಾಡುತ್ತೇವೆ ಎಂದು ಹಠ ಮಾಡುತ್ತಾನೆ.

srirasthu-shubhamasthu-serial-30-may-episode-written-update

ಅಭಿಯನ್ನು ಹೆದರಿಸಲು ಆಟವಾಡಿಸಿದ ಅವಿನಾಶ್

ಅಭಿಗೆ ಬುದ್ಧಿ ಹೇಳಿದರೆ ಬರುವುದಿಲ್ಲ. ಅವನನ್ನು ಹೊರಗಡೆಯವರು ಹೆದರಿಸಿದರೆ ಬುದ್ಧಿ ಬರುತ್ತದೆ ಎಂದು ಹೇಳುತ್ತಾನೆ. ಪೊಲೀಸರು ಅಭಿಗೆ ಫೋನ್ ಮಾಡಿ, ನಿಮ್ಮ ಕಂಪನಿಗೆ ಸೇರಿದ ಜಾಗದಲ್ಲಿ ಇಲ್ಲೀಗಲ್ ಆಕ್ಟಿವಿಟೀಸ್ ನಡೆಯುತ್ತಿದೆ. ಅಲ್ಲಿ ಹುಡುಗರು ಡ್ರಗ್ಸ್ ತೆಗೆದುಕೊಂಡು ಅಕ್ಕ-ಪಕ್ಕದವರಿಗೆ ತೊಂದರೆ ಕೊಡುತ್ತಿದ್ದಾರೆ. ಜಾಗದ ಮೇಲೆ ಎಫ್ ಐಆರ್ ಹಾಕಿ ನಿಮ್ಮನ್ನು ಅರೆಸ್ಟ್ ಮಾಡುತ್ತೇವೆ. ಹಾಗೆ ಮಾಡಬಾರದು ಎಂದರೆ, ನಿಮ್ಮ ತಂದೆ ಮಾಧವ್ ಅವರು ನನಗೆ ಗೊತ್ತು. ಅವರಿಂದ ನನಗೆ ಒಂದು ಫೋನ್ ಮಾಡಿಸಿ ಎಂದು ಹೇಳುತ್ತಾರೆ. ಅಭಿ ಬೇರೆ ದಾರಿ ಇಲ್ಲದೇ, ಪಬ್ ಕೆಲಸವನ್ನು ಕೈ ಬಿಟ್ಟು, ಅಪ್ಪನ ಬಳಿ ಬಂದು ಸಹಾಯ ಕೇಳುತ್ತಾನೆ. ಅವಿ ಮಾಡಿದ ಐಡಿಯಾ ವರ್ಕೌಟ್ ಆಗುತ್ತದೆ.

ಸತ್ಯ ಹೇಳುವುದಾದರೆ ಹೇಳಿ ಎಂದ ಶಾರ್ವರಿ

ಇತ್ತ ಮಹೇಶ ಮನೆಯವರಿಗೆ ನೀನು ಸುಮತಿ ಅತ್ತಿಗೆಯನ್ನು ಕೊಂದ ವಿಚಾರವನ್ನು ಹೇಳು. ಇಲ್ಲದೇ ಹೋದರೆ ನಾನು ಹೇಳುತ್ತೇನೆ ಎಂದು ಶಾರ್ವರಿಗೆ ತಾಕೀತು ಮಾಡುತ್ತಾನೆ. ಆದರೆ, ಶಾರ್ವರಿ ಮಹೇಶನ ಮಾತಿಗೆ ಕೊಂಚವೂ ಜಗ್ಗುವುದಿಲ್ಲ. ಹೇಳುವುದಾದರೆ ಹೇಲಿ, ಆದರೆ ನಾನಂತೂ ಸತ್ಯವನ್ನು ಹೇಳೋದಿಲ್ಲ. ನೀವೂ ಕೂಡ ಹೇಳುವುದಕ್ಕೆ ಆಗುವುದಿಲ್ಲ ಎಂದು ಗೊಂದಲವಾಗುವಂತೆ ಮಾತನಾಡುತ್ತಾಳೆ.

srirasthu-shubhamasthu-serial-30-may-episode-written-update

ಮನೆಯವರ ಜೀವಕ್ಕೆ ಅಪಾಯ ತಂದು ಬೆದರಿಕೆ

ಯಾಕೆ ಆಗುವುದಿಲ್ಲ. ನನ್ನನ್ನು ಕೂಡ ನೀನು ಸಾಯಿಸುತ್ತೀಯಾ ಎಂದು ಖೇಳಿದ್ದಕ್ಕೆ, ಖಂಡಿತಾ ಇಲ್ಲ, ನಾನು ಬದುಕಿರುವವರೆಗೂ ನೀವು ಬದುಕಿರಬೇಕು. ಇಲ್ಲದಿದ್ದರೆ, ಸಮಾಜದಲ್ಲಿ ನನ್ನ ಗೌರವ ಕಡಿಮೆ ಆಗುತ್ತದೆ ಎನ್ನುತ್ತಾಳೆ. ನೀವು ಹೇಳುವ ಸತ್ಯವನ್ನು ಕೇಳಲು ನಿಮ್ಮ ಅತ್ತಿಗೆ ಹಾಗೂ ಅಣ್ಣನೇ ಇರುವುದಿಲ್ಲ. ಫೋನ್ ಮಾಡಿ ಕೇಳಿ ನೋಡಿ ಎಂದಾಗ ಇಬ್ಬರಿಗೂ ಮಹೇಳ ಫೋನ್ ಮಾಡುತ್ತಾನೆ. ಇಬ್ಬರೂ ಕೂಡ ಜಸ್ಟ್ ಮಿಸ್ ಆಗುತ್ತಾರೆ. ತುಳಸಿ ತಲೆ ಮೇಲೆ ಪಾಟ್ ಬೀಳುವಂತೆ ಮಾಡಿರುತ್ತಾಳೆ, ತುಳಸಿ ಜಸ್ಟ್ ಮಿಸ್ ಆಗುತ್ತಾಳೆ. ಮಾಧವ್ ನಿಂತಿರುವಾಗಲೇ ಕಾರೊಂದು ಡಿಕ್ಕಿ ಹೊಡೆಯಲು ಬಂದಂತೆ ಹಾದು ಹೋಗುತ್ತದೆ. ಮುಂದೆ ಮಹೇಶ ಏನು ಮಾಡುತ್ತಾನೋ ಕಾದು ನೋಡಬೇಕಿದೆ.

More from Filmibeat

English summary
Sharvari makes Mahesh not to tell truth at home
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X