Srirasthu Shubhamasthu ; ಶಾರ್ವರಿಯ ರಹಸ್ಯ ತಿಳಿದು ಕಂಗಾಲಾದ ತುಳಸಿ : ಮಾಧವನ ಪ್ರಶ್ನೆ ಮಾಡುತ್ತಾಳಾ..?
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಜುಗ್ಗ ಜಗನ್ನಾಥನಿಗೆ ಹಣ ಕಳೆದುಕೊಂಡಿರುವ ಪಶ್ಚಾತಾಪವೇ ಇಲ್ಲ. ಯಾಕೆಂದರೆ ಅದು ಸಂಧ್ಯಾಳ ಹಣವಾಗಿದ್ದು, ಏನೇ ಸಮಸ್ಯೆ ಆದರೂ ಅವಳೇ ಅನುಭವಿಸಬೇಕು ಎಂದು ಸುಮ್ಮನಿದ್ದಾನೆ.ಕೆಲಸ ಹುಡುಕಬೇಕು ಇಲ್ಲದೇ ಹೋದರೆ ಒಪ್ಪತ್ತು ಊಟ ಎಂದು ಸಂಧ್ಯಾ ಈಗಾಗಲೇ ಜುಗ್ಗ ಮಾವನಿಗೆ ಎಚ್ಚರಿಕೆ ಕೊಟ್ಟಿದ್ದಾಳೆ. ಆದರೆ ಅದಕ್ಕೂ ಕ್ಯಾರೆ ಎನ್ನದೆ ಸುಮ್ಮನಿದ್ದಾನೆ.ಕೆಲಸ ಮಾಡಿ ಹಣ ಸಂಪಾದಿಸಿ ತಾನೇನು ಮಾಡಬೇಕು. ಬಿಟ್ಟಿಯಾಗಿ ಉಳಿಯಲು ಮನೆ ಇದೆ. ಹೊತ್ತು ಹೊತ್ತಿಗೆ ಊಟ ಸಿಗುತ್ತದೆ ಎಂದು ಜುಗ್ಗ ಆಲಸ್ಯ ಮಾಡಿದ್ದಾನೆ.
ಮಾವನಿಗೆ ಪಾಠ ಮಾಡುವಂತಾದ ಸಂಧ್ಯಾ
ಇದನ್ನೆಲ್ಲಾ ಗಮನಿಸಿದ ಸಂಧ್ಯಾ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂದು ತೀರ್ಮಾನಿಸಿದ್ದಾಳೆ. ಹೀಗಾಗಿ ಮಾವನ ಬಳಿ ಹೋಗಿ ಸೀಕ್ರೇಟ್ ಆಗಿ ಮಾತನಾಡಿದ್ದಾಳೆ. ಮಾವ ನಾನು ಬದಲಾಗಿಲ್ಲ. ನಾನಿನ್ನು ಹಳೆಯ ಸಂಧ್ಯಾಳೇ. ಬದಲಾಗಿದವಳಂತೆ ನಾಟಕ ಮಾಡುತ್ತಿದ್ದೇನೆ. ಮನೆಯವರನ್ನು ನಂಬಿಸಲು ಹೀಗೆ ಮಾಡುತ್ತಿದ್ದೇನೆ ಎಂದು ಹೇಳುತ್ತಾಳೆ. ಇನ್ನು ಈಗ ಮನೆಯವರೆಲ್ಲಾ ತನ್ನನ್ನು ನಂಬಿದ್ದಾರೆ. ಇನ್ನು ಕೆಲ ದಿನಗಳ ಬಳಿಕ ಅವರಿಂದ ಹಣ ಪೀಕಲು ಶುರು ಮಾಡುತ್ತೇನೆ ಎಂದು ಮಾವನನ್ನು ನಂಬಿಸುತ್ತಾಳೆ. ಅದಕ್ಕಾಗಿ ನೀವು ಕೂಡ ಮನೆಯಲ್ಲಿ ಬದಲಾದವರಂತೆ ನಟಿಸಿ ಎಂದು ಹೇಳಿಕೊಡುತ್ತಾಳೆ. ಜುಗ್ಗನಿಗೆ ಸೊಸೆಯ ಮಾತುಗಳು ಸರಿ ಎನಿಸುತ್ತದೆ. ಹಾಗಾಗಿ ಸಂಧ್ಯಾ ಅಡುಗೆ ಮಾಡಿ ಎಂದು ಉಪಾಯವಾಗಿ ಜುಗ್ಗನಿಗೆ ಕೆಲಸ ವಹಿಸಿದ್ದಾಳೆ. ಜುಗ್ಗ ಸೊಸೆಯ ಮಾತು ನಂಬಿದ್ದು, ಅಡುಗೆ ಭಟ್ಟನಾಗಿದ್ದಾನೆ.

ಶಾರ್ವರಿಯ ರಹಸ್ಯ ತಿಳಿದ ತುಳಸಿ
ಇತ್ತ ಶಾರ್ವರಿ ತನ್ನ ಸಹೋದರಿಗೆ ಶ್ರಾದ್ಧಾ ಕಾರ್ಯವನ್ನು ಮಾಡುತ್ತಿದ್ದಾಳೆ. ತುಳಸಿಗೆ ಶಾರ್ವರಿ ಬಗ್ಗೆ ಬಹಳ ದಿನಗಳಿಂದ ಅನುಮಾನವಿತ್ತು. ಆದರೆ, ಶಾರ್ವರಿ ಜೊತೆಗೆ ಅವರ ಅಕ್ಕ ಇರುವ ಫೋಟೋ ನೋಡಿ ಅನುಮಾನ ಹೆಚ್ಚಿಸಿಕೊಂಡು, ಹಳೆಯ ಕಥೆಯನ್ನು ಕೆದಕಲು ಪ್ರಾರಂಭಿಸಿದ್ದಾಳೆ. ಶಾರ್ವರಿ ಆ ಮನೆಗೆ ಬಂದಿದ್ದೇ ನಾಶ ಮಾಡಲು ಎಂಬ ಸತ್ಯವನ್ನು ತಿಳಿಸಿದ್ದಾಳೆ. ಇನ್ನು ಶಾರ್ವರಿ ತನ್ನ ಅಕ್ಕನಿಗೆ ದರ್ಪಣ ಬಿಡುತ್ತಿರುವುದನ್ನು ನೋಡಿ ಕಂಗಾಳಾಗಿದ್ದಾಳೆ. ಶಾರ್ವರಿ ಸತ್ಯ ಮುಚ್ಚಿಡದೇ ತುಳಸಿ ಎದುರು ಎಲ್ಲಾ ಸತ್ಯವನ್ನು ಹೇಳಿದ್ದಾಳೆ.
ಹೊತ್ತು ಕಳೆದರೂ ಮನೆಗೆ ಬಾರದ ತುಳಸಿ
ಮಾಧವ್ ಕುಟುಂಬವನ್ನು ಸರ್ವ ನಾಶ ಮಾಡುವ ಸಲುವಾಗಿಯೇ ತಾನು ಮಹೇಶ್ ನನ್ನು ಮದುವೆಯಾಗಿದ್ದು, ಮಾಧವ್ ನ ಮೊದಲ ಹೆಂತಿಯನ್ನು ಕೊಂದಿದ್ದು ತಾನೇ ಎಂಬ ಸತ್ಯವನ್ನು ರಾಜಾರೋಷವಾಗಿ ತುಳಸಿ ಎದರಿಗೆ ಹೇಳಿದ್ದಾಳೆ. ಅಲ್ಲದೇ, ತನ್ನ ಮುಂದಿನ ಟಾರ್ಗೆಟ್ ತುಳಸಿ ಎಂಬುದನ್ನು ತಿಳಿಸಿಕೊಟ್ಟಿದ್ದಾಳೆ. ತನ್ನ ಅಕ್ಕನನ್ನು ಪ್ರೀತಿಸಿದ ಮಾಧವ್ ಮೋಸ ಮಾಡಿದ ಕಾರಣ ಅವಳು ಆತ್ಮಹತ್ಯೆ ಮಾಡಿಕೊಳ್ಳಬೇಕಾಯ್ತು. ಇದರಿಂದ ಅವರ ಕುಟುಂಬ ನಾಶವಾಯ್ತು. ಸಂಬಂಧಿಕರು, ತನ್ನವರು ಎಲ್ಲರನ್ನೂ ಕಳೆದುಕೊಂಡು ಶಾರ್ವರಿ ಅನಾಥೆಯಾಗಬೇಕಾಯ್ತು ಎಂಬ ಸತ್ಯವನ್ನು ಹೇಳುತ್ತಾಳೆ. ಸತ್ಯ ತಿಳಿದು ಕಂಗಾಲಾದ ತುಳಸಿ ರಾತ್ರಿಯಾದರೂ ಮನೆಗೆ ಬರುವುದಿಲ್ಲ. ಇದರಿಂದ ಮನೆಯವರೆಲ್ಲಾ ಗಾಬರಿಯಾಗಿರುತ್ತಾರೆ.
ಮಾಧವ್ ಮೇಲೆ ಅನುಮಾನ ತೋರುತ್ತಿರುವ ತುಳಸಿ
ಶಾರ್ವರಿ ಹೇಳಿದ ಮಾತುಗಳನ್ನು ಕೇಳಿದ ತುಳಸಿಗೆ ಶಾಕ್ ಆಗುತ್ತದೆ. ಆದರೆ, ತುಳಸಿ ತನ್ನ ಕುಟುಂಬ ನಾಶವಾಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಹೇಳಿದ್ದಾಳೆ. ಇದೇ ಯೋಚನೆಯಲ್ಲಿ ಮನೆಗೆ ತಡವಾಗಿ ಬರುತ್ತಾಳೆ. ಮಾಧವ್ ಮೋಸ ಮಾಡುವಂತಹ ವ್ಯಕ್ತಿ ಅಲ್ಲ ಎಂಬ ಸತ್ಯ ಗೊತ್ತಿದ್ದರೂ ಕೂಡ ಈಗ ತುಳಸಿಗೆ ಪತಿಯ ಮೇಲೆ ಅನುಮಾನ ಶುರುವಾಗಿದೆ. ಮಾಧವ್ ನನ್ನು ಅವರ ಪ್ರೀತಿಯ ಬಗ್ಗೆ ವಿಚಾರಿಸಬೇಕು ಎಂದು ತೀರ್ಮಾನಿಸಿದ್ದಾಳೆ. ಸದ್ಯ ಧಾರಾವಾಹಿ ಕುತೂಹಲದ ಘಟ್ಟವನ್ನು ತಲುಪಿದೆ.


Click it and Unblock the Notifications











