Srirasthu Shubhamasthu: ಶಾರ್ವರಿಯನ್ನು ಮಾತಾಡಿಸಿದ ದತ್ತನಿಗೆ ಅವಮಾನ: ಸ್ನೇಹ ಒಂದೇ ಸಾಕು ಎಂದ ತುಳಸಿ!
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಅಭಿ ಪದೇ ಪದೇ ದೀಪಿಕಾಳಿಗೆ ಕರೆ ಮಾಡುತ್ತಲೇ ಇರುತ್ತಾನೆ. ದೀಪಿಕಾ ಕೊನೆಗೆ ವಿಡಿಯೋ ಕಾಲ್ ರಿಸೀವ್ ಮಾಡುತ್ತಾಳೆ. ಆಗ ಅಭಿ ತನಗೆ ದೀಪಿಕಾಳಿಂದ ದೂರ ಇರಲಾಗುವುದಿಲ್ಲ ಹಾಗೂ ತಾನು ಆತ್ಮಹತ್ಯೆಗೆ ಪ್ರಯತ್ನಿಸಿದ ವಿಚಾರವನ್ನು ಬೇಸರದಿಂದ ಹೇಳಿಕೊಳ್ಳುತ್ತಾನೆ.
ಅಭಿ ಸ್ಥಿತಿ ತಿಳಿದು ದೀಪಿಕಾ ಕೂಡ ಶಾಕ್ ಆಗುತ್ತಾಳೆ. ನಂತರ ಇಬ್ಬರೂ ಭೇಟಿ ಮಾಡಲು ನಿರ್ಧರಿಸಿ, ದೀಪಿಕಾ ಅಪ್ಪ ಇಲ್ಲದಿರುವ ಸಮಯ ನೋಡಿಕೊಂಡು ತಿಳಿಸುವುದಾಗಿ ಹೇಳುತ್ತಾನೆ.

ಜಗಳ ದೊಡ್ಡದು ಮಾಡಿಕೊಂಡಿರುವ ಸಿರಿ-ಸಮರ್ಥ್
ಸಿರಿ ಹಾಗೂ ಸಮರ್ಥ್ ಒಂದಾಗಲಿ ಎಂದು ದತ್ತ ತಾತ ಇಬ್ಬರನ್ನೂ ಸಿನಿಮಾಗೆ ಕಳುಹಿಸಿರುತ್ತಾರೆ. ಆದರೆ, ಸಿರಿ ಮತ್ತು ಸಮರ್ಥ್ ಅಲ್ಲಿಂದಲೂ ಕಿತ್ತಾಡಿಕೊಂಡು ಬರುತ್ತಾರೆ. ದತ್ತ ತಾತನಿಗೆ ಈ ರೀತಿಯಲ್ಲ ಮುಂದೆ ಪ್ಲಾನ್ ಮಾಡಬೇಡಿ ಎಂದು ಹೇಳುತ್ತಾರೆ. ದತ್ತ ತಾತ ಕೂಡ ಇಬ್ಬರೂ ಸರಿ ಹೋಗಲು ಇನ್ನೂ ಬಹಳ ಸಮಯಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಾರೆ.
ದತ್ತ ತಾತ ಮತ್ತು ರವಿ ಕುಮಾರ್ ಇಬ್ಬರೂ ತುಳಸಿ ಮನೆಗೆ ಹೋಗುತ್ತಾರೆ. ಆಗ ಸಿರಿ ಸಮರ್ಥ್ ಗೆ ಇಷ್ಟವಾಗುವಂತೆ ಕಾಫಿಯನ್ನು ತಂದು ಡೈನಿಂಗ್ ಟೇಬಲ್ ಮೇಲೆ ಇಡುತ್ತಾಳೆ. ಸಮರ್ಥ್ ಸಿರಿ ಮಾಡಿರುವ ಕಾಫಿಯನ್ನು ನೋಡಿ ಖುಷಿ ಪಡುತ್ತಾನೆ. ಕಾಫಿ ಕುಡಿದು ಸಿರಿಯನ್ನು ಮಾತನಾಡಿಸಲು ಯತ್ನಿಸುತ್ತಾನೆ. ನಂತರ ಈಗಲೇ ಬೇಡ ಎಂದು ಸುಮ್ಮನಾಗುತ್ತಾನೆ.

ಶಾರ್ವರಿಯನ್ನು ಮಾತನಾಡಿಸಿದ ದತ್ತ
ದತ್ತ ತಾತ ಹಾಗೂ ರವಿ ಇಬ್ಬರೂ ಮಾಧವ್ ಮನೆಗೆ ಬರುತ್ತಾರೆ. ತುಳಸಿಗೆ ಮುಖ ತೋರಿಸಲು ಬೇಸರವಾಗುತ್ತದೆ. ಹೀಗಾಗಿ ರೂಮ್ ನಲ್ಲೇ ಇರುತ್ತಾಳೆ. ಆಗ ರವಿ ಬಂದು ಸಮಾಧಾನದ ಮಾತುಗಳನ್ನು ಆಡುತ್ತಾರೆ. ಮುಜುಗರ ಮಾಡಿಕೊಳ್ಳಬೇಡಿ. ದತ್ತ ತಾತ ನಿಮಗೆ ಮದುವೆ ಮಾಡಿಸಿ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ಇದರಿಂದ ನಿಮಗೆ ತುಂಬಾ ಒಳ್ಳೆಯದಾಗುತ್ತದೆ ಎಂದು ಹೇಳುತ್ತಾನೆ. ಇನ್ನು ದತ್ತ ತಾತ ಶಾರ್ವರಿಯನ್ನು ಮಾತನಾಡಿಸಲು ರೂಮಿಗೆ ಹೋಗುತ್ತಾರೆ. ದತ್ತನನ್ನು ನೋಡಿ ಶಾರ್ವರಿ ಶಾಕ್ ಆಗುತ್ತಾಳೆ. ನಿಮ್ಮ ಜೊತೆ ಸ್ವಲ್ಪ ಮಾತನಾಡಿಸಬೇಕು ಎಂದು ಹೇಳುತ್ತಾರೆ.
ದತ್ತನಿಗೆ ಮರ್ಯಾದೆ ಕೊಡದ ಶಾರ್ವರಿ
ದತ್ತ ತುಳಸಿಯನ್ನು ಈ ಮನೆಗೆ ಮದುವೆ ಮಾಡಿಕೊಟ್ಟಿದ್ದೇವೆ. ಅವಳಿಂದ ಸಣ್ಣ ಪುಟ್ಟ ತಪ್ಪಾದರೆ ಕ್ಷಮಿಸಿ. ಅವಸರದಲ್ಲಿ ಮದುವೆ ಮಾಡಿದ್ದರಿಂದ ನಿಮಗೆಲ್ಲಾ ತಿಳಿಸೋಕೆ ಆಗಲಿಲ್ಲ. ಅದರಿಂದ ಮನೆಯಲ್ಲಿ ಎಲ್ಲರಿಗೂ ಬೇಸರವಾಗಿದೆ ಎಂದು ಗೊತ್ತು ಎಂದು ದತ್ತ ಮಾತನಾಡಿಸುತ್ತಾರೆ. ಆದರೆ, ಶಾರ್ವರಿ ನಿಮ್ಮ ತುಳಸಿ ಇಲ್ಲಿ ನೆಮ್ಮದಿಯಾಗಿರುತ್ತಾಳೆ ಎಂದು ಅಂದುಕೊಳ್ಳಬೇಡಿ. ಅವಳಿಂದ ನಮ್ಮ ಮನೆಗೆ ಸಮಸ್ಯೆ ಆಗಿದೆ. ಆಕೆ ಕೇವಲ ಮಾಧವ್ ಗೆ ಹೆಂಡತಿ ಅಷ್ಟೇ. ಈ ಮನೆಯ ಸದಸ್ಯೆ ಅಂತೂ ಆಗುವುದಿಲ್ಲ ಎಂದು ಹೇಳುತ್ತಾಳೆ. ಈ ಮಾತಿನಿಂದ ದತ್ತ ಬೇಸರ ಮಾಡಿಕೊಳ್ಳುತ್ತಾನೆ.
ಮಾಧವ್ ಸಾಂಗತ್ಯ ನಿರಾಕರಿಸಿದ ತುಳಸಿ
ದತ್ತ ಮಾಧವ್ ಮನೆಯವರೆಲ್ಲರನ್ನೂ ವರಮಹಾಲಕ್ಷ್ಮೀ ಹಬ್ಬಕ್ಕೆ ಮನೆಗೆ ಕರೆಯುತ್ತಾರೆ. ಆದರೆ, ಶಾರ್ವರಿ ನಾವ್ಯಾರೂ ಬರುವುದಿಲ್ಲ ಎಂದು ನೇರವಾಗಿ ಹೇಳಿ ಕಳಿಸುತ್ತಾಳೆ. ಇನ್ನು ಮಾಧವ್ ತುಳಸಿಯನ್ನು ಬಹಳ ಖುಷಿಯಿಂದ ಮಾತನಾಡಿಸುತ್ತಿರುತ್ತಾನೆ. ಬಟ್ಟೆಗಳನ್ನು ಜೋಡಿಸಿಕೊಳ್ಳಲು ಸಹಾಯ ಮಾಡುವುದಾಗಿ ಹೇಳುತ್ತಾನೆ. ಆದರೆ ತುಳಸಿ, ಒಂದೇ ಮಾತಿನಲ್ಲಿ ನನಗೆ ನಿಮ್ಮ ಜೊತೆ ಯಾವ ಸಂಬಂಧವನ್ನೂ ಬೆಳೆಸಲು ಇಷ್ಟವಿಲ್ಲ. ನಿಮ್ಮ ಜೊತೆಗೆ ನನಗೆ ಸ್ನೇಹ ಮಾತ್ರವೇ ಸಾಕು ಎಂದು ಹೇಳುತ್ತಾಳೆ. ಈ ಮಾತು ಮಾಧವ್‌ಗೆ ನೋವುಂಟು ಮಾಡಿದೆ.


Click it and Unblock the Notifications











