Srirasthu Shubhamasthu ; ಪೂರ್ಣಿಮಾಳನ್ನು ಹುಡುಕಿ ಬಂದ ವನಜಾ : ತಾಯಿ-ಮಗಳು ಗುಟ್ಟು ರಟ್ಟಾಯ್ತಾ..?
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಅಣ್ಣ-ತಮ್ಮಂದಿರಿಗೆ ಸಂಬಂಧದ ಬೆಲೆಯನ್ನು ಮಾಧವ್ ಮತ್ತು ತುಳಸಿ ಒಟ್ಟಿಗೆ ಸೇರಿ ತಿಳಿಸಿ ಕೊಟ್ಟಿದ್ದಾರೆ. ಈಗ ಇಬ್ಬರೂ ಒಬ್ಬರನ್ನಿಬ್ಬರು ಬಿಟ್ಟಿರಲು ಬಯಸುತ್ತಿಲ್ಲ. ಪೂರ್ಣಿಮಾಳಿಗೆ ಮಗು ಆಗಿದ್ದರೆ ಚೆನ್ನಾಗಿರುತ್ತಿತ್ತು ಎಂದು ಶಾರ್ವರಿ ಹಂಗಿಸುವಂತೆ ಮಾತನಾಡಿದ್ದಾಳೆ. ಈ ಮಾತಿಗೆ ಅಭಿ ನಾನು ನಿಧಿ ಇಬ್ಬರೂ ಅತ್ತಿಗೆಗೆ ಮಕ್ಕಳಿದ್ದಂತೆ ಎಂದು ಹೇಳುತ್ತಾನೆ. ಅಭಿ ಮಾತು ಮನೆಯಲ್ಲಿ ಎಲ್ಲರಿಗೂ ಖುಷಿ ಕೊಟ್ಟಿದ್ದರೆ, ಶಾರ್ವರಿ ಮತ್ತು ದೀಪಿಕಾ ಮಾತ್ರ ಮನದಲ್ಲೇ ಕಿಡಿ ಕಾರುವಂತೆ ಮಾಡಿದೆ. ಬೇರೆ ಆಗಬೇಕಿದ್ದವರು ಮತ್ತೆ ಒಂದಾದರು ಎಂದು ದೀಪಿಕಾ ಸಿಡಿದಿದ್ದಾಳೆ.
ಒಟ್ಟು ಕುಟುಂಬ ನೋಡಿ ಸಂಕಟ ಪಟ್ಟ ದೀಪಿಕಾ
ಅಭಿ ಮತ್ತು ಈ ಮನೆಯ ಒಡೆತನ ತನಗೆ ಮಾತ್ರ ಸಿಗಬೇಕು ಎಂದು ದೀಪಿಕಾ ಏನೆಲ್ಲಾ ಸಾಹಸ ಮಾಡಿದರೂ ಸಾಧ್ಯವಾಗಲಿಲ್ಲ. ಇದರಿಂದ ದೀಪಿಕಾಳಿಗೆ ನಿರಾಸೆ ಮೇಲೆ ನಿರಾಸೆ ಉಂಟಾಗಿದೆ. ಏನೇ ಆಗಲಿ ನನ್ನ ಪ್ರಯತ್ನವನ್ನು ಬಿಡುವುದಿಲ್ಲ ಎಂದು ದೀಪಿಕಾ ಮನದಲ್ಲೇ ಯೋಚಿಸಿದರೆ, ಇತ್ತ ಶಾರ್ವರಿ ಕೂಡ ಮಾಧವ್ ಕುಟುಂಬ ಛಿದ್ರ ಛಿದ್ರವಾಗುವವರೆಗೂ ಬಿಡಲಾರೆ ಎಂದು ನಿರ್ಧಾರ ಮಾಡಿದ್ದಾಳೆ. ಇನ್ನು ಅಣ್ಣ-ತಮ್ಮನ ಒಗ್ಗಟ್ಟನ್ನು ಕಂಡು ಮಾಧವ್ ಮನಸ್ಸು ತುಂಬಿ ಬಂದಿದೆ. ಮಹೇಶ ಕೂಡ ಇಬ್ಬರಲ್ಲಿ ಒಬ್ಬರಿಗೆ ಮಗುವಾದರೆ ಚೆನ್ನಾ. ಮನೆಯಲ್ಲಿ ಆಡಲು ಒಂದು ಮಗು ಇರಬೇಕು ಎಂದು ಬಯಸಿದ್ದಾರೆ.

ಪೂರ್ಣಿಗಾಗಿ ಬಂದ ವನಜಾ
ಇನ್ನು ಪೂರ್ಣಿಮಾ ಅನಾಥಾಶ್ರಮದ ಮಕ್ಕಳಿಗೆ ಊಟ ನೀಡುವ ಸಲುವಾಗಿ ತುಳಸಿ ಜೊತೆಗೆ ದೇವಸ್ಥಾನಕ್ಕೆ ತೆರಳಿದ್ದಾಳೆ. ಪೂರ್ಣಿಮಾಳನ್ನು ನೋಡಲೆಂದು ವನಜಾ ಇತ್ತೀಚೆಗೆ ಮಾಧವ್ ಮನೆಗೆ ಪದೇ ಪದೇ ಬರುತ್ತಿದ್ದಾಳೆ. ಇದು ದೀಪಿಕಾಳಿಗೆ ಕೊಂಚವೂ ಇಷ್ಟವಾಗುತ್ತಿಲ್ಲ. ಪೂರ್ಣಿಮಾ ದೇವಸ್ಥಾನಕ್ಕೆ ತೆರಳಿರುವ ವಿಚಾರ ತಿಳಿದು ಬಂದ ದಾರಿಯಲ್ಲೇ ವಾಪಸ್ ಹೊರಟಿದ್ದು, ಶಾರ್ವರಿಗೆ ಅನುಮಾನ ತರಿಸಿದೆ. ವನಜಾ ಪೂರ್ಣಿಯನ್ನು ಭೇಟಿಯಾದಾಗ ಆ ಸರ ನೋಡಿ ಮತ್ತೆ ಪ್ರಶ್ನೆ ಮಾಡಬಹುದು, ಸತ್ಯ ಗೊತ್ತಾಗಬಹುದು ಎಂದು ಗಾಬರಿಯಾಗಿದ್ದಾನೆ. ಪೂರ್ಣಿಮಾ, ತುಳಸಿ ಎಲ್ಲರಿಗೂ ಫೋನ್ ಮಾಡಿದರೂ ಕನೆಕ್ಟ್ ಆಗದೇ ಇರುವುದಕ್ಕೆ ಮಾಧವ್ ಟೆನ್ಷನ್ ಮಾಡಿಕೊಂಡಿದ್ದಾನೆ.
ಅನ್ನಪೂರ್ಣ ಬಳಿ ಮಾತನಾಡಿದ ತುಳಸಿ
ತುಳಸಿ ಮುಂಜಾಗ್ರತೆಯಿಂದ ಪೂರ್ಣಿಯ ಸರ ಮತ್ತು ಅವಳ ತಾಯಿ ಬಗ್ಗೆ ಅನ್ನಪೂರ್ಣ ಬಳಿ ಮಾತನಾಡಿದ್ದಾಳೆ. ಪೂರ್ಣಿಮಾ ತಂದೆ-ತಾಯಿ ಜನಾರ್ಧನ್ ಮತ್ತು ವನಜಾ. ಆದರೆ, ಜನಾರ್ಧನ್ ಆಸ್ತಿಗಾಗಿ ಮಗಳನ್ನು ಹುಡುಕುತ್ತಿದ್ದು, ಇದರಿಂದ ಪೂರ್ಣಿಮಾ ಮನಸ್ಸಿಗೆ ಘಾಸಿಯಾಗುತ್ತದೆ. ಹಾಗಘಾಇ ತಾಯಿ-ಮಗಳನ್ನು ದೂರ ಇಡಬೇಕಾಗಿದೆ. ನೀವು ಕೂಡ ಈ ಸತ್ಯವನ್ನು ಹೇಳದೇ ಇರುವುದೇ ಒಳ್ಳೆಯದು ಎಂದು ಹೇಳುತ್ತಾಳೆ. ಅನ್ನಪೂರ್ಣ ಕೂಡ ಈ ಮಾತನ್ನು ನನಗೂ ತಿಳಿಸಿದ್ದು ಒಳ್ಳೆಯದೇ ಆಯ್ತು ಎನ್ನುತ್ತಾಳೆ.

ಪೂರ್ಣಿ ಬಗ್ಗೆ ಸತ್ಯ ತಿಳಿಯುತ್ತಾಳಾ ವನಜಾ..?
ಇತ್ತ ವನಜಾಳೀಘೇ ಫೂರ್ಣಿಮಾ ಹಾಕಿರುವ ಸರಕ್ಕೂ ನಿಮ್ಮ ಮಗಳಿಗೆ ಹಾಕಿದ್ದ ಸರವೂ ಒಂದೇ ಡಿಸೈನ್. ಆದರೆ ಪೂರ್ನಿಮಾಗೆ ನಾನೇ ಮಾಡಿಸಿಕೊಟ್ಟಿದ್ದು ಎಂದು ತುಳಸಿ ಸುಳ್ಳು ಹೇಳಿ ಮ್ಯಾನೇಜ್ ಮಾಡಿದ್ದಳು. ಆದರೆ, ತುಳಸಿ ಮತ್ತು ಅನ್ನಪೂರ್ಣ ಇಬ್ಬರೂ ಮಾತನಾಡಿದ್ದನ್ನು ವನಜಾ ಕೇಳಿಸಿಕೊಂಡಿದ್ದಾಳೆ. ಇದರಿಂದ ಮುಂದೆ ಏನಾಗಬಹುದು ಎಂಬ ಕುತೂಹಲ ಮೂಡಿದೆ. ಪೂರ್ಣಿಮಾಳಿಗೆ ತಂದೆ-ತಾಯಿ ಬಗ್ಗೆ ತಿಳಿಯುತ್ತಾಳಾ, ಇಲ್ಲ ವನಜಾ ಮಗಳ ಒಳಿತಿಗಾಗಿ ಸತ್ಯವನ್ನು ಮುಚ್ಚಿಡುತ್ತಾಳಾ ಕಾದು ನೋಡಬೇಕಿದೆ. ದೀಪಿಕಾ ಮತ್ತು ಶಾರ್ವರಿ ಈ ಸತ್ಯವನ್ನು ಅರಿತರೆ ಏನಾಗಬಹುದು ಎಂದು ಕುತೂಹಲವೂ ಸೃಷ್ಟಿಯಾಗಿದೆ.


Click it and Unblock the Notifications











