Srirasthu Shubhamasthu ; ಸತ್ಯ ಅರಿತ ದತ್ತ ತಾತ ಮುಂದೇನು ಮಾಡಬಹುದು..? ಮೊಮ್ಮಗನ್ನ ಉಳಿಸಿಕೊಳ್ಳುತ್ತಾರಾ..?

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಮರ್ಥ್ ಮಾಡದ ತಪ್ಪಿಗೆ ಜೈಲು ಸೇರಿಕೊಂಡಿದ್ದಾನೆ. ಸಮರ್ಥ್ ಸ್ಟೇಷನ್ ನಲ್ಲಿರುವುದಕ್ಕೆ ಅಭಿ ಮತ್ತು ಅವಿ ಬೇಸರ ಮಾಡಿಕೊಂಡಿದ್ದಾರೆ. ಹೇಗಾದರೂ ಮಾಡಿ ಸಮರ್ಥ್ ನನ್ನು ನಿರ್ದೋಷಿ ಎಂದು ಪ್ರೂವ್ ಮಾಡಬೇಕು. ಅವನನ್ನು ಆದಷ್ಟು ಬೇಗ ಜೈಲಿನಿಂದ ಬಿಡಿಸಬೇಕು ಎಂದು ಓಡಾಡುತ್ತಿದ್ದಾರೆ. ಎರಡೂ ಮನೆಯಲ್ಲಿ ಸಮರ್ಥ್ ಜೈಲು ಸೇರಿರುವುದಕ್ಕೆ ಹಾಗೂ ರವೀಂದ್ರ ಸಾವನ್ನಪ್ಪಿದ್ದಕ್ಕೆ ಬೇಸರ ಮಾಡಿಕೊಂಡಿದ್ದರೆ, ಶಾರ್ವರಿ ಮಾತ್ರ ಹ್ಯಾಪಿಯಾಗಿದ್ದಾಳೆ.

ಮಕ್ಕಳ ಸಂಕಟದಲ್ಲಿ ಸಿಲುಕಿದ ತುಳಸಿ

ತುಳಸಿಗೆ ನಿಧಿ ಆಕ್ಸಿಡೆಂಟ್ ಮಾಡಿದ್ದು, ಅದರಿಂದ ರವೀಂದ್ರ ಸಾವನ್ನಪ್ಪಿ, ದತ್ತ ತಾತ ಆಸ್ಪತ್ರೆ ಪಾಲಾಗಿದ್ದಲ್ಲದೇ, ಆ ಅಪವಾದವನ್ನು ಸಮರ್ಥ್ ತನ್ನ ತಲೆ ಮೇಲೆ ಹೊತ್ತುಕೊಂಡು ಜೈಲು ಸೇರಿರುವ ವಿಚಾರ ಗೊತ್ತಿದೆ. ಇದರಿಂದ ತುಳಸಿಗೆ ಈಗಿನ ಪರಿಸ್ಥಿತಿಯನ್ನು ನಿಭಾಯಿಸುವುದು ಕಷ್ಟವಾಗುತ್ತಿದೆ. ನಿಧಿ ಪಶ್ಚಾತಾಪದಲ್ಲಿ ಬೇಯುತ್ತ ಒದ್ದಾಡುತ್ತಿದ್ದಾಳೆ. ಅವಳನ್ನು ಸಮಾಧಾನ ಮಾಡುತ್ತಿದ್ದಾಳೆ ತುಳಸಿ. ಇತ್ತ ಸಿರಿ ನನ್ನ ಗಂಡ ತಪ್ಪು ಮಾಡಿಲ್ಲ ಅವರ ಪರ ಕೋರ್ಟ್ ನಲ್ಲಿ ಸಾಕ್ಷಿ ಹೇಳಿ ಬಿಡಿಸಿಕೊಡಿ ಎಂದು ಕೇಳಿಕೊಳ್ಳುತ್ತಿದ್ದಾಳೆ. ಇನ್ನು ಸಮರ್ಥ್, ನಿಧಿಗೆ ಸಮಸ್ಯೆ ಆಗುವುದ ಬೇಡ ಎಂದು ಜೈಲಿನಲ್ಲಿದ್ದಾನೆ. ಈಗ ತುಳಸಿಗೆ ಯಾರ ಪರ ನಿಲ್ಲಬೇಕು. ಏನು ಮಾಡಬೇಕು ಎಂಬುದು ಅರ್ಥವಾಗದೇ ಒದ್ದಾಡುತ್ತಿದ್ದಾಳೆ.

srirasthu shubhamasthu serial 31 January episode written update

ಮಾವನ ಬಳಿ ಸತ್ಯ ಹೇಳಿದ ತುಳಸಿ

ಅಷ್ಟೇ ಅಲ್ಲದೇ, ಸಿರಿ ಎದುರಿಗೆ ಬಂದಾಗಲೆಲ್ಲಾ ನಿಮಗೆ ಸತ್ಯ ಗೊತ್ತು. ಯಾರಿಗೋಸ್ಕರಾನೋ ನಿಮ್ಮ ಮಗನ ಬದುಕನ್ನು ಬಲಿ ಕೊಡುತ್ತಿದ್ದೀರಾ. ನನ್ನ ಜೀವನವೂ ಹಾಳಾಗುತ್ತಿದೆ. ನನ್ನ ತಂದೆಯ ಸಾವಿಗೆ ನ್ಯಾಯ ಕೊಡಿಸಿ ಎಂದು ಕೇಳುತ್ತಿದ್ದಾಳೆ. ಇದರಿಂದ ತುಳಸಿ ಸಂಕಷ್ಟಕ್ಕೆ ಸಿಲುಕಿದ್ದಾಳೆ. ತುಳಸಿಯ ಪರಿಸ್ಥಿತಿಯನ್ನು ಕಂಡ ದತ್ತ ತಾತ, ಸತ್ಯ ಅರಿಯಲು ಮುಂದಾಗಿದ್ದಾರೆ. ಆಗ ತುಳಸಿ ವಿಧಿ ಇಲ್ಲದೇ ನಡೆದ ಘಟನೆಯನ್ನೆಲ್ಲಾ ಹೇಳಿಕೊಂಡಿದ್ದಾಳೆ. ಈಗ ನಾನು ಏನು ಮಾಡಬೇಕು ಎಂಬುದೇ ಗೊತ್ತಾಗುತ್ತಿಲ್ಲ ಎಂದು ಮಾವನ ಬಳಿ ಸಂಕಟವನ್ನು ತೋಡಿಕೊಂಡಿದ್ದಾಳೆ.

ಶಾರ್ವರಿ ಬಳಿ ನಿಜ ಹೇಳಿಕೊಂಡ ನಿಧಿ

ಮದುವೆ ನಿಂತರೂ ಚಿಂತಿಸದ ನಿಧಿ, ಪಶ್ಚಾತಾಪದಲ್ಲಿ ನಿತ್ಯ ಬೇಯುತ್ತಿದ್ದಾಳೆ. ಸತ್ಯವನ್ನು ಎಲ್ಲರಿಗೂ ಹೇಳಬೇಕು. ತಾನೇ ಜೈಲಿಗೆ ಹೋಗಬೇಕು. ಸಮರ್ಥ್ ನನ್ನು ಬಿಡಿಸಬೇಕು ಎಂದು ಮನದೊಳಗೇ ಗುದ್ದಾಡುತ್ತಿದ್ದಾಳೆ. ನಿಧಿ ಮನಸ್ಸನ್ನು ಅರಿಯದ ಶಾರ್ವರಿ ಮಗಳಿಗೆ ನೋವಾಗುವಂತೆ ಮಾತನಾಡುತ್ತಾಳೆ. ಆಗ ಸಮರ್ಥ್ ಮತ್ತು ತುಳಸಿ ಪರ ನಿಧಿ ಮಾತನಾಡಿ ಕೋಪ ತರಿಸುತ್ತಾಳೆ. ಶಾರ್ವರಿ ಕೂಗಾಡಿದಾಗ ನಡೆದ ಘಟನೆಯನ್ನೆಲ್ಲಾ ಹೇಳಿಕೊಳ್ಳುತ್ತಾಳೆ. ತನ್ನಿಂದಾದ ತಪ್ಪನ್ನು ಸಮರ್ಥ್ ತಲೆ ಮೇಲೆ ಹೊತ್ತುಕೊಂಡಿದ್ದಾನೆ. ತುಳಸಿ ತನ್ನ ರಕ್ಷಣೆಗೆ ನಿಂತಿದ್ದಾರೆ ಎಂದು ಬೇಸರದಿಂದ ಹೇಳಿಕೊಳ್ಳುತ್ತಾಳೆ.

ಖುಷಿಯಲ್ಲಿ ತೇಲಾಡುತ್ತಿರುವ ಶಾರ್ವರಿ

ನಿಧಿಯ ಮಾತನ್ನು ಕೇಳಿ ಮನದೊಳಗೆ ಖುಷಿ ಪಟ್ಟ ಶಾರ್ವರಿ, ಮಗಳಿಗೆ ಸಮಾಧಾನ ಮಾಡುತ್ತಾಳೆ. ಈ ವಿಚಾರವನ್ನು ಮತ್ಯಾರಿಗೂ ಹೇಳಬೇಡ ಎಂದು ಹೇಳಿ ರೂಮಿಗೆ ಹೋದವಳೇ ಸಂತಸ ಪಡುತ್ತಾಳೆ. ಈಗ ನನ್ನ ಅಕ್ಕನ ಆತ್ಮಕ್ಕೆ ಖುಷಿಯಾಗಿರುತ್ತದೆ ಎಂದು ಒಬ್ಬಳೇ ಮಾತನಾಡಿಕೊಳ್ಳುತ್ತಾಳೆ. ಅಲ್ಲದೇ, ತುಳಸಿಯ ಸ್ವಂತ ಮಗ ಜೈಲಿನಲ್ಲಿದ್ದಾನೆ. ಸೊಸೆ ನೋವಿನಲ್ಲಿದ್ದಾಳೆ. ಇದೇ ಸಂದರ್ಭದಲ್ಲಿ ಅವಳ ದತ್ತು ಪುತ್ರರಿಬ್ಬರೂ ಸಮರ್ಥ್ ನನ್ನು ಬಿಡಿಸುವ ಕೆಲಸದಲ್ಲಿ ಒದ್ದಾಟ ನಡೆಸುತ್ತಿದ್ದಾರೆ. ಇನ್ನು ಹೊಟ್ಟೆಯಲ್ಲಿರುವ ಮಗುವಿನ ಬಗ್ಗೆ ಕಾಳಜಿ ತೋರಲಾಗದೇ ಕಂಗಾಲಾಗಿದ್ದಾಳೆ. ಇದೆಲ್ಲವನ್ನೂ ನೋಡುತ್ತಿರುವ ಮಾಧವ್ ಮನಸ್ಸಿಗೆ ನೆಮ್ಮದಿಯೇ ಇಲ್ಲ. ಇದೇ ನನಗೂ ಬೇಕಾಗಿದ್ದು ಎಂದು ಶಾರ್ವರಿ ಖುಷಿ ಪಟ್ಟಿದ್ದಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X