Shrirastu Shubhamasthu: ಭಯದಲ್ಲಿರುವ ಅಭಿಗೆ ಸಮಾಧಾನ ಹೇಳಿದ ಶಾರ್ವರಿ

By ಪ್ರಿಯಾ ದೊರೆ

'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಪೂರ್ಣಿಮಾಗೆ ಅಬಾರ್ಷನ್ ಆಗಿದೆ. ಹೀಗಾಗಿ ಪೂರ್ಣಿ ತುಂಬಾನೇ ಡಲ್ ಆಗಿದ್ದಾಳೆ. ಇದರ ಜೊತೆಗೆ ಮಾವ ಬೇರೆ ಮಾತನಾಡುತ್ತಿಲ್ಲ ಎಂಬ ಕೊರಗು ಇದೆ.

ಮಾಧವನಿಗೆ ಸೊಸೆಯ ಜೊತೆಗೆ ನಗು ನಗುತಾ ಮಾತನಾಡಲು ಇಷ್ಟವಿಲ್ಲ. ಪೂರ್ಣಿ ತನ್ನನ್ನು ಮಾತನಾಡಿಸಿದರೆ, ಹಚ್ಚಿಕೊಳ್ಳುತ್ತಾಳೆ. ಇದರಿಂದ ಸಮಸ್ಯೆ ಆಗುತ್ತದೆ ಎಂದು ಮಾಧವ ಮಾತನಾಡುತ್ತಿಲ್ಲ.

ಇತ್ತ ದತ್ತ ತಾತನ 75ನೇ ವರ್ಷದ ಬರ್ತ್‌ಡೇ ಸೆಲಬ್ರೇಷನ್‌ಗಾಗಿ ಮನೆಯವರೆಲ್ಲರೂ ತಯಾರಿ ನಡೆಸಿದ್ದಾರೆ. ಆದರೆ ಇದ್ಯಾವುದೂ ಕೂಡ ದತ್ತ ತಾತನಿಗೆ ಗೊತ್ತಾಗಿಲ್ಲ.

ಸರ್ಪ್ರೈಸ್ ಕೊಟ್ಟ ಮನೆಯವರು

ಸರ್ಪ್ರೈಸ್ ಕೊಟ್ಟ ಮನೆಯವರು

ದತ್ತ ತಾತನ ಬರ್ತಡೇ ಎಂದು ಎಲ್ಲರಿಗೂ ಗೊತ್ತಿದ್ದರೂ ಬೆಳಗ್ಗಿನಿಂದ ತಾತನನ್ನು ಸಮರ್ಥ್, ತುಳಸಿ, ಸಿರಿ ಎಲ್ಲರೂ ಗೋಳಾಡಿಸಿ ಕೊನೆಗೆ ಸಂಜೆ ಸರ್ಪ್ರೈಸ್ ಕೊಟ್ಟಿದ್ದಾರೆ. ಗ್ರ್ಯಾಂಡ್ ಆಗಿ ದತ್ತ ತಾತನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ದತ್ತ ತಾತನ ಸ್ನೇಹಿತರು, ಪೂರ್ಣಿ, ಮಾಧವ್ ಎಲ್ಲರೂ ಬರ್ತಡೇಗೆ ಬಂದಿದ್ದಾರೆ. ಇದರಿಂದ ತಾತ ಫುಲ್ ಖುಷಿಯಾಗಿದ್ದಾರೆ. ಎಲ್ಲರೂ ತಾತನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.

ಶಾರ್ವರಿ - ದೀಪಿಕಾ ಭೇಟಿ

ಶಾರ್ವರಿ - ದೀಪಿಕಾ ಭೇಟಿ

ಇತ್ತ ಅಭಿ ಫ್ರೆಂಡ್ ಅನ್ನು ಭೇಟಿ ಮಾಡಿ ಮಾತನಾಡಿದ್ದಾಳೆ. ದೀಪಿಕಾ ಮದುವೆಯಾಗುವಂತೆ ಅಭಿಯನ್ನು ಬಲವಂತ ಮಾಡಿದ್ದಾಳೆ. ಆದರೆ ಅಭಿ ಸರಿಯಾಗಿ ಮಾತನಾಡದೇ ಬಂದು ಬಿಡುತ್ತಾನೆ. ಇದರಿಂದ ದೀಪಿಕಾ ಸೀದಾ ಮನೆಗೆ ಬಂದು ಬಿಡುತ್ತಾಳೆ. ಅಭಿ, ಶಾರ್ವರಿ ಇರುವಾಗಲೇ ದೀಪಿಕಾ ಮನೆಗೆ ಬರುತ್ತಾಳೆ. ಇದರಿಂದ ಅಭಿ ಮುಜುಗರಕ್ಕೆ ಒಳಗಾಗುತ್ತಾನೆ. ದೀಪಿಕಾ ಮನೆಗೆ ಬಂದು ಅಭಿ ತನ್ನನ್ನು ಮದುವೆಯಾಗದೇ, ದಿನ ದೂಡುತ್ತಿದ್ದಾನೆ. ಅವನಿಗೆ ಹೇಳಿ ಬೇಗ ನನ್ನನ್ನು ಮದುವೆಯಾಗಲು ಎಂದು ಹೇಳುತ್ತಾನೆ. ಇದು ಅಭಿಗೆ ಇಬ್ಬಂದಿ ಸ್ಥಿತಿಯಾಗಿರುತ್ತದೆ.

ಅಪ್ಪನನ್ನು ಕಾರಿನಲ್ಲಿ ಕೂರಿಸಿಕೊಂಡ ಅವಿ

ಅಪ್ಪನನ್ನು ಕಾರಿನಲ್ಲಿ ಕೂರಿಸಿಕೊಂಡ ಅವಿ

ಇನ್ನು ದತ್ತ ತಾತನ ಬರ್ತಡೇ ಮುಗಿಸಿಕೊಂಡು ಮಾಧವ್ ಹೊರಟಿರುತ್ತಾನೆ. ಆದರೆ ಅವನ ಗಾಡಿ ಪಂಚರ್ ಆಗಿರುತ್ತದೆ. ಇತ್ತ ಪೂರ್ಣಿಯನ್ನು ಕರೆದುಕೊಂಡು ಹೋಗಲು ಅವಿ ಬಂದಿರುತ್ತಾನೆ. ಮಾವನ ಗಾಡಿ ಪಂಚರ್ ಆಗಿರುವುದನ್ನು ನೋಡಿ ಪೂರ್ಣಿ, ಅವಿ ಬಳಿ ಮಾವನನ್ನು ಕರೆದುಕೊಂಡು ಹೋಗೋಣ ಎಂದು ಹೇಳುತ್ತಾಳೆ. ಅವಿ ಅದಕ್ಕೆ ಒಪ್ಪುತ್ತಾನೆ. ಮಾಧವನಿಗೆ ಖುಷಿಯಾಗುತ್ತದೆ. ನನ್ನ ಮುಖ ನೋಡಲು ಬಯಸದ ಅವಿ ಈಗ ನನ್ನ ಸೊಸೆಯಿಂದಾಗಿ ತನ್ನ ಕಾರಿನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದಾನೆ. ಹಾಗೋ ಹೀಗೋ ಮಗನಿಗೆ ಹತ್ತಿರವಾಗುತ್ತಿದ್ದೇನಲ್ಲ ಎಂದು ಮಾಧವ ಒಳಗೊಳಗೆ ಖುಷಿ ಪಡುತ್ತಿರುತ್ತಾನೆ.

ಚಿಕ್ಕಮ್ಮ ಹೊಸ ಪ್ಲ್ಯಾನ್

ಚಿಕ್ಕಮ್ಮ ಹೊಸ ಪ್ಲ್ಯಾನ್

ಇನ್ನು ಶಾರ್ವರಿಗೆ ಅಭಿ ಲವರ್ ಯಾರು ಎಂದು ಗೊತ್ತಾಗಿರುವುದು ಖುಷಿಯಾಗಿರುತ್ತದೆ. ಆದರೆ, ಅಭಿ ದೀಪಿಕಾ ಬಗ್ಗೆ ಮನೆಯಲ್ಲೆಲ್ಲಾ ಗೊತ್ತಾಗುತ್ತದೆ ಎನ್ನುವ ಆತಂಕದಲ್ಲಿದ್ದಾನೆ. ಅಭಿಯನ್ನು ನೋಡಿದ ಶಾರ್ವರಿ ಮಾತನಾಡಿಸುತ್ತಾಳೆ. ಆಗ ಅಭಿ, ಚಿಕ್ಕಮ್ಮ ದೀಪಿಕಾ ಬಗ್ಗೆ ಅಣ್ಣನಿಗೆ ಹಾಗೂ ಅಪ್ಪನಿಗೆ ಹೇಳಬೇಡಿ ಎಂದು ಕೇಳುತ್ತಾನೆ. ಅದಕ್ಕೆ ಶಾರ್ವರಿ ಹೇಳಲ್ಲ ಎಂದು ಭರವಸೆಯನ್ನು ಕೊಡುತ್ತಾಳೆ. ಆಗ ಅಭಿ ಸಮಾಧಾನವಾಗುತ್ತಾನೆ. ಆದರೆ, ಶಾರ್ವರಿ ಒಳಗೊಳಗೆ ಹೊಸ ಪ್ಲ್ಯಾನ್ನು ಮಾಡಿಕೊಳ್ಳುತ್ತಾಳೆ. ಅಭಿ ಲೈಫ್‌ನಲ್ಲೂ ಯಾವ ಆಟ ಆಡುತ್ತಾಳೋ ಗೊತ್ತಿಲ್ಲ.

More from Filmibeat

English summary
Srirasthu Shubhamasthu Serial 4th February Episode Written Update. Abhi lover Deepika comes home. Sharvari comes to know about love and abhi gets feared. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X