Srirasthu Shubhamasthu: ಮಾಧವನ ಉಡುಗೊರೆಗೆ ಭಾವುಕರಾದ ದತ್ತ, ತುಳಸಿಯೇ ದೊಡ್ಡ ಗಿಫ್ಟ್ ಎಂದ ಮಾಧವ!

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ದತ್ತ ತಾತನ ಮನೆಯಲ್ಲಿ ತುಳಸಿ ಹಬ್ಬ ಹಾಗೂ ಸತ್ಯ ನಾರಾಯಣ ಪೂಜೆಗೆಂದು ಮಾಧವನ ಕುಟುಂಬ ಕೂಡ ಬಂದಿದೆ. ಅಭಿಗೆ ಇದು ಇಷ್ಟವಿಲ್ಲದಿದ್ದರೂ ತಾನೇ ತಂದುಕೊಂಡ ಪರಿಸ್ಥಿತಿ ಇದು. ಹಾಗಾಗಿ ಕಷ್ಟವಾದರೂ ದತ್ತ ತಾತನ ಮನೆಯಲ್ಲಿದ್ದಾನೆ. ಆತ ಏನೇ ಮಾತನಾಡಲು ಹೋದರೂ ಕೂಡ ದತ್ತ ತಾತ ಬಾಯಿ ಮುಚ್ಚಿಸುತ್ತಿದ್ದಾರೆ.

ಇನ್ನುಳಿದಂತೆ ಶಾರ್ವರಿಗೆ ಇಷ್ಟವಿಲ್ಲ ಎಂಬುದು ಬಿಟ್ಟು ಮತ್ತೆಲ್ಲರಿಗೂ ಇದು ಖುಷಿಯನ್ನೇ ಕೊಟ್ಟಿದೆ. ಎಲ್ಲರೂ ಒಟ್ಟಿಗೆ ಸೇರಿ ಹಬ್ಬ ಮಾಡುತ್ತಿರುವುದಕ್ಕೆ ಸಂಭ್ರಮ ಪಟ್ಟಿದ್ದಾರೆ. ಮನೆಯಲ್ಲಿ ಎಲ್ಲರೂ ಹಬ್ಬದ ಸಂಭ್ರಮದಲ್ಲಿ ಖುಷಿಯಾಗಿದ್ದಾರೆ. ಹಬ್ಬದ ವಾತಾವರಣದಲ್ಲಿ ದತ್ತ ತಾತನ ಮನೆ ಮಿನುಗುತ್ತಿದೆ. ದತ್ತ ತಾತ ಅಭು ಹಾಗೂ ನಿಧಿಗೆ ಸಗಣಿಯನ್ನು ಕೈಗೆ ಕೊಟ್ಟು ಕೆಲಸ ಕೊಟ್ಟಿದ್ದಾರೆ.

Srirasthu Shubhamasthu serial december 1st episode update

ಖುಷಿಯಲ್ಲಿ ಮಾತನಾಡುತ್ತಿರುವ ಮಹೇಶ

ತುಳಸಿ ಪೂಜೆಗೆ ಸಿದ್ಧತೆ ನಡೆಸುತ್ತಿದ್ದಾಳೆ. ಅವಿ ಮತ್ತು ಸಮರ್ಥ್ ಇಬ್ಬರೂ ಬೃಂದಾವನಕ್ಕೆ ಮಂಟಪ ತಯಾರಿಸುತ್ತಿದ್ದಾರೆ. ಉಳಿದವರೆಲ್ಲಾ ಮನೆ ತುಂಬಾ ಓಡಾಡಿಕೊಂಡಿದ್ದಾರೆ. ಇದನ್ನು ನೋಡಿದ ಮಹೇಶನಿಗೆ ಖುಷಿಯಾಗಿದೆ. ಹೀಗಾಗಿ ಮಾತನಾಡುತ್ತಾನೆ. ಹಬ್ಬ ಹಬ್ಬ ಮಾಡುತ್ತಿದ್ದೀವಿ. ದೀಪ, ದೀಪದ ಬೆಳಕು ಎಂದು ಮಾತನಾಡುತ್ತಾನೆ. ಮಹೇಶನ ಮಾತುಗಳನ್ನು ಕೇಳಿದವರಿಗೆಲ್ಲಾ ಖುಷಿಯಾಗುತ್ತದೆ.

ತುಳಸಿಗೆ ಕೆಟ್ಟದು ಬಯಸಿದ ಅಭಿ

ಅಭಿಗೆ ತುಳಸಿ ಮೇಲೆ ಮೊದಲಿನಿಂದಲೂ ಕೋಪವಿರುತ್ತದೆ. ಹಾಗಾಗಿ ಮನೆಯವರಿಗೆ ಕಾಟ ಕೊಡಬೇಕೆಂದೇ ಪ್ರಯತ್ನಿಸುತ್ತಿರುತ್ತಾನೆ. ಈಗ ಪಟಾಕಿ ಹೊಡೆಯುವಾಗ ಆಟಂ ಬಾಂಬ್ ಅನ್ನು ಮೂರು ನಾಲ್ಕು ಒಟ್ಟಿಗೆ ಸೇರಿಸಿ ಹೊಡೆಯಲು ಯತ್ನಿಸುತ್ತಾನೆ. ಅದೂ ಕೂಡ ಕೈಯಲ್ಲಿ ಹಿಡಿದು ಹಚ್ಚಿಕೊಂಡು ತುಳಸಿ ಮುಖಕ್ಕೆ ಬಿಸಾಡಬೇಕು ಎಂದು ಪ್ಲಾನ್ ಮಾಡುತ್ತಾನೆ. ನಿಧಿ ಬೇಡ ಎಂದರೂ ಕೇಳುವುದಿಲ್ಲ. ತುಳಸಿ ಮುಖ ಹಾಳಾದರೆ, ಅವಳು ಇದೇ ಮನೆಯಲ್ಲಿ ಉಳಿಯುತ್ತಾಳೆ. ತಮ್ಮ ಮನೆಗೆ ವಾಪಸ್ ಬರುವುದಿಲ್ಲ ಎಂಬುದು ಅವನ ಆಲೋಚನೆ.

Srirasthu Shubhamasthu serial december 1st episode update

ಅಭಿಯನ್ನು ರಕ್ಷಿಸಿದ ತುಳಸಿ

ತಾನೊಂದು ಬಗೆದರೆ, ದೈವ ಒಂದು ಬಗೆಯುವ ಎಂಬಂತೆ. ಅಭಿ ಪ್ಲಾನ್ ಉಲ್ಟಾ ಆಗುತ್ತದೆ. ಬಾಂಬ್ ಗೆ ಬೆಂಕಿ ಹಚ್ಚುತ್ತಿದ್ದಂತೆ ಅಭಿ ಆಯತಪ್ಪಿ ಹಿಮ್ಮುಖವಾಗಿ ಬೀಳುತ್ತಾನೆ. ಆಗ ಬಾಂಬ್ ಪಟಾಕಿಗಳನ್ನು ಇಟ್ಟಿದ್ದ ಜಾಗಕ್ಕೆ ಬೀಳುತ್ತದೆ. ಅಲ್ಲೇ ಮಹೇಶ್, ಶಾರ್ವರಿ ಕೂಡ ಇರುತ್ತಾರೆ. ಇದನ್ನು ಗಮನಿಸಿದ ತುಳಸಿ ತಕ್ಷಣವೇ ನೀರು ತಂದು ಸುರಿಯುತ್ತಾಳೆ. ಆಗ ನಿಧಿ ಅಭಿಗೆ ಹೇಳುತ್ತಾಳೆ. ತುಳಸಿ ಅವರು ಇರಲಿಲ್ಲ ಎಂದಿದ್ದರೆ, ನಿನ್ನ ಮುಖವೇ ಹಾಳಾಗುತ್ತಿತ್ತು. ನೀನು ಅಂದುಕೊಂಡಂತೆ ತುಳಸಿ ಅವರು ಕೆಟ್ಟವರಲ್ಲ ಎನ್ನುತ್ತಾಳೆ. ಅಭಿ ಗಾಬರಿಯಲ್ಲಿರುತ್ತಾನೆ.

ದೊಡ್ಡ ಉಡುಗೊರೆ ಕೊಟ್ಟ ಮಾಧವ

ಮನೆಯಿಂದ ಹೊರಡುವಾಗ ಮಾಧವ ಮತ್ತು ತುಳಸಿ ಇಬ್ಬರೂ ದತ್ತ ತಾತನಿಗೆ ಎರಡು ಉಡುಗೊರೆಗಳನ್ನು ನೀಡಿರುತ್ತಾರೆ. ಒಂದು ಬೆಳ್ಳಿ ಜ್ಯೋತಿಯಾದರೆ ಮತ್ತೊಂದು ಚಿನ್ನದ ಸರ. ಅಭಿ ಪಟಾಕಿ ಹೊಡೆಯಬೇಕು ಎಂದು ಕೇಳಿದಾಗ ದತ್ತ ತಾತ ಬೆಳ್ಳಿ ದೀಪಗಳನ್ನು ಮಾರಿ ಪಟಾಕಿಯನ್ನು ತರಿಸಿರುತ್ತಾರೆ. ಇದು ತಿಳಿದು ಮಾಧವ ದೀಪಗಳನ್ನು ಉಡುಗೊರೆಯಾಗಿ ತಂದು ಕೊಟ್ಟರೋ ಗೊತ್ತಿಲ್ಲ. ಆದರೆ, ನೀವು ನನ್ನ ತಂದೆಯಂತೆ ಎಂದು ಪತ್ರವೊಂದನ್ನು ಕೂಡ ಉಡುಗೊರೆ ಜೊತೆಗೆ ಕೊಟ್ಟಿರುತ್ತಾರೆ. ಇದಕ್ಕೆ ದತ್ತ ತಾತ ಭಾವುಕರಾಗುತ್ತಾರೆ. ತುಳಸಿಗೆ ಈ ವಿಚಾರವನ್ನು ಸಿರಿ ಫೋನ್ ಮಾಡಿ ಹೇಳುತ್ತಾಳೆ. ಆಗ ಸಿರಿ ಮಾಧವ್ ಗೆ ಕೃತಙ್ಞತೆಗಳನ್ನು ತಿಳಿಸುತ್ತಾಳೆ. ಅದಕ್ಕೆ ಮಾಧವ್ ನನಗೆ ನಿಮ್ಮ ಮಾವ ನಿನ್ನನ್ನೇ ಉಡುಗೊರೆಯಾಗಿ ಕೊಟ್ಟಿರುವಾಗ ನಾನು ಕೊಟ್ಟಿದ್ದು ಏನೂ ಅಲ್ಲ ಎನ್ನುತ್ತಾನೆ.

More from Filmibeat

English summary
Srirasthu Shubhamasthu serial: Tulasi saves Abhi,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X