Srirasthu Shubhamasthu ; ಶ್ರೀರಸ್ತು ಶುಭಮಸ್ತು ಧಾರಾವಾಹಿ ಅಂತ್ಯ..?

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಬಾಣಂತನ ಮಾಡಿಸಿಕೊಳ್ಳುತ್ತಿದ್ದಾಳೆ. ಮಕ್ಕಳಿಲ್ಲ ಎಂಬ ಪೂರ್ಣಿಮಾಳ ಕೊರಗನ್ನು ಈ ಮೂಲಕ ನೀಗಿಸಿದ್ದಾಳೆ. ಪೂರ್ಣಿಮಾ ಹಸುಗೂಸಿಗೆ ತಾಯಿಯಾಗುವ ಪ್ರಯತ್ನ ಮಾಡುತ್ತಿದ್ದಾಳೆ. ದೀಪಿಕಾಳಿಗೆ ಈಗಾಗಲೇ ಒಳ್ಳೆಯ ಬುದ್ಧಿ ಬಂದಿದೆ. ಇತ್ತ ಜುಗ್ಗ ಜನಾರ್ಧನ ಕೂಡ ಒಳ್ಳೆಯವನಾಗಿದ್ದಾನೆ.

ಎರಡೂ ಮನೆಯಲ್ಲೂ ಖುಷಿಯ ಸಂದರ್ಭಗಳೇ ಘಟಿಸುತ್ತಿದ್ದು, ಎಲ್ಲರೂ ನೆಮ್ಮದಿಯಾಗಿದ್ದಾರೆ. ಆದರೆ, ಶಾರ್ವರಿ ಒಬ್ಬಳೇ ತನ್ನ ಪ್ಲಾನ್ ಹಾಳಾಯ್ತು ಎಂದು ನರಳುತ್ತಿದ್ದಾಳೆ.

srirasthu-shubhamasthu-serial-ending

ಶಾರ್ವರಿ ಆಟಕ್ಕೆ ಬೀಳುತ್ತಾ ಬ್ರೇಕ್..?

ತನ್ನ ಅಕ್ಕನಿಗೆ ಅನ್ಯಾಯವಾದ ಕಾರಣ, ಇಡೀ ಕುಟುಂಬವೇ ಬೀದಿ ಪಾಲಾಯ್ತು. ಅಕ್ಕ, ಮತ್ತು ಕುಟುಂಬವನ್ನು ಕಳೆದುಕೊಂಡು ತಾನೂ ಒಂಟಿಯಾಗಬೇಕಾಯ್ತು ಎಂಬ ದ್ವೇಷದಿಂದ ಶಾರ್ವರಿ ಮಹೇಶನನ್ನು ಪ್ರೀತಿ ಮಾಡುವ ನಾಟಕವಾಡಿದಳು. ಬಳಿಕ ಮದುವೆಯಾಗಿ ಅದೇ ಮನೆಯನ್ನು ಸೇರಿಕೊಂಡ ದಿನದಿಂದಲೂ ಮಾಧವನ ವಿರುದ್ಧ ದ್ವೇಷ ಕಾರುತ್ತಿದ್ದಾಳೆ. ಈ ಕಾರಣದಿಂದಾಗಿಯೇ ಮಾಧವನ ಹೆಂಡತಿಯನ್ನು ಹತ್ಯೆ ಮಾಡಿ, ಅಭಿ ಮತ್ತು ಅವಿ ಮನದಲ್ಲಿ ಕೆಟ್ಟ ಗುಣಗಳನ್ನು ತುಂಬಲು ಮುಂದಾಗಿದ್ದಳು. ಮಾಧವನ ಬಾಳಲ್ಲಿ ನೆಮ್ಮದಿ ಇಲ್ಲದಂತೆ ಮಾಡಿದ್ದಳು. ಆದರೆ, ತುಳಸಿ ಮಾಧವನ ಎರಡನೇ ಹೆಂಡತಿಯಾಗಿ ಮನೆಗೆ ಬಂದ ಬಳಿಕ ಎಲ್ಲವೂ ಬದಲಾಗಿತ್ತು. ಈಗ ಇಡೀ ಮನೆಯಲ್ಲಿ ಸಂತಸ ತುಂಬಿ ತುಳುಕುತ್ತಿದೆ. ಇದರಿಂದ ಶಾರ್ವರಿ ಆಟಗಳಿಗೆ ಬ್ರೇಕ್ ಬಿದ್ದಂತಾಗಿದೆ.

ಮುಗಿಯುವ ಹಂತದಲ್ಲಿ ಶ್ರೀರಸ್ತು ಶುಭಮಸ್ತು

ಇನ್ನು ತುಳಸಿ ಮತ್ತು ದತ್ತ ತಾತ ಸೇರಿಕೊಂಡು ಶಾರ್ವರಿಯ ಬಣ್ಣವನ್ನು ಬಯಲು ಮಾಡಲು ಮುಂದಾಗಿದ್ದಾರೆ. ಹಾಗೊಂದು ವೇಳೆ ಶಾರ್ವರಿಯ ಬಣ್ಣ ಬಯಲಾದರೆ, ಧಾರಾವಾಹಿ ಮುಗಿಯುವುದು ಪಕ್ಕಾ. ಈಗಾಗಲೇ ಸಂಚಿಕೆಗಳನ್ನು ನೋಡುತ್ತಿರುವ ವೀಕ್ಷಕರು ಕೆಲವೇ ಕೆಲವು ದಿನಗಳನ್ನು ಸೀರಿಯಲ್ ಮುಕ್ತಾಯಗೊಳ್ಳುತ್ತದೆ ಎಂದು ಗೆಸ್ ಮಾಡಿದ್ದಾರೆ. ದತ್ತ ತಾತನ ಪಾತ್ರಕ್ಕಾಗಿ ಸೀರಿಯಲ್ ಇನ್ನಷ್ಟು ದಿನ ಮೂಡಿ ಬರಲಿ ಎಂದು ಬಯಸಿದ್ದಾರೆ. ಈಗಾಗಲೇ 700 ಸಂಚಿಕೆಗಳನ್ನು ಪೂರೈಸಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿಯು ಮುಕ್ತಾಯಗೊಂಡರೆ, ಆ ಸ್ಲಾಟ್ ಗೆ ಹೊಸ ಧಾರಾವಾಹಿಗಳು ಬರಲು ಕಾಯುತ್ತಿದ್ದಾವೆ.

ತೆರೆಗೆ ಬರಲು ಸಜ್ಜಾದ ಕರ್ಣ

ಜೀ ಕನ್ನಡ ವಾಹಿನಿಯಲ್ಲಿ ಈಗಾಗಲೇ ತೆರೆಗೆ ಬರಲು ಕರ್ಣ ಧಾರಾವಾಹಿ ಸಜ್ಜಾಗಿದೆ. ನಿರ್ಮಾಪಕಿ ಶ್ರುತಿ ನಾಯ್ಡು ನಿರ್ಮಾಣ ಮಾಡುತ್ತಿರುವ ಕರ್ಣ ಧಾರಾವಾಹಿಗೆ ನಟ ಕಿರಣ್ ರಾಜ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ, ಈ ಧಾರಾವಾಹಿಯಲ್ಲಿ ದೊಡ್ಡ ತಾರಾ ಬಳಗವೇ ಇದೆ. ನಿರ್ದೇಶಕ, ನಿರ್ಮಾಪಕ, ನಟ, ರಂಗಕರ್ಮಿ ನಾಗಾಭರಣ, ಹಿರಿಯ ನಟಿ ಆಶಾ ರಾಣಿ, ನಟಿ ವರಲಕ್ಷ್ಮೀ ಶ್ರೀನಿವಾಸ್, ನಟ ಸುಂದರ್ ವೀಣಾ, ನಟಿ ವೀಣಾ ರಾವ್ ಮತ್ತು ನಟ ಶ್ಯಾಮ್ ಸಿಮ್ರನ್ ನಟಿಸುತ್ತಿದ್ದಾರೆ. ಕರ್ಣ ಆಗಿ ಬರುತ್ತಿರುವ ಕಿರಣ್ ರಾಜ್ ಅವರನ್ನು ವೆಲ್ ಕಮ್ ಮಾಡಲು ಕಿರುತೆರೆ ವೀಕ್ಷಕರು ಕಾದು ಕುಳಿತಿದ್ದಾರೆ.

ರಾಯರ ಕಥೆ ಹೇಳಲು ಕಾಯುತ್ತಿರುವ ತಂಡ

ಇನ್ನೊಂದು ಕಡೆ ಹಲವು ದಿನಗಳಿಂದ ಜೀ ಕನ್ನಡ ವಾಹಿನಿಯೂ ರಾಯರ ಬಗ್ಗೆ ಜನರಿಗೆ ತಿಳಿಸಿಕೊಡಲು ಮುಂದಾಗಿದೆ. ಹಲವು ತಿಂಗಳ ಹಿಂದೆಯೇ ಶ್ರೀ ರಾಘವೇಂದ್ರ ಮಹಾತ್ಮೆ ಹೆಸರಿನಲ್ಲಿ ಧಾರಾವಾಹಿಯ ಬಗ್ಗೆ ಜೀ ಕನ್ನಡ ವಾಹಿನಿ ಅನೌನ್ಸ್ ಮಾಡಿದೆ. ಅತೀ ಶೀಘ್ರದಲ್ಲಿ ಎಂದು ಕೂಡ ತಿಳಿಸಲಾಗಿದೆ. ಆದರೆ, ಈ ಧಾರಾವಾಹಿಯ ಕ್ಲಿಪಿಂಗ್ಸ್ ಯಾವುದನ್ನೂ ರಿವೀಲ್ ಮಾಡಿಲ್ಲ. ಇದೆಲ್ಲವನ್ನೂ ಗಮನಿಸುತ್ತಿದ್ದರೆ, ಶ್ರೀರಸ್ತು ಶುಭಮಸ್ತು ಧಾರಾವಾಹಿ ಎಂಡ್ ಆಗುವುದು ಪಕ್ಕಾ ಎಂದು ವೀಕ್ಷಕರು ಹೇಳುತ್ತಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X