ದೀಪಿಕಾ ಕೊಂಕು ಮಾತಿಗೆ ಜಗ್ಗದ ಪೂರ್ಣಿಮಾ; ಮತ್ತಷ್ಟು ಹೆಚ್ಚಾಯ್ತು ದ್ವೇಷ

By Poorva

ದೀಪಿಕಾ ಬಹಳ ದುರಹಂಕಾರಿ. ಬಹಳ ಕೋಪಿಷ್ಠ ಸ್ವಭಾವದವಳು ಎಂದರೆ ತಪ್ಪಾಗದು. ಅದೇ ದೀಪಿಕಾ ಅಭಿಯನ್ನು ಮದುವೆ ಆಗುವ ಮೊದಲು ಒಳ್ಳೆತನದ ಮುಖವಾಡವನ್ನು ಧರಿಸಿ ತುಳಸಿಗೆ ಬಹಳ ಹತ್ತಿರ ಆಗಲು ನೋಡಿದ್ದಳು. ಆದರೆ, ತುಳಸಿ ಮಾತ್ರ ದೀಪಿಕಾ ಬದಲಾಗಿದ್ದಾಳೆ. ಅಭಿ ಹಾಗೂ ದೀಪಿಕಾ ಒಂದಾದರೆ ಅವರ ಜೀವನ ತುಂಬಾ ಚೆನ್ನಾಗಿ ಇರುತ್ತದೆ ಎಂದು ಅನಿಸುತ್ತದೆ. ಅದಕ್ಕಾಗಿ ಅವರಿಬ್ಬರನ್ನು ಒಂದು ಮಾಡುತ್ತಾಳೆ. ಹಲವು ಅಡೆ ತಡೆಗಳು ಎದುರಾದರೂ ದೀಪಿಕಾ, ಅಭಿ ಮದುವೆ ನಡೆದು ಹೋಯಿತು.

ಆದರೆ, ದೀಪಿಕಾ ಇದೀಗ ಪೂರ್ಣಿಮಾನನ್ನು ಟಾರ್ಗೆಟ್ ಮಾಡಿದ್ದಾಳೆ. ಯಾಕೆಂದರೆ ದೀಪಿಕಾ ಮೊದಲು ಮನೆಯಲ್ಲಿ ಇರಬೇಕಾದರೆ ಬಹಳ ದುರಹಂಕಾರಿ ಆಗಿದ್ದಳು. ಆದರೆ, ಇದನ್ನೆಲ್ಲ ನೋಡಿದ ಪೂರ್ಣಿಮಾಗೆ ಬುದ್ದಿ ಹೇಳುತ್ತಿದ್ದಳು. ಮನೆಯ ಸೊಸೆ ಹೇಗೆ ಇರಬೇಕು ಎಂಬುವುದರ ಬಗ್ಗೆ ಆಗಾಗ ಕಿವಿ ಮಾತು ಹೇಳುತ್ತಿದ್ದಳು. ಇದರಿಂದ ದೀಪಿಕಾಗೆ ಬಹಳ ಕೋಪ ಬರುತ್ತಿತ್ತು. ಹೇಗಾದರೂ ಮಾಡಿ ಈಕೆಯ ಬಾಯಿ ಮುಚ್ಚಿಸಬೇಕು ಎಂದು ಆಲೋಚನೆ ಮಾಡುತ್ತಿದ್ದಾಳೆ.

Srirasthu Shubhamasthu serial February 12th update on Poornima hate on Deepika

ಅದರಿಂದ ಪೂರ್ಣಿಮಾ ಬಳಿ ದೀಪಿಕಾ ಬಹಳ ಕೊಂಕು ಮಾತುಗಳನ್ನು ಹೇಳುತ್ತಾಳೆ. ಆದರೆ, ಇದನ್ನೆಲ್ಲ ಕೇಳಿಸಿಕೊಂಡ ಪೂರ್ಣಿಮಾಗೆ ಮಾತ್ರ ಬಹಳ ಬೇಸರ ಆಗುತ್ತದೆ. ಆದರೂ ಅದೆಲ್ಲವನ್ನೂ ಸಹಿಸಿಕೊಂಡು ಇರುತ್ತಾಳೆ. ಇತ್ತ ದೀಪಿಕಾ ತುಳಸಿಯ ಜೊತೆ ಬಹಳ ಪ್ರೀತಿಯಿಂದ ನಡೆದುಕೊಂಡು ಇರುತ್ತಾಳೆ. ಇದನ್ನು ನಂಬಿದ ತುಳಸಿ ಪೂರ್ಣಿಮಾಗೆ ಕೊಡಬೇಕಾದ ಮೆಡಿಸಿನ್ ಕೊಟ್ಟು ಈಗ ಬರುತ್ತೇನೆ ಎಂದು ಹೇಳಿ ಯಾವುದೋ ಕೆಲಸ ಮಾಡಲು ಹೋಗುತ್ತಾಳೆ.

ದೀಪಿಕಾ ಮಸಲತ್ತು ಶಾರ್ವರಿ ಮುಂದೆ ಬಯಲು

ಆದ ದೀಪಿಕಾ ಆ ಸಿರಪ್ ಬಾಟಲಿ ತೆಗೆದು ಅದರಲ್ಲಿ ಇರುವ ಮದ್ದು ಚೆಲ್ಲಿ ಬೇರೆ ಮದ್ದನ್ನು ಸೇರಿಸಿ ಹಿಡಿದುಕೊಂಡು ಇರುವುದನ್ನು ಶಾರ್ವರಿ ನೋಡುತ್ತಾಳೆ. ಆಗ ದೀಪಿಕಾಗೆ ಕೊಂಚ ಆತಂಕ ಆಗುತ್ತದೆ. ಏನು ಮಾಡಬೇಕು ಎಂದು ತಿಳಿಯದೇ ಬಹಳ ಕಂಗಾಲು ಆಗುತ್ತಾಳೆ. ಇದನ್ನು ನೋಡಿ ನಕ್ಕ ಶಾರ್ವರಿ ದೀಪಿಕಾ ಜೊತೆ ತಾನು ಇದ್ದೇನೆ ಎಂದು ಹೇಳುತ್ತಾಳೆ ಹಾಗೆಯೇ ಪೂರ್ಣಿಮಾ ಮೇಲಿನ ಕೋಪದ ಬಗ್ಗೆ ವಿವರಣೆ ನೀಡುತ್ತಾಳೆ

ಸಂಧ್ಯಾ ಆಟಕ್ಕೆ ಬ್ರೇಕ್ ಹಾಕಿದ ದತ್ತ

ಇನ್ನು ಸಂಧ್ಯಾಗೆ ಇತ್ತೀಚೆಗೆ ಅದು ಯಾಕೋ ಹೊಟ್ಟೆ ಹಸಿವು ಜಾಸ್ತಿ ಆಗುತ್ತಿದೆ. ಸಿರಿ ಜೊತೆ ನನಗೆ ಇಡ್ಲಿ ತಿನ್ನಬೇಕು ಎಂದು ಎರಡು ಸೇರು ಅಕ್ಕಿಯನ್ನು ಉದ್ದಿನ ಬೇಳೆಯನ್ನು ನೆನೆ ಹಾಕಿ ಇಡ್ಲಿ ಮಾಡಿಸಿ ತಿನ್ನುತ್ತಿದ್ದರೆ, ಸಮರ್ಥ್ ಮಾತ್ರ ಇಷ್ಟು ಇಡ್ಲಿ ಯಾಕೆ ಮಾಡಿದೆ ಎಂದು ಹೆಂಡತಿ ಬಳಿ ಕೇಳುತ್ತಾನೆ. ಆ ಬಳಿಕ ದತ್ತನೆ ಸಂಧ್ಯಾಗೆ ವಾರ್ನಿಂಗ್ ಮಾಡುತ್ತಾನೆ. ಇದರಿಂದ ಸಂಧ್ಯಾ ಕೊಂಚ ಸುಮ್ಮನೆ ಆಗುತ್ತಾಳೆ. ಸಮರ್ಥ್ ಇನ್ನಷ್ಟು ದುಡಿದು ಹಣ ಸಂಪಾದನೆ ಮಾಡುವ ಆಸೆ. ಮಾಧವ ಸರ್ ಅನ್ನು ಪಿಕ್ ಅಪ್ ಡ್ರಾಪ್ ಅಷ್ಟೇ ಮಾಡುವ ಕೆಲಸ ಸಮರ್ಥ್‌ನದ್ದು.

Srirasthu Shubhamasthu serial February 12th update on Poornima hate on Deepika

ಬೇರೆ ಕೆಲಸದಲ್ಲಿ ನಿರತನಾಗಲು ಸಮರ್ಥ್ ಪ್ಲಾನ್

ಬೇರೆ ಸಮಯದಲ್ಲಿ ಬೇರೆ ಕೈಲಸಗಳನ್ನು ಮಾಡಿಕೊಳ್ಳಬೇಕು ಎಂದೂ ಸಿರಿ ಜೊತೆ ಸಮರ್ಥ್ ಮಾತನಾಡುತ್ತಾ ಇರುತ್ತಾನೆ. ಇನ್ನು ತುಳಸಿ ಮಾಧವನ ಮನೆಯಲ್ಲಿ ವ್ಯಾಲೆಂಟೈನ್ಸ್ ಸಂಭ್ರಮ ಕೊಂಚ ಜೋರಾಗಿದೆ. ಹೇಗೆ ಆಚರಣೆ ಮಾಡಬೇಕು ಎಂಬುವುದು ಇದೀಗ ಬಿಸಿ ಬಿಸಿ ಚರ್ಚೆ ಆಗುತ್ತಿದೆ.

More from Filmibeat

English summary
Srirasthu Shubhamasthu serial February 12th update on Poornima hate on Deepika:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X