Srirasthu Shubhamasthu ; ಶಾರ್ವರಿ ವಿರುದ್ಧ ಹೊಸ ದಾಖಲೆ ಹುಡುಕಿರುವ ತುಳಸಿ, ಕಳಚುತ್ತಾ ಮುಖವಾಡ..?
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ನಿಧಿಯನ್ನು ಉಳಿಸಿಕೊಳ್ಳುವ ಸಲುವಾಗಿ ಸಮರ್ಥ್ ಜೈಲು ಪಾಲಾದ. ಮಗನ ನಿರ್ಧಾರವನ್ನು ಮೆಚ್ಚಿದ ತುಳಸಿ ಸುಳ್ಳು ಸಾಕ್ಷಿ ಹೇಳಬೇಕಾಯ್ತು. ಆದರೆ, ಗಂಡನನ್ನು ಹೊರಗೆ ಕರೆದುಕೊಂಡು ಬರಲು ಸಿರಿ ಸಾಕ್ಷಿಗಲನ್ನು ಕಲೆ ಹಾಕುವ ಬರದಲ್ಲಿ ಅಭಿಯೇ ಅಪಘಾತ ಮಾಡಿರುವುದು ಎಂದು ತಪ್ಪಾಗಿ ಅರ್ಥ ಮಾಡಿಕೊಂಡು ದೂರಿದಳು.
ಇದೆಲ್ಲಾ ಸಮಸ್ಯೆ ಆಗುತ್ತಿರುವುದನ್ನು ಕಂಡ ಅವಿ ಅಪಘಾತದಲ್ಲಿ ಬೇರೆ ಯಾರದ್ದೋ ಕೈವಾಡವಿರಬಹುದು ಎಂದು ಊಹಿಸಿದ. ಅಪಘಾತದ ಜಾಗದಲ್ಲಿ ಪತ್ತೆಯಾದ ಟೈರ್ ನ ಕಾರನ್ನು ತುಳಸಿ ಮತ್ತು ದತ್ತ ತಾತ ಸೇರಿ ಹುಡುಕಾಟ ನಡೆಸಿದರು.

ಸಿಕ್ಕಾಯ್ತು ಶಾರ್ವರಿ ಕಾರು
ಇದರ ಫಲವೆಂಬಂತೆ ತುಳಸಿ ಕಣ್ಣಿಗೆ ಕಾರು ಬಿದ್ದಾಯ್ತು. ಆ ಕಾರನ್ನು ಪೊಲೀಸರಿಗೆ ಒಪ್ಪಿಸಲು ತುಳಸಿ ಹರಸಾಹಸ ಪಡಬೇಕಾಯ್ತು. ರೌಡಿಗಳ ಜೊತೆಗೆ ಹೋರಾಡಿ ತಾನು ಗರ್ಭಿಣಿ ಎಂಬುದನ್ನೂ ಮರೆತು ಕಾರನ್ನು ಪೊಲೀಸರ ಕೈಗೆ ಒಪ್ಪಿಸಿದ್ದಾಳೆ. ಬಳಿಕ ಈ ಕಾರು ಶಾರ್ವರಿ ಹೆಸರಿನಲ್ಲಿದೆ ಎಂಬ ಸತ್ಯವನ್ನು ತಿಳಿದ ತುಳಸಿ ಗಾಬರಿಯಾಗಿದ್ದಾಳೆ. ಮಹೇಶನಿಗೆ ಈ ಸತ್ಯವನ್ನು ತಿಳಿಸಿದ್ದು, ಮಹೇಶ ಶಾರ್ವರಿಯನ್ನು ಪ್ರಶ್ನೆ ಮಾಡಿದ್ದಾನೆ. ಈ ಈ ಅಪಘಾತವನ್ನು ಮಾಡಿ ಒಂದು ಜೀವವನ್ನು ಕೊಂದಿದ್ದು ಎಂದು ದೂರಿದ್ದಾನೆ. ಆದರೆ, ಶಾರ್ವರಿ ಸತ್ಯ ಒಪ್ಪಿಕೊಳ್ಳದೇ ಅಲ್ಲೂ ಕಳ್ಳಾಟವನ್ನು ಆಡಿದ್ದಾಳೆ. ಮನೆಯವರ ಎದುರಿಗೆ ತನ್ನ ಕಾರು ಕಳೆದು ಹೋಗಿದೆ. ಅದೂ ಕೂಡ ಅಪಘಾತ ನಡೆದ ದಿನವೇ ಎಂದು ಸುಳ್ಳು ಹೇಳಿದ್ದಾಳೆ.
ಹೊಸ ಕಥೆ ಕಟ್ಟಿ ನಂಬಿಸಿದ ಶಾರ್ವರಿ
ಹೊಸ ಕಥೆಯನ್ನು ಕಟ್ಟಿ ಶಾರ್ವರಿ ಮನೆಯವರನ್ನೆಲ್ಲಾ ನಂಬಿಸಿದ್ದಾಳೆ. ಶಾರ್ವರಿ ಕಣ್ಣಿನಲ್ಲಿ ನೀರನ್ನು ಕಂಡು ಎಲ್ಲರೂ ಬೇಸರ ಮಾಡಿಕೊಂಡಿದ್ದಾರೆ. ಮದುವೆಯ ತರಾತುರಿ ಹಾಗೂ ಮದುವೆ ನಿಂತ ಆತಂಕದಲ್ಲಿ ಕಾರು ಕಳುವಾಗಿದ್ದನ್ನು ಗಮನಿಸಲಿಲ್ಲ. ಇದರ ಬಗ್ಗೆ ಕಂಪ್ಲೈಂಟ್ ಕೊಡುವುದನ್ನೂ ಮರೆತು ಬಿಟ್ಟೆ. ನಿಮಗೂ ವಿಚಾರವನ್ನು ತಿಳಿಸಲಿಲ್ಲ ಎಂದು ಗೋಳಾಡಿದ್ದಾಳೆ. ಶಾರ್ವರಿ ಮಾತನ್ನು ಎಲ್ಲರೂ ನಂಬಿದ್ದಾರೆ. ಆದರೆ, ತುಳಸಿ, ದತ್ತ ತಾತ ಹಾಗೂ ಮಹೇಶನಿಗೆ ಶಾರ್ವರಿ ಕಟ್ಟು ಕಥೆಯನ್ನು ಹೇಳುತ್ತಿದ್ದಾಳೆ ಎಂಬ ಸತ್ಯ ಗೊತ್ತಿದ್ದರೂ ಏನೂ ಮಾತನಾಡಲಾಗದೇ ಸುಮ್ಮನಾಗಿದ್ದಾಳೆ.
ಸಿಸಿಟಿವಿ ಸಾಕ್ಷಿ ತುಳಸಿ ಕೈಗೆ ಸಿಗುತ್ತಾ..?
ಈಗ ಕಾರನ್ನು ಯಾರು ಕದ್ದರು. ಅದೇ ಕಾರಿನಿಂದ ಹೇಗೆ ಅಪಘಾತ ನಡೆಯಿತು ಎಂದು ತುಳಸಿ ಯೋಚಿಸುತ್ತಿದ್ದು, ಅವಳಿಗೆ ಸಿಸಿಟಿವಿ ನೆನಪಾಗಿದೆ. ಇದೇ ವಿಚಾರವನ್ನು ತುಳಸಿ ಮಾಧವ್ ಬಳಿ ಬಂದು ಹೇಲಿದ್ದಾಳೆ. ನಮ್ಮ ಮನೆಯ ಸಿಸಿಟಿವಿ ಹಾಲಾಗಿದೆ. ಆದರೆ, ಎದುರು ಮನೆಯವರ ಸಿಸಿಟಿವಿಯಲ್ಲಿ ಕಾರನ್ನು ಕದ್ದವರ ಬಗ್ಗೆ ಮಾಹಿತಿ ಸಿಗಬಹುದು ಎಂದು ಹೇಳುತ್ತಾಳೆ. ತಕ್ಷಣವೇ ಅವಿ ಮತ್ತು ಮಾಧವ್ ಎದುರು ಮನೆಯವರ ಬಳಿ ಹೋಗಿ ಸಿಸಿಟಿವಿ ಫುಟೇಜ್ ಅನ್ನು ಪಡೆಯಲು ಮುಂದಾಗುತ್ತಾರೆ. ಆದರೆ, ಹಾರ್ಡ್ ಡಿಸ್ಕ್ ಹಾಳಾಗಿದೆ ಎಂದು ಹೇಳಿ ಕಳಿಸುತ್ತಾರೆ. ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ ಹೋಗುತ್ತಾರೆ.
ಮತ್ತೆ ಚಳ್ಳೆ ಹಣ್ಣು ತಿನ್ನಿಸುತ್ತಾಳಾ ಶಾರ್ವರಿ..?
ಈ ವಿಚಾರವನ್ನು ಕೇಳಿದ ತುಳಸಿಗೆ ಬೇಸರವಾಗುತ್ತದೆ. ಆದರೆ, ಶಾರ್ವರಿಯ ಕೈವಾಡವಿದ್ದು, ಅವಳೇ ಎದುರು ಮನೆಯವರನ್ನು ಹೆದರಿಸಿದ್ದಾಳೆ. ಇನ್ನು ಪೊಲೀಸರು ಕಾರು ಕಳುವಾದ ಬಗ್ಗೆ ವಿಚಾರಣೆ ನಡೆಸಲು ಶಾರ್ವರಿಯನ್ನು ಠಾಣೆಗೆ ಬರಲು ಹೇಳಿದ್ದಾರೆ. ಈ ಮಾತನ್ನು ಕೇಳಿದ ಶಾರ್ವರಿ ಕಕ್ಕಾಬಿಕ್ಕಿಯಾಗಿದ್ದಾಳೆ. ಈ ಬಾರಿ ಶಾರ್ವರಿ ಎಲ್ಲರಿಗೂ ಚಳ್ಳೆ ಹಣ್ಣು ತಿನ್ನಿಸುತ್ತಾಳಾ ಇಲ್ಲ ತಾನೇ ಸಿಕ್ಕಿ ಬೀಳುತ್ತಾಳಾ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











