'ಶ್ರೀರಸ್ತು ಶುಭಮಸ್ತು' ಬಗ್ಗೆ ನಟಿ ಸುಧಾರಾಣಿ ಹೇಳಿದ್ದೇನು..?

By ಪ್ರಿಯಾ ದೊರೆ

ಜೀ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿಗಳಿಗೇನು ಕಡಿಮೆ ಇಲ್ಲ. ಒಂದಾದ ಮೇಲೆ ಒಂದು ಧಾರಾವಾಹಿಗಳು ತೆರೆಗೆ ಬರುತ್ತಲೇ ಇವೆ. ಹೀಗೆ ಶುರುವಾಗುವ ಧಾರಾಹಿಗಳು ಹೆಚ್ಚು ಸಮಯ ತೆಗೆದುಕೊಳ್ಳದೆ, ಸೀರಿಯಲ್‌ಗಳು ಬೇಗನೇ ಮುಗಿದು ಹೋಗುತ್ತವೆ.

ಇಡೀ ಕುಟುಂಬ ಕುಳಿತು ನೋಡುವಂತಹ ಕಥೆಗಳಿಗೆ ಹೆಚ್ಚು ಒತ್ತು ಕೊಡಲಾಗುತ್ತದೆ. ಇದರಲ್ಲಿ ಬರುವ ಧಾರಾವಾಹಿಗಳು ಪ್ರೇಕ್ಷಕರ ಅಚ್ಚುಮೆಚ್ಚು ಕೂಡ. ಇದುವರೆಗೂ ಯಾವ ಸೀರಿಯಲ್ ಕೂಡ ಟಿಆರ್ಪಿ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ.

ಇನ್ನು ಹೊಸ ಧಾರಾವಾಹಿಯೊಂದು ಜೀ ಕುಟುಂಬಕ್ಕೆ ಸೇರ್ಪಡೆಯಾಗುತ್ತಿದೆ. ಹೊಸ ಧಾರಾವಾಹಿಯ ಪ್ರೋಮೋ ನೋಡಿನೇ ಪ್ರೇಕ್ಷಕರು ಧಾರಾವಾಹಿ ನೋಡಲು ಕಾಯುತ್ತಿದ್ದಾರೆ. ಈ ಸೀರಿಯಲ್‌ನಲ್ಲಿ ನಿಮ್ಮ ನೆಚ್ಚಿನ ನಟಿ ಕೂಡ ಕಾಣಿಸಿಕೊಂಡಿದ್ದಾರೆ. ಅದು ಶ್ರೀರಸ್ತು ಶುಭಮಸ್ತು.

ಹಳೇ ಟೈಟಲ್‌ನಲ್ಲಿ ಹೊಸ ಕಥೆ!

ಹಳೇ ಟೈಟಲ್‌ನಲ್ಲಿ ಹೊಸ ಕಥೆ!

ಈ ಹಿಂದೆ ಕೂಡ ಜೀ ಕನ್ನಡದಲ್ಲಿಯೇ ಶ್ರೀರಸ್ತು ಶುಭಮಸ್ತು ಎಂಬ ಧಾರಾವಾಹಿ ಮೂಡಿ ಬಂದಿತ್ತು. ಅದರಲ್ಲಿ ಆರು ಅತ್ತೆಯಂದಿರ ಮುದ್ದಿನ ಸೊಸೆಯ ಕಥೆಯಾಗಿತ್ತು. ಆದರೆ ಈ ಬಾರಿ ಮೂಡಿ ಬರುತ್ತಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿಯ ಕಥೆಯೇ ವಿಭಿನ್ನವಾಗಿದೆ. ಗೃಹಿಣಿಯಾಗಿ ಮನೆಯಲ್ಲಿ ಕೂರುವ ಮಹಿಳೆಯ ಮನಸ್ಥಿತಿ ಹೇಗಿರುತ್ತೆ..? ಯಾಕೆ ತನ್ನಲ್ಲಿರುವ ಆಸೆ, ಆಕಾಂಕ್ಷೆಗಳನ್ನೆಲ್ಲಾ ತನ್ನಲ್ಲೆ ಅದುಮಿಟ್ಟುಕೊಳ್ಳುತ್ತಾಳೆ..? ಮನೆಯೇ ಪ್ರಪಂಚ ಎಂದುಕೊಳ್ಳುವ ಗೃಹಿಣಿ ಅದೆಷ್ಟು ತ್ಯಾಗಗಳನ್ನು ಮಾಡುತ್ತಾಳೆ, ಎಂಬ ಸತ್ಯವನ್ನು ತೋರಿಸಲು ಬರುತ್ತಿರುವ ಧಾರಾವಾಹಿ ಶ್ರೀರಸ್ತು ಶುಭಮಸ್ತು ಆಗಿದೆ. ಈ ವಿಭಿನ್ನ ಕಥೆ ಹೊತ್ತು ಈಗಾಗಲೇ ಪ್ರೋಮೋ ರಿಲೀಸ್ ಆಗಿದ್ದು, ಇದರಲ್ಲಿ ಅತ್ತೆ ಹಾಗು ಸೊಸೆಯರದ್ದೇ ಲೀಡ್ ಪಾತ್ರ.

ಅತ್ತೆ- ಸೊಸೆ ಕೂಡಿ ಬಾಳು ಕಥೆ!

ಅತ್ತೆ- ಸೊಸೆ ಕೂಡಿ ಬಾಳು ಕಥೆ!

ಎಲ್ಲಾ ಧಾರಾವಾಹಿಗಳಲ್ಲೂ ಅತ್ತೆ- ಸೊಸೆ ಕಿತ್ತಾಟವೇ ಹೆಚ್ಚಿರುತ್ತದೆ. ಒಬ್ಬರ ಮೇಲೆ ಒಬ್ಬರು ಹಲ್ಲು ಮಸೆಯುತ್ತಿರುತ್ತಾರೆ. ಆದರೆ ಈಗ ಜೀ ಕನ್ನಡದಲ್ಲಿ ಮೂಡಿ ಬರುವ ಶ್ರೀರಸ್ತು ಶುಭಮಸ್ತು ಧಾರಾವಾಹಿ ಹಾಗಲ್ಲ. ಇದರಲ್ಲಿ ಅತ್ತೆ- ಸೊಸೆ ಒಟ್ಟಾಗಿ ಕೂಡಿ ಬಾಳುತ್ತಾರೆ. ಅತ್ತೆಯ ಕೆಲ ಗುಣಗಳನ್ನು ಬದಲಾಯಿಸಲು ಸೊಸೆ ಮುಂದಾಗುತ್ತಾಳೆ. ಅತ್ತೆ ತಾಯಿಯಾಗಿ ಮನೆ ಮಗನ, ಗಂಡನ ಕೆಲಸಗಳನ್ನು ಮಾಡುವವಳು ಬೆಳಗ್ಗಿನಿಂದ ರಾತ್ರಿವರೆಗೂ ಮಾಡುತ್ತಾರೆ. ಈ ರೀತಿಯನ್ನು ಬದಲಾಯಿಸಲು ಸೊಸೆ ಮುಂದಾಗಿದ್ದಾಳೆ. ಈ ವೇಳೆ ಯಾವೆಲ್ಲಾ ಸಮಸ್ಯೆ ಎದುರಾಗುತ್ತದೆ.? ಅದೆಲ್ಲವನ್ನೂ ಇಡೀ ಕುಡುಂಬ ಹೇಗೆ ನಿಭಾಯಿಸುತ್ತದೆ ಎಂಬುದೇ ಧಾರಾವಾಹಿಯ ಕಥೆ.

ನಾಯಕಿಯಾಗಿ ಬಂದ ಸುಧಾರಾಣಿ!

ನಾಯಕಿಯಾಗಿ ಬಂದ ಸುಧಾರಾಣಿ!

ನಟಿ ಸುಧಾರಾವಾಣಿ, ಬೆಳ್ಳಿಪರದೆಯಲ್ಲಿ ಮಿಂಚಿ ಎಲ್ಲರ ಮನದಲ್ಲಿ ಉಳಿದವರು. ಇತ್ತೀಚೆಗೆ 'ಜೊತೆ ಜೊತೆಯಲಿ' ಎಂಬ ಧಾರಾವಾಹಿಯಲ್ಲಿ ಮೊದಲ ಬಾರಿಗೆ ಗೆಸ್ಟ್ ರೋಲ್ ಮಾಡಿದ್ದರು. ಇನ್ನು ಇದೀಗ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಲೀಡಿಂಗ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅತ್ತೆಯ ರೋಲ್ ಅನ್ನು ಸುಧಾರಾಣಿ ಅವರು ಮಾಡುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಸುಧಾರಾಣಿ ತುಳಿಸಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮಗೆ ಸೊಸೆ ಬಂದರೂ ಮಾವ, ಗಂಡ, ಮಗನ ಸೇವೆ ಮಾಡುತ್ತಿರುತ್ತಾರೆ.

ಸೀರಿಯಲ್ ಬಗ್ಗೆ ಸುಧಾರಾಣಿ ಮಾತು!

ಸೀರಿಯಲ್ ಬಗ್ಗೆ ಸುಧಾರಾಣಿ ಮಾತು!

80-90ರ ದಶಕದಲ್ಲಿ ಟಾಪ್ ನಟಿಯರ ಪೈಕಿ ಸುಧಾರಾಣಿ ಕೂಡ ಮೊದಲಿಗರೇ ಆಗಿದ್ದರು. ಈಗಲೂ ಸುಧಾರಾಣಿ ಡಿಮ್ಯಾಂಡ್ ಏನು ಕಡಿಮೆಯಾಗಿಲ್ಲ. ಅಂದಿನಿಂದ ಇಂದಿನವರೆಗೂ ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ನಟಿ. ಇದೀಗ ಧಾರಾವಾಹಿಯಲ್ಲಿ ನಟಿಸುತ್ತಿರುವುದಕ್ಕೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಧಾರಾವಾಹಿಯಲ್ಲಿ ಜನರನ್ನು ನಿತ್ಯ ರೀಚ್ ಆಗ್ತಾರೆ. ಥಿಯೇಟರ್‌ಗೆ ಬಂದು ನಮ್ಮನ್ನು ನೋಡುವುದಕ್ಕಿಂತಲೂ, ನಾವೇ ಮನೆ ಮನೆಗೇ ಹೋಗಿ ರೀಚ್ ಆಗುತ್ತೇವೆ ಎಂದು ಹೇಳಿದ್ದಾರೆ.

More from Filmibeat

English summary
Srirasthu Shubhamasthu Written Update On Augst 2nd Episode,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X