Srirasthu Shubhamasthu: ಕರಗದ ಜನಾರ್ಧನ್ ಮನಸ್ಸು.. ತನ್ನ ಮಗಳನ್ನು ಅಭಿಯಿಂದ ದೂರ ಮಾಡ್ತಾನಾ?

By Poorva

ಶ್ರೀರಸ್ತು ಶುಭಮಸ್ತು ಧಾರಾವಾಹಿ ಉತ್ತಮವಾಗಿ ಮೂಡಿ ಬರುತ್ತಾ ಇದ್ದು ನೋಡುಗರ ಮನ ಸೆಳೆಯುತ್ತಿದೆ.. ಇದೀಗ ಮಾಧವ ಹಾಗೂ ತುಳಸಿ ಅಭಿ ಜೀವನ ಸರಿ ಹೋಗಬೇಕು ಆತ ಬದುಕಿನಲ್ಲಿ ಬಹಳ ಸುಖವಾಗಿ ಇರಬೇಕು ಎಂದು ಜನಾರ್ಧನ್ ಮನೆಗೆ ಹೋಗುತ್ತಾರೆ.. ಆದರೆ ಜನಾರ್ಧನ್ ಮಾತ್ರ ಬಹಳ ಕೋಪಗೊಂಡು, ತುಳಸಿ ಕೈಯಲ್ಲಿ ಇದ್ದ ಹೂ ಹಣ್ಣನ್ನು ಜೋರಾಗಿ ಎಸೆಯುತ್ತಾನೆ.

ಆ ವೇಳೆ ಆಕೆಯ ಕೈಯಿಂದ ತಂದಿರುವ ಹೂ ಹಣ್ಣು ಸಮೇತ ನೆಲಕ್ಕೆ ಬಿದ್ದು ಹೋಗುತ್ತದೆ. ಅದನ್ನು ನೋಡಿ ತುಳಸಿಗೆ ಶಾಕ್ ಆಗುತ್ತದೆ. ಆದರೆ ಮಾಧವ ಮಾತ್ರ ಅಭಿ ಜೀವನ ಸರಿ ಹೋಗಬೇಕು ಎಂದು ಅನೇಕ ಪ್ರಯತ್ನ ಮಾಡುತ್ತಾ ಇರುತ್ತಾನೆ. ಆದರೆ ಜನಾರ್ಧನ್ ಅವರ ಮಾತು ಕೇಳುವ ಪರಿಸ್ಥಿತಿಯಲ್ಲಿ ಇಲ್ಲ. ನನಗೆ ಅವಮಾನ ಆಗಿದೆ. ಆ ಕಾರಣದಿಂದ ನಾನು ಈ ಮದುವೆ ಒಪ್ಪಿಗೆ ನೀಡುವುದು ಇಲ್ಲ. ಅವತ್ತು ಮದುವೆಯ ದಿನ ಅದೆಷ್ಟೋ ಜನ ಬಂದು ನನ್ನನ್ನು ಬಹಳ ಕೀಳಾಗಿ ನೋಡಿದರೂ ಎಂದು ಹೇಳಿದ್ದಾರೆ.

Srirasthu Shubhamasthu written updated on 15th September

ಈ ವೇಳೆ ಮಾಧವ, ಈಗೇನು ನಾನು ಅವರ ಬಳಿ ಬಂದು ಕ್ಷಮೆ ಕೇಳಬೇಕಾ..? ಸರಿ ಕೇಳುತ್ತೇನೆ. ನಾನು ಬಹಿರಂಗವಾಗಿ ಎಲ್ಲರ ಎದುರು ನನ್ನ ತಪ್ಪು ಒಪ್ಪಿಕೊಳ್ಳುತ್ತೇನೆ ಎಂದು ಹೇಳುತ್ತಾನೆ. ಆದರೂ ಜನಾರ್ಧನ್ ಮಾತ್ರ ತನ್ನ ಹಠ ಬಿಡುತ್ತಿಲ್ಲ. ಇನ್ನೂ ಮಗಳನ್ನು ವಿದೇಶಕ್ಕೆ ಕಳುಹಿಸುವ ಯೋಜನೆ ಮಾಡುತ್ತಾ ಇರುತ್ತಾನೆ.

ಮಾಧವನ ಮಾತಿಗೆ ಬೆಲೆ ಕೊಡದ ಜನಾರ್ಧನ

ಜನಾರ್ಧನ್ ಮಗಳು ಕೂಡ ತಂದೆಯ ಬಳಿ ನನಗೆ ಅಭಿಯನ್ನು ಬಿಟ್ಟು ಇರಲು ಸಾಧ್ಯ ಇಲ್ಲ.. ನನಗೆ ಅವನು ಬೇಕು ಅಪ್ಪ ಸ್ವಲ್ಪ ಯೋಚನೆ ಮಾಡಿ ಎಂದು ಹೇಳಿದ್ದಾಳೆ. ಆದರೆ, ಮಗಳ ಕೈ ಹಿಡಿದುಕೊಂಡ ಜನಾರ್ಧನ್ ಇವಳ ಬ್ಯಾಗ್ ಎಲ್ಲಾ ಪ್ಯಾಕ್ ಆಗಿದೆಯಲ್ವ ಎಂದೆಲ್ಲ ಕೇಳುತ್ತಾನೆ. ಇನ್ನೂ ಮಾಧವಗೆ ಜನಾರ್ಧನ್ ಬಳಿ ಹೇಗೆ ಮಾತನಾಡಿ ಕನ್ವಿನ್ಸ್ ಮಾಡಬೇಕು ಎಂದು ತಿಳಿಯದ ಹಾಗೆ ಆಗುತ್ತದೆ ಆದರೂ ಎನು ಮಾತನಾಡದೆ ಸುಮ್ಮನಾಗುತ್ತಾರೆ.. ಅಷ್ಟರಲ್ಲಿ ಅಲ್ಲಿಗೆ ಅಭಿ ಬರುತ್ತಾನೆ. ಅಭಿಯನ್ನು ನೋಡಿ ಮಾಧವ ಶಾಕ್ ಆಗುತ್ತಾನೆ. ಇತ್ತ, ಅಭಿ ಕೂಡ ಜನಾರ್ಧನ್ ಬಳಿ ಬಹಳ ಕೇಳಿಕೊಳ್ಳುತ್ತಾನೆ. ಆದರೆ ಜನಾರ್ಧನ್ ಮಾತ್ರ ಯಾರ ಮಾತು ಕೇಳುವ ಸ್ಥಿತಿಯಲ್ಲಿ ಇರುವುದಿಲ್ಲ. ಮಗಳನ್ನು ಕರೆದುಕೊಂಡು ಅಲ್ಲಿಂದ ಹೊರ ನಡೆಯುತ್ತಾನೆ.

ಸಮರ್ಥ್ - ಸಿರಿ ಮುನಿಸು ಕೊಂಚ ದೂರ

ದತ್ತ ಹಾಗೂ ರವೀಂದ್ರ ಇಬ್ಬರು ಸೇರಿ ಸಮರ್ಥ್ ಹಾಗೂ ಸಿರಿಯನ್ನು ಹೇಗಾದರೂ ಒಂದು ಮಾಡಲೇ ಬೇಕು ಎಂದು ಸಿರಿ ಬೈಕಿನ ಟಯರ್ ಪಂಚರ್ ಮಾಡುತ್ತಾರೆ. ಮರುದಿನ ಸಿರಿ ಕೆಲಸಕ್ಕೆ ಹೊರಟು ನಿಂತಾಗ ಬೈಕ್ ಪಂಚರ್ ಆಗಿರುತ್ತದೆ. ಇನ್ನೂ ಸಮರ್ಥ್ ಆಕೆಯನ್ನು ಕೆಲಸದ ಬಳಿ ಬಿಡುವುದಾಗಿ ಕರೆದುಕೊಂಡು ಹೋಗುತ್ತಾನೆ.

Srirasthu Shubhamasthu written updated on 15th September

ದತ್ತ ಮಾಡಿದ ಪ್ಲ್ಯಾನ್ ವರ್ಕ್ ಆಗುತ್ತದೆ. ದತ್ತ ಮಕ್ಕಳ ಜೊತೆ ಕ್ರಿಕೆಟ್ ಆಡುತ್ತ ಇರುತ್ತಾರೆ. ಆಗ ಅವಿ ಬಂದು ದತ್ತ ಅಂದರೆ ಯಾರು ಅವರ ಬಳಿ ಮಾತನಾಡಬೇಕಿತ್ತು ಎಂದು ಹೇಳುತ್ತಾನೆ. ಅವಿ ತುಳಸಿಯನ್ನು ಹೇಗಾದರೂ ಮಾಡಿ ಹೊರಗೆ ಹಾಕಬೇಕು ಎಂಬ ಆಲೋಚನೆಯಲ್ಲಿದ್ದಾನೆ. ಮುಂದೇನು ಆಗುತ್ತದೆ ಎಂಬುದು ಕಾದು ನೋಡಬೇಕಿದೆ.

More from Filmibeat

English summary
Kannada serial Srirasthu Shubhamasthu written updated on 15th September.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X