Srirasthu Shubhamastu: ದತ್ತನ ಮನಸ್ಸಲ್ಲಿರೋದೇನು? ತಾತ ಅಷ್ಟು ಸುಲಭವಾಗಿ ಒಪ್ಕೊಳ್ತಾರಾ..?

By ಎಸ್ ಸುಮಂತ್

ಸದ್ಯ ದತ್ತನ ಮನೆಯಲ್ಲಿ ದತ್ತ ತೆಗೆದುಕೊಂಡ ತೀರ್ಮಾನವೇ ಫೈನಲ್. ದತ್ತ ಹೇಳಿದ್ದನ್ನು ಯಾರು ಮೀರುವಂತೆಯೇ ಇಲ್ಲ, ಮೀರುವುದು ಇಲ್ಲ. ಇಷ್ಟು ವರ್ಷಗಳ ಕಾಲ ತುಳಸಿ ಕೂಡ ಅದನ್ನೇ ಫಾಲೋ ಮಾಡಿಕೊಂಡು ಬಂದಿದ್ದಾಳೆ. ಸೊಸೆಯಾಗಿ ಬಂದಿರುವ ಸಿರಿ ಕೂಡ ಬೇರೆ ಏನನ್ನೇ ಬದಲಾವಣೆಯಾಗಿ ಬಯಸಿದರು ತಾತನಿಗೆ ನೀಡುವ ಗೌರವವನ್ನು ಕಡಿಮೆ ಮಾಡಿಲ್ಲ.

ದತ್ತನ ಕ್ಯಾರೆಕ್ಟರ್ ಏನು ಎಂಬುದು ತುಳಸಿಗೆ, ಸಮರ್ಥ್‌ಗೆ ಗೊತ್ತು. ಆದರೆ ಹೊಸದಾಗಿ ಬಂದ ಸಿರಿಗೆ ಏನು ಗೊತ್ತಿಲ್ಲ. ಆದರೂ ತುಳಸಿಗೆ ತಕ್ಕ ಸೊಸೆಯೇ ಆಗಿದ್ದಾಳೆ. ದತ್ತನಿಗೆ ತುಂಬಾ ಗೌರವ ಕೊಡುತ್ತಾಳೆ. ದತ್ತನ ಮನಸ್ಸಿಗೆ ನೋವಾಗುವುದಕ್ಕೆ ಬಿಡುವುದಿಲ್ಲ. ಆದರೆ ಈಗ ತನ್ನ ಬುದ್ಧಿವಂತಿಕೆಯಿಂದ ಕಟ್ಟಿ ಹಾಕಲು ಹೊರಟಿದ್ದಾಳೆ.

ದತ್ತನ ಕಣ್ತಪ್ಪಿಸಿ ಮನೆಗೆ ಬಂದ ಸಂಧ್ಯಾ

ದತ್ತನ ಕಣ್ತಪ್ಪಿಸಿ ಮನೆಗೆ ಬಂದ ಸಂಧ್ಯಾ

ಸಂಧ್ಯಾ ಗಂಡನ ಮನೆಯವರು ದತ್ತನ ಆಸ್ತಿ ಮೇಲೆಯೇ ಕಣ್ಣಿಟ್ಟಿದ್ದಾರೆ. ಸಂಧ್ಯಾ ಕೂಡ ತಮ್ನ ಮಾವನ ಮನೆಯವರು ಹೇಳಿದಂತೆಯೇ ಕುಣಿಯುತ್ತಾಳೆ. ಆಸ್ತಿಯೆಲ್ಲವನ್ನು ಲಪಾಟಾಯಿಸಲು ನಿರ್ಧರಿಸಿದ್ದಾಳೆ. ಸಂಧ್ಯಾಳ ಸ್ವಾರ್ಥದ ಬುದ್ಧಿ ದತ್ತನಿಗೆ ಗೊತ್ತಿರುವುದಕ್ಕೆ ಎಲ್ಲಿ ಇಡಬೇಕೋ ಅಲ್ಲಿಯೇ ಇಟ್ಟಿದ್ದಾನೆ. ಆದರೆ ಸಿರಿ ಮೂಲಕ ನಾಟಕ ಶುರು ಮಾಡಿ, ದತ್ತನಿಗೆ ಕಾಣದಂತೆ ದತ್ತನ ಮನೆಯನ್ನೇನೋ ಸೇರಿಯೇ ಬಿಟ್ಟಿದ್ದಾಳೆ.

ಆಸ್ತಿಗಾಗಿ ಬಂದಿರುವ ಸಂಧ್ಯಾ..?

ಆಸ್ತಿಗಾಗಿ ಬಂದಿರುವ ಸಂಧ್ಯಾ..?

ಮಾವನ ಮಾತು ಕೇಳಿ ದತ್ತನ ಆಸ್ತಿ ಮೇಲೆ ಸಂಧ್ಯಾ ಕಣ್ಣು ಬಿದ್ದಿದೆ. ತವರು ಮನೆಯ ಆಸ್ತಿ ಎಂಬುದನ್ನು ನೋಡದೆ ಅದನ್ನು ದೋಚುವುದಕ್ಕೆ ಪ್ಲ್ಯಾನ್ ಮಾಡಿದ್ದಾಳೆ. ಅದಕ್ಕೆಂದೆ ಪ್ಲ್ಯಾನ್ ಮಾಡಿ ಮನೆಗೆ ಬಂದಿರುವ ಸಂಧ್ಯಾ, ತಾತ ಪೂಜೆಗೆ ಕುಳಿತಾಗ ತಾತನ ಕೋಣೆಯನ್ನು ಜಾಲಾಡಿದ್ದಾಳೆ. ಆಸ್ತಿ ಪತ್ರಗಳನ್ನು ಹುಡುಕಿದ್ದಾಳೆ. ಅದರಲ್ಲಿ ಯಾರ ಹೆಸರಿದೆ ಎಂದು ತಡಕಾಡಿದ್ದಾಳೆ.

ಬಾಂಡ್ ನೋಡಿ ಖುಷಿ ಪಟ್ಟ ಸಂಧ್ಯಾ

ಬಾಂಡ್ ನೋಡಿ ಖುಷಿ ಪಟ್ಟ ಸಂಧ್ಯಾ

ದತ್ತ ಮೇಲ್ನೋಟಕ್ಕೆ ಎಲ್ಲರೊಟ್ಟಿಗೂ ರೂಢ್ ಆಗಿ, ಕೋಪದಿಂದ ನಡೆದುಕೊಳ್ಳಬಹುದು. ಆದರೆ ಮಕ್ಕಳಿಗೆ, ಮೊಮ್ಮಕ್ಕಳಿಗೆ, ಮುಗ್ದ ಸೊಸೆ ತುಳಸಿಗೆ ಭವಿಷ್ಯಕ್ಕಾಗಿ ಏನು ಮಾಡಬೇಕೋ ಅದನ್ನೇ ಮಾಡಿದ್ದಾನೆ. ಸಂಧ್ಯಾ ಆಸ್ತಿ ಪತ್ರ ಹುಡುಕಲು ಹೋದಾಗ ತನ್ನ ಹೆಸರಿರುವ ಬಾಂಡ್ ಪೇಪರ್ ಸಿಕ್ಕಿದೆ. ಅದರಲ್ಲಿ ಹತ್ತು ಲಕ್ಷ ಡೆಪಾಸಿಟ್ ಇಟ್ಟಿರುವುದು ಕಂಡು ಬಂದಿದೆ. "ತಾತ ನನ್ನ ಹೆಸರಲ್ಲಿ ಇಷ್ಟೊಂದು ಹಣ ಇಟ್ಟಿದ್ದಾರಾ" ಎಂದು ಸಿಕ್ಕಾಪಟ್ಟೆ ಖುಷಿಪಟ್ಟಿದ್ದಾಳೆ. ಅದೇ ಖುಷಿಯಲ್ಲಿ ತೇಲಾಡುತ್ತಾ ಆಚೆ ಬಂದಾಗ ತಾತನನ್ನು ನೋಡದೆ ಡಿಕ್ಕಿ ಹೊಡೆದು ಸಿಕ್ಕಿ ಬಿದ್ದಿದ್ದಾಳೆ.

ಸಿರಿಯ ಪ್ರಶ್ನೆಗೆ ಸೈಲೆಂಟ್ ಆದ ದತ್ತ

ಸಿರಿಯ ಪ್ರಶ್ನೆಗೆ ಸೈಲೆಂಟ್ ಆದ ದತ್ತ

ಸಂಧ್ಯಾಳನ್ನು ಕಂಡರೆ ಮೊದಲೇ ನಿಗಿನಿಗಿ ಕೆಂಡಕಾರುವ ದತ್ತ ಇನ್ನು ತನ್ನ ಮನೆಯಲ್ಲಿಯೇ ಇದ್ದಾಳೇ ಎಂದರೆ ಸುಮ್ಮನೆ ಬಿಡುತ್ತಾನಾ. ಸಂಧ್ಯಾಳನ್ನು ಮನೆಗೆ ಕರೆತಂದಿದ್ದು ಯಾರು ಎಂಬುದನ್ನು ಕೇಳಿದ ಬಳಿಕ ಅದು ಸಿರಿ ಎಂದು ಗೊತ್ತಾದ ಮೇಲೆ ಇಷ್ಟೆಲ್ಲಾ ಒಳ್ಳೆಯವಳಾಗಬೇಡ ಅದಕ್ಕೆ ಇವಳು ಯೋಗ್ಯಳಲ್ಲ ಎಂದು ಬುದ್ದಿ ಕೂಡ ಹೇಳಿದೆ. ಬಳಿಕ ಸಂಧ್ಯಾ ರೊಚ್ಚಿಗೆದ್ದು ಸಿರಿ ಮತ್ತು ಸಮರ್ಥ್ ಮದುವೆಯಾಗಿದ್ದು ಸರಿನಾ ಎಂದು ಪ್ರಶ್ನಿಸಿದಳು. ಆಗ ದತ್ತ, "ನೋಡಿದ್ಯಾ, ಈಗ ನಿನ್ನನ್ನೇ ದೂಷಿಸುತ್ತಿದ್ದಾಳೆ. ಇದೇ ಇವಳ ಸ್ವಾರ್ಥ ಬುದ್ದಿ" ಎಂದು ಬೈದಿದ್ದಾನೆ. ಆಗ ಸಿರಿ "ನೀವೂ ಸತ್ಯ ಹೇಳಿ ತಾತಾ. ಸಂಧ್ಯಾ ಮೇಲೆ ನಿಮಗೆ ನಿಜವಾಗಲೂ ಪ್ರೀತಿ ಇಲ್ವಾ" ಅಂತ ಕೇಳಿದಾಗ ದತ್ತ ಮೌನವಾಗಿದ್ದಾನೆ.

More from Filmibeat

English summary
Srirasthu Shubhamastu Serial Written Update on January 26th Episode. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X