ಸಂಕೇತ್ ಜೊತೆ ರೊಮ್ಯಾಂಟಿಕ್ ಮೂಡ್‌ನಲ್ಲಿ 'ಶ್ರೀರಸ್ತು ಶುಭಮಸ್ತು' ಸಿರಿ; ಈ ಜೋಡಿಯ ಮದುವೆ ವಿಡಿಯೋ ಇಲ್ಲಿದೆ
'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಪ್ರಿಯರ ಅಚ್ಚುಮೆಚ್ಚು. ಒಬ್ಬೊಬ್ಬರ ನಟನೆಯೂ ಅದ್ಭುತವಾಗಿದೆ. ತುಳಸಿ, ಮಾಧವ, ದತ್ತ ತಾತ, ಅವಿ, ಅಭಿ, ಸಮರ್ಥ್, ಸಿರಿ ಹೀಗೆ ಇವರೆಲ್ಲರದ್ದು ಪಾಸಿಟಿವ್ ಪಾತ್ರ. ಹೀಗಾಗಿ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಈ ಎಲ್ಲಾ ಒಳ್ಳೆಯವರಿಗೆ ವಿಲನ್ ಕೂಡ ಇದ್ದಾರೆ. ಆ ಖಳನಾಯಕರಿಂದಾನೇ ಇವರೆಲ್ಲರಿಗೂ ತೊಂದರೆಯಾಗುತ್ತಿರುವುದು.
ಈ ಧಾರಾವಾಹಿಯಲ್ಲಿ ಸಿರಿಯನ್ನು ನೋಡಿದವರಿಗೆ ಖಂಡಿತ ಖುಷಿ ಇದೆ. ಇದ್ದರೆ ಇಂಥ ಸೊಸೆ ಇರಬೇಕು ಎನ್ನುವಷ್ಟರಮಟ್ಟಿಗೆ ಒಳ್ಳೆಯವಳು ಸಿರಿ. ಅತ್ತೆಯನ್ನು ಅಮ್ಮನ ಸ್ಥಾನದಲ್ಲಿಟ್ಟು, ಅತ್ತೆಗೆ ಏನೆಲ್ಲಾ ಬೇಕೋ ಅದೆಲ್ಲವನ್ನು ಮಾಡಿಕೊಡುತ್ತಿದ್ದಳು. ಅತ್ತೆಗೂ ಮನೆ ಎಂಬ ಪ್ರಪಂಚವಿದೆ ಎಂಬುದನ್ನು ತೋರಿಸಿಕೊಟ್ಟಳು. ಹೀಗಾಗಿ ಅತ್ತೆಯಂದಿರಿಗೆ ಈ ಸೊಸೆ ಎಂದರೆ ಬಲು ಪ್ರೀತಿ. ಇದೀಗ ಸಿರಿ ರಿಯಲ್ ಲೈಫ್‌ನಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

ಅದ್ದೂರಿಯಾಗಿ ಮದುವೆಯಾದ ಸಿರಿ
'ಶ್ರೀರಸ್ತು ಶುಭಮಸ್ತು' ಧಾರಾವಾಹಿಯ ಸಿರಿ ಅಲಿಯಾಸ್ ಚಂದನಾ ಇತ್ತಿಚೆಗಷ್ಟೇ ಮದುವೆಯಾಗಿದ್ದಾರೆ. ತಮ್ಮ ಮದುವೆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಳನಿವಾಸ್ತಿ ಎಂಬಲ್ಲಿ ಮದುವೆಯಾಗಿದ್ದಾರೆ. ಇತ್ತೀಚೆಗೆ ಈ ರೀತಿಯ ಮದುವೆಗಳು ಟ್ರೆಂಡ್ ಆಗಿವೆ. ಕಲ್ಯಾಣ ಮಂಟಪದಲ್ಲೋ, ಹಾಲ್‌ನಲ್ಲೋ ಮದುವೆಯಾಗುವುದಕ್ಕಿಂತ ರೆಸಾರ್ಟ್ ರೀತಿ ಇರುವ ಹೆರಿಟೇಜ್‌ಗಳಲ್ಲಿ ಮದುವೆಯಾಗುತ್ತಿದ್ದಾರೆ. ಎಲ್ಲವೂ ಅಲ್ಲೇ ಸಿಗಲಿದೆ. ಹೀಗಾಗಿ ಮದುವೆ ತಯಾರಿಯ ಕೆಲಸದ ಟೆನ್ಶನ್ ಇರುವುದಿಲ್ಲ.
ಸಂಧ್ಯಾಳಿಗೆ ಎಚ್ಚರಿಕೆ ಕೊಟ್ಟ ಸಿರಿ
ಧಾರಾವಾಹಿಯಲ್ಲಿ ಸಂಧ್ಯಾ ಮತ್ತು ಸಿರಿ ಅತ್ತಿಗೆ ನಾದಿನಿ ಸಂಬಂಧಿಕರು. ಚಂದನಾ ಈ ವಿಡಿಯೋ ಹಂಚಿಕೊಳ್ಳುತ್ತಿರುವಂತೆ, ದೀಪಾ ಕಟ್ಟೆ ಕಮೆಂಟ್ ಹಾಕಿದ್ದಾರೆ. ನಾನು ಮದುವೆ ಮಿಸ್ ಮಾಡಿಕೊಂಡೆ. ಎಷ್ಟೊಳ್ಳೆ ಮೆಮೋರಿ ಇರುವಂಥದ್ದು. ವೆರಿ ವೆರಿ ಸಾರಿ ಎಂದು ಕಮೆಂಟ್ ಹಾಕಿದ್ದಾರೆ. ಇದಕ್ಕೆ ಚಂದನಾ ರಿಪ್ಲೇ ಮಾಡಿದ್ದು, ಬಾ ನಿಂಗೆ ಇದೆ ಎಂದೇ ಅಣಕಿಸಿದ್ದಾರೆ. ಅತ್ತಿಗೆ-ನಾದಿನಿಯ ಸಂಭಾಷಣೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಚಂದನಾ ಮದುವೆ ಹೇಗಿತ್ತು..?
ಇನ್ನು ಚಂದನಾ ತಮ್ಮ ಮದುವೆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆರಂಭದಿಂದ ಮದುವೆ ಆಗುವ ತನಕ ಈ ವಿಡಿಯೋ ಇದೆ. ಅರಿಶಿನ ಶಾಸ್ತ್ರ, ಮದುವೆ ಎಲ್ಲಾ ಶಾಸ್ತ್ರಗಳು ಕ್ಯಾಪ್ಚರ್ ಆಗಿವೆ. ಅದರಲ್ಲೂ ಪ್ರತಿ ಕ್ಷಣವನ್ನು ಚಂದನಾ ಎಂಜಾಯ್ ಮಾಡಿದ್ದಾರೆ. ಮದುವೆಯಲ್ಲೆಲ್ಲಾ ಕುಣಿದು ಕುಪ್ಪಳಿಸಿದ್ದೆ ಆಗಿದೆ. ಈ ಅದ್ಭುತ ವಿಡಿಯೋಗಳಿಗೆ ಚಂದನಾ ಅಭಿಮಾನಿಗಳು ಕಮೆಂಟ್ಸ್ ಹಾಕುವ ಮೂಲಕ ವಿಶಸ್ ತಿಳಿಸಿದ್ದಾರೆ.
ಮದುವೆಯಲ್ಲಿ ಸಿಕ್ಕಾಪಟ್ಟೆ ಫನ್
ಚಂದನಾ ಹಾಗೂ ಸಂಕೇತ್ ಗುರು ಹಿರಿಯರು, ಸ್ನೇಹಿತರು, ಬಂಧು ಬಳಗದವರ ಸಮ್ಮುಖದಲ್ಲಿ ಮದುವೆ ಆಗಿದ್ದಾರೆ. ಮದುವೆ ಎಂದರೇನೆ ಸಂಭ್ರಮ. ಆ ಸಂಭ್ರಮವನ್ನು ಚಂದನಾ ಮದುವೆಯಲ್ಲಿ ಕಾಣಿಸಿದೆ. ಪ್ರತಿಯೊಂದು ಮೂಮೆಂಟ್ ಅನ್ನು ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ. ವಾದ್ಯಗಳ ಸೌಂಡಿಗೆ ಎಲ್ಲರೂ ಹೆಜ್ಜೆ ಹಾಕಿದ್ದಾರೆ. ಅದರಲ್ಲೂ ಅರಿಶಿನ ಶಾಸ್ತ್ರ ಮಾತ್ರ ಮಜವಾಗಿದೆ. ಚಿಕ್ಕ ಚಿಕ್ಕ ಮಗಳು ಕೂಡ ಅರಿಶಿನ ಹಚ್ಚಿದ್ದಾರೆ. ಅರಿಶಿನ ಹಚ್ಚಿದವರಿಗೆ ನೀರಿನ ಪಾಕೆಟ್ ಒಡೆಯಲಾಗಿದೆ. ನಗು, ಹಾಡು, ಹರಟೆ, ಡ್ಯಾನ್ಸ್ ಇದಿಷ್ಟು ಚಂದನಾ ಮದುವೆಯಲ್ಲಿ ಜೋರಾಗಿಯೇ ಕಂಡಿದೆ. ಜೋಡಿಯ ರೊಮ್ಯಾಂಟಿಕ್ ಮೊಮೆಂಟ್ಸ್ ಕೂಡ ಇದೆ.


Click it and Unblock the Notifications











