Srirastu Shubamastu: ಮನೆ ನೆಮ್ಮದಿ ಹಾಳು ಮಾಡ್ತೀನಿ ಎಂದಿದ್ದ ದೀಪಿಕಾಳೇ ಮನೆ ಮರ್ಯಾದೆ ಉಳಿಸಿದ್ದಾಳೆ!

By ಎಸ್ ಸುಮಂತ್

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸೊಸೆಯಾಗಿ ಬಂದ ತುಳಸಿಗೆ ಈಗೀಗ ಮಾನ್ಯತೆ ದೊರೆಯುತ್ತಿದೆ. ದೊಡ್ಡ ಮಗ ಅವಿನಾಶ್ ಅಮ್ಮನೆಂದು ಒಪ್ಪಿಕೊಂಡರು, ಅಭಿಗೆ ಒಪ್ಪುವುದಕ್ಕೆ ಸಾಧ್ಯವೇ ಇಲ್ಲ. ದೀಪಿಕಾಳ ಮಾತು ಕೇಳಿ ಅಭಿ ಕೂಡ ಹಾಳಾಗುತ್ತಿದ್ದಾನೆ. ದೀಪಿಕಾ ಹಾಗೂ ಚಿಕ್ಕಮ್ಮ ಮಾಡುವ ಪ್ಲ್ಯಾನ್ ಅಭಿಗೆ ಅರ್ಥವೇ ಆಗುತ್ತಿಲ್ಲ.

ತುಳಸಿಗೆ ಮದುವೆ ಎಂಬುದು ಅನಿವಾರ್ಯವಾಗಿತ್ತು. ಮದುವೆಯಾಗಿ ಬಂದ ಮೇಲೆ ಮನೆಯವರ ನೆಮ್ಮದಿಗಾಗಿ ಸಾಕಷ್ಟು ಬಾರಿ ಮನೆ ಬಿಟ್ಟು ಹೋಗಿದ್ದಾಳೆ. ಆದ್ರೆ ಮಾಧವನ ಪ್ರೀತಿಗಾಗಿ ಮತ್ತೆ ವಾಪಾಸ್ ಬಂದಿದ್ದಳು. ಇದೀಗ ಮತ್ತೆ ಮಾಧವನ ಸುಖ ಸಂತೋಷ, ತಂದೆ ಮಕ್ಕಳ ಬಾಂಧವ್ಯ ಸರಿ ಮಾಡಲು ಮನೆಯನ್ನೇ ತೊರೆಯಲು ನಿರ್ಧರಿಸಿದ್ದಾಳೆ.

Srirastu Shubamastu kannada serial Written Update on june 15th episode

ಸುಧಾರಾಣಿ ಸರ್ಪೈಸ್ ಡ್ಯಾನ್ಸ್

ಮಾಧವನ ಮನೆಯಲ್ಲಿ ಸಂಭ್ರಮ ಕಳೆಗಟ್ಟಿದೆ. ಸಂಸ್ಥೆ ಶುರುವಾಗಿ 25 ವರ್ಷ ಕಳೆದಿದೆ. ಈ ಖುಷಿಯಲ್ಲಿ ಮಾಧವನ ಮನೆಯವರೆಲ್ಲ ಎಲ್ಲರೂ ಡ್ಯಾನ್ಸ್ ಮಾಡುತ್ತಿದ್ದಾರೆ. ಪೂರ್ಣಿ, ದೀಪಿಕಾ, ವಿಧಿ ಮಾಡಿದ ಡ್ಯಾನ್ಸ್ ಅಲ್ಲ ಸ್ಪೆಷಲ್. ತುಳಸಿ ಡ್ಯಾನ್ಸ್ ಮಾಡಿದ್ದು ಎಲ್ಲರಿಗೂ ಸರ್ಪೈಸ್ ಆಗಿದೆ. ಭರತನಾಟ್ಯ ಮಾಡುವ ಮೂಲಕ ಮನೆಯವರಿಗೆ ಖುಷಿ ನೀಡಿದ್ದಾಳೆ. ಮನೆಯೇ ಪ್ರಪಂಚ, ಮಗನೇ ಬದುಕು, ಮಾವನ ಸೇವೆಯೇ ಜೀವನ ಉದ್ದೇಶ ಎಂಬಂತೆ ಬದುಕಿದ ತುಳಸಿ ಈಗ ಬೇರೆಯದ್ದೇ ತುಳಸಿಯಾಗಿ‌ ಕಾಣುತ್ತಿದ್ದಾಳೆ.

ಮನೆಯವರಿಗೆಲ್ಲಾ ಶಾಕ್

ಮಕ್ಕಳಿಗಾಗಿ ತಾಯಿ ಏನು ಬೇಕಾದರೂ ಮಾಡುತ್ತಾಳೆ. ತಾಯಿಯ ಗುಣವೇ ಅಂತದ್ದು. ಅದಕ್ಕಾಗಿಯೇ ತಾಯಿಯ ಋಣ ತೀರಿಸುವುದಕ್ಕೆ ಸಾಧ್ಯವಿಲ್ಲ ಅನ್ನೋದು. ತಾಯಿಯಾದವಳು ಮಕ್ಕಳ ಮರ್ಯಾದೆ, ಸುಖ ಸಂತೋಷಕ್ಕೂ ತ್ಯಾಗ ಮಾಡುತ್ತಾಳೆ. ಅವಿಗೆ ತನ್ನ ತಾಯಿ ಎಂದರೆ ಬಲು ಪ್ರೀತಿ. ಒಳ್ಳೆತನದಿಂದ ತುಳಸಿ ಅವಿ ಮನಸ್ಸನ್ನು ಗೆದ್ದಾಯ್ತು. ಆದರೆ ಈಗ ಅಭಿ ಮನಸ್ಸನ್ನು ಗೆಲ್ಲಬೇಕಾದ ಅನಿವಾರ್ಯತೆ ಇದೆ. ಹೀಗಾಗಿ‌ ಕಾರು ಓಡಿಸುವುದನ್ನು ಕಲಿತಿದ್ದಾಳೆ. ಈಗ ಡ್ಯಾನ್ಸ್ ಮಾಡುವುದನ್ನು ಕಲಿತಿದ್ದಾಳೆ.

ಅಭಿ ಮನಸ್ಸು ಬದಲಾಗುತ್ತಾ

ಅಭಿಗೆ ತನ್ನ ತಾಯಿ ಎಂದರೆ ಪ್ರಾಣ. ಅಮ್ಮ ಎಂದರೆ ಪರ್ಫೆಕ್ಟ್. ಆಫೀಸ್ ಬಿಸಿನೆಸ್ ಅನ್ನು ನೋಡಿಕೊಳ್ಳುತ್ತಾ ಇದ್ದರು, ಕಾರು ಡ್ರೈವ್ ಮಾಡುತ್ತಾ ಇದ್ದರು, ಡ್ಯಾನ್ಸ್‌ನಲ್ಲಂತೂ ಸೂಪರ್. ಅಮ್ಮ ಎಂದರೆ ಆಲ್ ರೌಂಡರ್ ಆಗಿದ್ದರು. ಆ ಅಮ್ಮನ ಸ್ಥಾನ ಯಾರೂ ತುಂಬಲು ಸಾಧ್ಯವಿಲ್ಲ ಎಂದೇ ಅಭಿ ಭಾವಿಸಿದ್ದಾನೆ. ಆದರೆ ಈಗ ತುಳಸಿ ಕೂಡ ಎಲ್ಲಾ ವಿದ್ಯೆಯನ್ನು ಅಭಿಗಾಗಿ ಕಲಿತಿದ್ದಾಳೆ. ಈಗಲಾದರೂ ಅಭಿ ಮನಸ್ಸು ಬದಲಾಗುತ್ತಾ ಎಂದು ನೋಡಬೇಕಿದೆ. ಮನೆಯ ಭಾಗ ಕೇಳಿರುವ ಅಭಿ ಈಗ ಬದಲಾಗುವ ನಿರೀಕ್ಚೆ ಇದೆ.

Srirastu Shubamastu kannada serial Written Update on june 15th episode

ವೀಕ್ಷಕರೆಲ್ಲರಿಂದ ಮೆಚ್ಚುಗೆ ಸುರಿಮಳೆ

ಮಾಧವನ ಕುಟುಂಬ ಹಾಗೂ ದೀಪಿಕಾಳ ತಂದೆಗೂ ದ್ವೇಷ ಜಾಸ್ತಿ. ಬಿಸಿನೆಸ್ ವಿಚಾರದಲ್ಲಿಯೇ ದ್ವೇಷ ಇದೆ. ಮಾಧವನ ವಂಶವನ್ನು ನಿರ್ವಂಶ ಮಾಡ್ತೀನಿ, ಮನೆಯ ನೆಮ್ಮದಿಯನ್ನು ಹಾಳು ಮಾಡ್ತೀನಿ ಅಂತ ದೀಪಿಕಾ, ಮಾಧವನ ಮನೆಗೆ ಸೊಸೆಯಾಗಿ ಬಂದಿದ್ದಾಳೆ. ಆದರೆ ದೀಪಿಕಾ ಪಾತ್ರ ಮಾಡಿರುವ ದರ್ಶಿನಿ, ಸಖತ್ ಡ್ಯಾನ್ಸರ್. ಈಗ ಮನೆಯ ಕಾರ್ಯಕ್ರಮಕ್ಕೂ ದರ್ಶಿನಿಯೇ ಕೊರಿಯೋಗ್ರಫಿ ಮಾಡಿದ್ದಾರೆ. ಅಭಿಮಾನಿಗಳು ಅದಾಗಲೇ ಗೆಸ್ ಮಾಡಿದ್ದರು. ದೀಪಿಕಾಳೇ ಡ್ಯಾನ್ಸ್ ಪ್ರಾಕ್ಟೀಸ್ ಮಾಡಿಸಿರುವುದು ಎಂಬುದರ ಬಗ್ಗೆ ಮೆಸೇಜ್ ಮಾಡಿದ್ದರು. ಆದರೆ ಕಥೆಯಲ್ಲಿ ತುಳಸಿಗೆ ಪೂರ್ಣಿ ಡ್ಯಾನ್ಸ್ ಹೇಳಿಕೊಟ್ಟಂತೆ ತೋರಿಸಲಾಗಿದೆ.

More from Filmibeat

English summary
Srirastu Shubamastu kannada serial today episode. Darshini teaches dance to sudharani for serial;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X