ಚಿತ್ರರಂಗ ಬಿಟ್ಟು ಹೊಸ ಕ್ಷೇತ್ರಕ್ಕೆ ನಟಿ ಸುಧಾರಾಣಿ ಮಗಳು ಎಂಟ್ರಿ

By ಎಸ್ ಸುಮಂತ್

ಸ್ಟಾರ್ ಕಿಡ್‌ಗಳ ಜಮಾನ ಶುರುವಾಗಿದೆ. 80-90ರ ದಶಕದಲ್ಲಿ ಕನ್ನಡ ಇಂಡಸ್ಟ್ರಿಯನ್ನು ಆಳಿದ್ದ ನಟಿಮಣಿಯರ ಮಕ್ಕಳು ಈಗ ಬೆಳೆದಿದ್ದಾರೆ. ಸುಧಾರಾಣಿ, ಶೃತಿ, ಮಾಲಾಶ್ರೀ ಆಗ ನಂಬರ್ ಒನ್ ನಟಿಯರಾಗಿದ್ದರು. ನಟರಿಗಿದ್ದಷ್ಟೇ ಅಭಿಮಾನಿಗಳು ಈ ನಟಿಯರಿಗೂ ಇದ್ದರು.

ಕನಸಿನ ರಾಣಿ ಮಾಲಾಶ್ರೀ ಸಿನಿಮಾಗಳಾಗಲೀ, ಸುಧಾರಾಣಿ, ಶೃತಿ ಅವರ ಸಿನಿಮಾಗಳಾಗಲೀ ಸೋಲುತ್ತಿರಲಿಲ್ಲ. ಕಥೆಗಳು ಕೂಡ ಅಷ್ಟೇ ಅದ್ಭುತವಾಗಿದ್ದವು. ಈಗ ಅವರೆಲ್ಲ ಹಿರಿಯ ನಟಿಯರಾಗಿದ್ದಾರೆ. ಹಾಗಂತ ನಟನೆ ಬಿಟ್ಟಿಲ್ಲ.

Srirastu shubamastu serial Actress Sudharani s daughter completed LLB

ಸುಧಾರಾಣಿ ಅವರು ಸಿನಿಮಾ, ಸೀರಿಯಲ್ ಅಂತ ಬ್ಯುಸಿ ಇದ್ರೆ, ಶೃತಿ ಅವರು ಸಿನಿಮಾ, ರಿಯಾಲಿಟಿ ಶೋಗಳಲ್ಲಿ ಬ್ಯುಸಿ ಇದ್ದಾರೆ. ಇನ್ನು ಮಾಲಾಶ್ರೀ ಅವರು ತಾವೂ ಸಿನಿಮಾದಲ್ಲಿ ನಟಿಸುತ್ತಾ, ಮಗಳ ಸಿನಿಮಾ ಭವಿಷ್ಯಕ್ಕಾಗಿ ಹೆಚ್ಚಿನ ಒತ್ತು ಕೊಟ್ಟಿದ್ದಾರೆ. ಈಗಾಗಲೇ ಆರಾಧನಾ ರಾಮ್, ಅಮೃತಾ ಪ್ರೇಮ್ ಚಿತ್ರರಂಗದಲ್ಲಿ ನಟಿಯರಾಗಿ ಎಂಟ್ರಿ ಕೊಟ್ಟಿದ್ದಾರೆ. ಸುಧಾರಾಣಿ ಹಾಗೂ ಶೃತಿ ಅವರ ಮಕ್ಕಳು ಇಂಡಸ್ಟ್ರಿಗೆ ಬರ್ತಾರೆ ಎಂದು ಅಭಿಮಾನಿಗಳೆಲ್ಲಾ ಕಾತರದಿಂದ ಕಾಯುತ್ತಿದ್ದಾರೆ. ಆದರೆ ಸುಧಾರಾಣಿ ಮಗಳು ಆಕ್ಟರ್ ಆಗ್ಲಿಲ್ಲ, ಲಾಯರ್ ಆಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್

ಸುಧಾರಾಣಿ ಸಿನಿಮಾ, ಸೀರಿಯಲ್‌ನಲ್ಲಿ ಎಷ್ಟು ಬ್ಯುಸಿ ಇರ್ತಾರೋ ಫ್ಯಾಮಿಲಿಗೂ ತುಂಬಾನೇ ಸಮಯ ಕೊಡುತ್ತಾರೆ. ಗಂಡ, ಮಗಳೊಟ್ಟಿಗೆ ಸಮಯ ಕಳೆಯುವುದನ್ನು ಮಿಸ್ ಮಾಡುವುದಿಲ್ಲ. ಅದರಲ್ಲೂ ಮಗಳೊಟ್ಟಿಗೆ ಜಾಲಿ ಮಾಡುವುದನ್ನು ಮರೆಯಲ್ಲ. ಹಬ್ಬ ಹರಿದಿನಗಳಲ್ಲಿ ಇಬ್ಬರು ಜೊತೆಯಾಗಿ ಮನೆ ಅಲಂಕಾರ ಮಾಡಿ, ಹಬ್ಬವನ್ನು ಎಂಜಾಯ್ ಮಾಡುತ್ತಾರೆ.

ನಿಧಿಗಾಗಿ ರೆಡಿಯಾಗಿತ್ತು ವೇದಿಕೆ

ಅಮ್ಮನಂತೆ ಮಗಳು ಕೂಡ ಕನ್ನಡ ಇಂಡಸ್ಟ್ರಿಗೆ ಬರಬಹುದು ಎಂಬ ನಿರೀಕ್ಷೆ ಇತ್ತು. ಜೂನಿಯರ್ ಸುಧಾರಾಣಿಯನ್ನು ಹೊತ್ತು ಮೆರೆಸುವುದಕ್ಕೆ ಅಭಿಮಾನಿಗಳು ಕೂಡ ಕಾಯ್ತಾ ಇದ್ರು. ಸುಧಾರಾಣಿ ಮಗಳು ಇಂಡಸ್ಟ್ರಿಗೆ ಬರ್ತಾರೆಂದರೆ ಆಕ್ಷನ್ ಕಟ್ ಹೇಳೋಕೂ ಸಾಕಷ್ಟು ಜನ ರೆಡಿಯಿದ್ದರು. ಆದರೆ ಈಗ ಉಲ್ಟಾ ಆಗಿದೆ. ನಟನಾ ಕ್ಷೇತ್ರ ಬಿಟ್ಟು ವಕೀಲಿ ವೃತ್ತಿಯೆಡೆಗೆ ನಿಧಿ ಪಯಣ ಬೆಳೆಸಿದ್ದಾರೆ.

ಲಾಯರ್ ಆಗಿ ನಿಧಿ ಪ್ರಮೋಷನ್

ನಿಧಿ ಈಗ ಲಾಯರ್ ಆಗಿದ್ದಾರೆ. ಕನಸು ನನಸಾದ ದಿನ ಇದಾಗಿದೆ. ಮಗಳ ಯಶಸ್ಸನ್ನ ಸುಧಾರಾಣಿ ಸಂಭ್ರಮಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸದಸ್ಯತ್ವ ಫೋಟೋ ಹಂಚಿಕೊಂಡು ಅಭಿನಂದನೆ ತಿಳಿಸಿದ್ದಾರೆ. ಸುಬ್ಬಿಕುಟ್ಟಿ ಯಶಸ್ಸನ್ನ ಸಂಭ್ರಮಿಸಿದ್ದಾರೆ. ಇನ್ನಷ್ಟು ಎತ್ತರಕ್ಕೆ ಬೆಳೆಯಲೆಂದು ಮಗಳಿಗೆ ಹಾರೂಸಿದ್ದಾರೆ. ಪುಟ್ಟ ಮಗು ನೋಡ ನೋಡುತ್ತಲೇ ಈಗ ಲಾಯರ್ ಅಂದ್ರೆ ತಾಯಂದಿರಿಗೆ ಇದಕ್ಕಿಂತ ಸಂಭ್ರಮ ಬೇಕಾ ಹೇಳಿ. ಸುಧಾರಾಣಿ ಕೂಡ ಅದೇ ಹೆಮ್ಮೆ ಪಡುತ್ತಿದ್ದಾರೆ.

ಫ್ಯಾನ್ಸ್ ಸಂಭ್ರಮದ ಸೆಲೆಬ್ರೇಷನ್

ಸುಧಾರಾಣಿ ಫ್ಯಾನ್ಸ್ ಬಳಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡದಾಗಿದೆ. ಅದು ಈಗಾಗಲೇ ಸೀರಿಯಲ್ ವಿಚಾರದಲ್ಲಿಯೇ ಗೊತ್ತಾಗಿದೆ. 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ತಮ್ಮ ನಟಿಯನ್ನ ನೆಗೆಟಿವ್ ಆಗಿ ಬಿಂಬಿಸುತ್ತಿದ್ದಾಗ ಜನರಿಗೆ ತಿಳಿಸುವ ಅಭಿಯಾನವನ್ನೇ ಮಾಡಿದರು. ಅಭಿಮಾನಿಗಳ ಅಭಿಯಾನದಿಂದ ಸೀರಿಯಲ್ ನಲ್ಲಿ ಅದೇ ಕಥೆ ಸ್ಟ್ರಾಂಗ್ ಟರ್ನ್ ತೆಗೆದುಕೊಳ್ತು. ಇದೀಗ ಸುಧಾರಾಣಿ ಮಗಳ ಸಕ್ಸಸ್ ಅನ್ನು ಸಂಭ್ರಮಿಸುತ್ತಿದ್ದಾರೆ. ಫೋಟೋ ಹಾಕಿ ಅಭಿನಂದನೆ ತಿಳಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಲ್ಲಿ ಸದಸ್ಯತ್ವ ಪಡೆದಿರುವುದಕ್ಕೆ ನಿಧಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

More from Filmibeat

Read more about: tv sumanth sudharani
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X