Srirastu shubhamastu: ಡ್ರೈವಿಂಗ್ ಕ್ಲಾಸ್‌ಗೆ ತುಳಸಿ; ಅಮ್ಮನ ಹಠ ಕಂಡು ದಂಗಾದ ಮಗ

By Poorva

ಪೂರ್ಣಿಮಾ ಎಂದಿಗೂ ತಾಯಿ ಆಗುವುದೇ ಇಲ್ಲ ಎನ್ನುವ ವಿಷಯ ಗೊತ್ತಾಗಿ ಅವಿನಾಶ್ ಹಾಗೂ ತುಳಸಿ ಬಹಳ ಸಂಕಟ ಪಡುತ್ತಾರೆ. ಪೂರ್ಣಿಮಾಗೆ ತಾನು ತಾಯಿ ಆಗಬೇಕು ಎನ್ನುವ ಆಸೆ ಇರುತ್ತದೆ. ವೈದ್ಯರು ಈ ವಿಷಯ ಹೇಳಿದಾಗ ಅವಿನಾಶ್ ಹೇಗೆ ತಡೆದುಕೊಂಡು ಇದ್ದಾನೋ ಗೊತ್ತಿಲ್ಲ. ಆದರೆ ತುಳಸಿ ಬಳಿ ಈ ವಿಚಾರ ಹೇಳಿದಾಗ ಆತನಿಗೆ ದುಃಖ ಉಮ್ಮಳಿಸಿ ಬರುತ್ತದೆ.

ಈ ವಿಚಾರವನ್ನು ಯಾರ ಬಳಿಯೂ ಹೇಳಬಾರದು ಎಂದು ಅವಿನಾಶ್, ತುಳಸಿ ಬಳಿ ಹೇಳಿರುತ್ತಾನೆ. ಇನ್ನೂ ಪೂರ್ಣಿಮಾ ಎದುರು ಸಿಕ್ಕಾಗಲೆಲ್ಲ ಆಕೆ ಬಗ್ಗೆ ಏನು ಎತ್ತ ಎಂಬುವುದನ್ನು ಕೇಳದೆ ಮಗು ಬಗ್ಗೆ ಮಾತನಾಡಲು ಪೂರ್ಣಿಮಾ ಹೋಗುತ್ತಿರಲಿಲ್ಲ.

Srirastu shubhamastu kannada serial 06th April episode written update

ಪೂರ್ಣಿಮಾ ಶ್ರೀಮಂತ ಕುಟುಂಬಕ್ಕೇ ಸೇರಿದವರು. ಆದರೆ ಆಕೆಯನ್ನು ಅನಾಥ ಆಶ್ರಮದಲ್ಲಿ ಬೆಳೆಯಲು ಆಕೆಯ ತಂದೆ ತಾಯಿ ಕೊಡುತ್ತಾರೆ. ಎಂದು ಕಾರಣ ಅರ್ಧಂಬರ್ಧ ಹೇಳಿ ಸುಮ್ಮನಾಗುತ್ತಾನೆ. ಅಭಿ ತನ್ನ ತಾಯಿ ಹೇಗೆ ಇರಬೇಕು ಎಂದುಕೊಂಡಿದ್ದಾನೋ ಆ ರೀತಿ ಆಗಲು ತುಳಸಿ ಹೊರಟ್ಟಿದ್ದಾಳೆ. ಭರತನಾಟ್ಯ ಅಭ್ಯಾಸ, ಕಾರ್‌ ಡ್ರೈವಿಂಗ್ ಕ್ಲಾಸ್, ಸ್ಪೋಕನ್ ಇಂಗ್ಲೀಷ್ ಕ್ಲಾಸ್ ಹೋಗಲು ಆರಂಭಿಸಿದ್ದಾಳೆ.

ನಾನೇನಾದರೂ ಕಲಿತು ಅದನ್ನು ಸಾಧಿಸಲೆಬೇಕು ಎನ್ನುವ ಛಲ ಆಕೆಗೆ. ಕಾರು ಡ್ರೈವಿಂಗ್ ಸ್ಕೂಲ್ ಬಳಿ ಬಂದ ತುಳಸಿಗೆ ಕಾರು ಕಲಿಸುವವರು ಯಾರು ಇಲ್ಲ. ಯಾರಾದರೂ ಕಲಿಸಲು ಬಂದೆ ಬರುತ್ತಾರೆ ಎಂದು ಕಾದು ಕೂತಿರುತ್ತಾಳೆ. ಕಾರು ಕಲಿಸಲು ಸಮರ್ಥ್ ಬರುತ್ತಾನೆ.

ಡ್ರೈವಿಂಗ್ ಕ್ಲಾಸ್ ಗೆ ಬಂದ ತುಳಸಿ

ಎಲ್ಲಿ ಕಾರು ಕಲಿಯಲು ಒಬ್ಬರು ಬಂದಿದ್ದಾರೆ ಎಂದು ಹೇಳಿದಿರಿ, ಯಾರು ಎಂದಾಗ ತುಳಸಿ ಮೆತ್ತಗೆ ಕಾರಿನಿಂದ ಇಳಿದು ಬರುತ್ತಾರೆ. ತುಳಸಿಯನ್ನು ನೋಡಿ ಸಮರ್ಥ್‌ಗೆ ಕೊಂಚ ಶಾಕ್ ಆಗುತ್ತದೆ. ಕೊನೆಗೆ ತನ್ನ ತಾಯಿಗೆ ಡ್ರೈವಿಂಗ್ ಪಾಠ ಹೇಳಿಕೊಡಲು ಶುರು ಮಾಡುತ್ತಾನೆ. ಇತ್ತ ಕಡೆ ಜಗ್ಗನ ಅತಿರೇಕದ ವರ್ತನೆಯಿಂದ ಸಿರಿಗೆ ಬಹಳ ಕೋಪ ಬರುತ್ತದೆ. ಮನೆಗೆ ಬಂದ ಟ್ಯುಷನ್ ಮಕ್ಕಳ ಬಳಿ ನಾಜೂಕಾಗಿ ಮಾತನಾಡಿ ನಾಳೆ ನೀನು ಬಾದಾಮ್ ಗೋಡಂಬಿ ತೆಗೆದುಕೊಂಡು ಬಾ ... ಫ್ರೆಶ್ ತರಕಾರಿ ತೆಗೆದುಕೊಂಡು ಬಾ ಎಂದಾಗ ಮಕ್ಕಳು ಹೂ ಅಂದು ಹೊರಡಲು ಅನುವಾಗುತ್ತಾರೆ.

Srirastu shubhamastu kannada serial 06th April episode written update

ಜುಗ್ಗನಿಗೆ ಖಡಕ್ ಸಂದೇಶ ರವಾನಿಸಿದ ಸಿರಿ

ಆಗ ಜೋರಾಗಿಯೇ ಬಯ್ಯುತ್ತಾಳೆ ಸಿರಿ. ಯಾರು ಏನು ತರುವುದು ಬೇಡ , ನನ್ನ ಮಕ್ಕಳ ಜೊತೆ ಆ ರೀತಿ ನಡೆದುಕೊಂಡರೆ ಪರಿಣಾಮ ಸರಿ ಇರುವುದು ಇಲ್ಲ ಎಂದು ಎಚ್ಚರಿಕೆ ಕೂಡ ಕೊಡುತ್ತಾಳೆ. ಆದರೆ ಜುಗ್ಗ ಕೆಟ್ಟ ಬುದ್ದಿ ಬಿಡವುದು ಯಾವಾಗ? ಆತನಿಗೆ ಎಷ್ಟೇ ಮರ್ಯಾದೆ ತೆಗೆದರು ಆತ ಮಾಡುವುದು ಅದೇ ಕೆಲಸ.

ಜುಗ್ಗನಿಗೆ ದತ್ತ ತಾತನ ಪಾಠ

ದತ್ತನಿಗೆ ಜುಗ್ಗ ಮಾಡುವ ಕೆಲಸಗಳು ಸ್ವಲ್ಪ ಕೂಡ ಇಷ್ಟ ಆಗುವುದಿಲ್ಲ. ಜುಗ್ಗನಿಗೆ ಪದೇ ಪದೆ ಮಾತಿನಮಾತಿನ ಏಟು ಕೊಡುತ್ತಾನೆ. ಆದರೂ ಆತ ಪಾಠ ಕಲಿಯುವ ಹಾಗೆ ಕಾಣುವುದು ಇಲ್ಲ. ಸಂಧ್ಯಾಗೆ ಸರಿಯಾದ ಮಾವ ಸಿಕ್ಕಿದ್ದಾರನೆ ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ.

More from Filmibeat

English summary
Srirastu shubhamastu kannada serial today episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X