Srirastu shubhamastu: ತುಳಸಿ ಮಾತಿಗೆ ಮನ್ನಣೆ ಕೊಡದ ನಿಧಿ; ದೀಪಿಕಾ ಹೊಸ ಪ್ಲ್ಯಾನ್
ನಿಧಿಗೆ ಮನೆಯಲ್ಲಿ ಹೇಳೋರು ಕೇಳೋರು ಯಾರೂ ಇಲ್ಲದಾಗಿ ಹೋಗಿದೆ. ತಂದೆ ತಾಯಿಗೂ ಕ್ಯಾರೆ ಅನ್ನಲ್ಲ. ಅಣ್ಣ ತಮ್ಮಂದಿರ ಗೊಡವೆಯಿಲ್ಲ. ತಾನು ಮಾಡಿದ್ದೆ ಆಟ ಎಂದು ಆಲೋಚನೆ ಮಾಡುತ್ತಿರುತ್ತಾಳೆ, ನಿಧಿ ಬಗ್ಗೆ ಯಾರಿಗೂ ಮನೆಯಲ್ಲಿ ಕೇರ್ ಇಲ್ಲದಂತಾಗಿದೆ.
ತುಳಸಿ ಮನೆ ಮಂದಿರ ಹಾಗೆಯೇ ಎಲ್ಲರ ಕಾಳಜಿಯನ್ನು ಬಯಸುತ್ತಾಳೆ. ಹಾಗೆಯೇ ನಿಧಿ ಜೊತೆ ಆದೇ ರೀತಿಯಲ್ಲಿ ಇರುತ್ತಾಳೆ. ಆದರೆ ಎಲ್ಲರನ್ನೂ ಕೇರಿಂಗ್ ಮಾಡುವ ಹಾಗೆ ಕೇರ್ ಮಾಡುತ್ತಾಳೆ. ನಿಧಿಗೆ ಒಂದು ಕರೆ ಬರುತ್ತದೆ.

ಇವತ್ತು ರಾತ್ರಿ ಪಾರ್ಟಿ ಇದೆ ನೀನು ಹೇಗಾದರೂ ಇಲ್ಲಿಗೆ ಬರಲೇಬೇಕು . ನೀನು ಬಾರದೆ ಇದ್ದರೆ ಇಲ್ಲಿ ಪಾರ್ಟಿ ನಡೆಯಲ್ಲ ಎಂದು ಹೇಳಿದಾಗ ನಿಧಿ ಆದಷ್ಟು ಆಕೆಯ ಗೆಳೆಯನನ್ನು ಕನ್ವಿನ್ಸ್ ಮಾಡಲು ಟ್ರೈ ಮಾಡುತ್ತಾಳೆ. ಆದರೆ ನಿಧಿ ಮಾತನ್ನು ಕೇಳಲು ಆತ ತಯಾರಿರಲಿಲ್ಲ. ಆದ ಕಾರಣ ನಿಧಿ ಸರಿ ಹಾಗಾದರೆ ಬರುತ್ತೇನೆ ಆದರೆ ಮನೆಯವರೆಲ್ಲ ಬೆಳಗ್ಗೆ ಎದ್ದೇಳುವ ಮುಂಚೆ ನಾನು ಇಲ್ಲಿ ಇರಬೇಕು ಎಂದು ಹೇಳುತ್ತಾಳೆ.
ಇದನ್ನು ಕೇಳಿದ ಆಕೆಯ ಗೆಳೆಯ ಓಕೆ ಎಂದು ಹೇಳುತ್ತಾನೆ. ಇವರಿಬ್ಬರ ಸಂಭಾಷಣೆಯನ್ನು ತುಳಸಿ ಕೇಳಿಸಿಕೊಳ್ಳುತ್ತಾ ಇರುತ್ತಾಳೆ. ತುಳಸಿಗೆ ಬಹಳ ಟೆನ್ಶನ್ ಆಗುತ್ತದೆ. ನಿಧಿ ಮನೆಯವರಿಗೆ ಹೇಳದೆ ಎಲ್ಲಿಗೆ ಹೋಗುತ್ತಿದ್ದಾಳೆ . ಇದೆಲ್ಲ ಯಾಕೋ ಸರಿ ಬರುತ್ತಿಲ್ಲ ಎಂದು ಮನದಲ್ಲಿ ಅಂದುಕೊಳ್ಳುತ್ತಿರುವಾಗಲೇ ನಿಧಿ ಎದುರಿಗೆ ಬರುತ್ತಾಳೆ.
ತುಳಸಿಯನ್ನು ನೋಡಿ ನಿಧಿ ಶಾಕ್
ಆ ಕೂಡಲೇ ತುಳಸಿ, ನಿಧಿ ಬಳಿ ಎಲ್ಲಿಗೆ ಹೋಗುತ್ತಿದ್ದಿಯಾ ನಿಧಿ ಎಂದು ಕೇಳಿದಾಗ ನಿಧಿ ಮೆತ್ತಗೆ ಹೇಳುತ್ತಾಳೆ, ನಾನು ನನ್ನ ಗೆಳತಿಯ ಮನೆಯಲ್ಲಿ ಪೂಜೆ ಇಟ್ಟುಕೊಂಡು ಇದ್ದಾರೆ ಅದಕ್ಕೆ ಹೋಗುತ್ತಿದ್ದೇನೆ ಎಂದು ಸುಳ್ಳು ಹೇಳುತ್ತಾಳೆ. ಇದನ್ನು ಕೇಳಿದ ತುಳಸಿ ಕೊಂಚ ಜೋರಾಗಿಯೇ ನೀನೇನು ಮಾತನಾಡುತ್ತಾ ಇದ್ದೆ ಎಂದು ನಾನು ಕೇಳಿಸಿಕೊಂಡೆ, ನಿಧಿ ಈ ರಾತ್ರಿ ನೀನು ಹೊರಗೆ ಹೋಗುವುದು ಸರಿಯಲ್ಲ ಎಂದು ಖಡಕ್ ಆಗಿ ಹೇಳುತ್ತಾಳೆ.

ತುಳಸಿ ಮೇಲೆ ನಿಧಿ ಗರಂ
ತುಳಸಿ ಮೇಲೆ ನಿಧಿ ರೇಗಿ ಬಿಡುತ್ತಾಳೆ, ನೀವು ಯಾರು ನನಗೆ ಅಡ್ವೈಸ್ ಮಾಡಲು ಇದಕ್ಕೆಲ್ಲ ನಾನು ಆಸ್ಪದ ಕೊಡುವುದು ಇಲ್ಲ. ದಯವಿಟ್ಟು ಇಲ್ಲಿಂದ ಹೋಗಿ ಎಂದು ಹೇಳಿ ನಿಧಿ ಅಲ್ಲಿಂದ ಹೋಗುತ್ತಾಳೆ. ನಿಧಿ ಮಾತು ಕೇಳಿ ತುಳಸಿಗೆ ಎನು ಮಾಡಬೇಕು ಎನ್ನುವ ಭಯ ಶುರು ಆಗುತ್ತದೆ.
ನಿಧಿ ಮಾತು ಕೇಳಿ ತುಳಸಿ ಶಾಕ್
ನಿಧಿಗಾಗಿ ಸ್ನೇಹಿತರು ದಾರಿ ಕಾಯುತ್ತಿರುತ್ತಾರೆ. ಆಗ ಅಲ್ಲಿಗೆ ಬಂದ ದೀಪಿಕಾ, ತುಳಸಿ ಮನದಲ್ಲಿರುವ ತಳಮಳ ಗಮನಿಸಿ ಏನಾಯಿತು ಎಂಬ ಪ್ರಶ್ನೆ ಮಾಡಿದಾಗ ನಡೆದ ವಿಚಾರವನ್ನು ವಿಸ್ತೃತವಾಗಿ ಹೇಳುತ್ತಾಳೆ . ಇದನ್ನೇ ಬಳಸಿಕೊಂಡು ಏನಾದರೂ ಚಮಕ್ ಕೊಡಬಹುದು ಎಂದು ಆಲೋಚನೆ ಮಾಡುತ್ತಿರುತ್ತಾಳೆ . ಇನ್ನೂ ತುಳಸಿಗೆ ಸಮಾಧಾನ ಮಾಡಿದ ದೀಪಿಕಾ ತಾನು ಏನು ಮಾಡಬೇಕು ಎನ್ನುವ ಪ್ಲಾನ್ ಮಾಡಿಕೊಂಡು ಇರುತ್ತಾಳೆ.
ದೀಪಿಕಾ ಲೆಕ್ಕಾಚಾರ ಏನು?
ದೀಪಿಕಾಗೆ ಮನೆಯವರೆಲ್ಲರ ನಿದ್ದೆ ಕೆಡಿಸುವುದು ಎಂದರೆ ಬಹಳ ಇಷ್ಟ. ಹೇಗಾದರೂ ಮಾಡಿ ಮಾಧವನ ಮನೆಯವರು ಚೆನ್ನಾಗಿ ಇರಬಾರದು, ಮಾಧವನ ಆಸ್ತಿ ನನ್ನ ಪಾಲಾಗಬೇಕು ಎನ್ನುವ ದುರಾಸೆ ಆಕೆಗೆ. ದೀಪಿಕಾ ಮಸಲತ್ತು ಇನ್ನಷ್ಟೇ ತುಳಸಿಗೆ ತಿಳಿಯಲು ಬಾಕಿ ಇದೆ.


Click it and Unblock the Notifications











