Shrirasthu Shubhamasthu: ಆಪತ್ತಿಗೆ ಸಿಲುಕಿದ ನಿಧಿ; ಅಭಿ ತಲೆಗೆ ಹೊಡೆದು ಕಿರಾತಕರು ಪರಾರಿ

By Poorva

ತುಳಸಿ, ನಿಧಿ ಮೇಲೆ ಒಂದು ಕಣ್ಣು ಇಟ್ಟಿದ್ದಳು. ನಿಧಿಗೆ ಅದೆಷ್ಟೇ ಬುದ್ಧಿವಾದ ಹೇಳಿದರು ಆಕೆ ಮಾತ್ರ ಯಾರ ಮಾತನ್ನೂ ಕೇಳಲು ರೆಡಿ ಇರಲಿಲ್ಲ. ಯಾಕೆಂದರೆ ಶಾರ್ವರಿ ಕೂಡ ಅಸಡ್ಡೆ ಮಾಡುತ್ತಿದ್ದಳು. ಮಗಳಿಗೆ ಶಾರ್ವರಿ ಇಷ್ಟಪಟ್ಟ ಹಾಗೆ ಇರಲು ಆಕೆಗೆ ಫ್ರೀಡಂ ಕೊಟ್ಟಿರುತ್ತಾಳೆ. ನಿಧಿ ಅದನ್ನೆಲ್ಲ ಮಿಸ್ ಯೂಸ್ ಮಾಡಿಕೊಳ್ಳುತ್ತಾಳೆ. ಆಕೆ ರಾತ್ರಿಯ ವೇಳೆ ಮನೆಯಿಂದ ಹೊರಗೆ ಹೋಗುತ್ತಾಳೆ.

ಹೀಗೆ ಹೇಳದೇ ಕೇಳದೇ ನಿಧಿ ಹೊರಗೆ ಹೋಗುವುದರಿಂದ ದೊಡ್ಡ ಗಂಡಾಂತರ ಆಗುತ್ತದೆ. ನಿಧಿಗೆ ಚೆನ್ನಾಗಿ ಕುಡಿಸಿ ಆಕೆಯ ಜೊತೆ ಮಧ್ಯೆ ರಸ್ತೆಯಲ್ಲಿ ಕೆಟ್ಟಾದಾಗಿ ನಡೆದುಕೊಳ್ಳುತ್ತಾರೆ. ನಿಧಿ ಯಾವ ಗೆಳೆಯರನ್ನು ನನ್ನವರು ಎಂದು ನಂಬಿದ್ದಳೋ, ಆ ಗೆಳೆಯರು ಮಾಡಿದ್ದೆ ಬೇರೆ.

Srirastu shubhamastu kannada serial 13th april episode written update

ಗೆಳೆಯರು ಆಕೆಯ ಮೈ ಮುಟ್ಟುತ್ತಾರೆ. ಆಗ ನಿಧಿಗೆ ಸಿಟ್ಟು ಬರುತ್ತದೆ. ನಿಧಿ ಆ ಗೆಳೆಯನ ಕಪಾಳಕ್ಕೆ ಹೊಡೆಯುತ್ತಾಳೆ. ನಿಧಿಗೆ ಕುಡಿದ ಮತ್ತಿನಲ್ಲಿ ಕೂಡ ತನ್ನ ಮೇಲೆ ಆಗುತ್ತಿರುವ ದೌರ್ಜನ್ಯ ಆಕೆಯ ಗಮನಕ್ಕೆ ಬರುತ್ತದೆ. ಸರಿಯಾದ ಸಮಯಕ್ಕೆ ಅಭಿ ಅದೇ ರಸ್ತೆಯಲ್ಲಿ ಬರುತ್ತಾನೆ.

ಅಭಿಗೆ ನಿಧಿಯ ಸ್ಥಿತಿ ಕಂಡು ಬಹಳ ಬೇಸರವಾಗುತ್ತದೆ. ನಿಧಿ ಯಾವಾಗ ಕುಡಿಯಲು ಶುರು ಮಾಡಿದಳು ಎಂದು ಅಚ್ಚರಿ ಆಗುತ್ತದೆ. ತುಳಸಿ ಈ ಮುಂಚೆ ನಿಧಿ ಕಾಣಿಸದೆ ಇರುವುದನ್ನು ಗಮನಿಸಿ ಮನೆಯವರ ಮುಂದೆ ಹೇಳಿದಾಗ ತುಳಸಿ ಮೇಲೆ ಎಲ್ಲರೂ ರೇಗಿ ಬಿಡುತ್ತಾರೆ. ಆ ಸಂದರ್ಭದಲ್ಲಿ ತುಳಸಿಗೆ ಏನು ಮಾಡಬೇಕು ಎಂದು ತಿಳಿಯದೇ ಬಹಳ ಬೇಸರ ಪಟ್ಟುಕೊಂಡು ಇದ್ದ ದಿನ ಅಭಿಗೆ ನೆನಪಾಗುತ್ತದೆ..

ಅಮಲಿನಲ್ಲಿ ಇರುವ ನಿಧಿ

ನಿಧಿ ಗೆಳೆಯರ ಮೇಲೆ ಅಭಿ ಅಟ್ಯಾಕ್ ಮಾಡುತ್ತಾನೆ. ಅಭಿಗೆ ಎನು ಮಾಡಬೇಕು ಎಂದು ತಿಳಿಯದೇ ಕಂಗಾಲಾಗಿ ಬಿಡುತ್ತಾನೆ. ಕೊನೆಗೆ ಆಕೆಯ ಒಬ್ಬ ಗೆಳೆಯ ಅಭಿ ತಲೆಗೆ ಬಲವಾಗಿ ಹೊಡೆಯುತ್ತಾನೆ. ಆ ಹೊಡೆತಕ್ಕೆ ಅಲ್ಲಿಯೇ ಕುಸಿದು ಬೀಳುತ್ತಾನೆ. ಅಭಿ ಯಾಕೆ ಮನೆಗೆ ಬಂದಿಲ್ಲ ಎಂದು ತುಳಸಿ ಹುಡುಕಿಕೊಂಡು ಬರುವಾಗ ನಿಧಿ ಹಾಗೂ ಅಭಿ ಅರೆ ಪ್ರಜ್ಞಾ ಸ್ಥಿತಿಯಲ್ಲಿ ಬಿದ್ದಿರುತ್ತಾರೆ. ಅವರನ್ನು ನೋಡಿದ ತುಳಸಿಗೆ ಶಾಕ್ ಆಗುತ್ತದೆ.

Srirastu shubhamastu kannada serial 13th april episode written update

ತುಳಸಿ ಕಂಗಾಲು

ಅರೆ ಪ್ರಜ್ಞಾ ಸ್ಥಿತಿಯಲ್ಲಿ ಇದ್ದ ಅಭಿ ಹಾಗೂ ನಿಧಿಯನ್ನು ಎತ್ತಿಕೊಂಡು ಕಾರಲ್ಲಿ ಕೂರಿಸುತ್ತಾಳೆ. ಬಳಿಕ ಆಕೆಯೇ ಡ್ರೈವಿಂಗ್ ಸೀಟ್‌ನಲ್ಲಿ ಕುಳಿತು ಕಾರ್ ಡ್ರೈವ್ ಮಾಡಲು ಹೋದಾಗ ಅಭಿಗೆ ಎಚ್ಚರವಾಗಿ ನೀವೇನು ಮಾಡುತ್ತಿದ್ದೀರಾ? ಹುಡುಗಾಟ ಆಡಬೇಡಿ ಎಂದು ಹೇಳುತ್ತಾನೆ. ಆದರೆ ತುಳಸಿ ಏನು ಮಾತನಾಡದೆ ಕಾರು ಡ್ರೈವಿಂಗ್ ಮಾಡಿಕೊಂಡು ಅಲ್ಲಿಂದ ಮನೆಗೆ ಹೋಗುತ್ತಾಳೆ. ಇದನ್ನು ನೋಡಿದ ಅಭಿಗೆ ಶಾಕ್ ಆಗುತ್ತದೆ.

ತುಳಸಿಯನ್ನು ನೋಡಿ ಅಭಿ ಶಾಕ್

ತುಳಸಿ ಕಾರ್ ಡ್ರೈವ್ ಮಾಡಿದ್ದು ನೋಡಿ ಅಭಿಗೆ ಶಾಕ್ ಆಗುತ್ತದೆ. ಅಭಿಗೆ ತನ್ನ ತಾಯಿ ಗಿಂತ ಮಿಗಿಲು ಯಾರಿಲ್ಲ. ಅವರು ಇದ್ದಿದ್ದರೆ ನಾವು ಹೀಗೆ ಇರುತ್ತಿರಲಿಲ್ಲ ಎಂದೆಲ್ಲ ತುಳಸಿಯನ್ನು ನಿಂದನೆ ಮಾಡಿ ಮಾತನಾಡುತ್ತಿದ್ದ. ಇದನ್ನೇ ತುಳಸಿ ಚಾಲೆಂಜಿಂಗ್ ಆಗಿ ತೆಗೆದುಕೊಂಡಿದ್ದು ಕಾರ್ ಡ್ರೈವಿಂಗ್, ಭರತನಾಟ್ಯ ಎಂದೆಲ್ಲ ಕಲಿತು ತಾನು ಯಾರಿಗೂ ಕಡಿಮೆ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾಳೆ.

More from Filmibeat

English summary
Srirastu shubhamastu kannada serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X