Srirastu shubhamastu: ದತ್ತನ ಮನೆಯಲ್ಲಿ ಜುಗ್ಗನದ್ದೆ ಕಾರುಬಾರು; ತುಳಸಿ ಜೊತೆ ಮಾರ್ಕೆಟ್‌ಗೆ ಅವಿ

By Poorva

ಸಮರ್ಥ್‌ಗೆ ತನ್ನ ತಂದೆಯ ನೆನಪು ಬಾರದೆ ಇರುವ ಹಾಗೆ ತುಳಸಿ ಅವನನ್ನು ನೋಡಿಕೊಂಡು ಇರುತ್ತಾಳೆ. ಆದರೆ ತುಳಸಿ ಮನೆಯಲ್ಲಿ ಇಲ್ಲದೇ ಇರುವುದನ್ನು ಕಂಡು ಸಮರ್ಥ್‌ಗೆ ಮಾತ್ರ ಬಹಳ ಬೇಸರ ಆಗುತ್ತದೆ. ಇತ್ತೀಚೆಗೆ ತುಳಸಿ ಗುಣಕ್ಕೆ ಮೆಚ್ಚಿದ ಅವಿನಾಶ್ ಆಕೆಯ ಬಳಿ ತಾಯಿ ಪ್ರೀತಿಯನ್ನು ಬಯಸುತ್ತಿದ್ದಾನೆ.

ಅಭಿಗೆ ತುಳಸಿ ಸಹಾಯ ಮಾಡಿದರೂ ಆತ ಮನೆಯವರ ಮಾತುಗಳನ್ನು ಕೇಳಿಕೊಂಡು ತುಳಸಿ ಬಗ್ಗೆಯೇ ಅನುಮಾನ ವ್ಯಕ್ತ ಪಡಿಸುತ್ತಾನೆ. ಆದರೆ ನಿಧಿಗೆ ಈಗಾಗಲೇ ತುಳಸಿ ಮಹತ್ವ ಅರಿವಾಗಿದೆ. ಶಾರ್ವರಿಗೆ ಭಯ ಎಲ್ಲಿ ನಾನು ಮಾಡಿದ ಪ್ಲಾನ್ ವರ್ಕ್ ಆಗಲ್ವೋ? ಎನ್ನುವ ಟೆನ್ಶನ್. ಆದರೆ ಅದಕ್ಕಾಗಿ ಅಭಿ ತಲೆ ಕೆಡಿಸುತ್ತಾಳೆ. ತುಳಸಿ ಹೇಗೆ ಡ್ರೈವಿಂಗ್ ಕಲಿತರು ಅವರಿಗೆ ಇದೆಲ್ಲ ಹೇಗೆ ತಿಳಿದಿರಲಿ ಸಾಧ್ಯ? ಅವರಿಗೆ ಈ ಮೊದಲೇ ಡ್ರೈವಿಂಗ್ ತಿಳಿದಿತ್ತಾ ಎನ್ನುವ ಅನುಮಾನ ಅಭಿಗೆ ಮೂಡುತ್ತದೆ.

Srirastu shubhamastu kannada serial 16th April episode written update

ಇತ್ತ ಜುಗ್ಗನ ಸಂಸಾರ ದತ್ತನ ಮನೆಯಲ್ಲಿ ಜಾಂಡವೂರಿದೆ. ಎಲ್ಲರನ್ನೂ ಮೋಸ ಮಾಡುವ ಸಂಧ್ಯಾಗೆ ಜುಗ್ಗನ ಹಾಗೆ ಇರುವ ಮಾವಯ್ಯ ಸಿಕ್ಕಿರುವುದು ವೀಕ್ಷಕರಿಗೆ ಖುಷಿ ನೀಡಿದೆ. ಸಂಧ್ಯಾ ಗಂಡನ ಮನೆಗೆ ಹೋದರು ತವರು ಮನೆಯಲ್ಲಿ ಕದ್ದು ಹಣ ತೆಗೆದುಕೊಳ್ಳುವ ಚಾಳಿ ಆಕೆಗೆ. ಆದರೆ ಜುಗ್ಗಗೆ ಇದೆಲ್ಲವೂ ಸರಿಯಾಗಿ ತಿಳಿದಿರುತ್ತದೆ.

ಮನೆಯಲ್ಲಿ ಎಲ್ಲರೂ ಹಣ ಸಂಪಾದನೆ ಮಾಡುತ್ತಿರುತ್ತಾರೆ. ಸಂಧ್ಯಾ ಕೂಡ ಕೆಲಸಕ್ಕೆ ಸೇರಿ ಹಣ ಸಂಪಾದಿಸಬೇಕು ಎನ್ನುವುದು ಜುಗ್ಗನ ಆಸೆ. ಸಂಧ್ಯಾ ಮನೆಯೊಳಗೆ ಊಟ ಮಾಡಬೇಕು ಎಂದುಕೊಂಡು ಹೋದರೆ ಜುಗ್ಗ ಹಣ ಕೊಟ್ಟು ಊಟಕ್ಕೆ ಹೋಗು ಎಂದು ಹೇಳುತ್ತಾರೆ. ಇದನ್ನು ಕೇಳಿದ ಸಂಧ್ಯಾಗೆ ಏನು ಮಾಡಬೇಕು ಎಂದು ತಿಳಿಯದಾಗುತ್ತದೆ. ಜುಗ್ಗ ಹಣ ಇಲ್ಲದೇ ಊಟ ಮಾಡಲು ಬಿಡುವುದಿಲ್ಲ ಎಂದು ತಿಳಿಯುತ್ತದೆ.

ಮಾವನ ಮಾತಿಗೆ ಸಂಧ್ಯಾ ಗರಂ

ನಿನ್ನ ಅತ್ತೆ ಕೂಡ ಬೇಯಿಸಿ ಹಾಕಿ ಸಂಸಾರ ತೂಗಿಸಿಕೊಂಡು ಹೋಗುತ್ತಿದ್ದಾಳೆ. ಆದರೆ ನೀನು ಏನು ಮಾಡುತ್ತಿದ್ದಿಯಾ ? ಗಡದ್ದಾಗಿ ಊಟ ಮಾಡಿದರೆ ಸಾಲದು ಹಣ ಕೂಡ ಸಂಪಾದನೆ ಮಾಡಬೇಕು . ಅಷ್ಟರವರೆಗೆ ಈ ಮನೆಯಲ್ಲಿ ಊಟ ನಿನಗಿಲ್ಲ ಎಂದು ಹೇಳುತ್ತಾನೆ ಜುಗ್ಗ. ಇದನ್ನ ಕೇಳಿದ ಸಿರಿ, ಆಕೆಗೆ ಹಸಿವು ಆಗಿದೆ ಊಟ ಮಾಡಲಿ ಎಂದರೂ ಜುಗ್ಗ ಮಾತ್ರ ಸಂಧ್ಯಾಗೆ ಊಟ ಕೊಡದೆ ಅಲ್ಲಿಂದ ಓಡಿಸುತ್ತಾನೆ. ಇತ್ತ ಮಾರುಕಟ್ಟೆಗೆ ತುಳಸಿ ಜೊತೆ ಬಂದ ಅವಿಗೆ ಬಹಳ ಖುಷಿ ನೀಡುವ ವಿಚಾರಗಳು ಗೊತ್ತಾಗುತ್ತದೆ.

Srirastu shubhamastu kannada serial 16th April episode written update

ಅಮ್ಮನ ಜೊತೆ ಅವಿ ಸಂತಸ

ತುಳಸಿಗೆ ಮಾರ್ಕೆಟ್‌ನಲ್ಲಿ ಇರುವ ಜನರೆಲ್ಲರೂ ಪರಿಚಿತರು. ಇದನ್ನೆಲ್ಲ ಕಂಡು ಅವಿಗೆ ಆಶ್ಚರ್ಯ ಆಗುತ್ತದೆ. ಇದೆಲ್ಲ ಹೇಗೆ ಸಾಧ್ಯ ಎಂದೆಲ್ಲ ಕೇಳಿದಾಗ ತುಳಸಿ, ಮಾಧವ ಅವರ ಹೆಸರನ್ನು ಅವಿನಾಶ್ ಮುಂದೆ ಹೇಳುತ್ತಾಳೆ. ಮಾಧವ ಅವರಿಂದಾಗಿ ನನಗೆ ಇವರೆಲ್ಲರೂ ಪರಿಚಯ ಎಂದು ಹೇಳುತ್ತಾಳೆ. ತರಕಾರಿ ಅಂಗಡಿಗೆ ಹೋದ ಅವಿನಾಶ್ ಹಾಗೂ ತುಳಸಿ ತರಕಾರಿ ತೆಗೆದುಕೊಳ್ಳಲು ಮುಂದೆ ಬರುತ್ತಾರೆ. ಆಗ ಅಂಗಡಿಯಾತ ನಮಸ್ತೆ ಮೇಡಂ ಇವತ್ತು ಹಾಗಲಕಾಯಿ ಫ್ರೆಶ್ ಆಗಿ ಬಂದಿದೆ. ಹಾಗಲಕಾಯಿ ತೆಗೆದುಕೊಳ್ಳಿ ಎಂದು ಹೇಳುತ್ತಾನೆ. ಅವಿ ಇವತ್ತು ನಾನೇ ತರಕಾರಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿ ಒಂದೊಂದು ತರಕಾರಿ 11 ಕೆಜಿ ಹಾಗೆ ಹೇಳಿದಾಗ ತುಳಸಿ ಹಾಗೂ ತರಕಾರಿ ಅಂಗಡಿ ಅವನು ತಬ್ಬಿಬ್ಬಾಗುತ್ತಾನೆ.

ಅವಿ ಮಾತಿಗೆ ನಕ್ಕ ತುಳಸಿ

ತುಳಸಿ ನಕ್ಕು ನಾವು ತರಕಾರಿ ಅಂಗಡಿಯನ್ನು ತೆಗೆದುಕೊಳ್ಳಲು ಬಂದಿದ್ದೇವಾ? ನನಗೆ ಅಷ್ಟು ತರಕಾರಿ ಬೇಡ ಎಂದು ಒಂದಷ್ಟು ತೆಗೆದುಕೊಳ್ಳುತ್ತಾಳೆ. 600 ರೂ. ಬಿಲ್ ಆಗುತ್ತದೆ. ಚೌಕಾಸಿ ಮಾಡುವುದಿಲ್ವಾ ಎಂದು ತುಳಸಿ ಹೇಳಿದ್ದಾಗ ತರಕಾರಿ ಮಾರಾಟ ಬಹಳ ಕಷ್ಟ ಪಟ್ಟು ಜೀವನ ನಡೆಸುತ್ತಾರೆ. ಅಂತವರ ಬಳಿ ಚೌಕಾಸಿ ಮಾಡುವುದು ಸರಿಯಲ್ಲ ಎಂದು ಹೇಳಿದಾಗ ತುಳಸಿಗೆ ಖುಷಿ ಆಗುತ್ತದೆ . ಅವಿನಾಶ್ ಮಾತು ಕೇಳಿ ತುಳಸಿಗೆ ಹಾಗೂ ತರಕಾರಿ ಅಂಗಡಿಯವನ ಮೊಗದಲ್ಲಿ ಮಂದಹಾಸ ಮೂಡುತ್ತದೆ.

More from Filmibeat

English summary
Srirastu shubhamastu kannada serial update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X