Shrirasthu Shubhamasthu: ಕುತಂತ್ರಿ ಶಾರ್ವರಿಗೆ ಬುದ್ದಿ ಕಲಿಸುತ್ತಿರುವ ಮಹೇಶ; ಆಕೆಯ ಮುಂದಿನ ನಡೆ ಏನು?
ಮಹೇಶ ಮನೆಯವರ ಬಳಿ ಎಲ್ಲಿ ನಿಜ ವಿಚಾರವನ್ನು ಹೇಳಿ ಬಿಡುತ್ತಾನೋ ಎನ್ನುವ ಭಯದಲ್ಲಿಯೇ ಶಾರ್ವರಿ ಕಾಲ ಕಳೆಯುತ್ತಿದ್ದಾಳೆ. ಮಾಧವನ ಕುಟುಂಬವನ್ನು ಹೇಗಾದರೂ ಮಾಡಿ ಮುಗಿಸಿ ಬಿಡಬೇಕು ಎನ್ನುವ ಆಲೋಚನೆಯಲ್ಲಿ ಆಕೆ ಇರುತ್ತಾಳೆ. ತನ್ನ ಗಂಡ ಎಲ್ಲರ ಮುಂದೆ ಬಾಯಿ ಬಿಟ್ಟರೆ ನನ್ನ ಗತಿ ಏನು ಎನ್ನುವ ಆತಂಕ. ಮಹೇಶ ಬಹಳ ಚೆನ್ನಾಗಿಯೇ ಆಟ ಆಡಲು ಶುರು ಮಾಡಿ ಇರುತ್ತಾನೆ.
ಮಹೇಶನನ್ನು ಹೇಗಾದರೂ ಮಾಡಿ ಬಗ್ಗು ಬಡಿಯಬೇಕು ಎಂದು ಆಲೋಚನೆ ಮಾಡುತ್ತಿದ್ದ ಶಾರ್ವರಿಗೆ ಬಿಗ್ ಶಾಕ್ ಮೇಲೆ ಶಾಕ್ ನೀಡಿದ್ದಾನೆ ಮಹೇಶ. ಇತ್ತೀಚಿನ ದಿನಗಳಲ್ಲಿ ಅಭಿ ಹಾಗೂ ಅವಿಯ ಜಗಳ ಮಾತ್ರ ತಾರಕಕ್ಕೆ ಏರಿದೆ. ಹೇಗಾದರೂ ಮಾಡಿ ಅಭಿಗೆ ಎಲ್ಲಾ ಅರ್ಥ ಆಗುವ ಹಾಗೆ ಮಾಡಬೇಕು ಎಂದು ಅವಿನಾಶ್ ಹೇಳುತ್ತಾನೆ . ಅಭಿ, ತುಳಸಿ ಅಮ್ಮ ಮಾಡಿದ ಸಹಾಯವನ್ನು ಮರೆಯುತ್ತಿದ್ದಾನೆ. ಹಾಗೆಯೇ ಅದೆಷ್ಟೋ ಬಾರಿ ತುಳಸಿ ಅಮ್ಮ ಒಳ್ಳೆಯ ಕಾರಣಕ್ಕೆ ಹೇಳಿದ್ದರೂ ಆಕೆಯನ್ನು ಕೆಟ್ಟವರ ಹಾಗೆ ಬಿಂಬಿಸುತ್ತಾರೆ.

ತುಳಸಿ ಮಾತು ಕೇಳಲು ಕೂಡ ತಯಾರಿಲ್ಲ ಎಂದು ಅವಿ ಪೂರ್ಣಿಮಾ ಬಳಿ ತನ್ನ ನೋವನ್ನು ಹೇಳಿಕೊಳ್ಳುತ್ತಾನೆ . ಅವಿಗೆ ತನ್ನ ತಮ್ಮ ಎಂದರೆ ಜೀವ. ಆದರೆ ತಮ್ಮ ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವುದನ್ನು ನೋಡಿ ಬಹಳ ಆತಂಕ ಪಟ್ಟುಕೊಳ್ಳುತ್ತಾನೆ. ಹಾಗೆಯೇ ಆತನಿಗೆ ಬಹಳ ನೋವು ಪಡುತ್ತಿದ್ದಾನೆ. ಆದರೂ ಆತನಿಗೆ ತಾನು ಕೈ ಮಾಡಿ ಬಿಟ್ಟೆನಲ್ವಾ ಎನ್ನುವ ಬೇಸರ ಇರುತ್ತದೆ.
ಎಲ್ಲರ ಮುಂದು ತನ್ನ ತಮ್ಮನ ಮೇಲೆ ಕೈ ಮಾಡಲು ಮುಂದಾಗಿದ್ದು ತಪ್ಪೇ. ಅವನು ಮಾಡಿದ್ದು ಸರಿಯಲ್ಲ. ಆದರೂ ನಾನು ಮಾಡಿದ ತಪ್ಪಿಗೆ ಕ್ಷಮೆಯಾಚಿಸುತ್ತೇನೆ ಎಂದು ಬಹಳ ಬೇಸರದಿಂದ ಹೇಳುತ್ತಾನೆ.
ದೀಪಿಕಾ ಹೊಸ ಪ್ಲ್ಯಾನ್
ಅಭಿ ಮನಸನ್ನು ಅವಿ ವಿರುದ್ದ ಎತ್ತಿ ಕಟ್ಟುವ ಪ್ರಯತ್ನವನ್ನು ದೀಪಿಕಾ ಹಾಗೂ ಶಾರ್ವರಿ ಮಾಡುತ್ತಿರುತ್ತಾರೆ. ಆದರೆ ಅಭಿ ಮಾತ್ರ ನನ್ನ ಬಳಿ ಬಂದು ಸಾರಿ ಕೇಳಿಯೇ ಕೇಳುತ್ತಾನೆ ಎನ್ನುವ ಭರವಸೆಯಲ್ಲಿ ಇರುತ್ತಾನೆ. ಅಭಿಗೆ ತನ್ನ ಅಣ್ಣ ಯಾವತ್ತೂ ಸರಿಯಲ್ಲ, ಅಣ್ಣ ಅತ್ತಿಗೆ ಹೇಳಿದ ಹಾಗೆ ಕೇಳುತ್ತಾನೆ ಎನ್ನುವ ರೀತಿ ಅಭಿಯ ಬಳಿ ಕಿವಿ ಚುಚ್ಚುತ್ತಾನೆ.

ಅಣ್ಣನನ್ನು ಬಿಟ್ಟುಕೊಡದ ತಮ್ಮ
ಅಭಿ ಮಾತ್ರ ನನ್ನ ಅಣ್ಣ ಏನು ಎನ್ನುವುದು ನನಗೆ ಚೆನ್ನಾಗಿ ತಿಳಿದಿದೆ. ನನಗೆ ಯಾರು ಬುದ್ದಿ ಹೇಳುವುದು ಬೇಡ ನನಗೆ ಹೇಗಿರಬೇಕು ಎನ್ನುವುದು ತಿಳಿದಿದೆ ಎಂದು ಹೇಳುತ್ತಾರೆ. ಇನ್ನೂ ದೀಪಿಕಾ ಬಳಿ ಅವಿ, ಅಭಿಯನ್ನೂ ಹೇಗಾದರೂ ಮಾಡಿ ದೂರ ಮಾಡಲೇಬೇಕು ಎಂದು ಮಾತನಾಡಿಕೊಳ್ಳುತ್ತಾರೆ. ಅಭಿಯ ಬಳಿ ಕ್ಷಮೆ ಕೇಳಬೇಕು ಎಂದು ಹೊರಟು ನಿಂತಾಗ ಅಲ್ಲಿಗೆ ಶಾರ್ವರಿ ಬಂದು ತಡೆಯುತ್ತಾಳೆ.
ಮಹೇಶನಿಗೆ ಶಾರ್ವರಿ ಪಿತೂರಿ ಅರಿವಾಗ ತೊಡಗಿದೆ. ಆತ ಮಾತ್ರ ಶಾರ್ವರಿ ಜೊತೆ ಬಹಳ ಕಠೋರವಾಗಿ ನಡೆದುಕೊಳ್ಳುತ್ತಾರೆ. ಯಾವತ್ತೂ ಬೆಳ್ಳಂಬೆಳಗ್ಗೆ ಶಾರ್ವರಿ ಬಹಳ ಪಾಷ್ ಆಗಿ ರೆಡಿ ಆಗುತ್ತಿರುತ್ತಾಳೆ. ಆದರೆ ಅಲ್ಲಿ ನಡೆದಿದ್ದೇ ಬೇರೆ ಮಹೇಶ ಕೊಂಚ ಜೋರಾಗಿಯೇ ಕೇಳುತ್ತಾನೆ. ಯಾಕೆ ಶಾರ್ವರಿ ನೀನು ಯಾವ ಕೆಲಸ ಮಾಡುತ್ತಿಲ್ಲ ಎಂದು ಪ್ರಶ್ನೆ ಮಾಡುತ್ತಾರೆ. ಹಾಗೆಯೇ ಇಂದಿನಿಂದ ಇಂತಹ ಅಲಂಕಾರ ಬಿಟ್ಟು ನೀನು ಆ ಬಂಗಾರದ ಒಡವೆಗಳನ್ನು ತೆಗೆದಿಟ್ಟು ಮನೆಯ ಕೆಲಸ ಮಾಡಬೇಕು ಎನ್ನುತ್ತಾನೆ.
ಮಹೇಶನ ಮಾತಿಗೆ ಬೆಲೆ ಕೊಟ್ಟ ಶಾರ್ವರಿ
ಶಾರ್ವರಿಗೆ ಏನು ಹೇಳಬೇಕು ತಿಳಿಯದ ಹಾಗೆ ಆಗುತ್ತದೆ. ಹಾಗೆಯೇ ಶಾರ್ವರಿ ಗಂಡ ಹೇಳಿದ ಹಾಗೆ ಕೇಳುತ್ತಾಳೆ. ಮನೆಯನ್ನು ಕ್ಲೀನ್ ಆಗಿ ಒರೆಸುತ್ತಿರಬೇಕಾದರೆ ಅಭಿ ಕಾಲು ಕೆಳಗೆ ಕೊಂಚ ತಾಗಿ ಬಿಡುತ್ತದೆ. ಆಗ ಬೈಯಲು ಬಾಯಿ ತೆಗೆದಾಗ ಚಿಕ್ಕಮ್ಮ ನೀವು ಎಂದು ಬಹಳ ಶಾಕ್‌ನಿಂದ ಕೇಳುತ್ತಾನೆ. ಅಭಿ ಮಾತು ಕೇಳಿ ಮನೆ ಮಂದಿ ಹೊರ ಬರುತ್ತಾರೆ. ನನಗೆ ಮನೆಗೆಲಸ ಮಾಡಬೇಕು ಅನ್ನಿಸಿತು ಅದಕ್ಕೆ ಮಾಡಿದೆ ಎಂದು ಶಾರ್ವರಿ ಹೇಳಿದ್ದಾರೆ. ಮನೆಮಂದಿ ಕೊಂಚ ಆಶ್ಚರ್ಯದಿಂದ ನೋಡುತ್ತಾರೆ.


Click it and Unblock the Notifications











