Srirastu Shubhamastu ; ಪೂರ್ಣಿಮಾ ಮೇಲೆ ದೀಪಿಕಾ ಗೆ ಹೆಚ್ಚಿದ ದ್ವೇಷ , ತಾಯಿ ಮಗಳನ್ನು ದೂರ ಮಾಡ್ತಾಳಾ?

By ಪೂರ್ವ

ದೀಪಿಕಾಗೆ ಇದೀಗ ತನ್ನ ತಂದೆ ತಾಯಿ ಹೆಚ್ಚಾಗಿ ಪೂರ್ಣಿಮಾ ಜೊತೆ ಕಾಲ ಕಳೆಯುವುದು ಹಾಗೆಯೇ ಅಮ್ಮನಿಗೆ ಪೂರ್ಣಿಮಾ ಅಂದರೆ ಪ್ರಾಣ ಇದೆಲ್ಲ ನನಗೆ ಇರಿಸು ಮುರಿಸು ಆಗುತ್ತಿದೆ ಎಂದು ದೀಪಿಕಾ ತಲೆ ಕೆಡಿಸಿಕೊಂಡು ಇರುತ್ತಾಳೆ. ಹೇಗಾದರೂ ಮಾಡಿ ಪೂರ್ಣಿಮಾ ಹಾಗೂ ಅಮ್ಮನ ನಡುವೆ ಏನಾದರು ತಂದಿಡಬೇಕು ಎಂದು ಆಲೋಚನೆ ಮಾಡುತ್ತಿರುತ್ತಾಳೆ. ಇನ್ನೂ ಪೂರ್ಣಿಮಾ ದೀಪಿಕಾ ಜೊತೆ ಮಾತಿಗೆ ಇಳಿಯುತ್ತಾರೆ. ದೀಪಿಕಾ ಯಾಕೆ ಇಷ್ಟು ಯೋಚನೆ ಮಾಡುತ್ತಿದ್ದೀಯ ಎಂದು ಪೂರ್ಣಿಮಾ ಕೇಳಿದ್ದೆ ತಡ ಆಕೆಗೆ ಬಾಯಿಗೆ ಬಂದ ಹಾಗೆ ಬಯ್ಯುತ್ತಾಳೆ ತನ್ನ ತಾಯಿಯನ್ನು ತನ್ನಿಂದ ಕಸಿದುಕೊಳ್ಳಲು ನೀನು ಪ್ಲಾನ್ ಮಾಡುತ್ತಿದ್ಧಿಯ ಎನ್ನುವುದು ನನಗೆ ತಿಳಿಯುತ್ತಿದೆ

ಯಾಕೆ ನೀನು ಹೀಗೆ ಮಾಡುತ್ತಿದ್ದಿಯಾ. ದಯವಿಟ್ಟು ನೀನು ಹಾಗೆ ಮಾಡಬೇಡ ನನ್ನ ತಾಯಿಯಿಂದ ದೂರ ಇರು ಎಂದು ಖಡಕ್ ವಾರ್ನಿಂಗ್ ಮಾಡುತ್ತಾಳೆ. ಇದನ್ನು ಕೇಳಿದ ಪೂರ್ಣಿಮಾಗೆ ಬಹಳ ನೋವು ಆಗುತ್ತದೆ. ಆದರೆ ಯಾರ ಜೊತೆಯೂ ಎನು ಮಾತನಾಡದೆ ಸುಮ್ಮನೆ ಇರುತ್ತಾಳೆ. ವನಜಾ ಅಮ್ಮ ನನಗೆ ತಾಯಿ ಸ್ಥಾನ ತುಂಬುದ್ದು ನಿಜ ಆದರೆ ಆಕೆಯಿಂದ ತಾನು ಯಾವುದೇ ನಿರೀಕ್ಷೆ ಮಾಡಿರಲಿಲ್ಲ. ಆದರೆ ದೀಪಿಕಾ ಹೇಳುತ್ತಿರುವುದು ನೋಡಿದರೆ ನಾನೇ ಇದಕ್ಕೆಲ್ಲ ಕಾರಣ ಎನ್ನುವ ಹಾಗೆ ಮಾತನಾಡುತ್ತಾಳೆ ಎಂದು ಮನದಲ್ಲಿ ಬಹಳ ಬೇಸರ ಮಾಡಿಕೊಂಡು ಇರುತ್ತಾಳೆ.

srirastu shubhamastu serial 10th November written update

ಆದರೆ ಯಾರ ಜೊತೆಯೂ ಎನು ಮಾತನಾಡದೆ ಸುಮ್ಮನೆ ಇರುತ್ತಾಳೆ. ಇನ್ನೂ ತುಳಸಿ ಹಾಗೂ ಮಾಧವ ಸೇರಿಕೊಂಡು ನಿಧಿ ಮನೆಯವರ ಜೊತೆ ಆಕೆಯ ಮದುವೆ ಬಗ್ಗೆ ಪ್ರಸ್ತಾಪ ಮಾಡುತ್ತಾಳೆ. ಆಗ ನಿಧಿ ಮದುವೆ ಆಗುವ ಹುಡುಗನ ಮನೆಯವರು ಒಪ್ಪಿಗೆ ಸೂಚಿವುದು ಇಲ್ಲ. ಕೊನೆಗೆ ಮಾಧವ ಹಾಗೂ ತುಳಸಿ ಒಂದು ನಿರ್ಧಾರ ಮಾಡುತ್ತಾರೆ. ಮದುವೆ ಆಗುವವರೆಗೆ ತುಳಸಿ ಆ ಮದುವೆ ಮನೆಯ ಹತ್ತಿರ ಕೂಡ ಸುಳಿಯುವುದು ಇಲ್ಲ ಎಂದು ಹೇಳುತ್ತಾಳೆ. ಇದನ್ನು ಕೇಳಿದ ನಿಧಿ ಹುಡುಗನ ಮನೆಯವರು ಮದುವೆಗೆ ಒಪ್ಪಿಗೆ ಸೂಚಿಸುತ್ತಾರೆ.

ನಿಧಿ ಗೆ ಸರ್ಪ್ರೈಸ್ ನೀಡಿದ ತುಳಸಿ, ಮಾಧವ

ಮನೆಗೆ ಮಾಧವ ಹಾಗೂ ತುಳಸಿ ಬಹಳ ಖುಷಿಯಿಂದ ಬರುತ್ತಾರೆ. ತುಳಸಿ ನಿಧಿ ಬಳಿ ಹೇಳುತ್ತಾಳೆ ಇವತ್ತು ನಿಧಿಗೆ ಸರ್ಪ್ರೈಸ್ ಒಂದು ಕಾದಿದೆ ಎಂದು ಹೇಳಿದಾಗ ನಿಧಿ ಮಾತ್ರ ಪ್ರಶ್ನಾರ್ಥಕವಾಗಿ ಆಕೆಯ ಮುಖವನ್ನು ನೋಡುತ್ತಾಳೆ. ಆಗ ತುಳಸಿ ಹಾಗೂ ಮಾಧವ ಇಬ್ಬರು ಒಟ್ಟಿಗೆ ಹೇಳುತ್ತಾರೆ . ನಿಧಿ ಮದುವೆಗೆ ಹುಡುಗನ ಕಡೆಯವರು ಒಪ್ಪಿಗೆ ಸೂಚಿಸಿದ್ದಾರೆ. ನಿಧಿ ಯಾವುದೇ ಕಾರಣಕ್ಕೂ ಬೇಸರಪಡುವ ಅಗತ್ಯ ಇಲ್ಲ ಎಂದಾಗ ಮನೆ ಮಂದಿಯೆಲ್ಲ ಯಾಕೆ ನೀವು ಹೋಗಿದ್ದು. ನನಗೆ ನೀವು ಹೋಗಿದ್ದು ಮಾತ್ರ ಸ್ವಲ್ಪವೂ ಇಷ್ಟ ಆಗಲಿಲ್ಲ ಎಂದು ಹೇಳುತ್ತಾರೆ.

ಮಾಧವನನ್ನು ತಬ್ಬಿಕೊಂಡ ತುಳಸಿ

ಇದನ್ನು ಕೇಳಿದ ತುಳಸಿ ಹಾಗೂ ಮಾಧವ ಮನೆ ಮಂದಿಯವರಿಗೆ ಬಹಳ ಪ್ರೀತಿಯಿಂದ ಸಲಹೆ ನೀಡುತ್ತಾರೆ. ಹಾಗೆಯೇ ಅವರ ಪ್ರಶ್ನೆಗೆ ಉತ್ತರವನ್ನು ನೀಡುತ್ತಾರೆ. ನಿಧಿಯ ಸಂತೋಷದ ಮುಂದೆ ನನಗೆ ಯಾವುದು ಬೇಡ. ನಮಗೆಲ್ಲ ನಿಧಿ ಖುಷಿ ಆಗಿರುವುದು ಮುಖ್ಯ ಆದ ಕಾರಣಕ್ಕೆ ಆಕೆ ಚೆನ್ನಾಗಿ ಇರಲಿ ಎನ್ನುವ ಕಾರಣಕ್ಕೆ ಈ ರೀತಿಯೆಲ್ಲ ಮಾಡಿದೆ ಎಂದು ಹೇಳುತ್ತಾರೆ ಆದರೆ ಇದರಿಂದಾಗಿ ನಿಧಿ ಬದುಕು ಚೆನ್ನಾಗಿರುತ್ತದೆ ಎನ್ನುವ ನಂಬಿಕೆ ಮಾಧವ ಹಾಗೂ ತುಳಸಿ ಗೆ. ನಮ್ಮಿಬ್ಬರಿಂದಾಗಿ ನಿಧಿಗೆ ಬಹಳ ಕಷ್ಟ ಆಗಿತ್ತು. ಆದರೆ ಇದೀಗ ನಿಧಿ ಖುಷಿಯಾಗಿ ಇರಬಹುದು. ಆಕೆ ಮಂಕಾಗಿರುವುದನ್ನು ನೋಡಲು ಖಂಡಿತವಾಗಿಯೂ ಸಾಧ್ಯ ಇಲ್ಲ ಎಂದು ಮನದಲ್ಲಿ ಅಂದುಕೊಳ್ಳುತ್ತಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X