Srirasthu Shubhamasthu ; ಶಾರ್ವರಿ ರಹಸ್ಯ ಎಲ್ಲರೆದುರು ಬಯಲಾಯ್ತಾ?ಎಲ್ಲ ತಬ್ಬಿಬ್ಬಾಗಿದ್ದೇಕೆ ?

By ಪೂರ್ವ

ಮಾಧವನ ಮುಂದೆ ನಿಜ ಹೇಳಿದ ತುಳಸಿಗೆ ಬಹಳಷ್ಟು ನೋವಾಗುತ್ತದೆ. ನಿಧಿ ವಿಚಾರ ಮಾಧವಗೆ ತಿಳಿದಿರುವುದಿಲ್ಲ. ಆದರೆ ಮಾಧವ ಏನೋ ತಿಳಿದಿರುವವನ ಹಾಗೆ ಮಾತನಾಡುತ್ತಾನೆ ಇದನ್ನು ನೋಡಿದ ತುಳಸಿ ಗೆ ಮಾಧವನಿಗೆ ಎಲ್ಲಾ ವಿಚಾರವೂ ಕೂಡ ತಿಳಿದು ಹೋಗಿದೆ. ಇನ್ನು ಅವರ ಎದುರು ನಾನು ಈ ವಿಚಾರಗಳನ್ನು ಮುಚ್ಚಿಡುತ್ತಿರುವುದು ಸರಿಯಲ್ಲ ಎಂದು ಅಂದುಕೊಂಡು ನಿಜ ವಿಚಾರವನ್ನು ಮಾಧವನ ಮುಂದೆ ಬಾಯಿ ಬಿಡುತ್ತಾಳೆ. ಮಾಧವಗೆ ಬಹಳಷ್ಟು ಶಾಕ್ ಆಗುತ್ತದೆ. ಯಾಕೆಂದರೆ ಮಾಧವ ನಿಧಿ ಆಕ್ಸಿಡೆಂಟ್ ಮಾಡಿದ್ದಾಳೆ ಎಂದು ತಿಳಿದು ಕೂಡಲೇ ಆತನಿಗೆ ಬಹಳಷ್ಟು ನೋವಾಗುತ್ತದೆ.

ನಿಧಿ ಮಾಡಿದ ತಪ್ಪಿಗೆ ಅಭಿ ಹಾಗೆಯೇ ಸಮರ್ಥ್ ಶಿಕ್ಷೆ ಅನುಭವಿಸುವುದು ಸರಿಯಲ್ಲ, ಕಾರು ಅಭಿಯ ಹೆಸರಿನಲ್ಲಿದೆ. ಆದರೆ ಅದನ್ನು ಚಲಾಯಿಸಿದ್ದು ಮಾತ್ರ ನಿಧಿ. ತಪ್ಪು ಮಾಡದವರು ಶಿಕ್ಷೆ ಅನುಭವಿಸುವುದು ಬೇಡ . ಯಾರು ತಪ್ಪು ಮಾಡಿದ್ದಾರೋ ಅವರೇ ಶಿಕ್ಷೆಯನ್ನ ಅನುಭವಿಸಬೇಕು ಎಂದು ಖಡಕ್ಕಾಗಿ ಮಾಧವ ಹೇಳುತ್ತಾರೆ. ಮಾಧವನ ಮಾತು ಕೇಳಿದ ನಿಧಿಗೆ ಬಹಳ ನೋವಾಗುತ್ತದೆ. ಸಂಕಟವಾಗುತ್ತದೆ. ತಾನು ಏನು ಮಾಡಬೇಕೆಂದು ತಿಳಿಯದಾಗುತ್ತದೆ. ಮೊದಲು ನಿಧಿಗೆ ಕೊಂಚ ಆಘಾತವಾಗುತ್ತದೆ. ಯಾಕೆಂದರೆ ತುಳಸಿ ಈ ವಿಚಾರವನ್ನು ಯಾರ ಬಳಿಯೂ ಕೂಡ ಹೇಳಿರುವುದಿಲ್ಲ ಎಂದು ಅಂದುಕೊಂಡ ನಿಧಿ ಗೆ ಕೊಂಚ ಶಾಕ್ ಆಗಿರುತ್ತದೆ. ತುಳಸಿ ದೊಡ್ಡಮ್ಮ , ನನ್ನ ಬಳಿ ನಿಜ ಹೇಳಬೇಡ ಎಂದು ಹೇಳಿ ದೊಡ್ಡಪ್ಪನ ಬಳಿ ಈ ವಿಚಾರವನ್ನು ಹೇಳಿದ್ದಾರೆ ಎಂದುಕೊಂಡು ಜೋರಾಗಿ ಅಳುತ್ತಾಳೆ.

srirastu shubhamastu serial 11th February written update

ಆದರೆ ತುಳಸಿಗೆ ನಿಧಿಯ ಮುಖವನ್ನು ನೋಡಲು ಧೈರ್ಯ ಸಾಕಾಗುವುದಿಲ್ಲ . ಮಾಧವ ಎಲ್ಲರ ಜೊತೆ ಕುಳಿತುಕೊಂಡು ಮಾತನಾಡುತ್ತಾನೆ . ನೋಡು ನಿಧಿ ನಿನ್ನಿಂದಾಗಿ ಬೇರೆಯವರು ಶಿಕ್ಷೆ ಅನುಭವಿಸುವುದು ಸರಿಯಲ್ಲ. ಮಾಡಿದ ತಪ್ಪಿಗೆ ನೀನು ಶಿಕ್ಷೆಯನ್ನು ಅನುಭವಿಸು ಇದರಿಂದ ನಿನಗೆ ಮನಸ್ಸಿನ ಭಾರವು ಕಡಿಮೆಯಾಗುತ್ತದೆ. ನೀನು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿದರೆ ಏನಾಗುವುದಿಲ್ಲ ಎಂದು ಹೇಳುತ್ತಾರೆ . ಇದನ್ನು ಕೇಳಿದ ನಿಧಿ ಜೋರಾಗಿ ಅಳುತ್ತಾಳೆ. ಹಾಗೆಯೇ ನಡೆದ ಸತ್ಯವನ್ನು ಎಲ್ಲರ ಎದುರು ಬಿಚ್ಚಿಡುತ್ತಾಳೆ. ನಿಧಿಯ ಮಾತು ಕೇಳಿ ಮಹೇಶನಿಗೆ ಬಹಳಷ್ಟು ನೋವಾಗುತ್ತದೆ. ಇದ್ದ ಒಬ್ಬ ಮಗಳು ಚೆನ್ನಾಗಿ ಬೆಳೆಯಲಿ ಎಂದುಕೊಂಡರೆ ಈ ರೀತಿ ಜೈಲು ಪಾಲಾಗುತ್ತಾಳೆ. ಎಂದು ಮಹೇಶ ಕೂಡ ಅಂದುಕೊಂಡಿರುವುದಿಲ್ಲ ಈಗ ಶಾರ್ವರಿಗೆ ಬಹಳಷ್ಟು ನೋವಾಗುತ್ತದೆ. ತಾನು ತಪ್ಪು ಮಾಡಿದ್ದು ಆದರೆ ನನ್ನ ಮಗಳು ಶಿಕ್ಷೆ ಅನುಭವಿಸುವ ಹಾಗೆ ಆಗುತ್ತಿದೆಯಲ್ಲ ಎಂದು ಬಹಳಷ್ಟು ನೊಂದುಕೊಳ್ಳುತ್ತಾಳೆ.


ತಂದೆಯ ಬಳಿ ನಿಜ ವಿಚಾರ ಬಿಚ್ಚಿಟ್ಟ ಅವಿ

ಆ ಕೂಡಲೇ ಅಲ್ಲಿಗೆ ಬಂದ ಅವಿನಾಶ್ ತನ್ನ ತಂದೆಯ ಬಳಿ , ನಿಧಿ ಅರೆಸ್ಟ್ ಆಗುವುದು ಸರಿಯಲ್ಲ ಯಾಕೆಂದರೆ ನಿಧಿಗಿಂತ ಮುಂಚಿತವಾಗಿ ಒಂದು ಕಾರು ಪಾಸಾಗಿದೆ. ಆ ಕಾರಿನ ಡೀಟೇಲ್ಸ್ ಕೂಡ ಸಿಗಬಹುದು ಆದುದರಿಂದ ನಿಧಿ ಕಾರಿನ ಮುಂದೆ ಇದ್ದ ಕಾರು ರವೀಂದ್ರ ಹಾಗೂ ದತ್ತ ಅವರಿಗೆ ಡಿಕ್ಕಿ ಹೊಡೆದಿದೆ . ಹಿಂದೆಯಿಂದ ಬಂದ ನಿಧಿ ಕಾರು ಅವರಿಗೆ ಡಿಕ್ಕಿಯ ಹೊಡೆದಿಲ್ಲ ಎಂದು ಹೇಳುತ್ತಾನೆ. ಇದನ್ನು ಕೇಳಿದ ಶಾರ್ವರಿಗೆ ಬಹಳ ನಡುಕ ಶುರುವಾಗುತ್ತದೆ. ನಾನು ಮಾಡಿದ ಆಕ್ಸಿಡೆಂಟ್ ನನಗೆ ತಿರುಗು ಬಾಣವಾಗಿ ಬರುತ್ತಿದೆ ಎಂದು ಮನದಲ್ಲಿ ಆಂದುಕೊಳ್ಳುತ್ತಾಳೆ. ಶಾರ್ವರಿ ಮನದಲ್ಲಿಯೇ ಬಹಳ ಭಯಪಟ್ಟುಕೊಂಡಿರುತ್ತಾಳೆ.

ಗಂಡನನ್ನು ಬಚಾವ್ ಮಾಡಲು ಹರ ಸಾಹಸ ಪಡುತ್ತಿರುವ ಸಿರಿ

ಇತ್ತ ಸಿರಿ ತನ್ನ ಗಂಡನನ್ನು ಉಳಿಸಿಕೊಳ್ಳಲು ಬಹಳಷ್ಟು ಪರದಾಡುತ್ತಿರುತ್ತಾಳೆ. ಆಕೆಗೆ ತನ್ನ ಗಂಡ ಎಂದರೆ ಬಹಳ ಪ್ರೀತಿ, ಗಂಡನ ಮೇಲೆ ಸುಮ್ಮನೆ ಆಪಾದನೆ ಬಂದರೂ ತುಳಸಿ ಆದನ್ನು ಮುಚ್ಚಿಡುತ್ತಾಳೆ. ಸಿರಿಗೆ ಆ ವಿಚಾರದಲ್ಲಿ ತುಳಸಿ ಮೇಲೆ ಬಹಳಷ್ಟು ಪ್ರೀತಿ ಇದೆ ತುಳಸಿಯನ್ನ ಹೆತ್ತ ಅಮ್ಮನಿಗಿಂತ ಹೆಚ್ಚಾಗಿ ಸಿರಿ ನೋಡುತ್ತಿದ್ದಳು ಆದರೆ ಇದೀಗ ನೀವು ನನ್ನ ಅಮ್ಮ ಆಗಲು ಸಾಧ್ಯವೇ ಇಲ್ಲ ಎಂದು ನಿಧಿ ಕಡ್ಡಿ ಮುರಿದ ಹಾಗೆ ಹೇಳಿಬಿಡುತ್ತಾಳೆ. ನಿಧಿಯ ಮಾತಿಗೆ ಬೇಸರಪಟ್ಟುಕೊಂಡ ತುಳಸಿಗೆ ದಿಕ್ಕೇ ತೋಚದಂತಾಗಿದೆ. ತುಳಸಿಗೆ ತನ್ನ ಮಗ ಜೈಲಿನಲ್ಲಿ ಇರುವುದು ಬಹಳಷ್ಟು ನೋವು ತಂದಿದೆ. ಇದರ ಬಗ್ಗೆ ಸಮರ್ಥ ಬಳಿ ಕೂಡ ಚರ್ಚೆ ಮಾಡಿರುತ್ತಾರೆ ಆದರೆ ನಿಧಿಯನ್ನ ಉಳಿಸುವುದಕ್ಕೋಸ್ಕರ ಸಮರ್ಥ್ ಮಾಡುತ್ತಿರುವ ತ್ಯಾಗ ಎನ್ನುವುದು ತುಳಸಿಗೆ ತಿಳಿಯುತ್ತದೆ ಮುಂದೇನಾಗುತ್ತದೆ ಕಾದು ನೋಡಬೇಕು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X