Srirastu Shubhamastu ; ಮಾಧವನ ಮಕ್ಕಳಿಗಾಗಿ ತ್ಯಾಗ ಮಾಡುತ್ತಿರುವ ತುಳಸಿ ..!
ಮಾಧವ ಕಟ್ಟಿ ಬೆಳೆಸಿದ ಕಂಪನಿಯ ಆನಿವರ್ಸರಿ ಸೆಲೆಬ್ರೇಟ್ ಮಾಡುವ ದಿನ ಹತ್ತಿರ ಬಂದಿದೆ. ಮನೆ ಮಂದಿ ಎಲ್ಲಾ ಒಟ್ಟಾಗಿ ಹಾಡು ಹಾಡಿ ಇಂದಿನ ದಿನವನ್ನು ಬಹಳಷ್ಟು ಖುಷಿಯಿಂದ ಕಾಲ ಕಳೆಯಬೇಕು ಎಂದುಕೊಂಡು ಇರುತ್ತಾರೆ. ಆದರೆ ಅಭಿ ಯ ಮಾತಿನ ಪ್ರಕಾರ ಕಂಪನಿಯ ಆನಿವರ್ಸರಿ ಸೆಲೆಬ್ರೇಟ್ ಆದ ಬಳಿಕ ನನಗೆ ಆಸ್ತಿಯಲ್ಲಿ ಭಾಗ ಬೇಕು. ಅಲ್ಲಿಯ ತನಕ ನಾನು ಸುಮ್ಮನೆ ಕೂರುವುದು ಇಲ್ಲ ಎಂದು ಅಭಿ ಮಾತು ಮಾಧವನ ಮನದಲ್ಲಿ ಹಚ್ಚೊತ್ತಿದೆ.
ಆಸ್ತಿಯಲ್ಲಿ ಭಾಗ ಕೇಳುವ ನಿರ್ಧಾರಕ್ಕೆ ಬಂದ ಅಭಿ
ಒಂದು ಮಾತು ಆಡದೆ ಅಭಿ ಮಾತಿಗೆ ಆಯಿತು ಎನ್ನುವ ಉತ್ತರವನ್ನು ಕೊಡುತ್ತಾರೆ. ಅಭಿ ಗೆ ಕೂಡ ಅದುವೇ ಬೇಕಾಗಿತ್ತು. ಯಾಕೆಂದರೆ ಆಫೀಸ್ ನವರಿಗೆ ಮನೆಯಲ್ಲಿ ಆಗುತ್ತಿರುವ ವಿಚಾರಗಳು ತಿಳಿಯಬಾರದು. ನಮ್ಮ ಮನೆಯ ಮರ್ಯಾದೆಯನ್ನು ನಾವೇ ಕಳೆದುಕೊಳ್ಳುವುದು ಯಾಕೆ ಎನ್ನುವ ಆಲೋಚನೆ ಎಲ್ಲರಿಗೂ ಬಂದೇ ಬರುತ್ತದೆ. ಇನ್ನೂ ಅವಿ ಮಾತ್ರ ಏನು ಮಾತನಾಡದೆ ಸುಮ್ಮನೆ ಇರುತ್ತಾನೆ.

ಯಾಕೆಂದರೆ ಆತನಿಗೆ ತನ್ನ ತಮ್ಮ ಎಲ್ಲೂ ಹೋಗಬಾರದು ಆತ ನಮ್ಮ ಜೊತೆಗೆ ಇರಬೇಕು ಎನ್ನುವ ಬಯಕೆ. ಅಭಿ ಯಾಕೆ ಹೀಗೆಲ್ಲ ಆಡುತ್ತಿದ್ದಾನೆ. ಆತನಿಗೆ ತಾವು ಮಾಡುತ್ತಿರುವ ಕೆಲಸ, ತ್ಯಾಗ ತಿಳಿಯುವುದು ಇಲ್ಲವೇ ಎಂದು ಆಲೋಚನೆ ಮಾಡುತ್ತಾ ಇರುತ್ತಾನೆ. ಇನ್ನೂ ತುಳಸಿ ಹಾಗೂ ಮಾಧವ ಮಾತ್ರ ಅಭಿ ಈ ಮನೆಯಿಂದ ಹೋಗದೆ ಇರುವ ಹಾಗೆ ಆಗಲಿ. ಆತ ಖುಷಿಯಾಗಿ ಇರಬೇಕು ಎಂದು ಆಲೋಚನೆ ಮಾಡುತ್ತಾನೆ. ತುಳಸಿ ಬಳಿ ಅಭಿ ಒಂದು ಮಾತು ಹೇಳುತ್ತಾನೆ. ನೀವು ಈ ಮನೆ ಬಿಟ್ಟು ಹೋಗುವುದು ಆದರೆ ನಾನು ಖಂಡಿತವಾಗಿಯೂ ಈ ಮನೆಯಲ್ಲಿ ಉಳಿಯುತ್ತೇನೆ ಎಂದು ಬಹಳ ಕೋಪದಲ್ಲಿ ಹೇಳುತ್ತಾನೆ.
ಅಭಿ ಮಾತಿಗೆ ಕಠಿಣ ನಿರ್ಧಾರ ತೆಗೆದುಕೊಂಡ ತುಳಸಿ
ಆತನಿಗೆ ತುಳಸಿ ಮೇಲೆ ಉತ್ತಮ ಅಭಿಪ್ರಾಯ ಇಲ್ಲ. ತುಳಸಿ ಅದೆಷ್ಟೇ ಒಳ್ಳೆಯ ಕೆಲಸ ಮಾಡಿರಲಿ ಆದರೆ ಅಭಿ ಗೆ ಮಾತ್ರ ತುಳಸಿ ಕಂಡರೆ ಆಗುತ್ತಿರಲಿಲ್ಲ. ಶಾರ್ವರಿ ಮಾತೇ ಕೇಳುವ ಅಭಿಗೆ ಮಾಧವನ ಮಾತು ಕೊಂಚ ಕಠೋರವಾಗಿ ಕಾಣುತ್ತದೆ. ಅವಿ ಮಾಧವಗೆ ತುಂಬಾ ಹತ್ತಿರ ಆಗುತ್ತಿದ್ದಾನೆ. ಆದರೆ ಅಭಿಗೆ ಮಾಧವನನ್ನು ಕಂಡರೆ ಅಷ್ಟಕ್ಕಷ್ಟೆ. ಆದರೂ ಮಾಧವ ಮಗನ ಬಗ್ಗೆ ಯೋಚನೆ ಮಾಡುತ್ತಿರುವಾಗ ತುಳಸಿಗೆ ಹೇಳುತ್ತಾನೆ
ಗಂಡನನ್ನು ಸಮಾಧಾನಪಡಿಸಿದ ತುಳಸಿ
ನೀವು ಎನು ಯೋಚನೆ ಮಾಡಬೇಡಿ. ನಿಮ್ಮ ಮಕ್ಕಳ ಜೊತೆ ನೀವು ಖುಷಿಯಾಗಿ ನಗುತ್ತಾ ಕಾಲ ಕಳೆಯುತ್ತಿರಾ. ನೀವು ಹಾಗೆ ಖುಷಿಯಾಗಿ ಇರುತ್ತೀರಿ ಎನ್ನುವ ಭರವಸೆ ನನಗಿದೆ ಎಂದು ತುಳಸಿ ಹೇಳುತ್ತಾಳೆ. ಆದರೆ ಮಾಧವಗೆ ತಿಳಿದೇ ಇರುವುದಿಲ್ಲ. ತುಳಸಿ ತಮಗಾಗಿ ಬಹಳ ದೊಡ್ಡ ತ್ಯಾಗಕ್ಕೆ ಮುಂದಾಗುತ್ತಾರೆ ಎನ್ನುವ ಕಿಂಚಿತ್ತೂ ಆಲೋಚನೆ ಕೂಡ ಇರುವುದು ಇಲ್ಲ . ಇದೆಲ್ಲದರ ನಡುವೆ ಇತ್ತ ತುಳಸಿಯ ಸೌಂದರ್ಯವನ್ನು ನೋಡಿ ಮಾತು ಬಾರದೆ ಮೂಕನಾಗಿ ನಿಂತಿದ್ದಾನೆ ಮಾಧವ. ಮಾಧವನ ನೋಟಕ್ಕೆ ನಾಚಿ ನೀರಾಗಿದ್ದಾಳೆ ತುಳಸಿ.

ಮಾಧವನ ಮಾತಿಗೆ ನಾಚಿ ನೀರಾದ ತುಳಸಿ
ಇನ್ನೂ ತುಳಸಿಯ ಬಳಿ ಮಾಧವ ಒಂದು ಸೆಲ್ಪಿ ತೆಗೆಯುವಂತೆ ಹೇಳುತ್ತಾನೆ. ಇದನ್ನು ಕೇಳಿದ ತುಳಸಿಗೆ ಬಹಳ ಖುಷಿ ಆಗುತ್ತದೆ. ಆಕೆ ಖುಷಿಯಿಂದಲೇ ಸೆಲ್ಲಿ ಗೆ ಪೋಸ್ ನೀಡುತ್ತಾಳೆ. ಆಕೆಗೆ ಬಹಳ ಖುಷಿ ಆಗುತ್ತದೆ. ಇತ್ತ ಶಾರ್ವರಿ ತನ್ನ ಪಿತೂರಿ ಕೆಲಸಗಳನ್ನು ಮುಂದುವರೆಸಿದ್ದಾಳೆ. ಅಭಿ ಬಳಿ ಇಲ್ಲ ಸಲ್ಲದನ್ನು ಹೇಳಿ ತಲೆ ಕೆಡಿಸಿ ಬಿಟ್ಟಿದ್ದಾಳೆ. ಅಭಿ ಗೆ ಹೇಗಾದರೂ ನಾನು ಭಾಗ ಕೇಳಲು ಹೋದರೆ ಖಂಡಿತವಾಗಿಯೂ ಕೊಡುವುದಿಲ್ಲ. ಆದುದರಿಂದ ನಾನು ಸಭೆಯಲ್ಲಿ ಎಲ್ಲರ ಮುಂದೆ ಆಸ್ತಿಯಲ್ಲಿ ಪಾಲು ಬೇಕು ಎಂಬುವುದನ್ನು ಕೇಳುತ್ತೇನೆ. ಇಲ್ಲವಾದರೆ ನನಗೆ ಪಾಲು ಸಿಗುವುದು ಡೌಟ್ ಎಂದು ಹೇಳುತ್ತಾರೆ. ಇದನ್ನು ಕೇಳಿದ ಶಾರ್ವರಿ ಗೆ ಮಾತ್ರ ಒಳಗೊಳಗೇ ನಗು ಬರುತ್ತಿದೆ. ಮಾಧವನ ಮನೆ ಒಡೆದು ನುಚ್ಚು ನೂರಾಗಬೇಕು ಎನ್ನುವ ಆಸೆಗೆ ಇನ್ನಷ್ಟು ಪುಷ್ಠಿ ಸಿಕ್ಕಿದೆ.


Click it and Unblock the Notifications











