Srirastu Shubhamastu ; ದೀಪಿಕಾ ಚುಚ್ಚು ಮಾತಿಗೆ ಬೇಸರಗೊಂಡ ಪೂರ್ಣಿಮಾ ಅವಿಯಿಂದ ದೂರ ಹೋಗ್ತಾಳಾ..?
ದಿನೇ ದಿನೇ ದೀಪಿಕಾ ಚುಚ್ಚು ಮಾತುಗಳಿಂದ ಪೂರ್ಣಿಮಳನ್ನು ನಿಂದನೆ ಮಾಡುತ್ತಲೇ ಇದ್ದಾಳೆ. ಆಕೆಗೆ ಪೂರ್ಣಿಮಾ ಎಂದರೆ ಬಹಳ ಕೋಪ. ಆಕೆ ಅನಾಥೆ ಎನ್ನುವ ಕಾರಣಕ್ಕೆ ಆಕೆಯ ಕುರಿತು ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾಳೆ. ಪೂರ್ಣಿಮಾಗೆ ಮಗು ಆಗಿಲ್ಲ ಎಂದು ಬಹಳ ಆತಂಕದಲ್ಲಿ ಇರುತ್ತಾಳೆ. ಆದರೆ ಇದನ್ನೇ ನೆಪವಾಗಿ ಇಟ್ಟುಕೊಂಡ ದೀಪಿಕಾ ತನ್ನ ಮಾತುಗಳಿಂದ ಪೂರ್ಣಿಮಾಳನ್ನು ಇನ್ನೂ ನೋಯಿಸುತ್ತಿದ್ದಾಳೆ. ಪೂರ್ಣಿಮಾ ಅಡುಗೆ ಮಾಡುವಾಗ ಅಲ್ಲಿಗೆ ಬಂದು ಅಕ್ಕ ನಿಮಗೆ ಏನಾದರು ಸಹಾಯ ಬೇಕೇ ಎಂದು ದೀಪಿಕಾ, ಕೇಳುತ್ತಾಳೆ. ಇದನ್ನು ಕೇಳಿದ ಪೂರ್ಣಿಮಾ ಬೇಡ ಎಂದು ಹೇಳುತ್ತಾಳೆ.
ಪೂರ್ಣಿಮಾನ ಸಪ್ಪೆಮುಖ ನೋಡಿದ ದೀಪಿಕಾ ಮಾತ್ರ ಆಕೆಗೆ ನೋವು ಮಾಡುವುದನ್ನು ಬಿಡುವುದಿಲ್ಲ. ಯಾಕೆ ಏನಾಯಿತು ಅಕ್ಕ, ಯಾಕಿಷ್ಟು ಬೇಸರ ಮಾಡಿಕೊಂಡು ಇದ್ದೀರಿ. ನಿಮಗೆ ಇನ್ನೂ ಮಗು ಆಗಲಿಲ್ಲ ಅಲ್ವಾ ಆ ಬಗ್ಗೆ ನಿಮಗೆ ತುಂಬಾ ನೋವು ಇದೆ ಅನ್ನಿಸುತ್ತಿದೆ ಅಲ್ವಾ ಎಂದು ದೀಪಿಕಾ ಹೇಳುತ್ತಾಳೆ. ಇದನ್ನು ಕೇಳಿದ ಪೂರ್ಣಿಮಾ ಮಾತ್ರ ಏನು ಮಾತನಾಡದೆ ಸುಮ್ಮನೆ ಆಗುತ್ತಾಳೆ. ಅದೆಷ್ಟೇ ಬಾರಿ ನೋವಾದರೂ ಅದನ್ನು ಯಾರ ಬಳಿ ಕೂಡ ಪೂರ್ಣಿಮಾ ಹೇಳಿಕೊಳ್ಳುವುದಿಲ್ಲ ಇನ್ನು ದೀಪಿಕಾಗೆ ಪೂರ್ಣಿಮಾಗೆ ಹೇಗೆಲ್ಲ ನೋವು ಮಾಡಬಹುದು ಎನ್ನುವುದು ಆಲೋಚನೆ ಇರುತ್ತದೆ.

ಪೂರ್ಣಿಮಾಗೆ ಮಕ್ಕಳು ಆಗುವುದಿಲ್ಲ ಎನ್ನುವ ನೋವು ಇರುತ್ತದೆ. ಒಂದು ಹೆಣ್ಣಾದ ಮೇಲೆ ಆಕೆಗೆ ತಾಯಿಯಾಗುವ ಅವಕಾಶ ಕೂಡ ಇರಬೇಕು ಎಂದು ಪೂರ್ಣಿಮಾ ಅಂದುಕೊಳ್ಳುತ್ತಿರುವ ವೇಳೆ ದೀಪಿಕಾ ನಿಮಗೆ ತಾಯಿಯಾಗಬೇಕು ಎನ್ನುವ ಬಯಕೆ ಆದರೆ ನಿಮಗೆ ಮಕ್ಕಳಾಗುತ್ತಿಲ್ಲ ಆದರೆ ಭಾವ ಅವರೇನು ತಪ್ಪು ಮಾಡಿದ್ದಾರೆ ಇದೀಗ ಅವರು ಬೇರೆ ಮದುವೆಯಾಗಿದ್ದರು ಕೂಡ ಅವರಿಗೆ ಇಬ್ಬರು ಮಕ್ಕಳಾಗುತ್ತಿದ್ದವು ಮಕ್ಕಳ ಜೊತೆ ಹಾಯಾಗಿ ದಿನ ಕಳೆಯುತ್ತಿದ್ದರು ಎಂದಾಗ ಮಾತ್ರ ಪೂರ್ಣಿಮಾ ಗೆ ಬಹಳ ಬೇಸರ ಆಗುತ್ತದೆ.
ದೀಪಿಕಾ ಚುಚ್ಚು ಮಾತಿಗೆ ನೊಂದ ಪೂರ್ಣಿಮಾ..!
ತನ್ನ ಗಂಡ ತನ್ನಿಂದಾಗಿಯೇ ನರಕಯಾತನೆ ಅನುಭವಿಸುತ್ತಿದ್ದಾರೆ ಎಂದು ಮನದಲ್ಲಿ ಬಹಳ ನೋವುಂಡ ಕಣ್ಣೀರು ಹಾಕುತ್ತಾಳೆ. ದೀಪಿಕಾಗೆ ಇದೆಲ್ಲವನ್ನೂ ನೋಡಿ ಮನದಲ್ಲಿಯೇ ನಗು ಬರುತ್ತದೆ. ಪೂರ್ಣಿಮಾ ಹೀಗೆಯೇ ನರಳುತ್ತಾ ಇರಲಿ ಆಕೆಗೆ ಮಕ್ಕಳು ಆಗದೆ ನರಳಬೇಕು ಎಂದು ಆಕೆಯ ಮನದಲ್ಲಿ ಅಂದುಕೊಳ್ಳುತ್ತಾಳೆ. ಇನ್ನು ಪೂರ್ಣಿಮಾ ಮಾತ್ರ ಅವಿಯನ್ನು ಬಿಟ್ಟು ಹೋಗುವ ನಿರ್ಧಾರವನ್ನು ಮಾಡುತ್ತಾಳೆ ಆಕೆಗೆ ಅವಿ ಎಂದರೆ ಪಂಚಪ್ರಾಣ. ಅಭಿಗೋಸ್ಕರ ಏನು ಮಾಡಲು ಕೂಡ ಆಕೆ ಹಿಂದೆ ಮುಂದೆ ನೋಡುವುದಿಲ್ಲ
ಮಕ್ಕಳ ಬಗ್ಗೆ ಕನಸು ಕಂಡಿದ್ದ ಅಭಿ
ಅವಿಗೆ ಮಕ್ಕಳೆಂದರೆ ಪಂಚಪ್ರಾಣ ಆದರೆ ತೆರಿಗೆ ಮಕ್ಕಳು ಕೊಡುವ ಶಕ್ತಿ ಇಲ್ಲ ಎಂದು ಗೊತ್ತಾದ ಮೇಲೆ ಆಕೆಗೆ ಅವಿಯ ಜೊತೆ ಬದುಕಲು ಇಷ್ಟವಿಲ್ಲ ಹೇಗಾದರೂ ಮಾಡಿ ಮನೆ ಬಿಟ್ಟು ಹೋದರೆ ಅಭಿ ಖಂಡಿತವಾಗಿಯೂ ಬೇರೆ ಮದುವೆಯನ್ನು ಆಗುತ್ತಾನೆ. ಅದರಿಂದಾಗಿ ಅವಿ ಬೇರೆ ಮದುವೆ ಮಾಡಿಕೊಂಡು ಸುಖವಾಗಿರಲಿ ಎಂದು ಮನದಲ್ಲಿ ಅಂದುಕೊಳ್ಳುತ್ತಾಳೆ.
ಶಾರ್ವರಿ ಮಾತಿಗೆ ಸುಮ್ಮನಾದ ಸಮರ್ಥ್
ಹಾಗೆಯೇ ಇನ್ನು ಮೇಲೆ ಅವಿಯ ಜೊತೆ ಸಂಸಾರ ಮಾಡದೇ ಮನೆ ಬಿಟ್ಟು ಹೋಗೋ ನಿರ್ಧಾರವನ್ನ ತೆಗೆದುಕೊಳ್ಳುತ್ತಾಳೆ. ಇನ್ನು ಶಾರ್ವರಿ ಮಗಳನ್ನು ಮನೆಗೆ ಕರೆದುಕೊಂಡು ಸಮರ್ಥ ಬರುತ್ತಾನೆ. ಮನೆಗೆ ಬರುವ ವೇಳೆ ಕೊಂಚ ತಡವಾಗುತ್ತದೆ. ಆಗ ಶಾರ್ವರಿ ಪ್ರಶ್ನೆ ಮಾಡುತ್ತಾಳೆ. ಸಮರ್ಥ್ ತನ್ನ ಅಣ್ಣನ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುತ್ತಾನೆ. ಇನ್ನು ತುಳಸಿಯವರು ನಮ್ಮ ಮನೆಯ ಕಣ್ಣು . ಅವರಿಗೆ ಏನಾಗಿದೆ ಎನು ಗೊತ್ತಿಲ್ಲ ನೀನಾದರೂ ಹೇಳಪ್ಪ ಅವರಿಗೆ ಏನಾಗಿದೆ ಎಂದು, ಯಾವತ್ತೂ ತಲೆ ಸುತ್ತುತ್ತ್ತದೆ ಎಂದು ಹೇಳುತ್ತಿರುತ್ತಾರೆ ಅಂತಹದ್ದು ಏನಾಗಿದೆ ಅವರಿಗೆ ಎಂದು ಶಾರ್ವರಿ ಕೇಳಿದಾಗ ಏನು ಹೇಳದೆ ಸುಮ್ಮನಾಗುತ್ತಾನೆ.


Click it and Unblock the Notifications