Srirastu Shubhamastu ; ಪೂರ್ಣಿಮಗೋಸ್ಕರ ತುಳಸಿ ದಿಟ್ಟ ನಿರ್ಧಾರ, ತುಳಸಿ ನಿರ್ಧಾರಕ್ಕೆ ಮನೆ ಮಂದಿ ಶಾಕ್...!

By ಪೂರ್ವ

ತುಳಸಿ ಗರ್ಭಿಣಿ ಆಗಿರುವ ವಿಚಾರ ಎಲ್ಲರಿಗೂ ಕೂಡ ತಿಳಿಯಿತು. ಹಾಗೆಯೇ ತನ್ನ ಗರ್ಭದಲ್ಲಿ ಇರುವ ಮಗುವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಆ ಜೀವವನ್ನು ತೆಗೆಯಬಾರದು. ಆ ಮಗುವನ್ನು ಪೂರ್ಣಿಮಾ ಕೈ ಗೆ ಒಪ್ಪಿಸಬೇಕು ಎಂದುಕೊಂಡು ಇರುತ್ತಾಳೆ. ಪೂರ್ಣಿಮಾ ಗೆ ಮಕ್ಕಳು ಎಂದರೆ ಪಂಚ ಪ್ರಾಣ ಆ ಪ್ರಕಾರವಾಗಿ ಮಗುವನ್ನು ಹೆತ್ತು ಪೂರ್ಣಿಮಾ ಕೈ ಗೆ ಒಪ್ಪಿಸಬೇಕು ಎಂದುಕೊಂಡು ಇರುತ್ತಾಳೆ. ಈ ಬಗ್ಗೆ ತುಳಸಿ ಡಾಕ್ಟರ್ ಬಳಿ ಚರ್ಚೆ ಮಾಡಿದ್ದಾಗ ಡಾಕ್ಟರ್ ಇಂತಹ ಅಪರೂಪದ ವಿಚಾರ ನಡೆಯುತ್ತಿರುವುದರ ಬಗ್ಗೆ ಹೇಳುತ್ತಾರೆ.

ಹೀಗೆಲ್ಲ ಬಹಳಷ್ಟು ಬಾರಿ ನಡೆದಿದೆ ಎಂದು ಹೇಳಿ ಹಲವು ಎಕ್ಸಾಂಪಲ್ ನೀಡುತ್ತಾರೆ. ಇನ್ನು ತುಳಸಿ ಗೆ ಆ ವೇಳೆ ಕೊಂಚ ಧೈರ್ಯ ಬರುತ್ತದೆ. ಹೇಗಾದರೂ ಮಾಡಿ ತನ್ನ ಮಗುವನ್ನು ಬದುಕಿಸಬೇಕು ಎಂದುಕೊಳ್ಳುತ್ತಾಳೆ. ಡಾಕ್ಟರ್ ಕೂಡ ಅದಕ್ಕೆ ಪ್ರೋತ್ಸಾಹ ನೀಡುತ್ತಾರೆ . ಇನ್ನೂ ಈ ವಿಚಾರಗಳನ್ನು ಮನೆಯವರ ಮುಂದೆ ಮುಚ್ಚಿಟ್ಟಿರುವ ಮಾಧವ ಹಾಗು ತುಳಸಿ ಗೆ ಇದೀಗ ಬಿಗ್ ಶಾಕ್ ಎದುರಾಗಿದೆ.ಯಾಕೆಂದರೆ ಮಾಧವ ಹಾಗು ತುಳಸಿ ಎಲ್ಲರಿಂದಲೂ ಈ ವಿಚಾರ ಮುಚ್ಚಿಡುತ್ತಾರೆ. ಆದರೆ ಶಾರ್ವರಿ ಗೆ ತುಳಸಿ ಗೆ ಏನಾಗಿದೆ ಎನ್ನುವುದು ತಿಳಿದಿದೆ.

srirastu shubhamastu serial 13th October written update

ಮನೆಯವರು ಎಲ್ಲರೂ ಕುಳಿತು ಮಾತನಾಡಬೇಕಾದರೆ ಶಾರ್ವರಿ ಕೊಂಚ ಜೋರಾಗಿ ಮಾತನಾಡುತ್ತಾಳೆ. ಅಕ್ಕನಿಗೆ ಯಾಕೆ ಹುಷಾರಿಲ್ಲ ಎನ್ನುವುದು ನನಗೆ ಗೊತ್ತಿದೆ ಅವರು ಈಗ ಒಂದು ಮಗುವಿನ ತಾಯಿಯಾಗುತ್ತಿದ್ದಾರೆ, ಎಂದಾಗ ತುಳಸಿಗೆ ದೊಡ್ಡ ಶಾಕ್ ಆಗುತ್ತದೆ. ಮನೆಯವರು ಮಾಧವನ ಮುಖ ನೋಡುತ್ತಾರೆ. ಶಾರ್ವರಿಯ ಮಾತಿನಿಂದ ಮಾಧವ ಗೆ ಕೊಂಚ ಮುಜುಗರ ಆಗುತ್ತದೆ. ಏನು ಮಾತನಾಡಬೇಕು ಎಂದು ತಿಳಿಯದಾಗುತ್ತದೆ.

ಮನೆಯವರ ಮುಂದೆ ತಲೆ ತಗ್ಗಿಸಿದ ಮಾಧವ

ನನಗೆ ಸ್ವಲ್ಪ ಸಮಯದವರೆಗೆ ಕಾಲಾವಕಾಶ ಕೊಡಿ ಇಂತಹ ಸಮಸ್ಯೆಯನ್ನು ನಾನು ಇತ್ಯರ್ಥ ಮಾಡಿಸಿ ಕೊಡುತ್ತೇನೆ ಎಂದು ಮಾಧವ ಹೇಳುತ್ತಾರೆ. ಹಾಗೆಯೇ ಆ ಮಗುವನ್ನು ತೆಗೆಸುತ್ತೇನೆ ಎಂದು ಹೇಳಿದಾಗ ತುಳಸಿ ಕೊಂಚ ಗಟ್ಟಿಯಾಗಿಯೇ ಯಾರು ಏನೇ ಹೇಳಿದರೂ ನಾನು ಈ ಮಗುವನ್ನು ತೆಗೆದುವುದಿಲ್ಲ. ಅಂತಹ ದೊಡ್ಡ ತಪ್ಪನ್ನು ನಾನು ಮಾಡಲಾರೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಮಾಧವಗೆ ಎನು ಮಾತನಾಡಬೇಕು ಎಂದು ತಿಳಿಯದಾಗುತ್ತದೆ.

ತುಳಸಿ ಮಾತಿಗೆ ಶಾಕ್ ಆದ ಮಾಧವ

ತುಳಸಿಯ ನಿರ್ಧಾರ ಕೇಳಿ ಮನೆ ಮಂದಿ ಶಾಕ್ ಆಗುತ್ತಾರೆ. ಈ ಹಿರಿ ಮಯಸ್ಸಿನಲ್ಲಿ ತಂದೆ ತಾಯಿ ಆಗುತ್ತಿರುವ ವಿಚಾರ ಎಲ್ಲರಿಗೆ ಮುಜುಗರ ನೀಡುತ್ತಿದೆ. ಆದರೆ ಪೂರ್ಣಿಮಗೋಸ್ಕರ ಆಕೆಯ ಖುಷಿಗಾಗಿ ತುಳಸಿ ತಾನೇ ಮಗುವನ್ನು ಹೆಟ್ಟುಕೊಡಲು ಮುಂದಾಗಿದ್ದಾಳೆ. ಆದರೆ ಇದೆಲ್ಲವನ್ನೂ ನೋಡಿದ ಅಭಿಮಾನಿಗಳು ಮಾತ್ರ ಈ ರೀತಿಯಾಗಿ ಮಾಡಿದರೆ ತುಳಸಿ ಪಾತ್ರದ ತೂಕ ಕಳೆದುಕೊಳ್ಳಬಹುದು ಎಂದು ಸೀರಿಯಲ್ ಪ್ರೇಮಿಗಳು ಒಬ್ಬೊಬ್ಬರಾಗಿಯೇ ಕಾಮೆಂಟ್ ಮಾಡಲು ಶುರು ಮಾಡಿದ್ದಾರೆ.

ಸಿರಿ ಬಳಿ ದುಃಖ ತೋಡಿಕೊಂಡ ಸಮರ್ಥ್

ಅಮ್ಮನಿಗೆ ಬ್ರೈನ್ ಟ್ಯೂಮರ್ ಇದೆ ಎಂದು ಸಮರ್ಥ ಸಿರಿ ಬಳಿ ಹೇಳುತ್ತಾನೆ. ಇದನ್ನೆಲ್ಲ ಕೇಳಿದ ಸಿರಿಗೆ ದುಃಖ ತಡೆಯಲು ಆಗುತ್ತಿಲ್ಲ. ಇನ್ನೇನಾದರೂ ತುಳಸಿ ಗರ್ಭವತಿ ಆಗಿದ್ದಾಳೆ ಎಂದು ತಿಳಿದರೆ ಸಮರ್ಥ್ ರಿಯಾಕ್ಷನ್ ಹೇಗಿರುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X