SrirasthuShubhamasthu ;ಮಾಧವನ ಮನೆಗೆ ಬಂದ ಗೆಳೆಯ,ಇಂಗ್ಲಿಷ್ ಮಾತನಾಡಿದ ತುಳಸಿ,ಮಾಧವನ ಕುಟುಂಬಕ್ಕೆ ಶಾಕ್..!

By ಪೂರ್ವ

ತುಳಸಿ ಇದೀಗ ಎಲ್ಲದರಲ್ಲಿ ಕೂಡ ಸೈ ಎನಿಸಿಕೊಂಡಿದ್ದಾಳೆ. ಅಭಿ ಮಾತನ್ನೆ ಚಾಲೆಂಜ್ ಆಗಿ ತೆಗೆದುಕೊಂಡಿರುವ ತುಳಸಿ ಇದೀಗ ಕಾರು ಓಡಿಸುವುದನ್ನು ಹಾಗೆಯೇ ಭರತನಾಟ್ಯ ಕಲಿತಿದ್ದಾಳೆ. ಇದೀಗ ಇಂಗ್ಲಿಷ್ ಮಾತನಾಡಿ ಎಲ್ಲರ ಮೆಚ್ಚುಗೆಗೆ ಪಾತ್ರ ಆಗಿದ್ದಾಳೆ. ಹೀಗಿರುವಾಗ ದೂರದಿಂದ ಮಾಧವನ ಗೆಳೆಯ ಬರುತ್ತಾನೆ. ಆತನನ್ನು ಬಹಳ ಅದ್ದೂರಿಯಾಗಿ ವೆಲ್ ಕಮ್ ಕೂಡ ಮಾಡಲಾಗುತ್ತದೆ .

ಆದರೆ ಆತನಿಗೆ ಇಂಗ್ಲಿಷ್ ಮಾತನಾಡಲು ಮಾತ್ರ ಗೊತ್ತು ವಿನಃ ಬೇರೆ ಯಾವ ಭಾಷೆಯೂ ಬರಲ್ಲ. ಇಂಥ ಗೆಳೆಯನ ಜೊತೆ ಮಾಧವನ ಬಹಳ ಹರಟೆ ಹೊಡೆಯುತ್ತಾರೆ, ಹಾಗೆಯೇ ಆತನ ಅಡುಗೆಯನ್ನು ಆ ಗೆಳೆಯ ಬಹಳ ಹೊಗಳುತ್ತಾರೆ .ಆಗ ನನ್ನ ಅಡುಗೆ ಮಾತ್ರ ನೀನು ಟೇಸ್ಟ್ ಮಾಡಿದ್ದಿರಾ ನನ್ನ ಹೆಂಡತಿ ಕೂಡ ಬಹಳ ಅದ್ಭುತವಾಗಿ ಅಡುಗೆ ಮಾಡುತ್ತಾರೆ ಎಂದು ಮಾಧವ ಹೇಳಿದಾಗ ಗೆಳೆಯನಿಗೆ ಇನ್ನಷ್ಟು ಖುಷಿ ಆಗುತ್ತದೆ. ಆ ಬಳಿಕ ತಿಂಡಿ ಮಾಡಲು ಎಲ್ಲರೂ ಡೈನಿಂಗ್ ರೂಮ್ ಗೆ ಬರುತ್ತಾರೆ. ತುಳಸಿ ಆದಾಗಲೇ ಎಲ್ಲಾ ರೆಡಿ ಮಾಡಿ ಇರುತ್ತಾಳೆ. ಖಾರ ಪೊಂಗಲ್, ಸಿಹಿ ಪೊಂಗಲ್ , ಪುಳಿಯೋಗರೆ ಎಂದೆಲ್ಲ ನಾನಾ ಬಗೆಯ ತಿಂಡಿ ಮಾಡಿದ್ದಳು ಇದನ್ನು ನೋಡಿದ ಪೂರ್ಣಿಮಾ ಕೂಡ ಬಹಳ ಆಶ್ಚರ್ಯ ಪಡುತ್ತಾಳೆ.ಇದೆನಮ್ಮ ಬಹಳ ಕಡಿಮೆ ಸಮಯದಲ್ಲಿ ನೀವು ಅಡುಗೆ ಇದೆಲ್ಲವನ್ನೂ ಮಾಡಿ ಬಿಟ್ಟಿರಿ ಇದೆಲ್ಲ ನಿಮ್ಮಿಂದ ಹೇಗೆ ಸಾಧ್ಯ ಆಯಿತು ಎಂದಾಗ ತುಳಸಿ ಬಹಳ ಜೋರಾಗಿ ನಗುತ್ತಾಳೆ.

srirastu-shubhamastu-serial-17th-june-written-update

ಆಕೆಗೆ ಅದೆಲ್ಲ ಬಹಳ ಸುಲಭ, ತಾನು ಅಡುಗೆಯನ್ನು ಇಷ್ಟಪಟ್ಟು ಮಾಡುತ್ತಾಳೆ. ಇದರಿಂದಾಗಿ ಇದೆಲ್ಲ ಕೆಲಸ ತುಳಸಿಗೆ ಕಷ್ಟ ಎಂದು ಅನ್ನಿಸುವುದು ಇಲ್ಲ. ಇದನ್ನು ಪೂರ್ಣಿಮಾ ಬಳಿ ಹೇಳುತ್ತಾಳೆ. ಎಲ್ಲರೂ ಡೈನಿಂಗ್ ಟೇಬಲ್ ಬಳಿ ಬರುತ್ತಾರೆ. ಅವರಿಗೆ ಇಷ್ಟ ಆಗಿರುವ ತಿಂಡಿಗಳನ್ನು ತುಳಸಿ ಬಡಿಸುತ್ತಾಳೆ. ತಿಂಡಿಗಳನ್ನು ಟೇಸ್ಟ್ ಮಾಡಿದ ಮಾಧವ ಹಾಗೂ ಆತನ ಗೆಳೆಯ ಬಹಳ ಖುಷಿ ಪಡುತ್ತಾರೆ. ತಿಂಡಿ ಮಾತ್ರ ಬಹಳ ಅದ್ಭುತವಾಗಿ ಇದೆ. ಮಾಧವ ನಿನ್ನ ಹೆಂಡತಿ ಬಹಳ ಚೆನ್ನಾಗಿ ಅಡುಗೆ ಮಾಡಿದ್ದಾರೆ ಎಂದು ಇಂಗ್ಲಿಷ್ ನಲ್ಲಿ ಹೇಳಿದಾಗ ಶಾರ್ವರಿ ಕೊಂಕು ಮಾತುಗಳಿಂದ ಹೇಳುತ್ತಾಳೆ.

ಶಾರ್ವರಿ ಮಾತಿಗೆ ಉತ್ತರ ಕೊಟ್ಟ ತುಳಸಿ

ತುಳಸಿ ಅವರಿಗೆ ಇಂಗ್ಲೀಷ್ ತಿಳಿದಿದ್ದರೆ ತಾನೇ ಮಾತನಾಡಲು ಎಂದಾಗ ತುಳಸಿ ಇಂಗ್ಲಿಷ್ ನಲ್ಲಿ ಮಾತನಾಡುತ್ತಾಳೆ. ಇದನ್ನು ನೋಡಿ ಅಲ್ಲಿ ನೆರೆದವರು ಬಹಳ ಶಾಕ್ ಆಗುತ್ತಾರೆ. ಯಾಕೆಂದರೆ ತುಳಸಿ ಗೆ ಇಂಗ್ಲೀಷ್ ಹೀಗೆ ಯಾವುದೇ ಭಾಷೆ ಆಕೆಗೆ ಬರುತ್ತಾ ಇರಲಿಲ್ಲ. ಆದರೆ ಇದೀಗ ಇಂಗ್ಲೀಷ್ ನ ಬಹಳ ಸ್ಪಷ್ಟವಾಗಿ ಮಾತನಾಡುತ್ತಾಳೆ. ಇನ್ನೂ ದತ್ತನ ಮನೆಯಲ್ಲಿ ಸಮರ್ಥ್ ಮಾತ್ರ ಅಮ್ಮನ ಬಗ್ಗೆ ಬಹಳ ಕೋಪ ಮಾಡಿಕೊಂಡು ಕುಳಿತು ಇರುತ್ತಾನೆ. ನನ್ನ ಅಮ್ಮ ಶ್ರೀಮಂತರ ಮನೆಯಲ್ಲಿ ಇದ್ದಾಳೆ. ನಾನು ಆಕೆಯನ್ನು ಬಹಳಷ್ಟು ಮಿಸ್ ಮಾಡಿಕೊಳ್ಳುತ್ತೇನೆ ಆದರೆ ಆಕೆಗೆ ನನ್ನ ಜೊತೆ ಟೈಮ್ ಸ್ಪೆಂಡ್ ಮಾಡಲು.ಕೂಡ ಆಗುವುದಿಲ್ಲ. ಬೇರೆಯವರಿಗೆ ಆಕೆ ತಾಯಿ ಆಗುತ್ತಿದ್ದಾರೆ ಎನ್ನುತ್ತಾನೆ

srirastu-shubhamastu-serial-17th-june-written-update

ಅಣ್ಣನನ್ನು ಕೋಪದಲ್ಲಿ ದೋಷಿಸುತ್ತಿರುವ ಸಮರ್ಥ್

ಅವರಿಗಾಗಿ ಕಾರು ಕಲಿತಿರುವುದೇನು ಹಾಗೆಯೇ ಡ್ಯಾನ್ಸ್ ಮಾಡಿದ್ದೇನು ಇದೆಲ್ಲವನ್ನೂ ಆ ಅಭಿಯನ್ನ ಮೆಚ್ಚಿಸಲು ಅಮ್ಮ ಕಲಿತಿದ್ದು. ಹೆತ್ತ ಮಗನಿಗೆ ಅಷ್ಟಾಗಿ ಪ್ರೀತಿ ಕೊಡದ ಇವರು ಶ್ರೀಮಂತ ಮಕ್ಕಳಿಗೆ ತಾಯಿ ಆಗಲು ಹೊರಟಿದ್ದಾರೆ ಎಂದಾಗ ದತ್ತ ನಿಗೆ ಕೋಪ ಬರುತ್ತದೆ. ತುಳಸಿ ಯಾವತ್ತೂ ನಿನಗೆ ನೋವು ನೀಡಿದವಳು ಅಲ್ಲ. ಆಕೆ ಚೆನ್ನಾಗಿ ಇರಲಿ ಎನ್ನುವುದು ನನ್ನ ಆಸೆ ಹಾಗೆಯೇ ತಾಯಿ ಇಲ್ಲದ ತಬ್ಬಲಿಗಳಿಗೆ ತಾಯಿ ಆಗಲು ಹೊರಟಿದ್ದಾಳೆ ಆದರೆ ಅದರಲ್ಲಿ ನನಗೆ ಎನು ತಪ್ಪು ಕಾಣುತ್ತಿಲ್ಲ. ನೀನು ಆಕೆ ಹೆತ್ತ ಮಗ..ನೀನು ಎಂದರೆ ಆಕೆಗೆ ಬಹಳ ಪ್ರೀತಿ. ಆಕೆ ನಿಮ್ಮ ಹತ್ತಿರ ಬಂದಾಗಲೆಲ್ಲ. ನೀನು ದೂರ ಹೋಗುತ್ತಿಯಾ ಎಂದಾಗ ಸಮರ್ಥ್ ಮಾತ್ರ ಬಹಳ ಕೋಪ ಮಾಡಿಕೊಂಡು ಇರುತ್ತಾನೆ.

ದತ್ತನ ಮಾತಿಗೆ ಕ್ಯಾರೆ ಎನ್ನದ ಸಮರ್ಥ್

ಶ್ರೀಮಂತರಿಗೆ ತಾಯಿ ಆಗಿ ನನ್ನನ್ನು ಕ್ಯಾರೆ ಎನ್ನುತ್ತಿಲ್ಲ.ಅಂತಹದರಲ್ಲಿ ನೀವು ಈ ರೀತಿ ಮಾತನಾಡುತ್ತಿದ್ದರೆ ನನಗೆ ಕೋಪ ಬರುತ್ತದೆ. ನನ್ನ ಜೀವನ ಈಗಾಗಲೇ ನರಕ ಆಗಿದೆ. ಇನ್ನೂ ಬೇರೆ ಎಲ್ಲೆಡೆಯೂ ನರಕ ಸಿಕ್ಕರೂ ನನಗೆ ತೊಂದರೆ ಇಲ್ಲ ಎಂದು ಬಹಳ ನೋವಿನಿಂದ ಹೇಳುತ್ತಾನೆ.

More from Filmibeat

English summary
srirastu shubhamastu serial 17th june written update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X