Srirasthu Shubhamasthu ; ತನ್ನ ಪಾಲಿಗೆ ನನ್ನ ತಂದೆ ಸತ್ತಿದ್ದಾರೆ ಎಂದ ಪೂರ್ಣಿ, ಮನೆ ಮಂದಿ ಶಾಕ್ ..!

By ಪೂರ್ವ

ಪೂರ್ಣಿಮಾ ಗೆ ತನ್ನ ತಂದೆ ತಾಯಿ ಸಿಕ್ಕಿದ್ದಾರೆ ಎಂದು ಖುಷಿ ಪಡಬೇಕಾ ಅಥವಾ ತನ್ನ ತಂದೆ ಹಣಕ್ಕಾಗಿ ನನ್ನನ್ನು ಬಳಸಿಕೊಂಡು ಬಿಟ್ಟರಾ ಎನ್ನುವ ಯೋಚನೆ ಮಾಡಬೇಕಾ ಎನ್ನುವ ಆಲೋಚನೆಯಲ್ಲಿದ್ದಾರೆ. ಆಕೆಗೆ ತನ್ನ ತಂದೆ ತಾಯಿ ಯಾಕಾಗಿ ನನ್ನ ದೂರ ಮಾಡಿಕೊಂಡರು ಅವರಿಗೆ ಯಾಕೆ ನನ್ನ ಮೇಲೆ ಕೋಪ. ಇದೆಲ್ಲವನ್ನೂ ನಾನು ಆ ದೇವರಲ್ಲಿ ಕೇಳಿಕೊಳ್ಳಬೇಕು ಎಂದು ಅಂದುಕೊಂಡು ಇರುತ್ತಾಳೆ. ತನ್ನ ತಾಯಿ ವನಜಾ ಎಂದು ಗೊತ್ತಾದ ಬಳಿಕ ತನ್ನ ತಾಯಿಯ ಜೊತೆ ಯಾಕಮ್ಮ ನಿನಗೆ ನನ್ನ ಮೇಲೆ ಇಷ್ಟೊಂದು ಕೋಪ. ನನ್ನನ್ನು ಬಿಟ್ಟು ಹೋಗಲು ನಾನು ಎನು ತಪ್ಪು ಮಾಡಿಬಿಟ್ಟೆ ಎಂದು ಹೇಳುತ್ತಾಳೆ ಇದನ್ನು ಕೇಳಿದ ವನಜಾ ಮಾತ್ರ ಬಹಳ ಬೇಸರ ಪಟ್ಟುಕೊಂಡು ಇರುತ್ತಾಳೆ.

ತನ್ನ ಮಗಳ ಜೊತೆ ಕ್ಷಮೆ ಕೂಡ ಕೇಳುತ್ತಾಳೆ. ಅದಕ್ಕೆ ಪೂರ್ಣಿಮಾ ಅಮ್ಮ ನೀನು ಕ್ಷಮೆ ಕೇಳುವ ಅಗತ್ಯ ಇಲ್ಲ. ಅಂತಹ ತಪ್ಪು ನೀನು ಯಾವತ್ತೂ ಮಾಡುವವಳು ಅಲ್ಲ ಎಂದು ಹೇಳುತ್ತಾಳೆ. ಆದರೆ ಇದೆಲ್ಲವನ್ನೂ ನೋಡಿದ ಜನಾರ್ಧನ್ ಮಾತ್ರ ಮನದಲ್ಲಿಯೇ ಮಂಡಿಗೆ ತಿನ್ನುತ್ತಾರೆ. ಆತನಿಗೆ ಬೇಕಾಗಿ ಇರುವುದು ಆಸ್ತಿಯೇ ಹೊರತು ಮಗಳಲ್ಲ. ಆತನಿಗೆ ಮಗಳಿನ ಮೇಲೆ ಮಮಕಾರ ಹುಟ್ಟುವುದು ಇಲ್ಲ. ಪೂರ್ಣಿಮಾ ಚಿಕ್ಕ ವಯಸ್ಸಿನಲ್ಲಿಯೇ ಯಾರ ಯಾರ ಮಾತು ಕೇಳಿ ಆಕೆಯನ್ನು ಹಾದಿಯಲ್ಲಿ ಬಿಟ್ಟು ಹೋದವ. ಆತನಿಗೆ ಬಹಳಷ್ಟು ಗಾಂಚಲೀ. ಅವ ಒಬ್ಬ ಚೆನ್ನಾಗಿ ಇದ್ದರೆ ಸಾಕು ಬೇರೆಯವರು ಹೇಗೆ ಇರಲಿ ಎಂದು ಯೋಚನೆ ಮಾಡುವವ. ಇನ್ನೂ ಜನಾರ್ಧನ್ ಮನೆಯಿಂದ ಹೊರಗೆ ಹೋಗಿ ಕೂಡಲೇ ಲಾಯರ್ ಗೆ ಕರೆ ಮಾಡಿ ಎಲ್ಲಾ ಡಾಕ್ಯುಮೆಂಟ್ ತೆಗೆದುಕೊಂಡು ಬರಲು ಹೇಳುತ್ತಾನೆ.

srirastu-shubhamastu-serial-18th-november-written-update

ಇನ್ನೂ ಗಂಡನ ಹಿಂದೆ ವನಜಾ ಕೂಡ ಬರುತ್ತಾಳೆ. ಗಂಡನ ವ್ಯವಹಾರದ ಬಗ್ಗೆ ವನಜಾಗೆ ಕೂಡ ಸಣ್ಣ ನೋವು ಇರುತ್ತದೆ. ಜನಾರ್ಧನ್ ಮಾತ್ರ ವನಜಾನನ್ನು ನೋಡಿ ಬಹಳ ಖುಷಿಯಿಂದ ಇರುತ್ತಾನೆ. ವನಜಾ ತನ್ನ ಗಂಡನ ಜೊತೆ ಹೇಳುತ್ತಾಳೆ. ದಯವಿಟ್ಟು ನನ್ನ ಮಗಳು ಈಗ ಸಿಕ್ಕಿದ್ದಾಳೆ ಆಕೆಗೆ ನೀವು ಯಾವುದೇ ತೊಂದರೆ ಕೊಡುವ ಹಾಗಿಲ್ಲ. ಅದಕ್ಕೆ ನಾನು ಯಾವುದೇ ಆಸ್ಪದ ಕೂಡ ಕೊಡುವುದಿಲ್ಲ ಎಂದಾಗ ಜನಾರ್ಧನ್ ಹೇಳುತ್ತಾನೆ. ಪೂರ್ಣಿಮಾ ನನ್ನ ಮಗಳು ಎಂದು ಯಾವಾಗ ನಾನು ಹೇಳಿದೆ. ಆ ರೀತಿ ನಾನು ನಿನ್ನ ಬಳಿ ಹೇಳಿದ್ದು ಮಾತ್ರ. ನಮ್ಮ ಆಸ್ತಿ ನಮ್ಮ ಕೈ ಸೇರಿದೆ ಇಲ್ಲವಾದರೆ ನನಗೆ ಬಹಳ ಕಷ್ಟ ಇತ್ತು. ಆಸ್ತಿಗಾಗಿ ನಾನು ಎನು ಬೇಕಾದರೂ ಮಾಡಲು ರೆಡಿ ಆಗಿದ್ದೇನೆ. ನನಗೆ ಆಸ್ತಿ ಬಹಳ ಇಂಪಾರ್ಟೆಂಟ್ ಎಂದು ಹೇಳುತ್ತಾರೆ.

ತಂದೆಯ ಮಾತಿಗೆ ಬೇಸರಗೊಂಡ ಪೂರ್ಣಿಮಾ,

ಇದನ್ನೆಲ್ಲ ಕೇಳಿದ ವನಜಾಗೆ ಏನು ಮಾತನಾಡಬೇಕು ಎಂದು ತಿಳಿಯದ ಹಾಗೆ ಆಗುತ್ತದೆ. ಆಕೆ ತನ್ನ ಗಂಡನ ಬಳಿ ರಿಕ್ವೆಸ್ಟ್ ಮಾಡಿಕೊಳ್ಳುತ್ತಾಳೆ. ತನ್ನ ಮಗಳಿಗೆ ಯಾವುದೇ ನೋವು ಆಗದೆ ಇರುವ ಹಾಗೆ ಮಾತನಾಡಬೇಡಿ ಎಂದು ಹೇಳುತ್ತಾಳೆ. ಕೂಡಲೇ ಜನಾರ್ಧನ್ ಮನೆಯ ಒಳಗೆ ಹೋಗುತ್ತಾನೆ. ಎಲ್ಲರ ಮುಂದೆ ಆಸ್ತಿ ಬಗ್ಗೆಯೂ ಮಾತನಾಡುತ್ತಾನೆ . ತನಗೆ ಪೂರ್ಣಿಮಾ ಯಾಕೆ ಬಹಳ ಇಪಾರ್ಟೆಂಟ್ ಎನ್ನುವ ವಿಚಾರವನ್ನು ಪ್ರಸ್ತಾಪ ಮಾಡುತ್ತಾನೆ. ಬಳಿಕ ಪೂರ್ಣಿಮಾ ನಮಗೆ ಸಿಗದೇ ಹೋದರೆ ನನಗೆ ಬಹಳ ಕಷ್ಟ ಆಗುತ್ತಿತ್ತು. ಪೂರ್ಣಿಮಾ ಎರಡು ದಿನ ಬಿಟ್ಟು ಸಿಕ್ಕರೂ ನನಗೆ ಬೇಕಾಗಿ ಇರುತ್ತಿರಲಿಲ್ಲ ಎಂದಾಗ ಪೂರ್ಣಿಮಾ ತಂದೆ ತಾಯಿ ಬಳಿಗೆ ಸಕ್ಕರೆ ಹಿಡಿದುಕೊಂಡು ಬರುತ್ತಾಳೆ.

ಅಪ್ಪನ ಮಾತಿಗೆ ಕುಸಿದು ಬಿದ್ದ ಪೂರ್ಣಿಮಾ

ಆಕೆಗೆ ತನ್ನ ತಂದೆಯ ಮಾತು ಕೇಳಿ ಕುಸಿದು ಕುಳಿತುಕೊಳ್ಳುತ್ತಾಳೆ. ಕೊನೆಗೆ ತುಳಸಿ ಪೂರ್ಣಿಮಾಗೆ ಇದೀಗ ನಿನ್ನ ಸರದಿ ನೀನು ಮಾತನಾಡುವ ಸರದಿ. ಏನು ಅಂತ ಹೇಳುವುದು ಒಳ್ಳೆಯದು ಎಂದಾಗ, ಪೂರ್ಣಿಮಾ ತಂದೆ ತಾಯಿಯ ಮಧ್ಯೆ ಕುಳಿತುಕೊಂಡು ತಂದೆ ಕೊಟ್ಟ ದಾಖಲೆ ಪತ್ರಕ್ಕೆ ಸಹಿ ಹಾಕುತ್ತಾಳೆ. ಹಾಗೆಯೇ ತಂದೆಯ ಮುಖದ ಮೇಲೆ ಎಸೆದು ನನ್ನ ಪಾಲಿಗೆ ನನ್ನ ತಂದೆ ಸತ್ತು ಹೋಗಿದ್ದಾರೆ. ನನ್ನ ತಾಯಿ ಮಾತ್ರ ಬದುಕಿರುವುದು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಮಂದಿಗೆ ಶಾಕ್ ಆಗುತ್ತದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X