Srirastu Shubhamastu ; ಆಕ್ಸಿಡೆಂಟ್ ನಿಜ ವಿಚಾರ ಮಾಧವ ಮುಂದೆ ಬಯಲಾಗಿದೆ, ಮುಂದಿನ ನಡೆ ಏನು?
ಸಮರ್ಥ್ ಬಗ್ಗೆ ತುಳಸಿ ಸುಳ್ಳು ಹೇಳಿಕೆಯನ್ನು ನೋಡಿದಾಗ ಆಕೆಯ ಮೇಲೆ ಎಲ್ಲರೂ ತಪ್ಪಾಗಿ ತಿಳಿದುಕೊಂಡರು. ಯಾತಕ್ಕಾಗಿ ತುಳಸಿ ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎನ್ನುವ ಆಲೋಚನೆ ಮನೆ ಮಂದಿಗೆ ಮೂಡುತ್ತದೆ. ತುಳಸಿ ಮೇಲೆ ಸಿರಿಗೆ ಬಹಳಷ್ಟು ಪ್ರೀತಿ ನಂಬಿಕೆ ಇರುತ್ತದೆ. ತನ್ನ ತಂದೆ ಸಾವಿಗೆ ಸಮರ್ಥ್ ಕಾರಣ ಎಂದು ಯಾರೆ ಹೇಳಿದರು ಸಿರಿ ಅದ್ಯಾವುದನ್ನೂ ಒಪ್ಪಿಕೊಳ್ಳುವುದಿಲ್ಲ. ಖಂಡಿತವಾಗಿಯೂ ನನ್ನ ತಂದೆಯ ಸಾವಿಗೆ ನನ್ನ ಗಂಡ ಕಾರಣ ಅಲ್ಲ . ಇದರಲ್ಲೇನೂ ಷಡ್ಯಂತ್ರ ಇದೆ ಎಂದು ಸಿರಿ ಹೇಳುತ್ತಾ ಬಂದಿದ್ದಾಳೆ. ಈ ಬಗ್ಗೆ ಕೋರ್ಟ್ ನಲ್ಲಿ ತುಳಸಿ ಯಾವಾಗ ಸಮರ್ಥ್ ವಿರುದ್ಧವಾಗಿ ಹೇಳಿಕೆಯನ್ನು ನೀಡುತ್ತಾಳೆ ಆವತ್ತಿನಿಂದ ಸಿರಿ ಗೆ ತುಳಸಿಯನ್ನು ಕಂಡರೆ ಆಗುವುದಿಲ್ಲ.
ನಿಮ್ಮನ್ನು ನಾನು ನನ್ನ ತಾಯಿ ಎಂದು ಅಂದುಕೊಂಡಿದ್ದೆ ಆದರೆ ಬೇರೆಯವರನ್ನ ಉಳಿಸುವುದಕೋಸ್ಕರ ಸ್ವತಃ ನಿಮ್ಮ ಮಗನಿಗೆ ನೀವು ಮೋಸ ಮಾಡುತ್ತಿದ್ದೀರಾ? ನೀವು ಆತನ ಜೀವನವನ್ನು ಹಾಳು ಮಾಡುತ್ತಿದ್ದೀರಾ? ಯಾವತ್ತೂ ನಿಮಗೆ ನಾನು ಕ್ಷಮೆಯನ್ನು ನೀಡುವುದಿಲ್ಲ ಎಂದು ಕೋಪದಿಂದ ಹೇಳುತ್ತಾಳೆ. ಇದನ್ನು ಕೇಳಿದ ತುಳಸಿಗೆ ಬಹಳ ನೋವಾಗುತ್ತದೆ. ಇದೀಗ ತುಳಸಿ ಯಾತಕ್ಕಾಗಿ ಹೀಗೆಲ್ಲ ಮಾಡುತ್ತಿದ್ದಳು ಎನ್ನುವ ವಿಚಾರ ಮಾನವನ ಮುಂದೆ ಬಯಲಾಗಿದೆ ಎಂದು ಹೇಳುತ್ತಾಳೆ.

ಮಾದವನಿಗೆ ಬಹಳ ತಲೆಬಿಸಿಯಾಗುತ್ತದೆ ತುಳಸಿ ತಮ್ಮ ಮಗನ ವಿರುದ್ಧವಾಗಿ ಹೇಳಿಕೆ ನೀಡಿದಾಗ ಯಾಕೆ ಈ ರೀತಿ ಮಾಡುತ್ತಿದ್ದಾರೆ ಎಂದು ಮಾಧವ ತಲೆ ಕೆಡಿಸಿಕೊಂಡು ಬಿಡುತ್ತಾನೆ. ಆದರೆ ನಿಧಿಯನ್ನ ಉಳಿಸಿಕೊಳ್ಳುವುದಕ್ಕಾಗಿ ತುಳಸಿ ಇಷ್ಟೆಲ್ಲ ಮಾಡುತ್ತಿದ್ದಾಳೆ ಎನ್ನುವುದು ಮಾದವನಿಗೆ ತಿಳಿಯುತ್ತದೆ. ತುಳಸಿ ಹಾಗೂ ನಿಧಿ ಇಬ್ಬರು ಮಾತನಾಡಿ ಕೊಳ್ಳುತ್ತಿರುತ್ತಾರೆ. ತುಳಸಿ ಅಮ್ಮ ನಾನು ನಿಜ ವಿಚಾರವನ್ನು ಎಲ್ಲರಿಗೆ ತಿಳಿಸಿ ಜೈಲಿಗೆ ಹೋಗಲು ನಾನು ರೆಡಿಯಾಗಿದ್ದೇನೆ. ಸುಮ್ಮನೆ ನನ್ನಿಂದಾಗಿ ಸಮರ್ಥ್ ಅಣ್ಣ ಜೈಲಲ್ಲಿರೋದು ನನ್ನಿಂದ ಸಹಿಸಲಾಗುವುದಿಲ್ಲ ಹಾಗೆಯೇ ನೀವು ನನ್ನಿಂದಾಗಿ ಏನೆಲ್ಲಾ ಮಾತುಗಳನ್ನೆಲ್ಲ ಕೇಳಬೇಕಾಗಿದೆ ಆದಕಾರಣ ನಾನು ಜೈಲಿಗೆ ಹೋದರೆ ಸಾಕು ತೊಂದರೆ ಏನೂ ಇಲ್ಲ ಆದರೆ ತಪ್ಪೇ ಮಾಡಿದ ಅಣ್ಣ ಹೊರಗೆ ಬರಬೇಕು ಎಂದು ನಿಧಿ ತುಳಸಿ ಬಳಿ ಹೇಳುತ್ತಾಳೆ
ನಿಧಿಯ ವಿಚಾರದಲ್ಲಿ ನೊಂದ ತುಳಸಿ
ಇದನ್ನು ಕೇಳಿದ ತುಳಸಿಗೆ ಬಹಳ ನೋವಾಗುತ್ತದೆ ನನಗೆ ಈ ನೋವನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲ ಆದರೆ ಈ ಪುಟ್ಟ ಹುಡುಗಿ ಹೇಗೆ ಆ ನೋವುಗಳನ್ನೆಲ್ಲ ತಿಳಿದುಕೊಳ್ಳುತ್ತಾಳೆ ಎಂದು ಯೋಚನೆ ಮಾಡುತ್ತಿರುತ್ತಾರೆ ಹಾಗೆಯೇ ನಿಧಿಯ ಬಳಿ ಹೇಳುತ್ತಾರೆ ನಾನು ಹೇಳುವವರೆಗೂ ನೀನು ನಿಜ ವಿಚಾರವನ್ನು ಯಾರ ಬಳಿ ಹೇಳಬಾರದು ಎಂದು ಬಹಳ ಸಮಾಧಾನದಿಂದ ಹೇಳುತ್ತಾಳೆ. ಇದನ್ನು ಕೇಳಿದ ನಿಧಿ ಆಯ್ತು ಎಂದು ಒಪ್ಪಿಕೊಳ್ಳುತ್ತಾಳೆ. ಅಲ್ಲಿಗೆ ಬಂದ ಮಾಧವ ತುಳಸಿ ಹೇಳಿದ ಮಾತನ್ನು ಕೇಳಿಸಿಕೊಂಡವನಂತೆ ಮಾತನಾಡುತ್ತಾನೆ ಇದನ್ನು ಕೇಳಿದ ತುಳಸಿ ಅವರು ನಾನು ಮಾತನಾಡುವುದನ್ನು ಕೇಳಿಸಿಕೊಂಡರೇನೋ ಎನ್ನುವ ಹಾಗೆ ಯೋಚನೆ ಮಾಡಿ ನಿಜ ವಿಚಾರವನ್ನು ಮಾಧವನ ಮುಂದೆ ಬಿಚ್ಚಿಡುತ್ತಾಳೆ.
ಆಕಾಶವೇ ಕಳಚಿ ಬಿದ್ದಂತೆ ಕುಳಿತ ಮಾಧವ
ಇದೆಲ್ಲವನ್ನೂ ಕೇಳಿದ ಮಾಧವಗೆ ಏನು ಮಾಡಬೇಕು ಎಂದು ತಿಳಿಯದಾಗುತ್ತದೆ. ಶಾಕ್ ನಲ್ಲಿ ಸಿರಿ ತಂದೆಯನ್ನು ಸಾಯಿಸಿದ್ದು ನಮ್ಮ ನಿಧಿನ ಎಂದು ಏನು ಮಾತನಾಡದೆ ಕುಳಿತುಕೊಳ್ಳುತ್ತಾರೆ. ಇತ್ತ ಶಾರ್ವರಿ ಆಕ್ಸಿಡೆಂಟ್ ಮಾಡಿ ತನಗೆ ಎನು ತಿಳಿಯದ ಹಾಗೆ ಇರುತ್ತಾಳೆ . ಆಕೆಗೆ ತುಳಸಿ ಹಾಗೂ ಆಕೆಯ ಮಕ್ಕಳು ನರಳಿ ಸಾಯಬೇಕು ಎನ್ನುವ ಆಲೋಚನೆ. ಆದರೆ ನಿಜ ತಿಳಿದ ಮಾಧವ ಮುಂದೇನು ಮಾಡುತ್ತಾನೆ ಕಾದು ನೋಡಬೇಕಿದೆ.


Click it and Unblock the Notifications











