srirastu shubhamastu ; ಅಣ್ಣನಿಗೆ ಮಾತಿನಲ್ಲಿ ತಿವಿದ ಅಭಿ, ಅಭಿ ಗೆ ಖಡಕ್ ವಾರ್ನಿಂಗ್ ಕೊಟ್ಟ ಮಾಧವ..!

By ಪೂರ್ವ

ಅಭಿ ಮಾಡಿರುವ ಕಿತಾಪತಿ ಕೆಲಸದಿಂದ ಮಾಧವ ಬೆಲೆ ತೆರುವ ಸಂದರ್ಭ ಬಂದೊದಗಿದೆ. ಅವಿ ಹಾಗೂ ಮಾಧವ ಅದೆಷ್ಟು ಕಷ್ಟಪಟ್ಟು ಒಂದು ಕಂಪನಿಯನ್ನು ಬೆಳೆಸಿ ಅಭಿ ಮುನ್ನಡೆಸಿಕೊಂಡು ಹೋಗಲಿ ಎಂದು ಆತನಿಗೆ ಬಿಟ್ಟು ಕೊಟ್ಟು ಇರುತ್ತಾರೆ. ಆದರೆ ಅಭಿ ಮಾಡಿದ್ದಾದರು ಏನು ಗೊತ್ತಾ? ಅಭಿ ಕಂಪನಿಯ ವಿಚಾರದಲ್ಲಿ ಬಹಳ ಅಸಡ್ಡೆ ತೋರುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ತನ್ನ ಮಾವ ಹೇಳಿದ ಹಾಗೆ ನಡೆದುಕೊಂಡು ಇರುತ್ತಾನೆ. ಆತನಿಗೆ ತನ್ನ ಮನೆಯವರು ಬುದ್ದಿ ಮಾತು ಹೇಳಿದರೆ ಅದು ಕೆಟ್ಟದಕ್ಕೆ ಎಂದು ಅಂದುಕೊಂಡು ಇರುತ್ತಾನೆ

ಅವಿ ಮಾಡಿದ ತ್ಯಾಗವನ್ನು ಮಗನಿಗೆ ತಿಳಿ ಹೇಳಿದ ಮಾಧವ

ಆದರೆ ಜನಾರ್ಧನ್ ಮಾಸ್ಟರ್ ಪ್ಲಾನ್ ಬೇರೆಯೇ ಇದೆ ಹೇಗಾದರೂ ಮಾಡಿ ಮಾಧವನ ಮನೆಯವರನ್ನು ಮುಗಿಸಿ ಬಿಡಬೇಕು, ಹಾಗೆಯೇ ಅವರ ಕೈಗೆ ಬಿಡಿಗಾಸು ಸಿಗಬಾರದು ಹಾಗೆ ಮಾಡಬೇಕು ಎಂದು ಆಲೋಚನೆ ಮಾಡುತ್ತಿರುತ್ತಾನೆ. ಅಭಿ ಬಳಿ ಅದೆಷ್ಟೋ ಬಾರಿ ಜನಾರ್ಧನ್ ಮಾಡುತ್ತಿರುವ ಕೆಲಸ ಸರಿ ಇಲ್ಲ. ಆತ ಮಾಡುತ್ತಿರುವ ಕೆಲಸ ಕೂಡ ಸರಿ ಇಲ್ಲ ಎಂದು ಹೇಳುತ್ತಾರೆ. ಇದನ್ನು ಕೇಳಿದ ಅಭಿ ಮಾತ್ರ ನನ್ನ ಮಾವ ಅವರು. ನನಗೆ ಹೆಣ್ಣು ಕೊಟ್ಟಿರುವ ದೇವರು ಅವರು. ಅವರು ಯಾವತ್ತೂ ನನಗೆ ಮೋಸ ಮಾಡುವುದು ಇಲ್ಲ ಎಂದು ಹೇಳಿದಾಗ ಆತನಿಗೆ ಎನು ಹೇಳಬೇಕು ಎಂದು ತಿಳಿಯದೇ ಸುಮ್ಮನಿರುತ್ತಾರೆ.

srirastu-shubhamastu-serial-1th-june-written-update

ಅವಿ ಕೂಡ ಅಭಿ ಗೆ ಸಾಕಷ್ಟು ಬುದ್ದಿ ಹೇಳುತ್ತಾನೆ. ಆದರೆ ಅಭಿ ಹೇಳುತ್ತಾನೆ ನೀನು ನನ್ನ ಅಣ್ಣ ನೆ ಆಗಿರಬಹುದು ಆದರೆ ಶತ್ರು ಥರ ಆಡುತ್ತಿದ್ದಿಯಾ ಅಲ್ವಾ, ಯಾಕೆ ಹೀಗೆಲ್ಲಾ ಮಾಡುತ್ತಿದ್ದೀರಿ ಎಂದು ಅಭಿ ಅಣ್ಣನನ್ನೆ ಪ್ರಶ್ನೆ ಮಾಡುವ ಮಟ್ಟಕ್ಕೆ ಬೆಳೆದುಬಿಟ್ಟಿದ್ದಾನೆ. ಆದರೆ ಆತ ಏನು ಮಾಡುವ ಸ್ಥಿತಿಯಲ್ಲಿ ಕೂಡ ಇರುವುದು ಇಲ್ಲ. ಇತ್ತ ಆಫೀಸ್ ನ ಕೆಲವು ಮಂದಿ ಮಾಧವಾನನ್ನು ಭೇಟಿ ಆಗುತ್ತಾರೆ. ಮಾಧವ ಸರ್ ನಿಮಗೆ ತಿಳಿಯದ ಹಾಗೆ ಕಂಪನಿಯಲ್ಲಿ ಏನೇನೋ ನಡೆಯುತ್ತಿದೆ. ನೀವು ಕಂಪನಿಯತ್ತ ಇತ್ತೀಚಿಗೆ ನಿಗಾ ವಹಿಸುತ್ತಿಲ್ಲ ದಯವಿಟ್ಟು ನೀವು ಕಂಪನೀಯತ್ತ ಗಮನವಹಿಸಿ ಹೀಗೆ ಮಾಡಿದರೆ ಖಂಡಿತವಾಗಿಯೂ ನಮ್ಮ ಕಂಪನಿ ಮುಚ್ಚಿಬಿಡಬಹುದು

ಅಭಿ ಗೆ ಖಡಕ್ ವಾರ್ನಿಂಗ್ ಕೊಟ್ಟ ಮಾಧವ

ಈಗಾಗಲೇ ಬಹಳ ಲಾಸ್ ನಲ್ಲಿ ಇರುವ ಕಂಪನಿಗೆ ಇದೊಂದು ಬಹಳ ದೊಡ್ಡ ಏಟು ಬಿದ್ದ ಹಾಗೆ ಆಗಿದೆ. ನೀವು ಇದರ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿ ಅಲ್ಲಿಂದ ಹೊರಟು ಹೋಗುತ್ತಾರೆ. ಆಗ ಅಭಿ ಮನೆಯ ಒಳಗಿನಿಂದ ಬರುತ್ತಾರೆ. ಅಭಿಯನ್ನ ಕಂಡ ಮಾಧವ ಪ್ರಶ್ನೆ ಮಾಡುತ್ತಾನೆ.ಅಭಿ ಕಂಪನಿ ಬಹಳ ಲಾಸ್ ನಲ್ಲಿ ಹೋಗುತ್ತಿದೆಯಂತೆ ಇನ್ಮೇಲೆ ನೀನು ಕಂಪನಿಯತ್ತ ಸ್ವಲ್ಪ ದಿನ ಹೋಗದೆ ಇರುವುದು ಒಳ್ಳೆಯದು ಎಂದು ಖಡಕ್ ವಾರ್ನಿಂಗ್ ಕೊಡುತ್ತಾನೆ . ಅದಕ್ಕೆ ಅವಿಯೂ ಕೂಡ ಕುಮ್ಮಕ್ಕು ನೀಡುತ್ತಾನೆ.

srirastu-shubhamastu-serial-1th-june-written-update

ಅಣ್ಣನನ್ನು ಕೆಕ್ಕರಿಸಿಕೊಂಡು ನೋಡಿದ ಅಭಿ

ಅಭಿ ನಾನು ಅವತ್ತೇ ನಿನಗೆ ವಾರ್ನಿಂಗ್ ಮಾಡಿದೆ, ನೀನು ಕಂಪನಿಯತ್ತ ಹೆಚ್ಚಿನ ನಿಘಾ ವಹಿಸಬೇಕು ಇಲ್ಲವಾದರೆ ಬಹಳ ಕಷ್ಟ ಇದೆ ಕಂಪನಿ ಮುನ್ನಡೆಸಲು ಎಂದು ಆವತ್ತೇ ಹೇಳಿದ್ದೆ ಆದರೆ ನೀವು ನನ್ನ ಮಾತು ಕೇಳದೆ ಇರುವುದು ಇದಕ್ಕೆಲ್ಲ ದೊಡ್ಡ ಕಾರಣವಾಗಿದೆ ಎಂದು ಹೇಳಿದಾಗ ಅಭಿ ಗೆ ಸಿಟ್ಟು ಬರುತ್ತದೆ ನೀನು ಇದನ್ನೆಲ್ಲ ನನಗೆ ಹೇಳುವ ಅಗತ್ಯ ಇಲ್ಲ ನನ್ನ ಕಂಪನಿಯನ್ನು ನಾನು ನೋಡಿಕೊಳ್ಳುತ್ತೇನೆ ನನಗೆ ಯಾರು ಕೂಡ ಬುದ್ದಿ ಹೇಳುವ ಅಗತ್ಯ ಇಲ್ಲ ಎಂದಾಗ ಕೋಪಗೊಂಡ ಮಾಧವ ಜೋರಾಗಿ ಬಯ್ಯುತ್ತಾ ಇರುತ್ತಾನೆ.

ಮಾಧವನ ಮಾತಿಗೆ ಅಭಿ ಗಪ್ ಚುಪ್

ಏನು ಅಂದುಕೊಂಡು ಇದ್ದೀಯಾ ಅಭಿ ನೀನು ಅವಿ ನಿನ್ನನ್ನು ಸ್ವಂತ ಮಗನ ಹಾಗೆ ನೋಡಿಕೊಳ್ಳುತ್ತಿದ್ದಾರೆ ಅಂತವರ ಮುಂದೆ ಹೀಗೆಲ್ಲ ಮಾತನಾಡುತ್ತಿದ್ದಿಯಾ ಅಲ್ವಾ ನಿನಗೆ ಎನು ಅನ್ನಿಸುವುದು ಇಲ್ವಾ ಎಂದು ಹೇಳುತ್ತಾರೆ. ಇದನ್ನು ಕೇಳಿದಾಗ ಅಭಿಗೆ ಎನು ಹೇಳಬೇಕು ಎಂದು ತಿಳಿಯದೇ ಆಗುತ್ತದೆ. ಎನು ಮಾತನಾಡದೆ ಅಲ್ಲಿಂದ ಹೋಗುತ್ತಾನೆ. ಅಭಿ ಮಾತಿನಿಂದ ಅವೀಗೆ ಬಹಳ ಬೇಸರ ಆಗಿರುತ್ತದೆ. ಇತ್ತ ತುಳಸಿ ಹಾಗೂ ಮಾಧವ ಬಹಳಷ್ಟು ಹತ್ತಿರ ಆಗುತ್ತಿದ್ದಾರೆ. ಇತ್ತ ಮಾಧವ ತುಳಸಿಯ ಬಳಿ ಐಸ್ ಕ್ರೀಮ್ ಮಾಡುತ್ತೇನೆ ಎಂದು ಹೇಳಿದ್ರಾಲ್ಲ ಮಾಡಿದ್ರಾ ಎಂದಾಗ ತುಳಸಿ ಗೆ ಕೊಂಚ ಗಾಬರಿ ಆಗುತ್ತದೆ. ಅಯ್ಯೋ ನಾನು ಬಹಳ ಗಡಿಬಿಡಿಯಿಂದ ಐಸ್ ಕ್ರೀಮ್ ಮಾಡಿದೆ. ಆದರೆ ಐಸ್ ಕ್ರೀಮ್ ಮಾಡಿದ್ದು ಹಾಳಾಯಿತು ಏನೋ? ಎಂದು ಬಹಳ ಬೇಸರದಲ್ಲಿ ಹೇಳಿದಾಗ ಅದನ್ನು ತಗೊಂಡು ಬನ್ನಿ ನಾನು ಅದರ ಸವಿ ಸವಿಯುತ್ತೇನೆ ಎಂದು ಹೇಳಿದಾಗ ಉಪಾಯ ಇಲ್ಲದೆ ಐಸ್ ಕ್ರೀಮ್ ತೆಗೆದುಕೊಂಡು ಬಂದು ಗಂಡನ ಕೈ ಗೆ ಕೊಡುತ್ತಾಳೆ. ಐಸ್ ಕ್ರೀಮ್ ಸವಿದ ಮಾಧವ ನಿಗೆ ಬಹಳ ಖುಷಿ ಆಗುತ್ತದೆ ಹಾಗೆಯೇ ಆತನ ಹೆಂಡತಿಗೆ ತಿನ್ನಿಸಿ ಖುಷಿ ಪಡುತ್ತಾನೆ.

More from Filmibeat

English summary
srirastu shubhamastu serial 1th june written update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X