Srirastu Shubhamastu ;ಗಂಡಿನ ಕಡೆಯವರ ಮುಂದೆ ಬಯಲಾಯ್ತಾ ರಹಸ್ಯ, ತುಳಸಿ ಪರ ನಿಂತ ಅಭಿ..!
ತುಳಸಿ ನಿರ್ಧಾರಕ್ಕೆ ಮನೆ ಮಂದಿಯೆಲ್ಲ ಬಹಳ ಬೇಸರಗೊಂಡರೆ ಸಿರಿ ಮಾತ್ರ ಬಹಳ ಖುಷಿಪಟ್ಟಿದ್ದಾಳೆ. ಅತ್ತೆ ಜೀವಪಾಯದಲ್ಲಿ ಇದ್ದಾರೆ ಎಂದು ಕೇಳಿದ ಕೂಡಲೇ ನನ್ನ ಮನಸ್ಸಿಗೆ ಬಹಳ ನೋವು ಆಗುತ್ತಿತ್ತು. ಆದರೆ ಇದೀಗ ಅತ್ತೆ ಗರ್ಭಿಣಿ ಆಗಿದ್ದಾರೆ ಎಂದು ಕೇಳಿದರೆ ಮನಸ್ಸಿಗೆ ಮತ್ತಷ್ಟು ಖುಷಿ ಆಗುತ್ತದೆ ಎಂದು ಸಮರ್ಥ್‌ನ ಬಿಗಿ ದಪ್ಪಿಕೊಂಡು ಮುದ್ದಿಸಿದ್ದಾಳೆ. ಇತ್ತ ಶಾರ್ವರಿ ಮಗಳನ್ನು ನೋಡಲು ಗಂಡಿನ ಕಡೆಯವರು ಬರುವ ಕಾರ್ಯಕ್ರಮ ಇತ್ತು.
ಈ ಮೊದಲೇ ಶಾರ್ವರಿ ತುಳಸಿ ಅವರಿಗೆ ಗಂಡಿನ ಕಡೆಯವರು ನನ್ನ ಮಗಳನ್ನು ನೋಡಬೇಕಾದರೆ ನೀವು ಅವರ ಯಾರ ಮುಂದೆಯೂ ಕೂಡ ಬರಬೇಡಿ ಎಂದು ಹೇಳಿದ್ದಾಳೆ. ಆದರೆ ಆಕೆಯ ಮಾತಿಗೆ ತುಳಸಿ ಬಹಳ ನೊಂದುಕೊಳ್ಳುತ್ತಾಳೆ. ಇದೆಲ್ಲವನ್ನು ಅಭಿ ದೂರದಿಂದಲೇ ಗಮನಿಸುತ್ತಿರುತ್ತಾನೆ. ಅಭಿಗೆ ಈಗಾಗಲೇ ದೀಪಿಕಾ ಎಲ್ಲ ವಿಚಾರವನ್ನು ಹೇಳಿರುತ್ತಾಳೆ. ಆದರೆ ತುಳಸಿಯ ಬಗ್ಗೆ ಅಭಿ ಯಾವುದೇ ರೀತಿಯ ಕೆಟ್ಟ ಮಾತುಗಳನ್ನು ಹೇಳಿರಲಿಲ್ಲ. ತುಳಸಿ ಅವಿ ಹಾಗೂ ಪೂರ್ಣಿಮಾಗಾಗಿ ಬಹಳ ದೊಡ್ಡ ರಿಸ್ಕ್ ತೆಗೆದುಕೊಳ್ಳುತ್ತಿರುತ್ತಾಳೆ. ಇನ್ನೂ ಮಕ್ಕಳಾಗುವುದಿಲ್ಲ ಎಂದು ಎಲ್ಲರ ಇಲ್ಲಸಲ್ಲದ ಮಾತುಗಳಿಂದ ಪೂರ್ಣಿಮಾ ಮನಸ್ಸನ್ನು ನೋಯಿಸುತ್ತಿದ್ದರು. ಆದರೆ ಇದೀಗ ತುಳಸಿ ಗಟ್ಟಿ ಮನಸು ಮಾಡಿ ತನಗೆ ಹುಟ್ಟುವ ಮಗುವನ್ನ ಪೂರ್ಣಿಮಾ ಕೈಗೆ ಒಪ್ಪಿಸಬೇಕು ಎಂದು ಅಂದುಕೊಳ್ಳುತ್ತಾಳೆ. ಇನ್ನು ಮಾಧವನ ಮನೆಗೆ ಗಂಡಿನ ಕಡೆ ಅವರು ಬರುತ್ತಾರೆ ಅವರೆಲ್ಲರನ್ನ ಮನೆಗೆ ಅದ್ಧೂರಿ ಸ್ವಾಗತ ಮಾಡುತ್ತಾರೆ. ಇನ್ನು ಮಹೇಶ ತನ್ನ ಮಗಳನ್ನು ಮುಂದೆ ಬಂದು ನಿಲ್ಲಲು ಹೇಳುತ್ತಾನೆ. ಆ ಕೂಡಲೇ ಮದುಮಗಳನ್ನು ದೀಪಿಕಾ ಕರೆದುಕೊಂಡು ಬರುತ್ತಾಳೆ. ಮದುಮಗಳನ್ನು ನೋಡಿದ ಕೂಡಲೇ ಗಂಡಿನ ಕಡೆಯವರು ಹುಡುಗಿಯನ್ನು ಒಪ್ಪಿಕೊಂಡು ಬಿಡುತ್ತಾರೆ. ಇನ್ನೇನು ಮದುವೆ ಮಾತುಕತೆ ಶುರು ಆಗಬೇಕು ಎನ್ನುವ ವೇಳೆ ತುಳಸಿ ಅವರು ಎಲ್ಲಿ ಎನ್ನುವ ಮಾತನ್ನು ಗಂಡಿನ ತಾಯಿ ಕೇಳುತ್ತಾರೆ.

ಕಾಫಿ ಹಿಡಿದು ಹಾಲ್ ಗೆ ಬಂದ ತುಳಸಿ
ಆ ಕೂಡಲೇ ತುಳಸಿ ಮೆತ್ತಗೆ ಕಾಫಿ ತೆಗೆದುಕೊಂಡು ಬರುತ್ತಾಳೆ. ಆಕೆಗೆ ನಿಲ್ಲಲು ಆಗುವುದು ಇಲ್ಲ. ಆದರೆ ನಿಧಿ ಮದುವೆ ಮಾತುಕತೆಗೆ ಬಾರದೆ ಇದ್ದರೆ ಸರಿಯಾಗುವುದಿಲ್ಲ. ಎಲ್ಲರೂ ನನ್ನನ್ನು ಈ ಸಂದರ್ಭ ಕೇಳಿಯೇ ಕೇಳುತ್ತಾರೆ . ನಾನು ಹೋಗದೆ ಹೋದರೆ ದೊಡ್ಡ ಸಮಸ್ಯೆ ಆಗಬಹುದು ಎಂದುಕೊಂಡು ಹಾಲ್ ಗೆ ಬರುತ್ತಾಳೆ ಆ ಕೂಡಲೆ ತುಳಸಿ ಗೆ ತಲೆ ಚಕ್ಕರ್ ಬಂದ ಹಾಗೆ ಆಗುತ್ತದೆ. ತುಳಸಿಯನ್ನು ಗಂಡಿನ ಕಡೆಯವರ ಎದುರು ಬರಬಾರದು ಎಂದು ಶಾರ್ವರಿ ಈಗಾಗಲೇ ಖಡಕ್ ಆಗಿ ವಾರ್ನಿಂಗ್ ಮಾಡಿದ್ದಳು. ಆದರೆ ಇದೀಗ ಶಾರ್ವರಿ ಮಾತ್ರ ನಾನು ಹೇಳಿದ ಮಾತು ಮೀರಿ ತುಳಸಿಯವರು ಬಂದಿದ್ದಾರೆ ಎಂದು ಕೋಪದಲ್ಲಿಯೇ ನೋಡುತ್ತಾಳೆ .
ಅತ್ತೆಯನ್ನು ಗಟ್ಟಿಯಾಗಿ ಹಿಡಿದುಕೊಂಡ ಪೂರ್ಣಿಮಾ
ತುಳಸಿಗೆ ತಲೆ ತಿರುಗುತ್ತಿರುವುದನ್ನು ನೋಡಿದ ಪೂರ್ಣಿಮಾ ತನ್ನ ಅತ್ತೆಯನ್ನು ಹಿಡಿದುಕೊಳ್ಳುತ್ತಾಳೆ. ಆಗ ದೀಪಿಕಾ ಬೇಕು ಅಂತಲೇ ಗರ್ಭಿಣಿ ಯಾದ ಸಂದರ್ಭ ಇದೆಲ್ಲಾ ನಡೆಯುವುದು ಮಾಮೂಲಿ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಎಲ್ಲರಿಗೂ ಶಾಕ್ ಆಗುತ್ತದೆ. ಗಂಡಿನ ಕಡೆಯವರಿಗೆ ತುಳಸಿ ಗರ್ಭಿಣಿ ಎನ್ನುವ ವಿಚಾರ ತಿಳಿಯುತ್ತದೆ. ತುಳಸಿಯ ಬಗ್ಗೆ ತುಚ್ಛವಾಗಿ ಗಂಡಿನ ಕಡೆಯವರು ಮಾತನಾಡುತ್ತಾರೆ.
ತಾಯಿಯ ಬಗ್ಗೆ ಮಾತನಾಡಿದವರಿಗೆ ಖಡಕ್ ಕ್ಲಾಸ್ ತಗೊಂಡ ಅಭಿ
ಗಂಡಿನ ಕಡೆಯವರ ಮಾತಿಗೆ ಕೋಪಗೊಂಡ ಅಭಿ ಮಾತ್ರ ಕೋಪದಿಂದ ನನ್ನ ತಾಯಿಯ ಬಗ್ಗೆ ಇಷ್ಟು ಕೆಟ್ಟದಾಗಿ ಮಾತನಾಡಲು ನೀವು ಯಾರು ಎಂದು ಕೇಳುತ್ತಾನೆ. ಇದನ್ನು ಕೇಳಿ ಶಾಕ್ ಆದ ದೀಪಿಕಾ ಮಾತ್ರ ತನ್ನ ಗಂಡನನ್ನೇ ನೋಡುತ್ತಿರುತ್ತಾಳೆ. ಅಭಿ ಗೆ ತುಳಸಿಯ ಮೇಲೆ ಇರುವ ಪ್ರೀತಿಯನ್ನು ಕಂಡ ಸಮರ್ಥ್ ಗೆ ಬಹಳ ಖುಷಿ ಆಗುತ್ತದೆ . ನಿಧಿ ಮದುವೆ ನಡೆಯುತ್ತಾ ಇಲ್ವಾ ಎನುವುದನ್ನು ಇನ್ನಷ್ಟೇ ಕಾದು ನೋಡಬೇಕಿದೆ


Click it and Unblock the Notifications











