Srirastu Shubhamastu ; ರಂಗೇರಿದೆ ತುಳಸಿ-ಮಾಧವ ಕಲ್ಯಾಣ , ಮರು ಮದುವೆಗೆ ಸಕಲ ಸಿದ್ಧತೆ..!
ತುಳಸಿ ಹಾಗೂ ಮಾಧವನ ಮದುವೆಯ ವಾರ್ಷಿಕೋತ್ಸವ ದಿನ ಹತ್ತಿರ ಬರುತ್ತಿದೆ. ತುಳಸಿ ಹಾಗೂ ಮಾಧವನ ಮದುವೆಯ ದಿನದಂದೇ ಮತ್ತೊಮ್ಮೆ ಅವರಿಬ್ಬರಿಗೂ ಮದುವೆ ಮಾಡುವ ಪ್ಲಾನ್ ಅನ್ನು ಮಾಧವನ ಮಗ ಅವಿನಾಶ್ ಹಾಗೂ ಆತನ ಪತ್ನಿ ಪೂರ್ಣಿಮಾ ಒಂದು ಉಪಾಯವನ್ನು ಹೂಡಿರುತ್ತಾರೆ. ಇನ್ನೂ ಎಲ್ಲರೂ ಮನೆಯ ಒಳಗೆ ಕುಳಿತುಕೊಂಡು ಮಾತನಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಎಲ್ಲರ ಜೊತೆ ಮಾತನಾಡುತ್ತಿರುವ ವೇಳೆ ಮಹೇಶ ಜೋರಾಗಿ ಹೇಳುತ್ತಾನೆ.
ಅಣ್ಣ ಹಾಗೂ ಅತ್ತಿಗೆಯ ವಿವಾಹ ವಾರ್ಷಿಕೋತ್ಸವ ನಾಳೆ. ನಾಳೆಗೆ ಅವರಿಬ್ಬರೂ ಮದುವೆ ಆಗಿ ಒಂದು ವರುಷ ಆಗುತ್ತದೆ ಎಂದು ಖುಷಿಯಿಂದ ಹೇಳುತ್ತಾರೆ. ಇದನ್ನು ಕೇಳಿದ ಅವಿ ಹೇಳುತ್ತಾನೆ . ಹೌದು ಅವರಿಬ್ಬರ ಮದುವೆ ಆನಿವರ್ಸರಿ ಬಂದೆ ಬಿಟ್ಟಿದೆ. ಆದರೆ ಅವರ ಮದುವೆಯನ್ನು ನಮಗೆ ಸರಿಯಾಗಿ ನೋಡಲು ಆಗಲಿಲ್ಲ. ಅದಕ್ಕೆ ನಾಳೆ ಅವರಿಬ್ಬರ ಮದುವೆ ನಾವೇ ಮಾಡಿದರೆ ಹೇಗೆ. ನಮಗೆ ಅವರ ಮದುವೆಯನ್ನು ಕಣ್ತುಂಬಿಕೊಳ್ಳುವ ಅವಕಾಶ ಕೂಡ ಸಿಗುತ್ತದೆ ಎಂದು ಹೇಳಿದಾಗ ತುಳಸಿಗೆ ನಾಚಿಕೆ ಆದರೆ ಮಾಧವ ಗೆ ಖುಷಿ ಆಗುತ್ತದೆ.

ಮೊದಲಿಗೆ ಬೇಡ ಎಂದ ತುಳಸಿ ಆ ಬಳಿಕ ಸರಿ ಆಯಿತು ಎನ್ನುವ ಒಪ್ಪಿಗೆಯನ್ನು ನೀಡುತ್ತಾಳೆ. ಇನ್ನೂ ಮಾಧವ ಗೆ ಮಾತ್ರ ಮಕ್ಕಳ ಈ ಪ್ಲಾನ್ ಗೆ ಸಂಪೂರ್ಣ ಒಪ್ಪಿಗೆ ಕೂಡ ಇತ್ತು. ತುಳಸಿ ಹಾಗೂ ಮಾಧವ ಮದುವೆ ಆದ ನಂತರದ ದಿನಗಳಲ್ಲಿ ಬಹಳ ಏಳುಬೀಳುಗಳನ್ನು ನೋಡಿದ್ದರು. ಶಾರ್ವರಿ ಅದೆಷ್ಟೇ ತುಳಸಿ ಗೆ ಕಾಟ ಕೊಡಲು ನೋಡಿದರೂ ಅದ್ಯಾವುದೂ ಕೂಡ ವರ್ಕ್ ಆಗುತ್ತಿರಲಿಲ್ಲ. ಆದರೆ ಅಭಿ ಇನ್ನ ಕೂಡ ತುಳಸಿಯನ್ನು ಅಮ್ಮ ಎಂದು ಒಪ್ಪಿಕೊಂಡಿಲ್ಲ.
ಅಭಿ ಮನದಲ್ಲಿ ತುಳಸಿಗೆ ಜಾಗವಿಲ್ಲ
ತುಳಸಿ ಗೆ ಅಭಿ ಕೂಡ ನನ್ನನ್ನು ಅಮ್ಮ ಎಂದು ಸ್ವೀಕಾರ ಮಾಡಬೇಕು ಎನ್ನುವ ಆಸೆ ಇರುತ್ತದೆ. ಆದರೆ ಅಭಿ ಗೆ ಇದೀಗ ಆಕೆಯ ಮಡದಿ ದೀಪಿಕಾ ಹಾಗೂ ಆಸ್ತಿ ಇದರ ಮೇಲೆ ವ್ಯಾಮೋಹ ಹೆಚ್ಚಾಗಿದೆ. ಇನ್ನೂ ಪೂರ್ಣಿಮಾ ಯಾವ ತಪ್ಪೂ ಮಾಡದೇ ಇದ್ದರೂ ಪೂರ್ಣಿಮಾ ಮೇಲೆ ದೀಪಿಕಾ ಆಪಾದನೆಯ ಮೇಲೆ ಆಪಾದನೆ ಮಾಡುತ್ತಿರುತ್ತಾಳೆ. ಇದರಿಂದ ಆದರೂ ಈ ಮನೆಯನ್ನು ಒಡೆದು ಹಾಕಬೇಕು, ಒಂದಾಗಿರುವ ಸಂಸಾರವನ್ನು ಇಬ್ಭಾಗ ಮಾಡಬೇಕು ಎಂದು ಆಲೋಚನೆ ಮಾಡುತ್ತಾರೆ.

ದೀಪಿಕಾ ಮಾತಿಗೆ ಸೊಪ್ಪು ಹಾಕದ ಮನೆಮಂದಿ
ಆದರೆ ಅದು ಸಾಧ್ಯ ಆಗುವುದು ಇಲ್ಲ. ಪೂರ್ಣಿಮಾ ಮೇಲೆ ಅದೆಷ್ಟೇ ಆಪಾದನೆ ಬಂದರು ಆಕೆ ಒಂದು ಮಾತು ಆಡುವುದು ಇಲ್ಲ. ತುಳಸಿ ದತ್ತನಿಗೆ ಕರೆ ಮಾಡುತ್ತಾಳೆ. ಬಹಳ ಖುಷಿಯಿಂದಲೇ ತನ್ನ ಮುದ್ದಿನ ಸೊಸೆಯ ಕಾಲ್ ರಿಸೀವ್ ಮಾಡಿ ಮಾತನಾಡುತ್ತಾನೆ. ತುಳಸಿ ಹೇಗಿದ್ದಿಯಮ್ಮ ಎಂದೆಲ್ಲ ಕ್ಷೇಮ ಸಮಾಚಾರವನ್ನು ವಿಚಾರಣೆ ಮಾಡುತ್ತಾರೆ . ಹಾಗೆಯೇ ತುಳಸಿ ಜೊತೆ ಬಹಳ ಖುಷಿಯಿಂದ ಮಾತನಾಡಿದಾಗ ತುಳಸಿ ತನ್ನ ಮದುವೆಯಾದ ವರುಷದ ಬಗ್ಗೆ ಮಾವನಲ್ಲಿ ಹೇಳುತ್ತಾರೆ.
ತುಳಸಿ ಮಾತು ಕೇಳಿ ದತ್ತ ಫುಲ್ ಖುಷ್
ತುಳಸಿ ಮಾವನ ಬಳಿ ಹೇಳುತ್ತಾಳೆ. ಮಾವ ಮಕ್ಕಳೆಲ್ಲ ಸೇರಿ ನಮ್ಮಿಬ್ಬರಿಗೆ ಇನ್ನೊಮ್ಮೆ ಮದುವೆ ಮಾಡಲು ಮುಂದಾಗಿದ್ದಾರೆ ಎಂದಾಗ ದತ್ತ ಗೆ ಮತ್ತಷ್ಟು ಖುಷಿ ಆಗುತ್ತದೆ. ದತ್ತ ಬಹಳ ಖುಷಿಯಿಂದ ಹೇಳುತ್ತಾನೆ ಸರಿ ಹಾಗಾದರೆ ನಮ್ಮ ಮನೆಗೆ ಬಾ . ಹೆಣ್ಣು ನೋಡುವ ಶಾಸ್ತ್ರ ಹಾಗೂ ನಿಶ್ಚಿತಾರ್ಥ ಇಲ್ಲಿಯೇ ಮಾಡೋಣ ಎಂದು ಹೇಳುತ್ತಾನೆ. ಇನ್ನೂ ದತ್ತ ಮಾತಿಗೆ ಒಪ್ಪಿದ ತುಳಸಿ ದತ್ತನ ಮನೆಗೆ ಹೋಗುತ್ತಾಳೆ. ಅಲ್ಲಿ ಸಮರ್ಥ್ ಗೆ ಕೂಡ ವಿಚಾರ ತಿಳಿದು ಬಹಳ ಖುಷಿ ಪಡುತ್ತಾನೆ. ತನ್ನ ಅಮ್ಮನಿಗೆ ಮದುವೆ ಮಾಡುವುದನ್ನು ಸರಿಯಾಗಿ ನಾನು ನೋಡಬಹುದಲ್ವ ಎಂದು ಬಹಳ ಖುಷಿಯಲ್ಲಿ ಇರುತ್ತಾನೆ.ತುಳಸಿಗೆ ಸಮರ್ಥ್ ಬಾಯಲ್ಲಿ ಮದುಗೆ ವಿಚಾರ ಕೇಳಿ ಮಾತ್ರ ತುಳಸಿಗೆ ಬಹಳ ಆನಂದ ಆಗುತ್ತದೆ.


Click it and Unblock the Notifications











