Srirastu Shubhamastu; ಅಣ್ಣ ತಮ್ಮನನ್ನು ಒಂದು ಮಾಡಿದ ಮನೆ ಮಂದಿ,ಅಭಿ ಬಳಿ ಕ್ಷಮೆ ಕೇಳಲು ಓಡೋಡಿ ಬಂದ ಅವಿ..!

By ಪೂರ್ವ

ಅಣ್ಣನನ್ನು ಬಿಟ್ಟು ತಮ್ಮನಿಗೆ ಇರಲಾಗದು ತಮ್ಮನನ್ನು ಬಿಟ್ಟು ಅಣ್ಣನಿಗೆ ಇರಲಾಗದು ಆದರೆ ಅವರಿಬ್ಬರ ಮಧ್ಯೆ ಯಾರು ಬಂದರೂ ಕೂಡ ಅವರಿಬ್ಬರನ್ನ ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವುದು ಈಗ ದೀಪಿಕಾ ಹಾಗೂ ಶಾರ್ವರಿಗೆ ತಿಳಿದಿದೆ. ಇದೀಗ ಅವಿಗೆ ತನ್ನ ತಮ್ಮನ ಬಿಟ್ಟು ಇರಲು ಸಾಧ್ಯವಾಗುತ್ತಿಲ್ಲ ಏನೇ ಮಾಡಿದರು ಕೂಡ ತನ್ನ ತಮ್ಮ ಅಭಿ ನೆನಪಿಗೆ ಬರುತ್ತಾನೆ ಇನ್ನು ಅವಿ ಹಾಗೂ ಅಭಿಯ ಮನಸ್ಸನ್ನು ಒಂದು ಮಾಡಲು ಮಾಧವ ಹಾಗೂ ತುಳಸಿ ಪಟ್ಟ ಪ್ರಯತ್ನ ಅಷ್ಟಿಷ್ಟಲ್ಲ

ಅವರಿಬ್ಬರೂ ಕೂಡ ಮನೆಯಲ್ಲಿ ಇರಬೇಕಾದರೆ ಜಗಳವನ್ನೇ ಆಡುತ್ತಿದ್ದರು. ಹಾಗೆ ಅಭಿ ನಾನು ಮನೆ ಬಿಟ್ಟು ಹೋಗುತ್ತೇನೆ ಎಂದು ಪಟ್ಟು ಹಿಡಿಯುತ್ತಿದ್ದ ಇದೆಲ್ಲವನ್ನ ಹೇಗೆ ನಿಲ್ಲಿಸುವುದು ಎಂದು ತುಳಸಿ ಯೋಚನೆ ಮಾಡುತ್ತಿದ್ದಳು. ಅಭಿ ಪೂರ್ಣಿಮನನ್ನು ನಿಂದಿಸಿದಕ್ಕಾಗಿ ಅವಿಗೆ ಬಹಳ ಸಿಟ್ಟು ಬರುತ್ತದೆ. ಇನ್ನು ಅಭಿ ಮಾಡಿದು ಕೂಡ ಬಹಳ ದೊಡ್ಡ ತಪ್ಪೇ. ಆದರೆ ಆ ತಪ್ಪನ್ನು ಸಹಿಸಿಕೊಂಡಿದ್ದು ಪೂರ್ಣಿಮಾ.ಆಕೆಯ ಮನಸ್ಸಲ್ಲಿ ಅಣ್ಣ ತಮ್ಮ ಇಬ್ಬರನ್ನು ಕೂಡ ಬೇರೆ ಮಾಡಿದ್ದೇನೆ ಎನ್ನುವ ಯೋಚನೆ ಮೂಡುತ್ತದೆ ಹಾಗೆ ಆಕೆ ಬಹಳ ದುಃಖಿತಳಾಗುತ್ತಾಳೆ. ಪೂರ್ಣಿಮಾಗೆ ಸಿರಿ ಹಾಗೂ ಸಂಧ್ಯಾ ಸಮಾಧಾನ ಹೇಳುತ್ತಾರೆ ಇದೆಲ್ಲಾ ಆಗಿದ್ದು ಒಂದು ಕೆಟ್ಟ ಕನಸು ಎಂದು ಮರೆತುಬಿಡಿ ಎಂದು ಆಗಾಗ ಬುದ್ಧಿ ಮಾತನ್ನು ಕೂಡ ಹೇಳುತ್ತಿರುತ್ತಾರೆ ಆದರೆ ಪೂರ್ಣಿಮಾಗೆ ಮನದಲ್ಲಿ ಬಹಳ ಬೇಸರ ಕಾಡುತ್ತಿರುತ್ತದೆ ಎಲ್ಲಾ ಆಗಿದ್ದು ನನ್ನಿಂದಲೇ ನಾನು ಏನೇ ಮಾಡಿದರೂ ಅದು ತಪ್ಪು ಎಂದು ಅವರಿಗೆ ಅನ್ನಿಸುತ್ತಿತ್ತು ಆದರೆ ನಾನು ಆ ತಪ್ಪು ಮಾಡಿ ಇರಲಿಲ್ಲ. ಆದರೆ ತಪ್ಪು ಮಾಡಿದ್ದನ್ನ ಮಾಡಿದ್ದಿ ಎಂದು ಬಿಂಬಿಸಿ ಬಹಳ ನೋವನ್ನು ಕೊಟ್ಟಿರುತ್ತಾರೆ.

srirastu shubhamastu serial 25th august written update

ಅಭಿ ಮೇಲೆ ಕೈ ಮಾಡಿದ್ದ ಅವಿ

ಇದರಿಂದ ಅವರಿಗೆ ಬಹಳ ನೋವಾಗುತ್ತದೆ ಹಾಗೆ ಅಭಿಯ ಮೇಲೆ ಕೈ ಕೂಡ ಮಾಡುತ್ತಾರೆ ಇದರಿಂದಾಗಿ ಅಣ್ಣತಮ್ಮಂದಿರು ಬೇರೆ ಬೇರೆ ಆಗುವ ಸಂದರ್ಭವನ್ನು ನನ್ನಿಂದಲೇ ಸೃಷ್ಟಿ ಮಾಡಿಕೊಂಡ ಹಾಗೆ ಆಯ್ತಲ್ಲ ಎಂದು ಮನದಲ್ಲಿ ಕೊರಗುತ್ತಿರುತ್ತಾಳೆ. ಇನ್ನು ಅವಿಗೆ ತನ್ನ ಮನದಲ್ಲಿ ಅಭಿ ಮೇಲಿರುವ ಪ್ರೀತಿಯನ್ನು ಮುಚ್ಚಿಡಲು ಸಾಧ್ಯವಾಗಲಿಲ್ಲ. ಆತ ಅಭಿಯನ್ನು ಹುಡುಕಿಕೊಂಡು ಮನೆಗೆ ಹೋಗುತ್ತಾನೆ. ಅಲ್ಲಿ ಅಭಿ ಇರದ್ದನ್ನು ಕಂಡು ಅಭಿ ಎಲ್ಲಿಗೆ ಹೋಗಿದ್ದಾನೆ ಚಿಕ್ಕಪ್ಪ ಎಂದು ಮಹೇಶನ ಬಳಿ ಕೇಳುತ್ತಾನೆ.

ಮನದಲ್ಲಿ ಖುಷಿಪಟ್ಟ ಮಹೇಶ , ಮಾಧವ

ಆಗ ಮಹೇಶ ಏನು ಹೇಳದೆ ಸುಮ್ಮನೆ ಇರುತ್ತಾನೆ. ಆಗ ಅಲ್ಲಿಗೆ ಬಂದ ಮಾಧವ ಸುಮ್ಮನೆ ನಿಂತುಕೊಂಡು ನೋಡುತ್ತಿರುತ್ತಾನೆ. ಅವಿಗೆ ಹಾಗು ಅಭಿಗೆ ಅವರಿಬ್ಬರ ಮಧ್ಯೆ ಅದೆಷ್ಟು ಪ್ರೀತಿ ಇದೆ ಎಂದು ಮನದಲ್ಲಿ ಬಹಳ ಖುಷಿ ಪಡುತ್ತಾರೆ ಆದರೆ ಅವೀ ತನ್ನ ತಂದೆಯನ್ನು ನೋಡಿ ದಯವಿಟ್ಟು ನೀವು ನನ್ನ ಮನೆಯಿಂದ ಹೊರ ಹಾಕಿದ್ದೀರಿ ಆದರೆ ನನಗೆ ನನ್ನ ತಮ್ಮನನ್ನು ಬಿಟ್ಟು ಇರಲು ಸಾಧ್ಯವಾಗುತ್ತಿಲ್ಲ.

srirastu-shubhamastu-serial-25th-august-written-update

ಅಣ್ಣನ ಬಳಿ ಕ್ಷಮೆಯಾಚಿಸಿದ ಅಭಿ

ಅದಕ್ಕಾಗಿ ನನ್ನ ತಮ್ಮನ ಜೊತೆ ನಾನು ಇರಲು ಬಂದಿದ್ದೇನೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ಮಾಧವ ಹೇಳುತ್ತಾನೆ ಅವಿ ನೀನು ಧಾರಾಳವಾಗಿ ಈ ಮನೆಗೆ ಬರಬಹುದು ಇದು ನಿನ್ನ ಮನೆ ಅಲ್ಲವೇ ಅವಿ ಎಂದು ಹೇಳುತ್ತಾರೆ ಇದನ್ನು ಕೇಳಿದ ಅಭಿಗೆ ಬಹಳ ನೋವಾಗುತ್ತದೆ ತಂದೆಯನ್ನು ಬಿಗಿಡಪ್ಪಿಕೊಳ್ಳುತ್ತಾನೆ. ಇನ್ನೂ ಅಭಿ ಹಾಗೂ ಅವಿ ಒಂದು ಮಾಡುವ ಕೆಲಸವನ್ನು ತುಳಸಿ ಹಾಗೂ ಮಾಧವ ಮಾಡುತ್ತಿರುತ್ತಾರೆ. ಅವರ ಜೊತೆ ದತ್ತನ ಮನೆಯವರು ಕೂಡ ಸಾಥ್ ನೀಡಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X