ಅಭಿ ಮೇಲೆ ಕೈ ಮಾಡಲು ಮುಂದಾದ ಅವಿ; ಮನೆ ಮಂದಿಗೆ ಶಾಕ್?

By Poorva

ತುಳಸಿಗೆ ಇದೀಗ ಪೂರ್ಣಿಮಾಳದ್ದೆ ಚಿಂತೆ. ಪೂರ್ಣಿಮಾಗೆ ಮಕ್ಕಳಾಗುವುದಿಲ್ಲ ಎನ್ನುವ ವಿಚಾರ ತಲೆಗೆ ತುಂಬಿದೆ. ಅದಕ್ಕಾಗಿ ಆಕೆ ಮನೆ ಬಿಟ್ಟು ಹೋಗುತ್ತಾಳೆ. ಮನೆಯಲ್ಲಿ ಪೂರ್ಣಿಮಾ ಕಾಣದ್ದನ್ನು ನೋಡಿ ಬಹಳ ತಲೆ ನೋವಾಗಿ ಪರಿಣಮಿಸಿ ಬಿಡುತ್ತದೆ. ಇನ್ನೂ ಮಾಧವ ಹಾಗೂ ತುಳಸಿಯನ್ನು ಹುಡುಕಿಕೊಂಡು ಹೋಗುತ್ತಾರೆ ಹಾಗೆಯೇ ಅವರ ಕೈಗೆ ಪೂರ್ಣಿಮಾ ಸಿಗುತ್ತಾಳೆ. ಆದರೆ ಪೂರ್ಣಿಮಾ ಗೆ ಮನೆಗೆ ಬರಲು ಸ್ವಲ್ಪವೂ ಇಷ್ಟ ಇರುವುದಿಲ್ಲ.

ನನ್ನಿಂದಾಗಿ ಎಷ್ಟೆಲ್ಲ ಕಷ್ಟಗಳು ಅವಿನಾಶ್ ಅವರಿಗೆ ಮಕ್ಕಳೆಂದರೆ ಬಹಳ ಇಷ್ಟ. ಆದರೆ ಅವರಿಗೆ ಮಕ್ಕಳನ್ನು ನೀಡುವ ಶಕ್ತಿ ನನ್ನ ಬಳಿ ಇಲ್ಲ . ನಾನು ಅವರ ಇಷ್ಟವನ್ನು ಪೂರ್ತಿಗೊಳಿಸಲು ಆಗದೆ ಇರುವುದರಿಂದಲೇ ನಾನು ಮನೆಯಿಂದ ಆಚೆ ಬಂದಿದ್ದೇನೆ. ನನ್ನಂತಹ ನತದೃಷ್ಟ ಹೆಣ್ಣು ಬದುಕಿರುವುದು ಹೆಚ್ಚು ಎಂದು ಹೇಳಿದಾಗ ತುಳಸಿಗೆ ಏನು ಹೇಳಬೇಕು ತಿಳಿಯದಾಗುತ್ತದೆ. ಆ ಸಂದರ್ಭ ಮಾಧವ ಮಾತ್ರ ಪೂರ್ಣಿಮಾಗೆ ಬುದ್ಧಿವಾದ ಹೇಳುತ್ತಾನೆ. ನೀನು ಮನೆಯಲ್ಲಿ ಇಲ್ಲ ಎಂದು ಹೇಳಿದರೆ ಅವಿನಾಶ್ ಅದೆಷ್ಟು ಬೇಸರ ಆಗಬೇಡ ಆಲೋಚನೆ ಮಾಡಿ ದಯವಿಟ್ಟು ಮನೆಗೆ ಬಾ ಎಂದು ಹೇಳುತ್ತಾರೆ. ಇದನ್ನು ಕೇಳಿದ ಪೂರ್ಣಿಮಾಗೆ ಕೂಡ ಹೌದು ಅನ್ನಿಸದೇ ಇರದು.

Srirastu shubhamastu serial 28th April episode written update

ಇನ್ನೂ ಅವಿನಾಶ್ ಮನೆಗೆ ಬಂದವನೇ ಅಭಿ ಎಂದು ಜೋರಾಗಿ ಕರೆಯುತ್ತಾನೆ. ಅವಿನಾಶ್ ತನ್ನ ಸೀಟ್ ಅನ್ನು ತಮ್ಮನಿಗೆ ಬಿಟ್ಟು ಕೊಟ್ಟಿರುತ್ತಾನೆ. ಆದರೆ ಅಭಿ ಮಾಡಿದ್ದೇನು? ಶೇಕಡಾ 12 ರಷ್ಟು ನಮ್ಮ ಕಂಪನಿಗೆ ನಿನ್ನಿಂದ ಲಾಸ್ ಆಗಿದೆ ಆದರೆ ಯಾಕೆ ಹೀಗೆ ಆಯಿತು ಎಂದು ಅವಿ ಅಭೀಯನ್ನು ಪ್ರಶ್ನೆ ಮಾಡುತ್ತಾನೆ. ಆದರೆ ಅಭಿ ಮಾತ್ರ ಅಷ್ಟೊಂದು ರಿಯಾಕ್ಟ್ ಮಾಡುವುದಿಲ್ಲ. ಆತನಿಗೆ ಏನು ತಿಳಿಯದ ಹಾಗೆ ನಡೆದುಕೊಳ್ಳುತ್ತಾನೆ. ಅಣ್ಣ ಅಷ್ಟು ಜೋರಾಗಿ ಕಿರುಚಾಡಿದರು ಅಭಿ ಮಾತ್ರ ಸೈಲೆಂಟ್ ಆಗಿ ಇರುತ್ತಾನೆ.

ಕಂಪನಿಗೆ ಲಾಸ್ ಆದರೂ ತಲೆಬಿಸಿ ಮಾಡಿಕೊಳ್ಳದ ಅಭಿ

ನನ್ನ ಕಂಪನಿಯಲ್ಲಿ ನನಗೆ ಲಾಸ್ ಆಗಿರುವುದು ತಿಳಿಯುವುದು ಇಲ್ವಾ? ಎಂದಾಗ 12 ಪರ್ಸೆಂಟ್ ನಷ್ಟೂ ಲಾಸ್ ಆಗಲು ಒಂದು ದಿನದ ಅಸಡ್ಡೆ ಕಾರಣ ಅಲ್ಲ . ಹಲವು ದಿನಗಳಿಂದ ಈ ರೀತಿಯ ಅಸಡ್ಡೆ ಇತ್ತು ಎಂದು ಅನ್ನಿಸುತ್ತದೆ ಎಂದು ಮಾಧಬ ಹೇಳುತ್ತಾನೆ. ಸಿಟ್ಟಿಗೆದ್ದ ಅಭಿ ಅಪ್ಪನಿಗೆ ಇದೆಲ್ಲವನ್ನೂ ಕೇಳಲು ನೀವು ಯಾರೂ ಎಂದು ಹೇಳುತ್ತಾನೆ. ಇದನ್ನು ಕೇಳಿ ಮಾಧವ ಅವರು ಬಾಯಿ ಮುಚ್ಚಿದರು ತುಳಸಿ ಹೇಳುತ್ತಾಳೆ, ಆಫೀಸ್ ನಲ್ಲಿ ಈ ರೀತಿ ಎಲ್ಲಾ ಆದಾಗ ಅದನ್ನು ನೋಡಿಕೊಂಡು ಅವರಿಗೆ ಹೇಗೆ ಸುಮ್ಮನಿರಲು ಸಾಧ್ಯ . ಇದನ್ನು ನೀನು ಯಾವಾಗ ಅರ್ಥ ಮಾಡಿಕೊಳ್ಳುತ್ತಿಯಾ ಎನ್ನುತ್ತಾಳೆ.

ಅಭಿ ನಡೆಯಿಂದ ಕಿರಿಕಿರಿಗೊಂಡ ಅವಿ

ನೀವು ನನಗೆ ಬುದ್ದಿ ಹೇಳುತ್ತಿರುವುದು ಒಳ್ಳೆಯ ವಿಚಾರ. ಆದರೆ ಈ ಮನೆಯವರ ಮುಂದೆ ಈ ರೀತಿ ನಡೆದುಕೊಳ್ಳುವುದು ಅವರು ನಿಮ್ಮನ್ನು ಮೆಚ್ಚಲಿ ಎನ್ನುವ ಕಾರಣಕ್ಕೆ ಎಂದಾಗ ಅವಿನಾಶ್ ಬಹಳ ಖಡಕ್ ಆಗಿ ಹೇಳುತ್ತಾನೆ. ಅಭಿ ನೀನು ಇನ್ನೂ ಒಂದು ಮಾತು ಅವರ ಬಗ್ಗೆ ಹೇಳಿದರೆ ನಾನು ಸುಮ್ಮನೆ ಇರುತ್ತೇನೆ ಎಂದು ಅಂದುಕೊಳ್ಳಬೇಡ ಎಂದು ಹೇಳುತ್ತಾನೆ.

ತುಳಸಿಗೆ ನಿಂದಿಸಿದ ಅಭಿ

ಆಗ ಅಭಿಗೆ ಮತ್ತಷ್ಟು ಕೋಪ ಬರುತ್ತದೆ .ಅಣ್ಣ ತಮ್ಮಂದಿರು ಒಟ್ಟಿಗೆ ಇರಬಾರದು ಅವರಿಬ್ಬರೂ ಜಗಳ ಆಡಬೇಕು ಅದಕ್ಕೆ ತಾನೇ ನೀವು ನಮ್ಮ ನಮ್ಮಲ್ಲಿ ಜಗಳ ತಂದಿಡುವ ಕೆಲಸ ಮಾಡುತ್ತಿದ್ದೀರಾ? ಇದು ಸರಿಯಲ್ಲ ಎಂದು ತುಳಸಿಗೆ ಅಭಿ ಹೇಳಿದಾಗ ಕುಪಿತಗೊಂಡ ಅವಿನಾಶ್, ಅಭಿ ಮೇಲೆ ಕೈ ಎತ್ತುತ್ತಾನೆ . ಇದನ್ನು ನೋಡಿ ಮನೆ ಮಂದಿ ಶಾಕ್ ಆಗುತ್ತಾರೆ.

More from Filmibeat

English summary
srirastu shubhamastu serial today episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X